ಹಿಟ್ಲರ್‌ ಕಲ್ಯಾಣ ಧಾರಾವಾಹಿಯಿಂದ ಹೊರ ನಡೆದ ಎಜೆ ಮಗನ ಪಾತ್ರದ ಈ ನಟ ಏನಾದರು ಗೊತ್ತಾ..

ಕಿರುತೆರೆಯಲ್ಲಿ ಈ ಮೊದಲು ಸಾಮಾನ್ಯವಾಗಿ ಅತ್ತೆ ಸೊಸೆಯನ್ನೇ ಮುಖ್ಯವಾಗಿರಿಸಿಕೊಂಡು ಧಾರಾವಾಹಿಗಳು ನಿರ್ಮಾಣವಾಗುತ್ತಿದ್ದರೆ ಬರುಬರುತ್ತಾ ಲವ್‌ ಸ್ಟೋರಿಗಳು ಹೆಚ್ಚಾದವು.. ಆದರೆ ಮೊದಲ ಬಾರಿಗೆ ಮಾವ ಹಾಗೂ ಸೊಸೆಯಂದಿರನ್ನು ಮುಖ್ಯವಾಗಿರಿಸಿಕೊಂಡು ಬಂದ ಧಾರಾವಾಹಿ ಹಿಟ್ಲರ್‌ ಕಲ್ಯಾಣ.. ಅಂದುಕೊಂಡಂತೆ ಧಾರಾವಾಹಿ ದೊಡ್ಡ ಹಿಟ್‌ ಪಡೆದು ಕಿರುತೆರೆಯ ಟಾಪ್‌ ಧಾರಾವಾಹಿಯಾಗಿ ಸಾಗುತ್ತಿದೆ.. ಇನ್ನು ಧಾರಾವಾಹಿಯಲ್ಲಿ ಕಡಿಮೆ ಕಂಡರೂ ಸಹ ಎಜೆ ಮಕ್ಕಳ ಪಾತ್ರಕ್ಕೂ ಪ್ರಾಮುಖ್ಯತೆ ನೀಡಲಾಗಿತ್ತು.. ಆದರೆ ಇತ್ತೀಚಿನ ದಿನಗಳಲ್ಲಿ ಧಾರಾವಾಹಿಯಲ್ಲಿ ಎಜೆ ಮಕ್ಕಳ ನಾಪತ್ತೆ ಯಾಗಿದ್ದು ಎಲ್ಲಿಗೆ ಹೋದರು ಎಂದು ಪ್ರೇಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್‌ ಮಾಡಿದ್ದೂ ಉಂಟು.. ಹೌದು ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲಿ ಎಜೆ ಮಕ್ಕಳದ್ದು ಕೂಡ ಬಹುಮುಖ್ಯ ಪಾತ್ರವಾಗಿತ್ತು. ಅದರಲ್ಲಿ ರಾಕೇಶ್ ಮತ್ತು ವಿನಯ್ ಮುದ್ದಿನ ಮಕ್ಕಳ ಪಾತ್ರದಲ್ಲಿ ರಂಜಿಸಿದ್ದರು. ನೋಡುವುದಕ್ಕೆ ಪಕ್ಕಾ ಅಣ್ಣ ತಮ್ಮಂದಿರಂತೆಯೇ ಇದ್ದರು.

ಆದರೆ ಆ ಇಬ್ಬರು ಬೆಸ್ಟ್ ಫ್ರೆಂಡ್ಸ್. ಆದರೆ ನೋಡಿದವರಿಗೆ ಅವಳಿ ಜವಳಿಯಂತೆಯೇ ಫೀಲ್ ಕೊಡುತ್ತಿದ್ದರು. ಆದರೆ ಧಾರಾವಾಹಿಯಲ್ಲಿ ಇವರ ಪಾತ್ರಗಳ ಹಾಜರಿ ಕಡಿಮೆ ಇದ್ದ ಕಾರಣ ಇವರುಗಳು ಬೇರೆ ಬೇರೆ ಧಾರಾವಾಹಿಯಲ್ಲಿ ತೊಡಗಿಜಕೊಂಡಿದ್ದರು.. ಅಂತೆಯೇ ಇದೀಗ ಎಜೆ ಮಗನ ಪಾತ್ರ ಮಾಡಿದ್ದ ನಟ ತೆಲುಗಿಗೆ ತೆರಳಿದ್ದಾರೆ.. ಹೌದು ಎಜೆ ಪಾತ್ರ ಮಾಡಿದ್ದ ನಟ ರಾಕೇಶ್ ಕನ್ನಡದಿಂದ ತೆಲುಗಿಗೆ ಹಾರಿದ್ದಾರೆ. ಮೊದ ಮೊದಲಿಗೆ ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿದ್ದ ರಾಕೇಶ್, ಇದೀಗ ‘ಹಿಟ್ಲರ್ ಕಲ್ಯಾಣ’ದಲ್ಲೂ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ ತೆಲುಗು ಇಂಡಸ್ಟ್ರಿಯಲ್ಲಿ ಹೊಸ ಧಾರಾವಾಹಿಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಹೊಸ ಧಾರಾವಾಹಿ, ಹೊಸ ಪಾತ್ರ, ಹೊಸ ರೀತಿಯ ಕಥೆಯಲ್ಲಿ ಅಭಿನಯಿಸಲು ರಾಕೇಶ್ ಕೌತುಕವಾಗಿದ್ದಾರೆ.

ರಾಕೇಶ್ ಹೊಸ ಧಾರಾವಾಹಿ ಮುಕ್ಕು ಪುಡುಕು.. ತೆಲುಗಿನಲ್ಲಿ ಮುಖ್ಯ ಪಾತ್ರ. ನಟನಾ ಕ್ಷೇತ್ರ ಎಲ್ಲರನ್ನು ಸೆಳೆಯುತ್ತದೆ. ಅದರಂತೆ ಬೇಕೆಂದಿದ್ದು ಎಲ್ಲರಿಗೂ ಬಹಳ ಬೇಗ ಸಿಗುವುದಿಲ್ಲ. ಕೆಲವರು ಬೇಕಾದದ್ದನ್ನು ಪಡೆಯುವುದಕ್ಕಾಗಿ ಸಾಕಷ್ಟು ಕಷ್ಟ ಪಡುತ್ತಾರೆ. ರಾಕೇಶ್ ಕೂಡ ಸಾಕಷ್ಟು ಶ್ರಮ ಹಾಕಿದ್ದಾರೆ. ಆ ಶ್ರಮಕ್ಕೆ ಪ್ರತಿಫಲದಂತೆ ಕನ್ನಡದಲ್ಲಿಯೂ ‘ಗಿಣಿರಾಮ’ ಧಾರಾವಾಹಿಯಲ್ಲಿ ಮುಖ್ಯಪಾತ್ರದಲ್ಲಿ ಮಿಂಚಿದ್ದರು. ಇದೀಗ ಅದೇ ನಟನಾ ಕೌಶಲ್ಯ, ಪರಿಶ್ರಮ, ಶ್ರದ್ಧೆಯಿರುವ ಕಾರಣ ತೆಲುಗಿನಲ್ಲಿಯೂ ಅವಕಾಶ ಅರಸಿ ಬಂದಿದೆ. ಮುಕ್ಕು ಪುಡುಕ್ಕು ಧಾರಾವಾಹಿಯಲ್ಲಿ ರಾಕೇಶ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಲವ್ವರ್ ಬಾಯ್ ಆದ ರಾಕೇಶ್.. ಜೀ ತೆಲುಗುನಲ್ಲಿ ಮುಕ್ಕು ಪುಡುಕ್ಕು ಪ್ರೋಮೊ ರಿಲೀಸ್ ಆಗಿದೆ. ದೈವಿಕ ಕುಟುಂಬದ ಮನೆತನದವರಾಗಿ ರಾಕೇಶ್ ಕಾಣಿಸಿಕೊಂಡಿದ್ದಾರೆ. ಹಾಗೇ ಐಶ್ವರ್ಯಾ ನಟಿಯಾಗಿ ಅಭಿನಯಿಸಿದ್ದು, ಲವ್ ಅಟ್ ಫಸ್ಟ್ ಸೈಟ್ ಎಂಬ ದೃಶ್ಯಕಾವ್ಯ ಪ್ರೋಮೊದಲ್ಲಿ ಅನಾವರಣವಾಗಿದೆ. ದೊಡ್ಡ ಮನೆತನದಲ್ಲಿ ರಾಕೇಶ್ ಇರುವುದು ಕಂಡು ಬಂದಿದೆ. ಪ್ರೋಮೊ ತುಂಬಾ ರಿಚ್ ಆಗಿ ಬಂದಿದ್ದು, ರಾಕೇಶ್ ನಿರೀಕ್ಷೆ ಯಶಸ್ಸಾಯಾಗುವುದರಲ್ಲಿ ಅನುಮಾನವಿಲ್ಲ.ಈ ಪಾತ್ರ ರಾಕೇಶ್‌ಗೆ ಕೂಡ ಖುಷಿ ಕೊಟ್ಟಿದೆಯಂತೆ.

ಇನ್ನು ಈ ಬಗ್ಗೆ ಮಾತನಾಡಿರುವ ರಾಕೇಶ್ ತೆಲುಗು ಮುಕ್ಕು ಪುಡುಕ್ಕು ಎಂಬ ಧಾರಾವಾಹಿಯಲ್ಲಿ ನಾನು ನಟಿಸುತ್ತಿದ್ದೇನೆ. ಗಿಣಿರಾಮ ಮಾಡುತ್ತಿದ್ದಾಗ ಒಂದು ಧಾರಾವಾಹಿಯಲ್ಲಿ ಮಾಡುವ ಅವಕಾಶ ಬಂತು. ಆದರೆ ಆ ಹೊಸ ಧಾರಾವಾಹಿಯಲ್ಲಿ ನಟಿಸಲು ಆಗಲಿಲ್ಲ. ಆದರೆ ಗಿಣಿರಾಮ ಮುಗಿದ ಕೂಡಲೇ ಮುಕ್ಕು ಪುಡುಕ್ಕು ಸಿಕ್ಕಿದೆ. ಪ್ರೈಮ್ ಟೈಮ್‌ನಲ್ಲಿಯೇ ಸ್ಲಾಟ್ ಸಿಕ್ಕಿದೆ. ಅದು ನಂಗೆ ದೊಡ್ಡ ಖುಷಿ ಕೊಡುವ ವಿಚಾರ. ಹಲವು ಹಿರಿಯ ಕಲಾವಿದರು ಮುಕ್ಕು ಪುಡುಕ್ಕು ಧಾರಾವಾಹಿಯಲ್ಲಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಧಾರಾವಾಹಿ ಟೆಲಿಕಾಸ್ಟ್ ಆಗಲಿದೆ. ಒಂದೊಳ್ಳೆ ಅನುಭವ ನೀಡಿದೆ ಎಂದಿದ್ದಾರೆ.. ಒಟ್ಟಿನಲ್ಲಿ ಕನ್ನಡದಿಂದ ತೆಲುಗಿಗೆ ತೆರಳಿ ಕಿರುತೆರೆಯಲ್ಲಿ ಬದುಕು ಕಟ್ಟಿಕೊಳ್ಳುತ್ತಿರುವವರ ಸಾಲಿಗೆ ಇದೀಗ ನಟ ರಾಕೇಶ್‌ ಕೂಡ ಸೇರಿಕೊಂಡಿದ್ದಾರೆ..

ಪ್ರಖ್ಯಾತ ಜ್ಯೋತಿಷಿ.. ದೈವಜ್ಞಾ ಪ್ರಧಾನ ತಾಂತ್ರಿಕ್ ಸಂತೋಷ್ ಕುಮಾರ್.. 98808 68514 ನೂರಕ್ಕೆ ನೂರು ಪರಿಹಾರ‌.. ವಿದ್ಯೆ ಉದ್ಯೋಗ ಕುಟುಂಬ ಸಮಸ್ಯೆ ಸಂತಾನ ದಾಂಪತ್ಯದಲ್ಲಿ ತೊಂದರೆ ಸಾಲದ ಬಾಧೆ ಕೋರ್ಟ್ ಕೇಸ್ ಜಾಗದ ವಿಚಾರ.. ಅರೋಗ್ಯ ಬಿಸಿನೆಸ್.. ಹಾಗೂ ಇನ್ನಿತರ ಎಲ್ಲಾ ಸಮಸ್ಯೆಗಳಿಗೆ ಫೋನ್ ಅಥವಾ ವಾಟ್ಸಪ್ ಮೂಲಕ ಶಾಶ್ವತ ಪರಿಹಾರ.. ನಿಮ್ಮ ಒಂದು ಕರೆ ನಿಮ್ಮ ಭವಿಷ್ಯ ಬದಲಿಸಬಹುದು.. ಕರೆ ಮಾಡಿ.. 98808 68514