ಮನೆಯಲ್ಲಿ ನಡೆದ ಕೆಲ ಕಹಿ ಘಟನೆಗಳನ್ನು ನೇರವಾಗಿ ವೇದಿಕೆಯಲ್ಲಿ ಹೇಳಿಕೊಂಡು ಜೀವನದಲ್ಲಿ ಹತ್ತರಷ್ಟೂ ನೆಮ್ಮದಿ ಉಳಿದಿಲ್ಲ ಎಂದ ರಜನಿಕಾಂತ್..

ಮನುಷ್ಯನಿಗೆ ಹಣ ಇದ್ದರೆ ಎಲ್ಲವೂ ದಕ್ಕುತ್ತದೆ ಎನ್ನುವ ಮಾತಿದೆ.. ಇದು ಒಂದು ರೀತಿಯಲ್ಲಿ ನಿಜ.. ಈಗಿನ ಕಾಲದಲ್ಲಿ ಹಣವಿಲ್ಲವಾದರೆ ಯಾರೂ ಬೆಲೆ ಕೊಡುವುದಿಲ್ಲ. ಹಣವಿಲ್ಲದಿದ್ದರೆ ಜೀವನದಲ್ಲಿ ಏನೂ‌ ಇಲ್ಲ ಎನ್ನುವಂತೆಯೇ ಆಗಿದೆ.. ಆದರೆ ಅದಕ್ಕೂ ಮುಗಿಲಾಗಿ ಹಣ ಆಸ್ತಿ ಎಲ್ಲವೂ ಹೆಚ್ಚಾಗಿತೇ ಇದ್ದವರಿಗೆ ನೆಮ್ಮದಿ ಹಾಗೂ ಸಂತೋಷದ ಕೊರತೆ ಉಂಟಾಗಿ ಬಿಡುತ್ತದೆ.. ಅದಕ್ಕೆ ನೈಜ್ಯ ಉದಾಹರಣೆ ಸೂಪರ್ ಸ್ಟಾರ್ ರಜನಿಕಾಂತ್ ಅವರು.. ಹೌದು ಕಾರ್ಯಕ್ರಮವೊಂದರಲ್ಲಿ ತಮ್ಮ ಜೀವನದಲ್ಲಿ ಶೇಕಡ ಹತ್ತರಷ್ಟು ಕೂಡ ನೆಮ್ಮದಿ ಸಂತೋಷ ಉಳಿದಿಲ್ಲ ಎಂದು ನೇರವಾಗಿ ತಮ್ಮ ಜೀವನದ ಕಹಿ ಘಟನೆಗಳನ್ನು ಹಾಗೂ ನೋವುಗಳನ್ನು ಹಂಚಿಕೊಂಡಿದ್ದಾರೆ..

ಹೌದು ಒಬ್ಬ ಬಸ್ ಕಂಡಕ್ಟರ್ ಆಗಿ ಜೀವನದಲ್ಲಿ ಯಶಸ್ಸು ಪಡೆಯುವ ಸಲುವಾಗಿ ನಟನಾಗಿ ನಂತರ ಸ್ಟಾರ್ ಆಗಿ ಸೂಪರ್ ಸ್ಟಾರ್ ಆಗಿ ಸಂಪೂರ್ಣ ಭಾರತೀಯ ಚಿತ್ರರಂಗವೇ ಗೌರವ ನೀಡುವಂತೆ ಬೆಳೆದು ನಿಂತ ಕಲಾವಿದ ಎಂದರೆ ಅದು ರಜನೀಕಾಂತ್ ಅವರು.. ಕೋಟಿ ಕೋಟಿ ಸಂಭಾವನೆ.. ಗೌರವ.. ಯಶಸ್ಸು.. ಆರಾಧಿಸುವ ಅಭಿಮಾನಿಗಳು.. ಹೀಗೆ ಬದುಕಿಗೆ ಇನ್ನೇನು ಬೇಕು ಎನ್ನುವಂತಿತ್ತು ಅವರ ಜೀವನ.. ಕೆಲ ವರ್ಷಗಳ ಹಿಂದಷ್ಟೇ ರಾಜಕೀಯಕ್ಕೆ ಎಂಟ್ರಿ ನೀಡುತ್ತಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತಾದರೂ ಆರೋಗ್ಯದ ಕಾರಣದಿಂದಾಗಿ ಅದೆಲ್ಲದರಿಂದ ದೂರ ಉಳಿದರು..

ಇನ್ನು ಇತ್ತ ಸಿನಿಮಾ ದಿಂದಲೂ ದೂರ ಇರುವ ಮಾತು ಕೇಳಿ ಬಂದಿತ್ತಾದರೂ ಆ ಮಾತನ್ನು ಸುಳ್ಳು ಮಾಡಿ ಬ್ಯಾಕ್‌ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿದರು.. ಸಧ್ಯ ಜೈಲರ್ ಸಿನಿಮಾ ಕೂಡ ಒಪ್ಪಿಕೊಂಡಿದ್ದು ಮತ್ತೆ ರಜನಿಕಾಂತ್ ಅವರು ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.. ಆದರೆ ರಜನಿಕಾಂತ್ ಅವರ ಕುಟುಂಬದಲ್ಲಿ ನಡೆದ ಕೆಲ ಘಟನೆಗಳು.. ಕೆಲ ವಿಚಾರಗಳು ರಜನಿಕಾಂತ್ ಅವರು ಸದಾ ಕೊರಗುವಂತೆ ಮಾಡಿ ಬಿಟ್ಟಿತು.. ಹೌದು ಮಗಳು ಐಶ್ವರ್ಯ ಹಾಗೂ ನಟ ಧನುಷ್ ಅವರು ಡಿವೋರ್ಸ್ ಪಡೆದ ಬಳಿಕ ಹೊರಗೆಲ್ಲೂ ಕಾಣಿಸಿಕೊಂಡಿರಲಿಲ್ಲ..

ರಜನಿಕಾಂತ್ ಅವರು‌ ಮೊದಲ ಬಾರಿಗೆ ಚೆನ್ನೈ ನಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡು ಅದೇ ವೇದಿಕೆಯಲ್ಲಿ ತಮ್ಮ ಮನದ ನೋವುಗಳನ್ನೆಲ್ಲಾ ಹೊರ ಹಾಕಿದ್ದಾರೆ.. ಹೌದು ಆರೋಗ್ಯ ಎನ್ನುವುದು ಮನುಷ್ಯನಿಗೆ ಬಹಳ‌ಮುಖ್ಯ.. ಆರೋಗ್ಯ ಕೆಟ್ಟರೆ ನಮಗೆ ಬೇಕಾದವರು ಸಹಿಸಿಕೊಳ್ಳುವುದಿಲ್ಲ.. ನಾನು ನನ್ನ ಜೀವನದಲ್ಲಿ ಹಣ ಹೆಸರು ಕೀರ್ತಿ ಎಲ್ಲವನ್ನೂ ನೋಡಿದ್ದೇನೆ.. ಆದರೆ ಸಂತೋಷ ಪ್ರಶಾಂತತೆ ನೆಮ್ಮದಿ ಮಾತ್ರ ನನ್ನ ಜೀವನದಲ್ಲಿ ಶೇಕಡ ಹತ್ತರಷ್ಟು ಕೂಡ ದೊರೆಯಲಿಲ್ಲ..

ಯಾಕೆಂದರೆ ಅದು ಶಾಶ್ವತವಾಗಿ ಉಳಿಯುವಂತದ್ದೂ ಅಲ್ಲ.. ಎಂದಿದ್ದಾರೆ.. ಹೌದು ರಜನೀಕಾಂತ್ ಅವರಿಗೆ ಇದ್ದದ್ದು ಇಬ್ಬರೇ ಹೆಣ್ಣು ಮಕ್ಕಳು ಆದರೆ ಇಬ್ಬರು ಮಕ್ಕಳ‌ ಮದುವೆಯೂ ಕೂಡ ಮುರಿದು ಬಿದ್ದಿದ್ದು ರಜನಿಕಾಂತ್ ಅವರಿಗೆ ಅರಗಿಸಿಕೊಳ್ಳಲಾಗದ ನೋವಾಗಿತ್ತು.. ರಜನಿಕಾಂತ್ ಅವರು ಇಬ್ಬರೂ ಹೆಣ್ಣು ಮಕ್ಕಳ ಮದುವೆಯನ್ನು ಅದ್ಧೂರಿಯಾಗಿ ನೆರವೇರಿಸಿದ್ದರು.. ಆದರೆ ಹೆಚ್ಚು ವರ್ಷಗಳ ಕಾಲ ಆ ಮದುವೆಗಳು ಉಳಿಯಲಿಲ್ಲ.. ಇತ್ತ ನಟ ಧನುಷ್ ಅವರನ್ನು ಕೈ ಹಿಡಿದಿದ್ದ ಮಗಳು ಐಶ್ವರ್ಯಾ ಅವರು ಕಳೆದ ವರ್ಷ ಡಿವೋರ್ಸ್ ಪಡೆದು ವಿಚಾರ ಬಹಿರಂಗ ಮಾಡಿದರು..

ಇನ್ನು ಮತ್ತೊಬ್ಬ ಮಗಳು ಸೌಂದರ್ಯ ಅವರು ಸಹ 2017 ರಲ್ಲಿ ಪತಿ ಅಶ್ವಿನ್ ರಾಮಕುಮಾರ್ ಅವರ ಜೊತೆ ಡಿವೋರ್ಸ್ ಪಡೆದಿದ್ದರು.. ನಂತರದಲ್ಲಿ ಉದ್ಯಮಿ ವಿಶಗನ್ ವಾನಂಗಮುಡಿ ಅವರ ಜೊತೆ ಎರಡನೇ ಮದುವೆಯಾಗಿದ್ದರು.. ಆದರೆ ಇರೋ ಇಬ್ಬರೂ ಮಕ್ಕಳ ಜೀವನ ಕೂಡ ಈ ರೀತಿಯಾಯಿತೆಂದು ರಜನಿಕಾಂತ್ ಅವರು ಕೊರಗಿ ಅವರ ಆರೋಗ್ಯವೂ ಹದಗೆಟ್ಟಿತ್ತು.. ಏನಿದ್ದರೇನು ಬದುಕಿನಲ್ಲಿ ನೆಮ್ಮದಿ ಇಲ್ಲವೆನ್ನುವಂತಾಗಿತ್ತು.. ಇದೇ ವಿಚಾರಗಳನ್ನು ನಿನ್ನೆ ಕಾರ್ಯಕ್ರಮದಲ್ಲಿ ಹೇಳಿಕೊಂಡು ನೋವನ್ನು ಹೊರ ಹಾಕಿದರು.. ಮೂರು ದಿನ ಬದುಕಿ ಹೋಗುವ ಜೀವನದಲ್ಲಿ ಎದುರಾಗುವ ನೂರಾರು ಸವಾಲುಗಳನ್ನು ಎದುರಿಸಿ ಬಾಳಬೇಕಾದದ್ದೇ ನಿಜವಾದ ಬದುಕಷ್ಟೇ..