ರಜನಿ ಕಾಂತ್ ಮದುವೆಗೂ ಮುನ್ನ ಪ್ರೀತಿಸಿದ್ದ ಕನ್ನಡತಿ ಡಾಕ್ಟರ್ ಯಾರು ಗೊತ್ತಾ? ನೋಡಿದ್ರೆ ಕಣ್ಣೀರು ಬರತ್ತೆ..

ಎಲ್ಲರ ಜೀವನದಲ್ಲಿಯೂ ಅವರದ್ದೇ ಆದ ಫ್ಲಾಶ್ ಬ್ಯಾಕ್ ಒಂದು ಇರುತ್ತದೆ.. ಅವರು ಸೂಪರ್ ಸ್ಟಾರ್ ಆಗಿರಲಿ ಅಥವಾ ಸಾಮನ್ಯನೇ ಆಗಿರಲಿ.. ಪ್ರೀತಿಯಲ್ಲಿ ನೊಂದಿದ್ದರೆ ಆ ನೋವು ಕೊನೆವರೆಗೂ ಕಾಡುತ್ತದೆ.. ಅಂತಹುದೇ ನೋವೊಂದು ರಜನಿಕಾಂತ್ ಅವರನ್ನು ಕಾಡುತ್ತಿದೆ.. ಹೌದು ಅವರ ಮೊದಲ ಪ್ರೀತಿ ಕನ್ನಡತಿ ಡಾಕ್ಟರ್ ಜೊತೆಗಿನ ಆ ಪ್ರೀತಿಗಾಗಿ ಈಗಲೂ ರಜನಿಕಾಂತ್ ಕಾಯುತ್ತಿದ್ದಾರಂತೆ..

ಹೌದು ರಜನಿಕಾಂತ್ ಸಿನಿಮಾ ಇಂಡಸ್ಟ್ರಿಗೂ ಬರುವ ಮುನ್ನ ಅವರು ಬೆಂಗಳೂರಿನಲ್ಲಿ ಕಂಡಕ್ಟರ್ ಆಗಿದ್ದ ವಿಚಾರ ಎಲ್ಲರಿಗೂ ತಿಳಿದೇ ಇದೆ.. ಆ ಸಮಯದಲ್ಲಿಯೇ ರಜನಿಕಾಂತ್ ಅವರಿಗೆ ಮೊದಲ ಪ್ರೀತಿ ಆಗಿದ್ದು.. ಹೌದು ಆಕೆಯ ಹೆಸರು ನಿರ್ಮಲಾ.. ವೈದ್ಯಕೀಯ ವಿದ್ಯಾರ್ಥಿನಿ ಆಗಿದ್ದರು.. ಅವರು ಒಮ್ಮೆ ಬಸ್ ಹತ್ತಲು ಬಂದಾಗ ಹಿಂದಿನಿ ಬಾಗಿಲ ಬಳಿ ಬಂದುಬಿಟ್ಟರು.. ಅದನ್ನು ನೋಡಿದ ರಜನಿಕಾಂತ್ ಅವರ ಜೊತೆ ಜಗಳವಾಡಿ ಮುಂದಿನ ಬಾಗಿಲಲ್ಲಿ ಹತ್ತುವಂತೆ ತಿಳಿಸಿದರು.. ಇಬ್ಬರ ನಡುವೆ ಮೊದಲ ಭೇಟಿಯಲ್ಲೇ ಮನಸ್ತಾಪವಾಗಿತ್ತು.. ಆನಂತರ ಅದೇ ಬಸ್ ನಲ್ಲಿ ನಿರ್ಮಲಾ ಅವರು ಓಡಾಡುತ್ತಿದ್ದರಿಂದ ಪರಿಚಯವಾಯಿತು.. ಪರಿಚಯ ಸ್ನೇಹವಾಯಿತು.. ನಿರ್ಮಲಾ ರಿಂದ ನಿಮ್ಮಿ ಎನ್ನುವಷ್ಟರ ಮಟ್ಟಕ್ಕೆ ಕ್ಲೋಸ್ ಆದರು..

ರಜನಿಕಾಂತ್ ಅವರು ತಮ್ಮ ಕಂಡಕ್ಟರ್ ವೃತ್ತಿಯ ಜೊತೆಗೆ ನಾಟಕಗಳನ್ನು ಆಡುತ್ತಿದ್ದರು.. ಹೀಗೆ ಒಮ್ಮೆ ನಿರ್ಮಾಲಾರನ್ನು ತಮ್ಮ ನಾಟಕ ನೋಡಲು ಬರುವಂತೆ ಆಹ್ವಾನಿಸಿದ್ದರು.. ನಿರ್ಮಲಾ ಕೂಡ ರಜನಿಕಾಂತ್ ಅವರ ನಾಟಕ ನೋಡಲು ಬಂದರು.. ನಾಟಕ ನೋಡಿ ಮೆಚ್ಚಿಕೊಂಡರು.. ಹೀಗೆ ಜೀವನ ನಡೆಯುತ್ತಿರುವ ಸಮಯದಲ್ಲಿ.. ಒಂದು ದಿನ ಚೆನ್ನೈ ನ ಫಿಲ್ಮ್ ಇನ್ಸ್ಟಿಟ್ಯೂಟ್ ನಿಂದ ಅಡ್ಮಿಶನ್ ಲೆಟರ್ ಒಂದು ರಜನಿಕಾಂತ್ ಅವರಿಗೆ ಬಂತು.. ರಜನಿಕಾಂತ್ ಅವರು ನಿಜಕ್ಕೂ ಶಾಕ್ ಆದರು.. ಕಾರಣ ಅವರು ಅಡ್ಮಿಶನ್ ಗೆ ಅರ್ಜಿ ಹಾಕೇ ಇರಲಿಲ್ಲ.. ಅವರಿಗೆ ಕೆಲಸ ಬಿಡುವ ಮನಸ್ಸಿರಲಿಲ್ಲ.. ಜೊತೆಗೆ ಅಲ್ಲಿಗೆ ಹೋದರೆ ಬಹಳಷ್ಟು ಹಣ ಬೇಕು ಎಂದು ಸುಮ್ಮನಿದ್ದರು.. ಆದರೆ ಅಲ್ಲಿಗೆ ರಜನಿಕಾಂತ್ ಅವರ ಪರವಾಗಿ ಅರ್ಜಿ ಹಾಕಿದ್ದು ಬೇರೆ ಯಾರೂ ಅಲ್ಲ ಅದು ನಿರ್ಮಲಾ ಅವರು..

ಹೌದು ನಿರ್ಮಲಾ ಅವರೇ ರಜನಿಕಾಂತ್ ಅವರ ಪರವಾಗಿ ಅರ್ಜಿ ಹಾಕಿದ್ದರು.. ಅಷ್ಟೇ ಅಲ್ಲದೆ ರಜನಿಕಾಂತ್ ಅವರಿಗೆ ದುಡ್ಡು ಸಹ ಕೊಟ್ಟು.. ನೀನ್ ತುಂಬಾ ಚೆನ್ನಾಗಿ ಅಭಿನಯಿಸ್ತೀಯಾ.. ಸಿನಿಮಾ ಪೋಸ್ಟರ್ ಗಳಲ್ಲಿ ನಿನ್ನನ್ನ ನೋಡೋಕೆ ಇಷ್ಟ ಪಡ್ತೀನಿ.. ಸಿನಿಮಾ ಥಿಯೇಟರ್ ಗಳ ಮುಂದೆ ನಿನ್ನ ದೊಡ್ಡ ದೊಡ್ಡ ಕಟೌಟ್ ನೋಡಬೇಕು ನಾನು.. ಇಡೀ ಇಂಡಿಯಾನೇ ಮೆಚ್ಚುವಂತ ನಟನಾಗಬೇಕು ನೀನು.. ಅದೇ ಕಾರಣಕ್ಕೆ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ಅರ್ಜಿ ಸಲ್ಲಿಸಿದ್ದೆ.. ನೀವು ಅಲ್ಲಿಗೆ ಹೋಗಿ ಎಂದು ಬಲವಂತ ಮಾಡಿ ಕಳುಹಿಸಿದರು..

ನಿರ್ಮಲಾ ಅವರ ಮಾತಿನಂತೆ ಚೆನ್ನೈ ಗೆ ಹೋದರು.. ಆದರೆ ಅಲ್ಲಿಗೆ ಹೋದಮೇಲೆ ನಿರ್ಮಲಾ ಅವರ ಜೊತೆ ಸಂಪರ್ಕ ಇರೋದಿಲ್ಲ.. ಎಲ್ಲಾ ಮುಗಿಸಿ ಬೆಂಗಳೂರಿಗೆ ಬಂದಾಗ ನಿರ್ಮಲಾ ಅವರು ಮನೆ ಖಾಲಿ‌ ಮಾಡಿಕೊಂಡು ಹೊರಟುಹೋಗಿದ್ದರು.. ಎಷ್ಟೇ ಹುಡುಕಿದರೂ ಸಿಗಲಿಲ್ಲ..

ಈ ವಿಚಾರವನ್ನು‌ ಮಳಯಾಳಂ‌ನ ನಟ ದೇವನ್ ಅವರೊಂದಿಗೆ ರಜನಿಕಾಂತ್ ಅವರು ಹೇಳಿಕೊಂಡು ಕಣ್ಣೀರಿಟ್ಟಿದ್ದರಂತೆ.. ನಾನು ಎಲ್ಲಿಗೇ ಹೋದರೂ ನಿರ್ಮಲಾರನ್ನು ಹುಡುಕುತ್ತೇನೆ..‌ ಅವರು ಸಿಕ್ತಾರಾ ಅಂತ ನೋಡ್ತೀನಿ, ಹಿಮಾಲಯವಾದರೂ ಅಮೇರಿಕಾವಾದರೂ ಜನಜಂಗುಳಿಯಲ್ಲಿ ಇಣುಕಿ‌ ನೋಡ್ತೀನಿ.. ಸಿಗಬಹುದೇನೋ ಅಂದುಕೊಳ್ತೇನೆ.. ಆಕೆ ಯಾಕೆ ನನ್ನನ್ನು ನೋಡಲು ಬರಲಿಲ್ಲ ದೇವನ್? ನಾನು ಸಾಧನೆ ಮಾಡಿದ್ರು ಆಕೆ ಯಾಕೆ ಬರಲಿಲ್ಲ ಅಂತ ಬಿಕ್ಕಿ ಬಿಕ್ಕಿ ಅತ್ತಿದ್ದರಂತೆ.. ಇತ್ತೀಚೆಗೆ ದೇವನ್ ಅವರು ಈ ವಿಚಾರವನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದರು..