ಮುಕ್ತಾಯಗೊಂಡ ರಾಜಾ ರಾಣಿ 2 ಶೋ ಗೆದ್ದವರು ಯಾರು ಗೊತ್ತಾ?

ಕನ್ನಡ ಕಿರುತೆರೆಯಲ್ಲಿ ಕಲರ್ಸ್ ಕನ್ನಡ ವಾಹಿನಿ ಹೊಸ ಹೊಸ ಪ್ರಯೋಗಗಳನ್ನು ಮಾಡುವುದು ಹೊಸ ವಿಚಾರವೇನೂ ಅಲ್ಲ.. ಅದೇ ರೀತಿ ಕಳೆದ ವರ್ಷ ನನ್ನಮ್ಮ ಸೂಪರ್ ಸ್ಟಾರ್ ಶೋ ಯಶಸ್ಸಿನ ಬಳಿಕ ರಾಜಾ ರಾಣಿ ಶೋ ಆರಂಭವಾಗಿತ್ತು.. ನಿರೀಕ್ಷೆಗೂ ಮೀರಿ ಆ ಶೋವನ್ನು ಜನರು ಇಷ್ಟ ಪಟ್ಟಿದ್ದರು.. ಸೆಲಿಬ್ರೆಟಿ ಜೋಡಿಗಳ ಶೋ ಅದಾಗಿದ್ದು ಗಂಡ ಹೆಂಡತಿ ನಡುವಿನ ಅನ್ಯೂನ್ಯತೆ.. ಟಾಸ್ಕ್ ಗಳು.. ಹೀಗೆ ಸಾಕಷ್ಟು ಮನರಂಜನೆಯ ಜೊತೆ ಶೋ ಯಶಸ್ವಿಯಾಗಿತ್ತು.. ಎಲ್ಲರ ಮನ ಗೆದ್ದಿದ್ದ ಚಂದನ್ ಹಾಗೂ ನೇಹಾ ಜೋಡಿ ರಾಜಾ ರಾಣಿ ಶೋನ ಗೆಲುವನ್ನು ಪಡೆದಿದ್ದರು‌‌.. ಒಂದು ಶೋ ಯಶಸ್ವಿಯಾದರೆ ಅದನ್ನು ಮತ್ತಷ್ಟು ಸೀಸನ್ ಗಳಾಗಿ‌ ಮುಂದುವರೆಸುವುದು ಸಾಮಾನ್ಯ..

ಅದೇ ರೀತಿ ರಾಜಾ ರಾಣಿ 2 ಶೋ ಆರಂಭವಾಗಿದ್ದು ಇದನ್ನು ಸ್ವತಃ ಸೃಜನ್ ಲೋಕೇಶ್ ಅವರೇ ನಿರ್ಮಾಣ ಮಾಡಿದ್ದು ಮಜಾ ಟಾಕೀಸ್ ಡ್ಯಾನ್ಸಿಂಗ್ ಚಾಂಪಿಯನ್ ನಂತರ ಲೋಕೇಶ್ ಪ್ರೊಡಕ್ಷನ್ಸ್ ನಲ್ಲಿ ರಾಜಾ ರಾಣಿ 2 ಶೋ ಪ್ರಸಾರವಾಗುತಿತ್ತು.. ಮನರಂಜನೆಯ ಜೊತೆಗೆ ಹೊಸ ಹೊಸ ಬಗೆಯ ಟಾಸ್ಕ್ ಗಳು ಸಹ ಶೋಗೆ ಕಳೆ ತಂದಿತ್ತು..

ಅತ್ತ ರಾಜಾ ರಾಣಿ ಶೋ ಯಶಸ್ವಿಯಾಗುತ್ತಿದ್ದಂತೆ ಜೀ ವಾಹಿನಿಯಲ್ಲಿಯೂ ದಂಪತಿಗಳ ಜೋಡಿ ನಂಬರ್ ಒನ್ ಶೋ.. ಸ್ಟಾರ್ ಸುವರ್ಣ ವಾಹಿನಿಯಲ್ಲಿಯೂ ಇಸ್ಮಾರ್ಟ್ ಜೋಡಿ.. ಹೀಗೆ ಸಾಲು ಸಾಲು ಜೋಡಿಗಳ ಶೋ ಶುರುವಾಗಿತ್ತು.. ಆದರೂ ಸಹ ತನ್ನ ವಿಭಿನ್ನತೆಯಿಂದಾಗಿ ರಾಜಾ ರಾಣಿ 2 ಶೋ ಗೆದ್ದಿತ್ತು.. ಇದೀಗ ನಿನ್ನೆ ಈ ಶೋ ನ ಗ್ರಾಂಡ್ ಫಿನಾಲೆ ಕಾರ್ಯಕ್ರಮ ನಡೆದಿದ್ದು ಎಂದಿನಂತೆ ಒಂದು ಜೋಡಿ ವಿಜೇತರ ಪಟ್ಟ ಪಡೆದು ರಾಜಾ ರಾಣಿ ಕಿರೀಟದ ಜೊತೆಗೆ ನಗದು ಬಹುಮಾನವನ್ನೂ ಸಹ ಪಡೆದು ಕೊಂಡಿದ್ದಾರೆ..

ಹೌದು ಸುಂದರ್ ವೀಣಾ ಸುಂದರ್, ರಾಜೀವ್ ರೇಷ್ಮಾ.. ಕಾವ್ಯಾ ಮಹದೇವ್ ಕುಮಾರ್, ವಿನಯ್ ಐಶ್ವರ್ಯಾ.. ಅರುಣ್ ಮಾಧುರ್ಯ.. ರಜತ್ ಅಕ್ಷಿತಾ.. ಹೀಗೆ ಒಟ್ಟು ಹನ್ನೆರೆಡು ಜೋಡಿಗಳು ಕಳೆದ ಮೂರು ತಿಂಗಳಿಂದ ಮನರಂಜನೆ ನೀಡಿದ್ದು ಮಾತ್ರವಲ್ಲದೇ ತಮ್ಮ ನಡುವಿನ ಬಾಂಧವ್ಯವನ್ನೂ ಸಹ ಹೆಚ್ಚು ಮಾಡಿಕೊಂಡರೆನ್ನಬಹುದು.. ಇನ್ನು ಫಿನಾಲೆಗೆ ಬಂದಿದ್ದ ಈ ಆರು ಜೋಡಿಗಳಲ್ಲಿ ಸುಂದರ್ ವೀಣಾ ಸುಂದರ್.. ಕಾವ್ಯಾ ಕುಮಾರ್ ಹಾಗೂ ಅರುಣ್ ಮಾಧುರ್ಯಾ ಜೋಡಿ ಟಾಪ್ ಮೂರರಲ್ಲಿ ಕಾಣಿಸಿಕೊಂಡು ಅರುಣ್ ಮಾಧುರ್ಯಾ ಜೋಡಿ ಎರಡನೇ ರನ್ನರ್ ಅಪ್ ಸ್ಥಾನ ಪಡೆದುಕೊಂಡರು.. ಇವರಿಗೆ ಟ್ರೋಫಿ ಹಾಗೂ ಒಂದು ಲಕ್ಷ ರೂಪಾಯಿ ನಗದು ಬಹುಮಾನವನ್ನು ನೀಡಲಾಯಿತು..

ಇನ್ನು ಮೊದಲ ರನ್ನರ್ ಅಪ್ ಆಗಿ ಸುಂದರ್ ಹಾಗೂ ವೀಣಾ ಜೋಡಿ ಹೊರ ಬಂದಿದ್ದು ಅವರಿಗೆ ಎರಡು ಲಕ್ಷ ರೂಒಆಯಿ ನಗದು ಬಹುಮಾನ ಟ್ರೋಫಿ ಹಾಗೂ ಒಂದಿಷ್ಟು ಉಡುಗೊರೆಗಳು ಸಹ ದೊರೆತವು.. ಇನ್ನು ಈ ಸೀಸನ್ ನ ರಾಜಾ ರಾಣಿಯಾಗಿ ಗೆದ್ದ ಕಾವ್ಯಾ ಮಹದೇವ್ ಹಾಗೂ ಕುಮಾರ್ ಜೋಡಿ ರಾಜಾ ರಾಣಿ ಪಟ್ಟ ಪಡೆದು ಕಿರೀಟದ ಜೊತೆಗೆ ಐದು ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ಒಂದಷ್ಟು ಉಡುಗೊರೆಗಳನ್ನೂ ಸಹ ಪಡೆದುಕೊಂಡರು..

ಅಷ್ಟೇ ಅಲ್ಲದೇ ಈ ಎಲ್ಲಾ ಜೋಡಿಗಳಿಗೂ ಬಹುಮಾನ ಮಾತ್ರವಲ್ಲದೇ ಹನ್ನೆರೆಡುಯ್ ಜೋಡಿಗಳಿಗೂ ವಾರದ ಸಂಭಾವನೆಯನ್ನೂ ಸಹ ನೀಡಲಾಗಿದೆ.. ಒಟ್ಟಿನಲ್ಲಿ ರಾಜಾ ರಾಣಿ 2 ಸೀಸನ್ ಮುಕ್ತಾಯಗೊಂಡಿದ್ದು ಮುಂದಿನ ವಾರದಿಂದ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ಆರಂಭವಾಗುತ್ತಿದ್ದು ಆ ಸೀಸನ್ ಗೆ ವಂಶಿಕಾ ಹಾಗೂ ನಿರಂಜನ್ ನಿರೂಪಕರಾಗಿ ಆಗಮಿಸುತ್ತಿದ್ದು ಟಿ ಆರ್ ಪಿ ರಾಣಿ ವಂಶಿಕಾಳನ್ನು ಹಾಕಿಕೊಂಡು ವಾಹಿನಿ ಮತ್ತೊಮ್ಮೆ ನನ್ನಮ್ಮ ಸೂಪರ್ ಸ್ಟಾರ್ ಶೋನ ಯಶಸ್ಸಿನ ನಿರೀಕ್ಷೆಯಲ್ಲಿದೆ ಎನ್ನಬಹುದು..