ಬಿಜೆಪಿ ಯಲ್ಲಿ ನನಗೆ ಸ್ಥಾನಮಾನ ಕೊಡಿ ಎಂದ ರಾಗಿಣಿ.. ಆದರೆ ಯಡಿಯೂರಪ್ಪನವರು ಹೇಳಿದ್ದೇನು ಗೊತ್ತಾ?

ಇಂದು ಬೆಳ್ಳಂಬೆಳಿಗ್ಗೆ ನಟಿ ರಾಗಿಣಿ ಅವರು ರಾಜಕೀಯ ಸೇರುವ ವಿಷಯ ಸದ್ದಾಗುತ್ತಿದೆ.. ಹೌದು ಸದ್ಯ ಕೊರೊನಾ ಸಮಯದಲ್ಲಿ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯ ಸಿಬ್ಬಂದಿಗಳಿಗೆ ಆಗಾಗ ಆಹಾರ ಪೂರೈಸುತ್ತಾ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿರುವ ರಾಗಿಣಿ ಅವರು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿ ನನಗೆ ಪಕ್ಷದಲ್ಲಿ ಸ್ಥಾನಮಾನ ಕೊಡಿ ಎಂದಿದ್ದಾರೆ..

ಹೌದು ಇಂದು ಬೆಳಿಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪನವರ ನಿವಾಸ ಕಾವೇರಿಗೆ ರಾಗಿಣಿ ಅವರು ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.. ಅಷ್ಟೇ ಅಲ್ಲದೆ ನನಗೆ ಸರ್ಕಾರದಲ್ಲಿ ಅಥವಾ ಪಕ್ಷದಲ್ಲಿ ಒಂದು ಸ್ಥಾನ ಬೇಕೇ ಬೇಕು ಎಂದಿದ್ದಾರೆ.. ನಾನು ಕೂಡ ಉಪ ಚುನಾವಣೆ ಸಮಯದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದೇನೆ.. ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಹೀಗಾಗಿ ನೀವು ನನ್ನನ್ನು ಪರಿಗಣಿಸಿ ಸ್ಥಾನಮಾನ ಕೊಡಿ ಎಂದಿದ್ದಾರೆ ರಾಗಿಣಿ.. ಆದರೆ ಯಡಿಯೂರಪ್ಪನವರು‌ ಮುಂದಿನ ದಿನಗಳಲ್ಲಿ ನೋಡೋಣ ಎಂದಷ್ಟೇ ಹೇಳಿದ್ದು ಯಾವುದೇ ರೀತಿಯ ಜವಬ್ದಾರಿ ನೀಡುವ ಬಗ್ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿಲ್ಲ..

ಮುಖ್ಯಮಂತ್ರಿಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಾರದ ಕಾರಣ ಯಡಿಯೂರಪ್ಪನವರನ್ನು ಮಾತ್ರವಲ್ಲದೆ ರಾಗಿಣಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮರ್ ಕಟೀಲ್ ಅವರನ್ನು ಭೇಟಿ ಮಾಡಿ ಇದೇ ವಿಚಾರವನ್ನು ಕೇಳಿದ್ದಾರೆ.. ಆದರೆ ಅವರೂ ಸಹ ಮುಂದೆ ನೋಡೋಣ ಎಂದಷ್ಟೇ ಹೇಳಿದ್ದಾರೆ..

ಈ ವಿಚಾರ ಸುದ್ದಿಯಾಗುತ್ತಿದ್ದಂತೆ ಮಾದ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ರಾಗಿಣಿ ಅವರು..‌ ನಾನು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದೆ.. ರಾಜಕೀಯಕ್ಕೆ ಬನ್ನಿ ಎಂದು ಕರೆಯುತ್ತಿದ್ದಾರೆ.. ಆದರೆ ನಾನು ಏನನ್ನೂ ನಿರ್ಧಾರ ಮಾಡಿಲ್ಲ‌. ನೋಡೋಣ ಮುಂದೆ ಏನಾಗುತ್ತದೆಯೋ ಎಂದಿದ್ದಾರೆ.. ಅಷ್ಟೇ ಅಲ್ಲದೆ ನನಗೆ ಎಲ್ಲಾ ಪಕ್ಷಗಳಿಂದಲೂ ಆಹ್ವಾನವಿದೆ.. ಆದರೆ ಮುಂದೆ ನೋಡೋಣ.. ಇನ್ನು ಏನನ್ನು ಯೋಚಿಸಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ..