ಮಧ್ಯ ರಾತ್ರಿಯಲಿ ತನ್ನ ತಾಯಿಯ ಬಗ್ಗೆ ಭಾವನಾತ್ಮಕವಾಗಿ ಪೋಸ್ಟ್ ಮಾಡಿದ ರಾಧಿಕಾ ಯಶ್..

ಅಮ್ಮ ಎನ್ನುವ ಪದವೇ ಹಾಗೆ.. ನಮಗೆಷ್ಟೇ ವಯಸ್ಸಾಗಲಿ ನಮಗೆಷ್ಟೇ ಮಕ್ಕಳಾಗಲಿ..‌ ತಾಯಿ ತನ್ನ ಮಕ್ಕಳನ್ನು ಪ್ರೀತಿ ಹಾರೈಕೆ ಮಾಡುವುದ ಕಡಿಮೆ ಮಾಡುವುದಿಲ್ಲ.. ಆಕೆಯ ಮಮತೆಗೆ ಎಂದೂ ಯಾರಿಂದಲೂ ಬೆಲೆ ಕಟ್ಟಲಾಗದು.. ಸಾಮಾನ್ಯರಾಗಲಿ ಸೆಲಿಬ್ರೆಟಿಗಳಾಗಲಿ ತನ್ನ ತಾಯಿಗೆ ತಮ್ಮ ತಮ್ಮ ಜೀವನದಲ್ಲಿ ವಿಶೇಷ ಸ್ಥಾನಮಾನ ನೀಡಿರುತ್ತಾರೆ.. ಅದೇ ರೀತಿ ನಟಿ‌ ರಾಧಿಕಾ ಪಂಡಿತ್ ಅವರೂ ಸಹ ತನ್ನ ತಾಯಿಯ ಬಗ್ಗೆ ಮಧ್ಯರಾತ್ರಿಯಲ್ಲಿ ಭಾವನಾತ್ಮಕವಾಗಿ ಬರೆದು ಪೋಸ್ಟ್ ಮಾಡಿದ್ದಾರೆ..

ಹೌದು ಮೊನ್ನೆಮೊನ್ನೆಯಷ್ಟೇ ಯಶ್ ಹಾಗೂ ರಾಧಿಕಾ ಪಂಡಿತ್.. ಐರಾ ಹಾಗೂ ಯಥರ್ವನ ಜೊತೆಯಲಿ ಮಾಲ್ಡೀವ್ಸ್ ಪ್ರವಾಸಕ್ಕೆ ಹೋಗಿ ಬಂದಿದ್ದು ಸದ್ಯ ರಿಲ್ಯಾಕ್ಸ್ ಮೋಡ್ ನಲ್ಲಿದ್ದಾರೆ.. ಅತ್ತ ನಟ ಯಶ್ ಅವರು ಕೆಜಿಎಫ್ ಸಿನಿಮಾದ ಸಂಪೂರ್ಣ ಕೆಲಸ ಮುಗಿದಿದ್ದು ಬಿಡುಗಡೆಗೆ ಸಜ್ಜಾಗಿದೆ.. ಕೆಜಿಎಫ್ ಪ್ರಮೊಷನ್ ಜೊತೆಗೆ ತಮ್ಮ ಮುಂದಿನ ಸಿನಿಮಾದ ತಯಾರಿ‌ ನಡೆಸುತ್ತಿದ್ದಾರೆ.. ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಜೊತೆಗೆ ಯಶ್ ಅವರ ಮುಂದಿನ ಸಿನಿಮಾ ಎನ್ನಲಾಗುತ್ತಿದ್ದು ಯಶ್ ಅವರಿಂದ ಅಧಿಕೃತವಾಗಿ ತಿಳಿಯಬೇಕಿದೆ..

ಇನ್ನೂ ಇತ್ತ ರಾಧಿಕಾ ಪಂಡಿತ್ ಮದುವೆಯ ನಂತರ ಆದಿ ಲಕ್ಷ್ಮಿ ಪುರಾಣ ಸಿನಿಮಾ ಬಿಟ್ಟು ಮತ್ತೆ ಬೇರೆ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ.. ಕುಟುಂಬ ಮಕ್ಕಳು ಅಂತ ಬ್ಯುಸಿ ಆಗಿರುವ ನಟಿ ಇತ್ತೀಚೆಗೆ ಯಶ್ ಅವರೊಟ್ಟಿಗೆ ಜಾಹಿರಾತೊಂದರಲ್ಲಿ ಕಾಣಿಸಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು.. ಇನ್ನು ತಮ್ಮ ಕುಟುಂಬದ ಯಾವುದೇ ಸಮಾರಂಭವಾಗಲಿ ವಿಶೇಷ ವಿಚಾರವಾಗಲಿ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಟ್ಟಿಗೆ ಸ್ನೇಹಿತರೊಟ್ಟಿಗೆ ವಿಶೇಷವಾಗಿ ಹಂಚಿಕೊಳ್ಳುವುದು ಯಶ್ ಹಾಗೂ ರಾಧಿಕಾರ ಅಭ್ಯಾಸ.. ಅದರಲ್ಲೂ ಕುಟುಂಬದಲ್ಲಿ ಯಾರದ್ದೇ ಹುಟ್ಟುಹಬ್ಬವಾದರೂ ರಾಧಿಕಾ ಪಂಡಿತ್ ಮಾತ್ರ ಮಧ್ಯ ರಾತ್ರಿಯಲ್ಲಿಯೇ ಶುಭ ಕೋರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವರು.. ಅಷ್ಟೇ ಅಲ್ಲದೇ ಖುದ್ದು ತಾವೇ ಕೇಕ್ ತಯಾರಿಸಿ ವಿಶೇಷವಾಗಿ ಆಚರಿಸುವರು ಕೂಡ.. ರಾಧಿಕಾ ಅವರ ಕುಟುಂಬದವರೇ ಆಗಲಿ ಅಥವಾ ಅವರ ಮನೆಯಲ್ಲಿ ಅವರೊಟ್ಟಿಗೆ ಕೆಲಸ ಮಾಡುತ್ತಿರುವವರ ಹುಟ್ಟುಹಬ್ಬವೇ ಆಗಲಿ ರಾಧಿಕಾ ಪಂಡಿತ್ ಅವರು ತಾವೇ ಕೇಕ್ ತಯಾರಿಸಿ ಹುಟ್ಟುಹಬ್ಬ ಆಚರಿಸಿ ಸಂಭ್ರಮ ಪಡುವುದರ ಜೊತೆಗೆ ಅವರಿಗೂ ಸಂತೋಷ ಪಡುವಂತೆ ಮಾಡುವರು.. ಆದರೆ ಇದೀಗ ಕೊಂಚ ವಿಶೇಷ..

ಹೌದು ರಾಧಿಕಾ ಪಂಡಿತ್ ಮೊನ್ನೆಯೂ ಸಹ ಮಧ್ಯರಾತ್ರಿಯಲ್ಲಿ ಅಮ್ಮನ ಕುರಿತು ಪೋಸ್ಟ್ ಮಾಡಿದ್ದಾರೆ.. ಕಾರಣವೇನೋ ಹುಟ್ಟುಹಬ್ಬವೇ.. ಆದರೆ ಅದಕ್ಕಿಂತ ಮಿಗಿಲಾಗಿ ತಾಯಿಯ ಮಮತೆಯ ಬಗ್ಗೆ ಮಾತನಾಡಿ ರಾಧಿಕಾ ಪಂಡಿತ್ ಭಾವುಕರಾಗಿದ್ದಾರೆ.. ಹೌದು ಯಶ್ ರಂತೆಯೇ ರಾಧಿಕಾ ಪಂಡಿತ್ ಕೂಡ ಕಷ್ಟ ಪಟ್ಟು ಮೇಲೆ ಬಂದವರೇ.. ಅಂತಹ ಎಲ್ಲಾ ಸಮಯದಲ್ಲಿಯೂ ರಾಧಿಕಾ ಜೊತೆ ನಿಂತವರು ಅವರ ತಾಯಿ.. ನಿನ್ನೆ ಅವರ ಹುಟ್ಟುಹಬ್ಬವಿದ್ದು ರಾಧಿಕಾ ಪಂಡಿತ್ ತನ್ನ ತಾಯಿಯ ಬಗ್ಗೆ “ಪ್ರಪಂಚಕ್ಕೆ ನೀನು ಒಬ್ಬ ವ್ಯಕ್ತಿಯಷ್ಟೇ ಇರಬಹುದು.. ಆದರೆ ನನಗೆ ಮಾತ್ರ ನೀನೆ ಪ್ರಪಂಚ.. ಥ್ಯಾಂಕ್ ಯು ಮಾ.. ಪ್ರತಿಯೊಂದಕ್ಕೂ ಥ್ಯಾಂಕ್ ಯು.. ಮತ್ತಿನ್ನೇನನು ಹಾಳೇಲಾರೆ.. ಹುಟ್ಟುಹಬ್ಬದ ಶುಭಾಶಯಗಳು” ಎಂದು ಬರೆದು ಪೋಸ್ಟ್ ಮಾಡಿದ್ದು.. ಸ್ನೇಹಿತರು ಅಭಿಮಾನಿಗಳು ಎಲ್ಲರೂ ಸಹ ರಾಧಿಕಾ ಪಂಡಿತ್ ಅವರ ತಾಯಿಗೆ ಹುಟ್ಟುಹಬ್ನದ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ..

ಸ್ಯಾಂಡಲ್ವುಡ್ ನಲ್ಲಿ ರಾಧಿಕಾ ಪಂಡಿತ್ ಸ್ಟ್ರಾಂಗ್ ವುಮೆನ್ ಎಂದು ಹೇಳಲಾಗುತಿತ್ತು.. ಆದರೆ ಅವರ ಹಿಂದಿನ ಶಕ್ತಿಯೇ ಅವರ ತಾಯಿ ಎಂದಿದ್ದಾರೆ.. ತಾಯಿಯ ಶಕ್ತಿಯೇ ಅಂತಹುದು ಎಂದೂ ಯಾವ ಸಮಯದಲ್ಲಿಯೂ ಮಕ್ಕಳ ಕೈ ಬಿಡದ ಜೊತೆ ನಿಲ್ಲುವ ಮಮತೆಯ ಸಾಗರವೇ ತಾಯಿ.. ಆ ತಾಯಿಗೆ ಥ್ಯಾಂಕ್ಸ್ ಹೇಳುವ ಮೂಲಕ ಹುಟ್ಟುಹಬ್ಬದ ಶುಭಶಯ ತಿಳಿಸಿದ್ದಾರೆ..