ರಾಧಿಕಾ ಪಂಡಿತ್ ಅತಿಯಾಗಿ ಪ್ರೀತಿಸುವ ಆ ವ್ಯಕ್ತಿ ಯಾರು ಗೊತ್ತಾ.. ಭಾವುಕರಾಗಿ ಪೋಸ್ಟ್ ಮಾಡಿದ ರಾಧಿಕಾ..

ರಾಧಿಕಾ ಪಂಡಿತ್, ಇವರನ್ನು ಸ್ಯಾಂಡಲ್ ವುಡ್ ಪ್ರಿನ್ಸೆಸ್ ಎಂದೇ ಕರೆಯಲಾಗುತ್ತಿತ್ತು. ಕನ್ನಡ ಚಿತ್ರರಂಗಕ್ಕೆ ರಾಧಿಕಾ ಪಂಡಿತ್ ಅವರು ಎಂಟ್ರಿ ಕೊಟ್ಟು ಒಂದು ದಶಕಕ್ಕಿಂತ ಹೆಚ್ಚಿನ ಸಮಯ ಕಳೆದಿದೆ. ಆಗಿನಿಂದ ಈಗಿನವರೆಗೂ ಯಾವುದೇ ಒಂದು ವಿಚಾರಕ್ಕಾಗಿ ರಾಧಿಕಾ ಪಂಡಿತ್ ಅವರು ವಿವಾದ ಮಾಡಿಕೊಂಡಿಲ್ಲ. ವಿವಾದ ಮಾಡಿಕೊಳ್ಳದೆಯೇ ಇರುವ ಸಾಫ್ಟ್ ಹೀರೋಯಿನ್ ಇವರು ಎಂದರೆ ತಪ್ಪಾಗುವುದಿಲ್ಲ. ಈಗಲೂ ಕೂಡ ಎಲ್ಲರ ಜೊತೆ ನಗುನಗುತ್ತಾ ಇದ್ದು, ಮಕ್ಕಳ ಪಾಲನೆ ಪೋಷಣೆಯಲ್ಲಿ ಹೆಚ್ಚು ಬ್ಯುಸಿ ಆಗಿದ್ದಾರೆ. ರಾಧಿಕಾ ಪಂಡಿತ್ ಅವರ ಅಭಿಮಾನಿ ಬಳಗಗಳು ಆಗ ಎಷ್ಟಿದ್ದವು ಈಗ ಅದಕ್ಕಿಂತಲೂ ಹೆಚ್ಚಾಗಿದೆ. ರಾಧಿಕಾ ಅವರು ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್, ನಿನ್ನೆ ರಾಧಿಕಾ ಪಂಡಿತ್ ಅವರ ಜೀವನದ ಬಹಳ ಸ್ಪೆಷಲ್ ಆದ ವ್ಯಕ್ತಿಯ ಹುಟ್ಟುಹಬ್ಬ. ಮುದ್ದಾದ ಸಾಲುಗಳನ್ನು ಬರೆದು ಆ ವ್ಯಕ್ತಿಗೆ ವಿಶ್ ಮಾಡಿದ್ದಾರೆ ರಾಧಿಕಾ ಪಂಡಿತ್. ಅಷ್ಟಕ್ಕೂ ಅವರು ಯಾರು ಗೊತ್ತಾ?

ನಟಿ ರಾಧಿಕಾ ಪಂಡಿತ್ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಸುಲಭವಾಗಿ ಅಲ್ಲ, ಮೊದಲಿಗೆ ಧಾರಾವಾಹಿಗಳಲ್ಲಿ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿ, ನಂತರ ಧಾರಾವಾಹಿಯ ಹೀರೋಯಿನ್ ಆಗಿ ಜನಪ್ರಿಯತೆ ಪಡೆದು, ಅನಂತರ ಮೊಗ್ಗಿನ ಮನಸ್ಸು ಸಿನಿಮಾ ಮೂಲಕ ಹೀರೋಯಿನ್ ಆಗಿ ಎಂಟ್ರಿ ಕೊಟ್ಟರು. ಮೊದಲ ಸಿನಿಮಾದಲ್ಲೇ ಅದ್ಭುತವಾದ ಅಭಿನಯಕ್ಕೆ ಅವಾರ್ಡ್ ಗಳನ್ನು ಪಡೆದುಕೊಂಡ ರಾಧಿಕಾ ಪಂಡಿತ್ ಅವರು ಅಲ್ಲಿಂದ ಹಿಂದಿರುಗಿ ನೋಡಿದ್ದೆ ಇಲ್ಲ. ಒಳ್ಳೆಯ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು, ಒಳ್ಳೆಯ ಸಿನಿಮಾಗಳಲ್ಲಿ ನಟಿಸಲು ಶುರು ಮಾಡಿದರು. ಹಲವಾರು ಅವಾರ್ಡ್ ಗಳನ್ನು ಸಹ ಪಡೆದುಕೊಂಡರು.

ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಸಾಧನೆ ಮಾಡಬೇಕು ಎಂದುಕೊಳ್ಳುವ ಎಲ್ಲ ಹುಡುಗಿಯರಿಗು ಇಬರು ಸ್ಪೂರ್ತಿಯಾಗಿದ್ದಾರೆ. ರಾಧಿಕಾ ಪಂಡಿತ್ ಅವರು ಯಾವಾಗಲೂ ಕನ್ನಡಕ್ಕೆ ಮೊದಲ ಆದ್ಯತೆ ನೀಡಿ, ಕನ್ನಡ ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದು ಕನ್ನಡಿಗರಿಗೆ ಸಂತೋಷ ಆಗುವ ವಿಚಾರ. ಇನ್ನು ರಾಧಿಕಾ ಅವರ ವೈಯಕ್ತಿಕ ಜೀವನದ ವಿಚಾರಕ್ಕೆ ಬರುವುದಾದರೆ, ರಾಧಿಕಾ ಅವರ ತಾಯಿ ಹೆಸರು ಮಂಗಳ ಪಂಡಿತ್ ಹಾಗು ತಂದೆ ಕೃಷ್ಣ ಪ್ರಸಾದ್. ರಾಧಿಕಾ ಅವರಿಗೆ ಒಬ್ಬ ಸಹೋದದ ಕೂಡ ಇದ್ದಾರೆ ಅವರ ಹೆಸರು ಗೌರಂಗ್ ಪಂಡಿತ್.

ನಟ ಯಶ್ ಅವರ ಜೊತೆ ಮದುವೆಯಾಗಿ ಸಂತೋಷದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ ರಾಧಿಕಾ ಪಂಡಿತ್. ಬಹಳಷ್ಟು ವರ್ಷಗಳ ಕಾಲ ಪ್ರೀತಿ ಮಾಡಿ, ಒಂದು ಹಂತಕ್ಕೆ ಜೀವನದಲ್ಲಿ ಸೆಟ್ಲ್ ಆದ ನಂತರ ಯಶ್ ಮತ್ತು ರಾಧಿಕಾ ಇಬ್ಬರ ಕುಟುಂಬವನ್ನು ಸಹ ತಮ್ಮಮದುವೆ ಮಾಡಿಕೊಂಡರು. ಈಗ ಈ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ, ಅವರು ಆಯ್ರಾ ಮತ್ತು ಯಥರ್ವ್, ಈ ಇಬ್ಬರು ಮಕ್ಕಳು ಈಗ ಸೋಷಿಯಲ್ ಮೀಡಿಯಾ ಸ್ಟಾರ್ ಗಳಾಗಿದ್ದಾರೆ. ಪ್ರಸ್ತುತ ರಾಧಿಕಾ ಪಂಡಿತ್ ಅವರು ಮಕ್ಕಳನ್ನು ನೋಡಿಕೊಳ್ಳುವ ಕೆಳಸದಲ್ಲೇ ಹೆಚ್ಚು ಬ್ಯುಸಿ ಆಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ರಾಧಿಕಾ ಪಂಡಿತ್ ಅವರು ತುಂಬಾ ಆಕ್ಟಿವ್ ಆಗಿರುತ್ತಾರೆ. ಆಗಾಗ ತಮ್ಮ ಜೀವನದ ಸುಂದರ ಕ್ಷಣಗಳ ಫೋಟೋಗಳು ಮತ್ತು ಮಕ್ಕಳ ಫೋಟೋಗಳು ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಇದೀಗ ರಾಧಿಕಾ ಪಂಡಿತ್ ಅವರು ತಮ್ಮ ಜೀವನದ ಬಹುಮುಖ್ಯವಾದ ವ್ಯಕ್ತಿಗಯ ಹುಟ್ಟುಹಬ್ಬಕ್ಕೆ ಕ್ಯೂಟ್ ಆಗಿ ವಿಶ್ ಮಾಡಿದ್ದಾರೆ. ಆ ಮುಖ್ಯವಾದ ವ್ಯಕ್ತಿ ಬೇರಾರು ಅಲ್ಲ, ರಾಧಿಕಾ ಪಂಡಿತ್ ಅವರ ತಾಯಿ ಮಂಗಳ ಪಂಡಿತ್. ಫೆಬ್ರವರಿ 6ರಂದು ರಾಧಿಕಾ ಪಂಡಿತ್ ಅವರಿಗೆ ಡಬಲ್ ಸಂಭ್ರಮ. ಒಂದು ರಾಧಿಕಾ ಅವರ ತಾಯಿಯ ಹುಟ್ಟುಹಬ್ಬ, ಮತ್ತೊಂದು ರಾಧಿಕಾ ಅವರ ಸಹೋದರನ ಮುದ್ದು ಮಗಳ ಹುಟ್ಟುಹಬ್ಬ ಕೂಡ ಹೌದು.

ಇನ್ಸ್ಟಾಗ್ರಾಮ್ ನಲ್ಲಿ, ಅಮ್ಮನ ಜೊತೆ ಹಾಗೂ, ಸಹೋದರನ ಮಗಳ ಜೊತೆ ಇರುವ ಕ್ಯೂಟ್ ಆದ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ ರಾಧಿಕಾ, “ಹುಟ್ಟುಹಬ್ಬದ ಶುಭಾಶಯಗಳು ಅಮ್ಮ.. ನಿಮ್ಮನ್ನು ನಾನು ಎಷ್ಟು ಪ್ರೀತಿಸುತ್ತೇನೆ ಎಂದು ಪದಗಳಲ್ಲಿ ಹೇಳಲು ಆಗುವುದಿಲ್ಲ. ನೀವು ನನಗಾಗಿ ಮಾಡಿರುವ ಎಲ್ಲದಕ್ಕೂ ಸದಾ ಋಣಿಯಾಗಿರುತ್ತೇನೆ. ನನ್ನ ಡಾರ್ಲಿಂಗ್ ರಿಯಾ ಗೆ ಹುಟ್ಟುಹಬ್ಬ ಶುಭಾಶಯಗಳು.. ನಿನ್ನನ್ನು ಬೇಗ ನೋಡಲು ಬಯಸುತ್ತಿದ್ದೇನೆ, ನಿನ್ನನ್ನು ನೋಡಿ ತುಂಬಾ ಸಮಯ ಆಗಿದೆ..” ಎಂದು ಕ್ಯಾಪ್ಶನ್ ನೀಡಿದ್ದಾರೆ ರಾಧಿಕಾ. ಈ ಮೂಲಕ ತಮ್ಮ ಜೀವನದ ಮುಖ್ಯ ವ್ಯಕ್ತಿಯಾದ ತಾಯಿಗೆ ಮತ್ತು ಸಹೋದರನ ಮಗಳಿಗೆ ಬರ್ತ್ ಡೇ ವಿಶ್ ತಿಳಿಸಿದ್ದಾರೆ ರಾಧಿಕಾ.