ಡ್ರಾಮ ಜೂನಿಯರ್ ಶೋನಲ್ಲಿ ರಚಿತಾ ರಾಮ್ ಗೆ ಕೊಡುತ್ತಿರುವ ದುಬಾರಿ ಸಂಭಾವನೆ ಎಷ್ಟು ಗೊತ್ತಾ…

ಕನ್ನಡ ಕಿರುತೆರೆತಲ್ಲಿ ಸಧ್ಯ ಧಾರಾವಾಹಿಗಳ ಜೊತೆಗೆ ರಿಯಾಲಿಟಿ ಶೋಗಳ ದರ್ಬಾರ್ ನಡೆಯುತ್ತಿದ್ದು ಕಿರುತೆರೆ ಪ್ರೇಕ್ಷಕರಿಗೆ ಮನರಂಜನೆಯ ಮಹಾಪೂರವೇ ದೊರೆಯುತ್ತಿದ್ದು ವಾರ ಪೂರ್ತಿ ಸಾಲು ಸಾಲು ಧಾರಾವಾಹಿಗಳ ಸಂಭ್ರಮವಾದರೆ ವಾರಂತ್ಯದಲ್ಲಿ ರಿಯಾಲಿಟಿ ಶೋಗಳ ರಸದೌತಣವೆನ್ನಬಹುದು.. ಇನ್ನು ಸಧ್ಯ ಜೀ ಕನ್ನಡ ವಾಹಿನಿಯಲ್ಲಿ‌ ಕಳೆದ ಮೂರು ವಾರಗಳಿಂದ ಪ್ರಸಾರವಾಗುತ್ತಿರುವ ಡ್ರಾಮ ಜೂನಿಯರ್ ಶೋನ ಮೂರನೇ ಸೀಸನ್.. ಮೊದಲ ಸೀಸನ್ ನಂತೆಯೇ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದ್ದು ರವಿಚಂದ್ರನ್ ಅವರು ಲಕ್ಷ್ಮಿ ಅಮ್ಮನವರು ರಚಿತಾ ರಾಮ್ ಅವರ ಕಾಂಬಿನೇಷನ್ ಹಾಗೂ ಮಾಸ್ಟರ್ ಆನಂದ್ ನಿರೂಪಣೆ ಜೊತೆಗೆ ಪುಟಾಣಿ ಮಕ್ಕಳ ಕಲಾ ಪ್ರತಿಭೆಯ ಅನಾವರಣ ನಿಜಕ್ಕೂ ಪ್ರೇಕ್ಷಕರಿಗೆ ಹತ್ತಿರವಾಗಿರುವುದರಲ್ಲಿ ಸಂಶಯವಿಲ್ಲ..

ಇನ್ನು ಕಲರ್ಸ್ ಕನ್ನಡದಲ್ಲಿ ಜಡ್ಜ್ ಆಗಿದ್ದ ರಚಿತಾರಾಮ್ ಅವರು ಇದೀಗ ಜೀ ಕನ್ನಡ ವಾಹಿನಿಗೆ ಬಂದಿದ್ದು ಕಲರ್ಸ್ ಕನ್ನಡ ಹಾಗೂ ಜೀ ಕನ್ನಡ ವಾಹಿನಿಯ ನಡುವಿನ ರೇಟಿಂಗ್ ಪೈಪೋಟಿಗೆ ಸಾಕ್ಷಿಯಾಗಿದೆ.. ಹೌದು ಒಂದು ಕಡೆ ಜೀ ಕನ್ನಡದಲ್ಲಿದ್ದ ರಾಜೇಶ್ ಕೃಷ್ಣನ್ ಹಾಗೂ ವಿಜಯ ರಾಘವೇಂದ್ರ ಅವರು ಕಲರ್ಸ್ ಕನ್ನಡಕ್ಕೆ ಹೋದರೆ ಅತ್ತ ಕಲರ್ಸ್ ಕನ್ನಡದಲ್ಲಿ ಈ ಹಿಂದೆ ಜಡ್ಜ್ ಗಳಾಗಿದ್ದ ರವಿಚಂದ್ರನ್ ಅವರು ಹಾಗೂ ರಚಿತಾ ರಾಮ್ ಅವರು ಜೀ ಕನ್ನಡ ವಾಹಿನಿಗೆ ಬಂದರು.. ಇದರ ಜೊತೆಗೆ ಶಿವಣ್ಣನನ್ನು ಸಹ ಜೀ ಕನ್ನಡದ ಹೊಸ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋಗೆ ಕರೆತಂದಿದ್ದು ಜೀ ಕನ್ನಡ ಎಂದಿನಂತೆ ತನ್ನ ಮೊದಲ ಸ್ಥಾನವನ್ನು ಮುಂದುವರೆಸುತ್ತಿದೆ..

ಇನ್ನು ಸಧ್ಯ ರಚಿತಾ ರಾಮ್ ಅವರು ತನ್ನ ವೃತ್ತಿ ಬದುಕನ್ನು ಆರಂಭಿಸಿದ್ದ ಜೀ ಕನ್ನಡ ವಾಹಿನಿಗೆ ಮರಳಿ ಬಂದಿದ್ದಕ್ಕೆ ಬಹಳ ಸಂತೋಷ ಪಟ್ಟಿದ್ದು ಒಂದೊಳ್ಳೆ ಶೋಗೆ ತೀರ್ಪುಗಾರರಾಗಿದ್ದು ಸಂತೋಷ ತಂದಿದೆ ಎಂದಿದ್ದಾರೆ.. ಹೌದು ಈ ಹಿಂದೆ ಮಜಾ ಭಾರತ ಶೋನಲ್ಲಿ ಜಡ್ಜ್ ಆಗಿದ್ದಾಗ ಅಲ್ಲಿ ಕೆಲವೊಂದು ಬೇರೆ ಅರ್ಥದ ಜೋಕ್ ಗಳನ್ನು ಮಾಡಿದಾಗ ನಗಲೇ ಬೇಕಾದ ಅನಿವಾರ್ಯತೆ ಇತ್ತು.. ಈ ವಿಚಾರ ಸಾಕಷ್ಟು ಟ್ರೋಲ್ ಸಹ ಆಗಿತ್ತು.. ರಚಿತಾ ರಾಮ್ ಆ ಶೋನಲ್ಲಿ ಜಡ್ಜ್ ಆಗಿದ್ದಕ್ಕೆ ಕೆಲ ಅಭಿಮಾನಿಗಳು ಅಸಮಾಧಾನವನ್ನೂ ಸಹ ವ್ಯಕ್ತ ಪಡಿಸಿದ್ದರು.. ಆದರೆ ಈಗ ಡ್ರಾಮ ಜೂನಿಯರ್ ಶೋನಲ್ಲಿ ಜಡ್ಜ್ ಆಗಿದ್ದಕ್ಕೆ ಸಾಕಷ್ಟು ಜನ ಆಪ್ತರು ರಚಿತಾ ರಾಮ್ ಅವರ ನಿರ್ಧಾರಕ್ಕೆ ಅಭಿನಂದಿಸಿದರಂತೆ..

ಈ ಬಗ್ಗೆ ರಚಿತಾ ರಾಮ್ ಅವರೇ ಶೋನಲ್ಲಿ ಹೇಳಿಕೊಂಡಿದ್ದು ಬಹಳಷ್ಟು ಸ್ನೇಹಿತರು ಫೋನ್ ಮಾಡಿ ಒಳ್ಳೆ ಶೋಗೆ ಜಡ್ಜ್ ಆಗಿದ್ದೀಯಾ ಅಂತ ಹೇಳಿದ್ರು.. ಬಹಳ ಖುಷಿ ಆಯ್ತು ಎಂದಿದ್ದರು.. ಇನ್ನು ರಚಿತಾ ರಾಮ್ ಅವರ ಸಂಭಾವನೆ ವಿಚಾರಕ್ಕೆ ಬಂದರೆ ರಚಿತಾ ರಾಮ್ ಅವರಿಗೆ ಡ್ರಾಮಾ ಜೂನಿಯರ್ ಶೋನಲ್ಲಿ ದುಬಾರಿ ಸಂಭಾವನೆಯನ್ನೇ ನೀಡಲಾಗುತ್ತಿದೆ.. ಹೌದು ಕೆಲ ಕಾರ್ಯಕ್ರಮಗಳಲ್ಲಿ ಸ್ಪರ್ಧಿಗಳಿಗೆ ಹಾಗೂ ಜಡ್ಜ್ ಗಳಿಗೆ ಎಲ್ಲರಿಗೂ ಸಹ ವಾರದ ಸಂಭಾವನೆಯನ್ನು ನಿಗಧಿ ಮಾಡಲಾಗಿರುತ್ತದೆ..

ಮತ್ತೆ ಕೆಲವು ಶೋಗಳಲ್ಲಿ ಸ್ಪರ್ಧಿಗಳಿಗೆ ವಾರದ ಸಂಭಾವನೆಯಾದರೆ ಜಡ್ಜ್ ಗಳಿಗೆ ಸಂಪೂರ್ಣ ಶೋಗೆ ಸಂಭಾವನೆಯನ್ನು ನಿಗಧಿ ಮಾಡಲಾಗುತ್ತದೆ.. ಇನ್ನು ಡ್ರಾಮಾ ಜೂನಿಯರ್ ಶೋನಲ್ಲಿಯೂ ಸಹ ರಚಿತಾ ರಾಮ್ ಅವರಿಗೆ ಸಂಪೂರ್ಣ ಶೋಗೆ ದುಬಾರಿ ಸಂಭಾವನೆಯನ್ನೇ ಮಾತನಾಡಲಾಗಿದೆ ಎನ್ನಲಾಗಿದೆ.. ಹೌದು ಡ್ರಾಮಾ ಜೂನಿಯರ್ ಸೀಸನ್ ನಾಲ್ಕಕ್ಕೆ ಜಡ್ಜ್ ಆಗಿ ಬಂದಿರುವ ರಚಿತಾ ರಾಮ್ ಅವರಿಗೆ ಸಂಪೂರ್ಣ ಶೋಗೆ ಬರೋಬ್ಬರಿ ಐವತ್ತು ಲಕ್ಷ ರೂಪಾಯಿ ಸಂಭಾವನೆಯನ್ನು‌ ಮಾತನಾಡಲಾಗಿದೆ ಎಂದು ತಿಳಿದು ಬಂದಿದೆ..

ಹೌದು ಶೋ ಮೂರರಿಂದ ನಾಲ್ಕು ತಿಂಗಳ ಕಾಲ ನಡೆಯಲಿದ್ದು ವಾರದಲ್ಲಿ ಒಂದು ಅಥವಾ ಎರಡು ದಿನ ಚಿತ್ರೀಕರಣ ನಡೆಯುತ್ತದೆ.. ಒಟ್ಟಿನಲ್ಲಿ ಬೆಳ್ಳಿ ತೆರೆಯಲ್ಲಿ ತಮ್ಮ ಪ್ರತಿಭೆ ಮೂಲಕ ಹೆಸರು ಮಾಡಿದ ಸಾಕಷ್ಟು‌ ಮಂದಿಗೆ ಕಿರುತೆರೆಯ ಮೂಲಕವೂ ಒಳ್ಳೆಯ ಸಂಭಾವನೆ ದೊರೆಯುತ್ತಿದ್ದು.. ಇತ್ತ ಧಾರಾವಾಹಿಯ ಕಲಾವಿದರುಗಳಿಗೂ ಸಹ ಒಳ್ಳೆಯ ಸಂಭಾವನೆ ನೀಡಲಾಗುತ್ತಿದೆ‌‌.. ಒಟ್ಟಿನಲ್ಲಿ ಕನ್ನಡ ಕಿರುತೆರೆ ಇನ್ನು ದೊಡ್ಡ ಮಟ್ಟದಲ್ಲಿ ಬೆಳೆದು ಇನ್ನಷ್ಟು ಕಲಾವಿದರುಗಳಿಗೆ ಅವಕಾಶ ಕೊಟ್ಟು ಸಾವಿರಾರು ಜನರ ಜೀವನಕ್ಕೆ ದಾರಿಯಾಗುವಂತಾಗಲಿ..