ಸಿಹಿ ಸುದ್ದಿ ನೀಡಿದ ರಚಿತಾ ರಾಮ್ ಹಾಗೂ ಧನಂಜಯ್.. ಶುಭ ಹಾರೈಸಿದ ಅಭಿಮಾನಿಗಳು

ಚಂದನವನದಲ್ಲಿ ಯಾವುದೇ ಬ್ಯಾಗ್ರೌಂಡ್ ಇಲ್ಲದೇ ಎಂಟ್ರಿ ಕೊಟ್ಟು, ಇಂದು ಎಲ್ಲಾ ಕನ್ನಡ ಸಿನಿಪ್ರೇಕ್ಷಕ ಫೇವರೆಟ್ ಆಗಿರುವವರು ನಟ ಧನಂಜಯ್. ಹಣ ಇಲ್ಲದೆ, ಗಾಡ್ ಫಾದರ್ ಇಲ್ಲದೆ ಚಿತ್ರರಂಗಕ್ಕೆ ಬಂದು ಸಾಧನೆ ಮಾಡಿರುವವರಲ್ಲಿ ಧನಂಜಯ್ ಕೂಡ ಒಬ್ಬರು. ಇದೇ ರೀತಿ ಚಂದನವನಕ್ಕೆ ಯವುದೇ ಬ್ಯಾಗ್ರೌಂಡ್ ಇಲ್ಲದೆ ಕಾಲಿಟ್ಟು ಇಂದು ಸ್ಟಾರ್ ಹೀರೋಯಿನ್ ಅನ್ನಿಸಿಕೊಂಡಿರುವವರು ನಟಿ ರಚಿತಾ ರಾಮ್. ಇಂದು ಕನ್ನಡ ಮೋಸ್ಟ್ ಬ್ಯುಸಿಯೆಸ್ಟ್ ನಟಿಯರಲ್ಲಿ ಇವರು ಕೂಡ ಒಬ್ಬರಾಗಿದ್ದಾರೆ. ಇತ್ತೀಚೆಗೆ ಈ ಇಬ್ಬರು ಕಲಾವಿದರು ತೆಲುಗು ಚಿತ್ರರಂಗಕ್ಕೆ ಸಹ ಎಂಟ್ರಿ ಕೊಟ್ಟಿದ್ದಾರೆ. ಇವರಿಬ್ಬರು ಕನ್ನಡದಲ್ಲಿ ಮಾಡಿದ ಮೋಡಿಯ ಪರಭಾಷೆಯ ಜನರಿಗೂ ಈ ಇಬ್ಬರು ಕನ್ನಡಿಗರು ಅಲ್ಲಿಯೂ ಇವರಿಬ್ಬರು ಹೀಗೆ ಹೆಸರು ಮಾಡಲಿ ಎನ್ನುವುದು ಎಲ್ಲರ ಆಸೆ. ಈ ಇಬ್ಬರು ಕಲಾವಿದರು ಇದೀಗ ಕನ್ನಡ ಜನತೆಗೆ ಒಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ.

ನಟ ಧನಂಜಯ್ ಒಂದು ಹಳ್ಳಿ ಬಂದ ಕಲಾವಿದ. ಇಂಜಿನಿಯರಿಂಗ್ ಓದಿ, ಮೈಸೂರಿನ ಇನ್ಫೋಸಿಸ್ ಸಂಸ್ಥೆಯಲ್ಲಿ ಕೆಲಸ ಸಿಕ್ಕಿ, ಸಾಫ್ಟ್ ವೇರ್ ಕೆಲಸ ಮಾಡುತ್ತಿದ್ದರು. ಒಂದು ವರ್ಷದ ಅಗ್ರಿಮೆಂಟ್ ಮುಗಿಯುವ ಹೊತ್ತಿಗೆ, ಚಿಕ್ಕ ವಯಸ್ಸಿನಿಂದಲೂ ಆಸಕ್ತಿ ಇದ್ದ ನಾಟಕರಂಗ ಧನಂಜಯ್ ಅವರನ್ನು ಸೆಳೆದಿತ್ತು. ಹಾಗಾಗಿ 1 ವರ್ಷದ ಅಗ್ನಿಮೆಂಟ್ ಮುಗಿದ ನಂತರ ಕೆಲಸ ಬಿಟ್ಟು ನಾಟಕ ತಂಡವನ್ನು ಸೇರಿ ನಟನೆ ಶುರು ಮಾಡಿದರು ಧನಂಜಯ್. ನಾಟಕಗಳಲ್ಲಿ ಅದ್ಭುತವಾಗಿ ನಟಿಸಿದರು ಕೂಡ ಚಿತ್ರರಂಗಕ್ಕೆ ಎಂಟ್ರಿ ಪಡೆಯುವುದು ಸುಲಭ ಆಗಿರಲಿಲ್ಲ. ಸಿನಿಮಾರಂಗಕ್ಕೆ ಕಾಲಿಡಲು ಧನಂಜಯ್ ಪಟ್ಟ ಕಷ್ಟಗಳು ಅವಮಾನಗಳು ಒಂದೆರಡಲ್ಲ.

ನಾಯಕನಾಗಿ ಎಂಟ್ರಿ ಕೊಟ್ಟರು ಸಹ, ಆರಂಭದಲ್ಲಿ ಇವರು ಅಭಿನಯಿಸಿದ ಸಿನಿಮಾಗಳೆಲ್ಲವು ಸೋಲುತ್ತಿದ್ದವು ಈ ನಟನ ಮುಖ ನೋಡಲು ಯಾರು ಥಿಯೇಟರ್ ಗೆ ಬರುವುದಿಲ್ಲ, ಎಂದು ಅದೆಷ್ಟೋ ಜನ ಟೀಕೆ ಮಾಡಿದ್ದರು. ಹಾಗಿದ್ದ ಧನಂಜಯ್ ಅವರ ಲಕ್ ಬದಲಿಸಿದ್ದು, ಟಗರು ಸಿನಿಮಾದ ಡಾಲಿ ಪಾತ್ರ. ವಿಲ್ಲನ್ ಪಾತ್ರದಲ್ಲಿ ಧನಂಜಯ್ ಅವರ ಅಭಿನಯಕ್ಕೆ ಸಿನಿಪ್ರೇಕ್ಷಕ ಫಿದಾ ಆಗಿದ್ದನು. ಇದಾದ ಬಳಿಕ ಧನಂಜಯ್ ಹಿಂದಿರುಗಿ ನೋಡಲಿಲ್ಲ. ಟಗರು ನಂತರ ಇನ್ನಷ್ಟು ಸಿನಿಮಾಗಳಲ್ಲಿ ವಿಲ್ಲನ್ ಆಗಿ ನಟಿಸಿದರು. ರತ್ನನ್ ಪ್ರಪಂಚ ಸಿನಿಮಾದಲ್ಲಿ, ಸಾಮಾನ್ಯ ಹುಡುಗನ ಪಾತ್ರದಲ್ಲಿ ಧನಂಜಯ್ ಅಭಿನಯ ಅದ್ಭುತ. ಇತ್ತೀಚೆಗೆ ಬಡವ ರಾಸ್ಕಲ್ ಸಿನಿಮಾದಲ್ಲಿ ಹೀರೋ ಆಗಿ ನಟಿಸಿ, ಸಿನಿಮಾ ನಿರ್ಮಾಣ ಕೂಡ ಮಾಡಿದರು.

ಇನ್ನು ರಚಿತಾ ಅವರ ಬಗ್ಗೆ ಹೇಳುವುದಾದರೆ, ಡಿಂಪಲ್ ಇರುವ ಈ ಮುದ್ದು ನಟಿ ಮೊದಲಿಗೆ ನಟನೆ ಶುರು ಮಾಡಿದ್ದು, ಧಾರಾವಾಹಿಗಳಲ್ಲಿ, ಅರಸಿ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ರಚಿತಾ, ತಮ್ಮ ಅಭಿನಯದಿಂದ ಕಿರುತೆರೆಯಲ್ಲಿ ಒಳ್ಳೆಯ ಹೆಸರು ಪಡೆದರು. ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನಾಯಕಿಯಾಗಿ ಬುಲ್ ಬುಲ್ ಸಿನಿಮಾದಲ್ಲಿ ನಟಿಸುವ ಅವಕಾಶ. ಮೊದಲ ಸಿನಿಮಾದಲ್ಲೇ ಸ್ಟಾರ್ ನಟನ ಜೊತೆ ಅಭಿನಯಿಸಿದರು ರಚಿತಾ, ಬುಲ್ ಬುಲ್ ಸಿನಿಮಾ ಸೂಪರ್ ಹಿಟ್ ಆದ ನಂತರ ರಚಿತಾ ಅವರಿಗೆ ಸ್ಯಾಂಡಲ್ ವುಡ್ ನಲ್ಲಿ ಬೇಡಿಕೆ ಹೆಚ್ಚಾಯಿತು. ಸಾಲು ಸಾಲು ಅವಕಾಶಗಳು ಸಿಗಲು ಶುರುವಾದವು.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಕಿಚ್ಚ ಸುದೀಪ್, ರಮೇಶ್ ಅರವಿಂದ್, ಅಜಯ್ ರಾವ್, ರಿಯಲ್ ಸ್ಟಾರ್ ಉಪೇಂದ್ರ ಹೀಗೆ ಎಲ್ಲಾ ಸ್ಟಾರ್ ಕಲಾವಿದರ ಜೊತೆ ತೆರೆಹಂಚಿಕೊಂಡು ಬ್ಯುಸಿ ಹೀರೋಯಿನ್ ಆದರು ರಚಿತಾ ರಾಮ್. ರಚಿತಾ ರಾಮ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಇನ್ನೇನು 12 ವರ್ಷ ಕಳೆಯುತ್ತಿದೆ. ಆದರೆ ಈಗಲೂ ರಚಿತಾ ರಾಮ್ ಅವರಿಗೆ ಇರುವ ಬೇಡಿಕೆ ಕಡಿಮೆಯಾಗಿಲ್ಲ. ಸಾಕಷ್ಟು ಕನ್ನಡ ಸಿನಿಮಾಗಳು ಇವರ ಕೈಯಲ್ಲಿದೆ. ಹಾಗೆಯೇ ನಟ ಧನಂಜಯ್ ಅವರು ಕೂಡ ಕನ್ನಡದ ಬ್ಯುಸಿಯೆಸ್ಟ್ ನಟ ಆಗಿದ್ದಾರೆ.

ಇದೀಗ ಧನಂಜಯ್ ಮತ್ತು ರಚಿತಾ ರಾಮ್ ಇಬ್ಬರು ಕೂಡ ತಮ್ಮ ಅಭಿಮಾನಿಗಳಿಗೆ ಒಂದು ಸಂತೋಷದ ಸುದ್ದಿ ಕೊಟ್ಟಿದ್ದಾರೆ..ಅದೇನೆಂದರೆ ಈ ಇಬ್ಬರು ಕಲಾವಿದರು ಜೊತೆಯಾಗಿ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಚಿತಾ ರಾಮ್ ಅವರು ಮಾನ್ಸೂನ್ ರಾಗ ಸಿನಿಮಾ ಒಪ್ಪಿಕೊಂಡಿದ್ದಾರೆ ಎಂದು ಈಗಾಗಲೇ ಸುದ್ದಿಯಾಗಿತ್ತು. ಈ ಸಿನಿಮಾದ ನಾಯಕ ನಟ ಧನಂಜಯ್ ಆಗಿದ್ದು, ನಿನ್ನೆ ವ್ಯಾಲೆಂಟೈನ್ಸ್ ಡೇ ಸ್ಪೆಷಲ್ ಆಗಿ ಹೊಸ ಪೋಸ್ಟರ್ ಬಿಡುಗಡೆ ಆಗಿದೆ. ಇದೇ ಮೊದಲ ಬಾರಿಗೆ ರಚಿತಾ ಮತ್ತು ಧನನಂಜಯ್ ಜೊತೆಯಾಗಿ ನಟಿಸುತ್ತಿದ್ದು, ಇವರಿಬ್ಬರ ಕಾಂಬಿನೇಷನ್ ನೋಡಲು ಸಿನಿಪ್ರಿಯರು ಕುತೂಹಲರಾಗಿದ್ದಾರೆ..