ಗೌಡರ ಹುಡುಗನೊಂದಿಗೆ ಕಾಣಿಸೊಕೊಂಡ ರಚಿತಾ ರಾಮ್.. ರಚ್ಚು ಮೆಚ್ಚೋ ಆ ಗೌಡರ ಹುಡುಗ ಇವರೇನಾ?

ಬುಲ್ ಬುಲ್ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಎಂಟ್ರಿ‌ಕೊಟ್ಟು ಸದ್ಯ ಕನ್ನಡ ಸಿನಿಮಾ ಇಂಡಸ್ಟ್ರಿಯ ಟಾಪ್ ಹೀರೋಯಿನ್ ಗಳಲ್ಲಿ ಒಬ್ಬರಾಗಿರುವ ರಚಿತಾ ರಾಮ್ ಇದೀಗ ತಮಿಳು ಚಿತ್ರರಂಗದಲ್ಲಿಯೂ ಮಿಂಚಲು ರೆಡಿ ಆಗಿದ್ದಾರೆ.. ಇನ್ನು ಈ ಬುಲ್ ಬುಲ್ ಕೈ ಹಿಡಿಯುವ ಹುಡುಗ ಯಾರು ಎಂಬ ಕುತೂಹಲ ಅವರ ಅಭಿಮಾನಿಗಳಿಗೆ ಇದ್ದೇ ಇರುತ್ತದೆ.. ರಚಿತಾ ರಾಮ್ ಈ ಹಿಂದೆ ತಾವು ಮದುವೆಯಾದರೆ ಅದು ಗೌಡರ ಹುಡುಗನನ್ನೇ ಎಂದಿದ್ದರು.. ಇದೀಗ ಗೌಡರ ಹುಡುಗನೊಬ್ಬನ ಜೊತೆಯಲ್ಲಿ ಕಾಣಿಸಿಕೊಂಡಿದ್ದು ರಚ್ಚು ಮೆಚ್ಚೋ ಆ ಗೌಡರ ಹುಡುಗ ಇವರೇನಾ ಎನ್ನುತ್ತಿದ್ದಾರೆ ಅಭಿಮಾನಿಗಳು..

ಹೌದು ರಚಿತಾ ರಾಮ್ ಅವರ ಅಕ್ಕ ನಿತ್ಯಾ ರಾಮ್ ಅವರ ಮದುವೆ ಕಳೆದ ಡಿಸೆಂಬರ್ ನಲ್ಲಿ ಆಸ್ಟ್ರೇಲಿಯಾ ಹುಡುಗನೊಂದಿಗೆ ಸರಳವಾಗಿ ಖಾಸಗಿ ರೆಸಾರ್ಟ್ ಒಂದರಲ್ಲಿ ನೆರವೇರಿತ್ತು.. ಮದುವೆ ಸಮಾರಂಭದಲ್ಲಿ ಆಪ್ತರು ಹಾಗೂ ಸಂಬಂಧಿಕರು ಮಾತ್ರ ಭಾಗಿಯಾಗಿದ್ದರು..

ಇನ್ನು ಮದುವೆಗೆ ಸಿನಿಮಾ ಇಂಡಸ್ಟ್ರಿಯಿಂದ ಕೆಲವೇ ಕೆಲ ಸ್ನೇಹಿತರು ಮಾತ್ರ ಪಾಲ್ಗೊಂಡಿದ್ದು ನಿಖಿಲ್ ಕುಮಾರಸ್ವಾಮಿ ಅವರು ಹಾಜರಿದ್ದದ್ದನ್ನು‌ ನೋಡಿ ನಿಖಿಲ್ ಹಾಗೂ ರಚಿತಾ ರಾಮ್ ಮದುವೆ ಆಗ್ತಾರೆ ಎಂಬ ಸುದ್ದಿ ದೊಡ್ಡದಾಗೆ ಹಬ್ಬಿತ್ತು.. ಆದರೆ ಈ ಕುರಿತು ಖುದ್ದು ರಚಿತಾ ಅವರೇ ಸ್ಪಷ್ಟನೆ ನೀಡಿ ಈ ವಿಚಾರ ಸುಳ್ಳು ಎಂದಿದ್ದರು.. ಅಲ್ಲಿಗೆ ಆ ವಿಚಾರ ಮುಗಿದಿತ್ತಾದರೂ ಮನೆಯಲ್ಲಿ ಅಕ್ಕನ ಮದುವೆ ನೆರವೇರಿದ್ದರಿಂದ ರಚಿತಾ ರಾಮ್ ಅವರ ಲೈನ್ ಕೂಡ ಕ್ಲಿಯರ್ ಆಗಿತ್ತು..

ಇತ್ತ ರಚಿತಾ ಅಂದುಕೊಂಡಂತೆ ದುಬಾರಿ ಬೆಲೆಯ ತಮ್ಮ ಕನಸಿನ ಬೆಂಜ್ ಕಾರನ್ನೂ ಸಹ ಕೊಂಡುಕೊಂಡಿದ್ದರು.. ಇನ್ನೇನು ಅಕ್ಕನ ಮದುವೆಯ ನಂತರ ತಮ್ಮ ಮದುವೆ ಎನ್ನುತ್ತಿದ್ದ ರಚಿತಾ ರಾಮ್ ಅವರಿಗೆ ತಮಿಳು ಸಿನಿಮಾ ಇಂಡಸ್ಟ್ರಿಯಿಂದಲೂ ಅವಕಾಶ ಅರಸಿ ಬಂತು.. ಸದ್ಯ ತಮಿಳುನಾಡಿನಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ಇರುವುದರಿಂದ ಸೂಪರ್ ಮಚ್ಚಿ ಎಂಬ ಸಿನಿಮಾ ಚಿತ್ರೀಕರಣದಲ್ಲಿ ರಚಿತಾ ರಾಮ್ ಬ್ಯುಸಿ ಆಗಿದ್ದಾರೆ..

ಇತ್ತ ಸಾಮಾಜಿಕ ಜಾಲತಾಣದಲ್ಲಿ ರಚಿತಾ ಅವರು ಗೌಡರ ಹುಡುಗನ ಜೊತೆ ಕಾಣಿಸಿಕೊಂಡಿರುವ ಫೋಟೋವೊಂದು ವೈರಲ್ ಆಗಿದ್ದು.. ರಚಿತಾರಾಮ್ ಮೆಚ್ಚಿದ ಆ ಗೌಡರ ಹುಡುಗ ಇವರೇನಾ ಎನ್ನುತ್ತಿದ್ದಾರೆ ಅಭಿಮಾನಿಗಳು.. ಹೌದು ಆ ಹುಡುಗ ಮತ್ಯಾರೂ ಅಲ್ಲ ಅವರು ನಟ ಧನ್ವೀರ್ ಗೌಡ..

ಹೌದು ರಚಿತಾ ಹಾಗೂ ಧನ್ವೀರ್ ಅವರ ಸೆಲ್ಫಿ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಒಳ್ಳೆಯ ಜೋಡಿ.. ಆದಷ್ಟು ಬೇಗ ಮದುವೆ ಆಗಿ ಎಂದು ಕಮೆಂಟ್ ಮಾಡಿ ಶುಭಾಶಯ ತಿಳಿಸುತ್ತಿದ್ದಾರೆ.. ಆದರೆ ರಚಿತಾ ಒಪ್ಪುವ ಆ ಹುಡುಗ ಇವರೇನಾ ಎಂದು ಕಾದು ನೋಡಬೇಕಿದೆ..