ಸಿಹಿ ಸುದ್ದಿ ನೀಡಿದ ಲವ್ ಮಾಕ್ಟೈಲ್ ನ ರಚನಾ ಇಂದರ್.. ಡಾಕ್ಟರ್ ಜೊತೆ ಜೀವನದ ಹೊಸ ಆರಂಭ ಮಾಡುತ್ತಿರುವ ನಟಿ..

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕಳೆದ ಎರಡು ವರ್ಷದ ಹಿಂದಿನ 2020 ಯಾರಿಗೂ ಬೇಡವಾದ ವರ್ಷವಾಗಿತ್ತು.. ಸಾಕಷ್ಟು ಕಲಾವಿದರುಗಳನ್ನು ಕಳೆದುಕೊಂಡೆವು… ಸಾಕಷ್ಟು ಸಿನಿಮಾಗಳು ಕೊರೊನಾ ಕಾರಣದಿಂದ ಬಿಡುಗಡೆಯಾಗದೇ ನಷ್ಟ ಅನುಭವಿಸಿದವು.. ಅದರೆ ಆ ವರ್ಷ ಶುರುವಿನಲ್ಲಿ ಬಿಡುಗಡೆಯಾದ ಲವ್ ಮಾಕ್ಟೈಲ್ ಹಾಗೂ ದಿಯಾ ಸಿನಿಮಾ ಶುರುವಿನಲ್ಲಿ ಸೋತರೂ ಸಹ ನಂತರ ದೊಡ್ಡ ಮಟ್ಟದ ಯಶಸ್ಸು ಪಡೆಯಿತು.. ಬಾಕ್ಸ್ ಆಫೀಸಿನಲ್ಲಿ ಹೇಳಿಕೊಳ್ಳುವ ಗಳಿಕೆ ಕಾಣದಿದ್ದರೂ ಸಹ ಓಟಿಟಿ ಗೆ ಬಂದ ನಂತರ ಎರಡೂ ಸಿನಿಮಾಗಳು ಜನರಿಂದ ದೊಡ್ಡ ಮಟ್ಟದಲ್ಲಿಯೇ ಪ್ರಶಂಸೆಗೆ ಒಳಪಟ್ಟಿತು.. ಇನ್ನು ಆ ಸಿನಿಮಾಗಳ ಕಲಾವಿದರುಗಳು ಸಹ ಬಹಳ ಫೇಮಸ್ ಆದರು..

ನಟ ಕೃಷ್ಣ, ಮಿಲನಾ ನಾಗರಾಜ್.. ದಿಯಾ ಸಿನಿಮಾದ ಪೃಥ್ವಿ ಅಂಬರ್.. ಹೀಗೆ ಕೆಲ ಕಲಾವಿದರ ಜೀವನವೇ ಬದಲಾಯಿತು.. ಅದೇ ರೀತಿ ಲವ್ ಮಾಕ್ಟೈಲ್ ಸಿನಿಮಾ ಮೂಲಕ ಹೆಸರು ಮಾಡಿದ ಮತ್ತೊಬ್ಬ ನಟಿ ಅದು ರಚನಾ ಇಂದರ್.. ಹೌದು ಹೆಂಗೇ ನಾವು ಡೈಲಾಗ್ ಮೂಲಕವೇ ಫೇಮಸ್ ಆದ ರಚನಾ ಇಂದರ್ ಆದಿಯ ಸಂಪೂರ್ಣ ಜರ್ನಿಯಲ್ಲಿ ಆತನ ಕತೆ ಕೇಳುತ್ತಾ ಜೊತೆಯಾಗುತ್ತಾರೆ..

ಇನ್ನು ಲವ್ ಮಾಕ್ಟೈಲ್ ಸಿನಿಮಾದ ಬಳಿಕ ಎಲ್ಲೂ ಕಾಣಿಸಿಕೊಳ್ಳದ ರಚನಾ ಇಂದರ್ ಇದೀಗ ಸಿಹಿ ಸುದ್ದಿ ನೀಡಿದ್ದಾರೆ.. ಹೌದು ವೈದ್ಯರೊಬ್ಬರ ಜೊತೆ ತಮ್ಮ ಜೀವನದ ಹೊಸ ಆರಂಭವನ್ನು ಮಾಡುತ್ತಿದ್ದಾರೆ‌.. ಹೌದು ತಮ್ಮ ವೃತ್ತಿ ಬದುಕಿನ ಹೊಸ ಆರಂಭವನ್ನೀಗ ಡಾಕ್ಟರ್ ಒಬ್ಬರ ಜೊತೆ ತೆರೆ ಹಂಚಿಕೊಳ್ಳುವ ಮೂಲಕ‌ ಮಾಡುತ್ತಿದ್ದು ಅದರಲ್ಲೂ ಇವರ ಈ ಆರಂಭಕ್ಕೆ ನಿರ್ದೇಶಕ ಶಶಾಂಕ್ ಅವರೇ ಸಾರಥ್ಯ ವಹಿಸಿರುವುದು ಹೊಸ ಭರವಸೆಯನ್ನು ಮೂಡಿಸಿದೆ..

ಹೌದು ಮೊಗ್ಗಿನ ಮನಸ್ಸು ಸಿನಿಮಾ ಮೂಲಕ ರಾಧಿಕಾ ಪಂಡಿತ್ ಹಾಗೂ ಶುಭಾ ಪೂಂಜಾ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಶಶಾಂಕ್ ಅವರು ಆ ಸಿನಿಮಾ ಮೂಲಕ ದೊಡ್ಡ ಮಟ್ಟದ ಯಶಸ್ಸು ಪಡೆದರು.. ಇತ್ತ ಶುಬ್ಜಾ ಪೂಂಜಾ ಹಾಗೂ ರಾಧಿಕಾ ಪಂಡಿತ್ ತಮ್ಮ ವೃತ್ತಿ ಜೀವನಕ್ಕೆ ಭದ್ರ ಬುನಾದಿ ಹಾಕಿಕೊಂಡರು.. ಇನ್ನು ಹಿಂತಿರುಗಿ ನೋಡಿದ್ದೇ ಇಲ್ಲ.. ಇದೀಗ ಅದೇ ರೀತಿ ಹೊಸ ಪ್ರತಿಭೆಗಳ ಜೊತೆ ಶಶಾಂಕ್ ಅವರು ಮತ್ತೆ ಬಂದಿದ್ದು ಈ ಬಾರಿ ರಚನಾ ಇಂದರ್ ಹಾಗೂ ವೈದ್ಯ ಪ್ರವೀಣ್ ಸ್ಯಾಂಡಲ್ವುಡ್ ನಲ್ಲಿ ಭರವಸೆಯ ಕಲಾವಿದರಾಗಿ ಉಳಿದುಕೊಳ್ಳುವ ನಿರೀಕ್ಷೆ ಹುಟ್ಟುಹಾಕಿದ್ದಾರೆ..

ಹೌದು ಕೃಷ್ಣನ್ ಲವ್ ಸ್ಟೋರಿ ಸಿನಿಮಾದ ನಂತರ ಮತ್ತೊಂದು ಲವ್ ಸ್ಟೋರಿ ಸಿನಿಮಾವನ್ನು ತೆರೆ ಮೇಲೆ ತರುತ್ತಿದ್ದು ಈ ಸಿನಿಮಾಗೆ ರಚನಾ ಇಂದರ್ ಹಾಗೂ ಡಾಕ್ಟರ್ ಪ್ರವೀಣ್ ನಾಯಕ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.. ಈ ಸಿನಿಮಾಗೆ ಲವ್ 360 ಎಂದು ಹೆಸರಿಡಕಾಗಿದ್ದು ಈ ಬಗ್ಗೆ ಶಶಾಂಕ್ ಅವರೇ ಮನಬಿಚ್ಚಿ ಮಾತನಾಡಿದ್ದಾರೆ.. ನಾನು ಮೂರು ವರ್ಷಗಳ ಬಳಿಕ ತಾಯಿಗೆ ತಕ್ಕ ಮಗ ಸಿನಿಮಾ ನಂತರ ನಾನು ನಿರ್ದೇಶಿಸಿರುವ ಚಿತ್ರವಿದು.. ಲಾಕ್ ಡೌನ್ ಸಮಯದಲ್ಲಿ ಸಿದ್ದವಾದ ಕಥೆಯಿದು.. ನಾನು ಉಪೇಂದ್ರ ಅವರ ಚಿತ್ರ ನಿರ್ದೇಶಿಸಬೇಕಿತ್ತು.‌ ಅದು ದೊಡ್ಡಮಟ್ಟದ ಚಿತ್ರ.. ಚಿತ್ರೀಕರಣಕ್ಕೆ ಕೊರೊನಾ ನಿಯಮಾವಳಿಗಳು ಸಹಕಾರಿಯಾಗುವಂತೆ ಕಾಣಲಿಲ್ಲ.. ಹಾಗಾಗಿ ಆ ಚಿತ್ರ ಮುಂದೂಡಿದ್ದೇನೆ.. ಸಧ್ಯ ಈ ಚಿತ್ರ ಆರಂಭ ಮಾಡಿದ್ದೇನೆ..

ಅದರಲ್ಲೂ ಹೊಸಬರೊಂದಿಗೆ ನಾನು ಕೆಲಸ ಮಾಡಿ ಸುಮಾರು ವರ್ಷಗಳೇ ಆಗಿತ್ತು. ಈ ಚಿತ್ರದ ಮೂಲಕ ಪ್ರವೀಣ್ ಎಂಬ ನೂತನ ಪ್ರತಿಭೆಯನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದೇನೆ.. ಪ್ರವೀಣ್ ಕುಟುಂಬದರೆಲ್ಲಾ ವೈದ್ಯರು. ಹೊಸಪೇಟೆ ಬಳಿಯ ಮಾರಮ್ಮನಹಳ್ಳಿಯಲ್ಲಿ ಪ್ರವೀಣ್ ಅವರ ಆಸ್ಪತ್ರೆ ಇದೆ.. ಪ್ರವೀಣ್ ತಂದೆ ಸಾವಿರಾರು ಜನಕ್ಕೆ ಉಚಿತ ಚಿಕಿತ್ಸೆ ನೀಡಿ‌ ಹೆಸರುವಾಸಿಯಾಗಿದ್ದರು. ಪ್ರವೀಣ್ ಸಹ ಎಂ.ಬಿ.ಬಿ.ಎಸ್ ಓದಿದ್ದು, ನಟನೆಯಲ್ಲೇ ಹೆಚ್ಚು ಆಸಕ್ತಿ ಇದೆ.. ಪ್ರವೀಣ ತಾಯಿ ಸಿನಿಮಾ ಆಸಕ್ತಿ ಬಗ್ಗೆ ಹೇಳಿದಾಗ ಶಶಾಂಕ್ ಅವರ ಜೊತೆ ಸೇರಿಕೊಂಡು ಈ ಸಿನಿಮಾ ಮಾಡಿದ್ದಾರೆ..ಇನ್ನು ಇತ್ತ ನಮ್ಮ ಲವ್ ಮಾಕ್ಟೈಲ್ ನಟಿ ರಚನಾ ಇಂದರ್ ಅವರು ಈ ಸಿನಿಮಾಗೆ ಪೂರ್ಣ ಪ್ರಮಾಣದ ನಾಯಕಿಯಾಗಿದ್ದು ಹೊಸ ಆರಂಭದ ನಿರೀಕ್ಷೆಯಲ್ಲಿದ್ದಾರೆ..