ಮತ್ತೊಂದು ಸ್ಟಾರ್ ಜೋಡಿ ದಾಂಪತ್ಯದಲ್ಲಿ ಬಿರುಕು..

ವೈವಾಹಿಕ ಜೀವನ ಅನ್ನೋದು ವ್ಯಯಕ್ತಿಕ ಜೀವನವೇ ಆದರು ಸ್ಟಾರ್ ನಟರುಗಳ ಬದುಕು ಅಭಿಮಾನಿಗಳಿಗೆ ಒಂದು ರೀತಿಬ್ತೆರೆದ ಪುಸ್ತಕವಿದ್ದಂತೆ.. ಹಾಗೆಯೇ ತಮ್ಮ ನೆಚ್ಚಿನ ಸ್ಟಾರ್ ಗಳ ಸೆಲಿಬ್ರೆಟಿಗಳ ವ್ಯಯಕ್ತಿಕ ಜೀವನದ ಬಗ್ಗೆ ಸಿನಿಮಾ ಪ್ರಿಯರಿಗೆ ಅಷ್ಟೇ ಆಸಕ್ತಿ ಇರುತ್ತದೆ.. ನೆಚ್ಚಿನ ಕಲಾವಿದರು ದಾಂಪತ್ಯ ಜೀವನದಲ್ಲಿಯೂ ಚೆನ್ನಾಗಿರಲಿ ಎಂದು ಅಭಿಮಾನಿಗಳು ಮನತುಂಬಿ ಹಾರೈಸೋದುಂಟು.. ಆದರೆ ಅವರದ್ದೇ ಆದ ಭಿನ್ನಾಭಿಪ್ರಾಯಗಳು‌ ಮನಸ್ತಾಪಗಳಿಂದ ಸಾಕಷ್ಟು ಕಲಾವಿದರು ತಮ್ಮ ದಾಂಪತ್ಯ ಜೀವನವನ್ನು ಮುರಿದುಕೊಂಡಿದ್ದುಂಟು.. ಕಳೆದ ವರ್ಷವಷ್ಟೇ ಸೌತ್ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ಜೋಡಿ ಸಮಂತಾ ಹಾಗೂ ನಾಗಚೈತನ್ಯ ತಮ್ಮ ಮದುವೆಯನ್ನು ಮುರಿದು ಕೊಂಡರೆ ಕೆಲ ತಿಂಗಳುಗಳ ಹಿಂದೆ ರಜನಿಕಾಂತ್ ಪುತ್ರಿ ಐಶ್ವರ್ಯ ಹಾಗೂ ನಟ ಧನುಷ್ ದೂರವಾದರು.. ಇದೀಗ ಮತ್ತೊಂದು ಸ್ಟಾರ್ ಜೋಡಿ ದಾಂಪತ್ಯದಲ್ಲಿ ಬಿರುಕು ಮೂಡಿದ್ದು ದೂರಾಗುವ ನಿರ್ಧಾರ ಮಾಡಿದ್ದಾರೆ..

ಹೌದು ತೆಲುಗು ಸಿನಿಮಾ ಇಂಡಸ್ಟ್ರಿಯ ಸೂಪರ್ ಸ್ಟಾರ್ ರಾಣಾ ದಗ್ಗುಬಾಟಿ ಬಾಹುಬಲಿ ಸೂಪರ್ ಸಕ್ಸಸ್ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾಗಳ ವಿಚಾರವಾಗಿ ಸುದ್ದಿಯಾಗ್ತಿದ್ದ ರಾಣಾ ಈಗ ತಮ್ಮ ವೈಯಕ್ತಿಕ ಬದುಕಿನ ವಿಚಾರವಾಗಿ ಸಖತ್ ಸುದ್ದಿಯಲ್ಲಿದ್ದಾರೆ. ರಾಣಾ ವೈವಾಹಿಕ ಬದುಕಲ್ಲಿ ಬಿರುಕು ಮೂಡಿದೆ ಎನ್ನುವ ವಿಚಾರ ಹೊರ ಬಿದ್ದಿದೆ..

ಹೌದು ತೆಲುಗಿನ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸುತ್ತಿರುವ ರಾಣಾ ದಗ್ಗುಬಾಟಿ ತಮ್ಮ ಸಂಸಾರಿಕ ಬದುಕಿನ ವಿಚಾರವಾಗಿ ಟಿಟೌನ್‌ನಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ. ಮಿಹಿಕಾ ಬಜಾಜ್ ಮತ್ತು ರಾಣಾ ಮದುವೆಯಾಗಿ ಎರಡು ವರ್ಷಗಳಾಗಿದೆ. ತಮ್ಮ ಮದುವೆ ವಾರ್ಷಿಕೋತ್ಸವದ ವೇಳೆಯಲ್ಲಿ ರಾಣಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ಅಷ್ಟು ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ತಮ್ಮ ಪತ್ನಿ ಮಿಹಿಕಾ ಜತೆಗಿರುವ ಫೋಟೋ ಕೂಡ ಡಿಲೀಟ್ ಮಾಡಿದ್ದಾರೆ.

ತಮ್ಮ ಸಿನಿಮಾ ಪ್ರಚಾರಕ್ಕಾಗಿ ಸದಾ ಇನ್ಸ್ಟಾಗ್ರಾಂನಲ್ಲಿ ಆಕ್ಟೀವ್ ಇರುತ್ತಿದ್ದ ರಾಣಾ, ತಮ್ಮ ಅಭಿಮಾನಿಗಳ ಜತೆಗೂ ಮಾತನಾಡುತ್ತಿದ್ದರು. ಈಗ ದಿಢೀರ್ ಅಂತಾ ತಮ್ಮ ಖಾತೆಯಲ್ಲಿನ ಅಷ್ಟು ಫೋಟೋಗಳನ್ನ ಡಿಲೀಟ್ ಮಾಡಿರುವುದು ನೆಟ್ಟಿಗರ ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ. ಮಿಹಿಕಾ ಜೊತೆ ದಾಂಪತ್ಯ ಜೀವನಕ್ಕೆ ರಾಣಾ ಫುಲ್ ಸ್ಟಾಪ್ ಇಟ್ಟಿದ್ದಾರಾ. ರಾಣಾ ವೈವಾಹಿಕ ಬದುಕಲ್ಲಿ ಬಿರುಕು ಮೂಡಿದ್ಯಾ ಎಂಬ ಪ್ರಶ್ನೆಗೆ, ಸ್ವತಃ ರಾಣಾ ಉತ್ತರಿಸುವವೆರೆಗೂ ಕಾದುನೋಡಬೇಕಿದೆ.

ಈ ಹಿಂದೆಯೂ ಸೆಲಿಬ್ರೆಟಿಗಳು ತಮ್ಮ ಸಂಗಾತಿಗಳಿಂದ ದೂರಾಗುವ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಅವರೊಟ್ಟಿಗಿನ ಫೋಟೋಗಳನ್ನು ಮೊದಲು ಡಿಲೀಟ್ ಮಾಡುವ ಮೂಲಕ ಸೂಚನೆ ನೀಡುತ್ತಿದ್ದರು. ನಂತರ ಕೆಲ ದಿನಗಳ ಬಳಿಕ ತಮ್ಮ ಡಿವೋರ್ಸ್ ವಿಚಾರವನ್ನು ಬಹಿರಂಗ ಪಡಿಸುತ್ತಿದ್ದರು‌. ಇದೀಗ ರಾಣಾ ದಗ್ಗುಬಟ್ಟಿ ಕೂಡ ಅದೇ ದಾರಿ ಹಿಡಿದಿದ್ದು ಪತ್ನಿಯಿಂದ ದೂರಾಗುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ..

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯಂ.. ಪಂಡಿತ್ ಶ್ರೀನಿವಾಸ್ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ಸಾಧ್ಯ ಆಗುವ ರೂಪದಲ್ಲಿ ಖಚಿತ ಪರಿಹಾರ, ನೂರಕ್ಕೆ ನೂರರಷ್ಟು ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ.. ಕರೆ ಅಥವಾ ವಾಟ್ಸಪ್ ಮಾಡಿ 9916889622. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. 9916889622