ಒಂದು ಬಟ್ಟಲು ರಾಗಿ ಹಿಟ್ಟು ಇದ್ದರೆ ಸಾಕು.. ಈ ಹೊಸ ತಿಂಡಿಯನ್ನು ಟ್ರೈ ಮಾಡಿ.. ಸಖತ್ ಟೇಸ್ಟಿ..

ರೊಗಿ ದೋಸೆ, ರಾಗಿ ಅಂಬಲಿ, ರಾಗಿ ರೊಟ್ಟಿ, ರಾಗಿ ಮುದ್ದೆ ಎಲ್ಲರಿಗೂ ಗೊತ್ತಿರೋ ಐಟಮ್ಸ್.. ಇನ್ನು ರಾಗಿ ಬಿಸ್ಕೆಟ್, ರಾಗಿ ಉಪ್ಪಿಟ್, ರಾಗಿ ಇಡ್ಲಿ, ರಾಗಿ ಹುರಿ ಹಿಟ್ಟು, ರಾಗಿ ಹಲ್ವಾ ಕೆಲವರಿಗಷ್ಟೇ ಗೊತ್ತು. ಆದರೂ ರಾಗಿಯಿಂದ ಮಾಡೋ ತಿಂಡಿಗಳು ಆರೋಗ್ಯಕ್ಕೂ ಸೈ, ರುಚಿಗೂ ಜೈ..

ಇಂತಹ ರಾಗಿ ಹಿಟ್ಟಿನಿಂದ ಇವತ್ತು ನಾವು ಸ್ಪೆಷಲ್ ತಿಂಡಿಯನ್ನು ಮಾಡಿ ತೋರಿಸ್ತೀವಿ. ಇದನ್ನ ನೀವೂ ಒಣ್ಣೆ ಟ್ರೈ ಮಾಡಿ. ಆಗ ನೀವೆ ಹೇಳ್ತೀರಾ ಸೂಪರ್ ಅಂತ..

ಬೇಕಾಗುವ ಸಾಮಗ್ರಿಗಳು: ರಾಗಿ ಹಿಟ್ಟು : 1 ಕಪ್‌, ಉಪ್ಪು: ಸ್ವಲ್ಪ, ತೆಂಗಿನ ತುರಿ: ಅರ್ಧ ಕಪ್‌, ಬಾಳೆ ಹಣ್ಣು, ಸಕ್ಕರೆ, ತುಪ್ಪ.

ಮಾಡುವ ವಿಧಾನ:
ಮೊದಲು ಒಂದು ಪಾತ್ರೆಗೆ ರಾಗಿ ಹಿಟ್ಚನ್ನು ಹಾಕಿ ಹುರಿಯಿರಿ. 10 ನಿಮಿಷ ಹುರಿದ ಮೇಲೆ ಅದಕ್ಕೆ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣಮಾಡಬೇಕು. ಅನಂತರ ಅದಕ್ಕೆ ಸ್ವಲ್ಪ ನೀರು ಚಿಮುಕಿಸಿ ರಾಗಿ ಹುಟ್ಟು ನೆನೆಯುವಂತೆ ಮಾಡಬೇಕು. ಗಂಟಿದ್ದರೆ ಜರಡಿ ಮಾಡಿಕೊಳ್ಳಿ. ಅನಂತರ ಇಡ್ಲಿ ತಟ್ಟೆಯನ್ನು ತೆಗೆದುಕೊಳ್ಳಿ. ಇದರ ಮೇಲೆ ಬಿಳಿ ಬಟ್ಟೆಯನ್ನು ಹಾಕಿ. ತಟ್ಟೆಗೆ ರಾಗಿ ಹುಡಿಯನ್ನು ಹರಡಿ. ಇದರ ಮೇಲೆ ತೆಂಗಿನ ತುರಿ ಹಾಕಿ ಹಾಗೂ ಮತ್ತೆ ರಾಗಿ ಹಿಟ್ಚನ್ನು ಹಾಕಿ 10 ನಿಮಿಷ ಉಸಿರಿನಲ್ಲಿ ಬೇಯಿಸಬೇಕು. ಈಗ ಇದನ್ನು ಬಾಳೆ ಹಣ್ಣು, ಸಕ್ಕರೆ, ತುಪ್ಪದೊಂದಿಗೆ ಸವಿಯಿರಿ. ಸ್ವೀಟ್ ಬೇಡ ಅನ್ನೋರು ಕಡಲೆ ಕಾಳು ಸಾರಿನೊಂದಿಗೆ ಸೇವಿಸಬಹುದು.