ಪುಟ್ಟಕ್ಕನ ಮಕ್ಕಳು ಧಾರಾವಾಹಿಯಿಂದ ಹೊರ ನಡೆದ ನಟ.. ಕಾರಣವೇನು ಗೊತ್ತಾ..

ಪುಟ್ಟಕ್ಕನ ಮಕ್ಕಳು ಧಾರವಾಹಿ ಪ್ರಸ್ತುತ ಕನ್ನಡ ಕಿರುತೆರೆಯ ಟಾಪ್ ಧರವಹಿಯಾಗಿ ನಿಂತಿದೆ. ಪ್ರತಿವಾರ ಟಿ.ಆರ್.ಪಿ ಲಿಸ್ಟ್ ನಲ್ಲಿ ಮೊದಲ ಸ್ಥಾನ ಅಲಂಕರಿಸುತ್ತಿದ್ದಾರೆ ಪುಟ್ಟಕ್ಕ ಮತ್ತು ಆಕೆಯ ಮಕ್ಕಳು. ವೀಕ್ಷಕರಿಗೆ ಇಷ್ಟ ಆಗುವಂಥ ಫ್ಯಾಮಿಲಿ ಡ್ರಾಮಾ ಜೊತೆಗೆ ಸ್ವಲ್ಪ ಮಾಸ್ ಎಲಿಮೆಂಟ್ಸ್, ಪ್ರೀತಿಯ ಮಿಶ್ರಣ, ವಿಲ್ಲನ್ ಗಳ ಕುತಂತ್ರ, ಪುಟ್ಟಕ್ಕನ ತಾಳ್ಮೆ, ಸ್ನೇಹಾಳ ಜಾಣ್ಮೆ ಜೊತೆಗೆ ಆತುರದ ಸ್ವಭಾವ, ಬಂಗಾರಮ್ಮನ ಗತ್ತಿನ ಜೊತೆಗಿರುವ ಒಳ್ಳೆಯತನ, ಕಂಠಿಯ ನಿಷ್ಕಲ್ಮಶ ಪ್ರೀತಿ, ಹೀಗೆ ಸಾಕಷ್ಟು ಅಂಶಗಳಿಂದ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಜನರ ಮನಸ್ಸು ಗೆದ್ದಿದೆ. ಉಮಾಶ್ರೀ ಅವರ ನಟನೆಗೆ ವೀಕ್ಷಕರು ಫಿದಾ ಆಗಿದ್ದಾರೆ ಅಂದ್ರೆ ತಪ್ಪಾಗುವುದಿಲ್ಲ. ಇದೀಗ ಈ ಧಾರವಾಹಿಯಿಂದ ಪ್ರಮುಖ ನಟ ದೂರ ಸರಿದಿದ್ದಾರೆ ಎನ್ನುವ ಸುದ್ದಿ ಸಿಕ್ಕಿದೆ..

ಪುಟ್ಟಕ್ಕನ ಮಕ್ಕಳು ಧಾರವಾಹಿ ಮಂಡ್ಯ ಜಿಲ್ಲೆಯ ದೇವಿಪುರ ಎನ್ನುವ ಗ್ರಾಮದಲ್ಲಿ ನಡೆಯುತ್ತಿರುವ ಕಥೆ ಆಗಿದೆ. ಇಲ್ಲಿ ಪುಟ್ಟಕ್ಕನ ಸಂಸಾರ ಒಂದು ಕಡೆಯಾದರೆ, ಆಕೆಗೆ ಕಾಟ ಕೊಡಲು, ಆಕೆಯ ಗಂಡನ ಮತ್ತೊಬ್ಬ ಹೆಂಡತಿ ತುದಿಗಾಲಲ್ಲಿ ನಿಂತಿದ್ದಾಳೆ. ಪುಟ್ಟಕ್ಕನ ಮನೆ, ಮೆಸ್ ಪಡೆದು ಆಕೆಯನ್ನು ಬೀದಿ ಪಾಲು ಮಾಡಲು ರಾಜಿ ನಿಂತಿದ್ದಾಳೆ. ಇತ್ತ ಬಂಗಾರಮ್ಮ ಬಡ್ಡಿ ವ್ಯವಹಾರ ಮಾಡುವ ಹೆಣ್ಣು. ಯಾರದ್ದೇ ಸಹಾಯ ಇಲ್ಲದೇ, ಬೆಳೆದಿರುವ ಬಂಗಾರಮ್ಮನನ್ನು ಕಂಡರೆ ಊರಿನಲ್ಲಿ ಎಲ್ಲರಿಗೂ ಗೌರವ ಜೊತೆಗೆ ಭಯ. ಮೇಲ್ನೋಟಕ್ಕ ಗತ್ತು ತುಂಬಿ ತುಳುಕುವ ಮಹಿಳೆಯಂತೆ ಕಂಡರೂ ಬಂಗಾರಮ್ಮ ಒಳ್ಳೆಯ ಹೆಂಗಸು. ಬಂಗಾರಮ್ಮನ ಮಗ ಕಂಠಿ ಪುಟ್ಟಕ್ಕನ ಮಗಳು ಸ್ನೇಹಾಳನ್ನು ಇಷ್ಟಪಟ್ಟು, ಆ ವಿಚಾರವನ್ನು ಆಕೆಗೆ ಹೇಳಲಾಗದೆ ಪರದಾಡುತ್ತಿದ್ದಾನೆ. ತಾಯಿ ಮತ್ತು ಸ್ನೇಹ ನಡುವೆ ಸಿಕ್ಕಿಹಾಕಿಕೊಂಡಿದ್ದಾನೆ ಕಂಠಿ.

ಹೀಗೆ ಸಾಗುತ್ತಿರುವ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಎಲ್ಲಾ ಪಾತ್ರಕ್ಕೂ ಪ್ರಾಮುಖ್ಯತೆ ನೀಡಲಾಗಿದೆ, ಪುಟ್ಟಕ್ಕನ ಮಕ್ಕಳು ಧಾರಾವಹಿಯ ಮತ್ತೊಂದು ಪ್ರಮುಖ ಪಾತ್ರ ಲಾಯರ್ ಚಂದ್ರು ಪಾತ್ರವಾಗಿತ್ತು. ಈ ಪಾತ್ರದಲ್ಲಿ ಹಲವು ವರ್ಷಗಳಿಂದ ಕಿರುತೆರೆಯಲ್ಲಿ ಸಕ್ರಿಯರಾಗಿರುವ ನಟ ಕಾರ್ತಿಕ್ ಮಹೇಶ್ ನಟಿಸುತ್ತಿದ್ದರು. ಚಂದ್ರು ತುಂಬಾ ಒಳ್ಳೆಯ ಹುಡುಗ, ಸ್ನೇಹಾಳಿಗೆ ಬಹಳ ಆಪ್ತನಾಗಿರುತ್ತಾನೆ. ಸ್ನೇಹಾಳ ಬೆಸ್ಟ್ ಫ್ರೆಂಡ್ ಅಂದ್ರೆ ಚಂದ್ರು. ಫ್ರೆಂಡ್ ಗಿಂತಲೂ ಒಂದು ಕೈ ಹೆಚ್ಚು ಎನ್ನುವ ಹಾಗಿರುತ್ತಾನೆ. ಜೊತೆಗೆ ಬಂಗಾರಮ್ಮನ ಅಳಿಯ ಸಹ ಹೌದು. ಆದರೆ ಬಂಗಾರಮ್ಮನ ಮಗಳು ಮತ್ತು ಚಂದ್ರು ಕಾರಣಾಂತರಗಳಿಂದ ಬೇರೆ ಬೇರೆ ಆಗಿರುತ್ತಾರೆ. ಇವರಿಬ್ಬರನ್ನು ಒಂದು ಮಾಡಲು ಸಾಕಷ್ಟು ಪ್ರಯತ್ನಗಳು ಸಹ ನಡೆಯುತ್ತಿರುತ್ತದೆ.

ಇದೀಗ ಚಂದ್ರು ಪಾತ್ರದಿಂದ ನಟ ಕಾರ್ತಿಕ್ ಮಹೇಶ್ ಹೊರಬಂದಿದ್ದಾರೆ ಎನ್ನುವ ಸುದ್ದಿಯೊಂದು ಕೇಳಿಬರುತ್ತಿದೆ. ಕಾರ್ತಿಕ್ ಅವರು ಈ ಪಾತ್ರದಿಂದ ಹೊರಬಂದಿದ್ದರೆ ಬಗ್ಗೆ ಅಧಿಕೃತವಾದ ಮಾಹಿತಿ ಸಿಕ್ಕಿಲ್ಲ. ಆದರೆ ಇವರು ಈಗಾಗಲೇ ಪುಟ್ಟಕ್ಕನ ಮಕ್ಕಳು ಧಾರವಾಹಿಯಿಂದ ಹೊರಬಂದಿದ್ದು, ಬೇರೊಬ್ಬ ನಟ ಚಂದ್ರು ಪಾತ್ರಕ್ಕೆ ಬರುತ್ತಾರೆ, ಈಗಾಗಲೇ ಹೊಸ ನಟ ಎಂಟ್ರಿ ಕೊಟ್ಟು ಚಿತ್ರೀಕರಣ ಸಹ ನಡೆದಿದೆ, ಶೀಘ್ರದಲ್ಲೇ ಹೊಸ ನಟ ಅಭಿನಯಿಸಿರುವ ಸಂಚಿಕೆಗಳು ಪ್ರಸಾರವಾಗುತ್ತದೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದು ಕಾರ್ತಿಕ್ ಯಾಕೆ ಧಾರವಾಹಿಯಿಂದ ಹೊರಬಂದರು ಎನ್ನುವ ಪ್ರಶ್ನೆ ವೀಕ್ಷಕರನ್ನು ಕಾಡಿದ್ದು, ಅದಕ್ಕೂ ಉತ್ತರ ಸಿಕ್ಕಿದೆ.

ಕಾರ್ತಿಕ್ ಮಹೇಶ್ ಅವರಿಗೆ ಮತ್ತೊಂದು ಧಾರವಾಹಿಯಲ್ಲಿ ನಾಯಕನಾಗಿ ನಟಿಸುವ ಅವಕಾಶ ಸಿಕ್ಕಿರುವ ಕಾರಣ, ಡೇಟ್ಸ್ ಸಮಸ್ಯೆಯಿಂದ ಪುಟ್ಟಕ್ಕನ ಮಕ್ಕಳು ಧಾರವಾಹಿಯಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ರಾಜಿ ಧಾರವಾಹಿಯಲ್ಲಿ ನಾಯನಾಗಿ ನಟಿಸುತ್ತಿದ್ದಾರೆ ಕಾರ್ತಿಕ್ ಮಹೇಶ್. ಹಾಗಾಗಿ ಅವರಿಗೆ ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ಡೇಟ್ಸ್ ಹೊಂದಿಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗುತ್ತಿದೆ. ಅದರಿಂದ ಕಾರ್ತಿಕ್ ಮಹೇಶ್ ಅವರು ಪುಟ್ಟಕ್ಕನ ಮಕ್ಕಳು ಧಾರವಾಹಿಯಿಂದ ಹೊರಬಂದಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.

ರಾಜಿ ಧಾರಾವಾಹಿಯಲ್ಲಿ ಕರ್ಣ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ ಕಾರ್ತಿಕ್. ರಾಜಿಯ ಬೆಸ್ಟ್ ಫ್ರೆಂಡ್ ಆಗಿರುತ್ತಾನೆ ಕರ್ಣ. ನಾಯಕನಿಗೆ ರಾಜಿ ಬೆಸ್ಟ್ ಫ್ರೆಂಡ್ ಆಗಿರುತ್ತಾಳೆ, ಆದರೆ ರಾಜಿಗೆ ಕರ್ಣನ ಮೇಲೆ ಸ್ನೇಹಕ್ಕಿಂತ ವಿಶೇಷವಾದ ಭಾವನೆಗಳಿರುತ್ತದೆ. ಈ ಇಬ್ಬರು ಸ್ನೇಹಿತರ ಜೀವನದಲ್ಲಿ, ಪ್ರೀತಿ ಹುಟ್ಟುತ್ತಾ? ಇವರಿಬ್ಬರು ಪ್ರೀತಿಯಲ್ಲಿ ಬೀಳ್ತಾರಾ ಎನ್ನುವುದು ರಾಜಿ ಧಾರವಾಹಿಯ ಕಥೆ ಆಗಿದೆ. ಏಪ್ರಿಲ್ 18ರಿಂದ ಶುರುವಾಗಿರುವ ಈ ಧಾರವಾಹಿ, ಸೋಮವಾರದಿಂದ ಶುಕ್ರವಾರದ ವರೆಗೆ ಸಂಜೆ 7:30ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತದೆ. ಪುಟ್ಟಕ್ಕನ ಮಕ್ಕಳು ಅಭಿಮಾನಿಗಳು ಕಾರ್ತಿಕ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿರುವುದಂತೂ ಖಂಡಿತ..

ಇನ್ನು ಪುಟ್ಟಕ್ಕನ ಮಕ್ಕಳ ವಿಷಯಕ್ಕೆ ಬರುವುದಾದರೆ, ಚಂದ್ರು ಪಾತ್ರಕ್ಕೆ ಎಂಟ್ರಿ ಕೊಡುವ ನಟ ಯಾರಿರಬಹುದು ಎನ್ನುವ ಕುತೂಹಲವನ್ನು ಧಾರವಾಹಿ ತಂಡ ರಿವೀಲ್ ಮಾಡಿಲ್ಲ. ಇನ್ನುಳಿದ ಹಾಗೆ ನಟಿ ಉಮಾಶ್ರೀ, ನಟಿ ಮಂಜು ಭಾಷಿಣಿ, ಹಂಸ, ರಮೇಶ್ ಪಂಡಿತ್, ಸುನಂದಾ ಹೊಸಕೋಟೆ, ರೇಣುಕಾ, ಸಾರಿಕಾ ರಾಜ್, ಗುರು ಹೆಗ್ಡೆ, ಧನುಷ್, ಸಂಜನಾ ಬುರ್ಲಿ, ಪವನ್, ಶಿಲ್ಪಾ, ನಿಶಾ, ಅಕ್ಷರಾ, ಕಾಮಿಡಿ ಕಿಲಾಡಿಗಳು ಮೂಲಕ ಜನಪ್ರಿಯತೆ ಗಳಿಸಿದ್ದ ಸಂತೋಷ್, ಮತ್ತು ಗಜೇಂದ್ರ ಸೇರಿದಂತೆ ಇನ್ನಿತರ ಹಲವು ಕಲಾವಿದರು ನಟಿಸಿದ್ದಾರೆ.