ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್..ಮನೆಗೆ ಮುಳುವಾಗ್ತಾಳಾ ಸ್ನೇಹ?

ಜೀಕನ್ನಡ ವಾಹಿನಿಯಲ್ಲಿ ಇತ್ತೀಚೆಗೆ ಶುರುವಾಗಿ ಒಳ್ಳೆಯ ಜನಪ್ರಿಯತೆ ಪಡೆದು ವೀಕ್ಷಕರಿಗೆ ಇಷ್ಟ ಆಗಿರುವ ಧಾರಾವಾಹಿ ಪುಟ್ಟಕ್ಕನ ಮಕ್ಕಳು. ಹಿರಿಯನಟಿ ಉಮಾಶ್ರೀ ಅವರು ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಧಾರಾವಾಹಿಯಲ್ಲಿ ಉಮಾಶ್ರೀ ಅವರ ನಟನೆ ಬಗ್ಗೆ ಹೇಳಲು ಎರಡನೇ ಮಾತೇ ಇಲ್ಲ. ಇನ್ನುಳಿದ ಕಲಾವಿದರು ಸಹ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಪ್ರತಿದಿನ ಸಂಜೆ 7:30ಕ್ಕೆ ಪುಟ್ಟಕ್ಕ ಮತ್ತು ಆಕೆಯ ಮೂವರು ಹೆಣ್ಣುಮಕ್ಕಳ ಕಥೆ ನಿಮ್ಮ ಟಿವಿ ಪರದೆ ಮೇಲೆ ಮೂಡಿಬರುತ್ತಿದೆ. ಪುಟ್ಟಕ್ಕನ ಮಕ್ಕಳು ತಮ್ಮ ಕತೆಯನ್ನು ನಿಮ್ಮ ಜೊತೆ ಹಂಚಿಕೊಳ್ಳುಟ್ಟಿದ್ದಾರೆ. ಪ್ರತಿ ಎಪಿಸೋಡ್ ನಲ್ಲೂ ರೋಚಕ ತಿರುವುಗಳನ್ನು ನೀಡುವ ಮೂಲಕ ವೀಕ್ಷಕರ ಕುತೂಹಲ ಹೆಚ್ಚಿಸುತ್ತಿದೆ ಪುಟ್ಟಕ್ಕನ ಮಕ್ಕಳು ಧಾರಾವಾಹಿ. ಈಗ ಧಾರಾವಾಹಿ ಕುತೂಹಲ ಹಂತ ತಲುಪಿದ್ದು, ಪುಟ್ಟಕ್ಕನ ಮಗಳು ಸ್ನೇಹ ಮನೆಗೆ ಮುಳುವಾಗುವ ಸಂಭವ ಕಾಣಿಸುತ್ತಿದೆ. ಹಾಗಿದ್ರೆ ಸ್ನೇಹ ಇಂದ ಮನೆಗೆ ತೊಂದರೆ ಆಗುತ್ತಾ..

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ, ಪುಟ್ಟಕ್ಕನಷ್ಟೇ ಪ್ರಮುಖವಾದ ಪಾತ್ರ. ಮನೆಯ ಮಗಳಾಗಿ, ಅಮ್ಮ ಪಡುತ್ತಿರುವ ಕಷ್ಟವನ್ನು ನೋಡುತ್ತಾ ಬೆಳೆದು, ಅಮ್ಮ ಇನ್ಯಾವುದೇ ಕಷ್ಟ ಪಡದೆ ಇರುವ ಹಾಗೆ ನೋಡಿಕೊಳ್ಳಬೇಕು ಎನ್ನುವುದು ಸ್ನೇಹಾಳ ಆಸೆ. ಆದರೆ ಮೂರು ಹೆಣ್ಣುಮಕ್ಕಳನ್ನು ಮೆಸ್ ನಡೆಸಿ ಸ್ವಾಭಿಮಾನದಿಂದ ಸಾಕುತ್ತಿರುವ ಪುಟ್ಟಕ್ಕನಿಗೆ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಲೇ ಇದೆ. ಒಂದು ಕಡೆ ಸ್ನೇಹ ಮತ್ತು ಕಂಠಿ ಲವ್ ಸ್ಟೋರಿ. ಸ್ನೇಹಾಳ ಗುಣ ನಡತೆಯನ್ನು ಮೆಚ್ಚಿಕೊಂಡಿರುವ ಕಂಠಿ, ಆಕೆಯನ್ನು ಪ್ರೀತಿಸಿ ಮದುವೆಯಾಗಬೇಕು ಎಂದು ಪಣ ತೊಟ್ಟಿದ್ದಾನೆ.

ಮತ್ತೊಂದು ಕಡೆ, ಪುಟ್ಟಕ್ಕನ ಗಂಡ ಮತ್ತು ಆತನ ಎರಡನೇ ಹೆಂಡತಿ ಹೇಗಾದರೂ ಮಾಡಿ ಪುಟ್ಟಕ್ಕನ ಮೆಸ್ ಮುಚ್ಚಿಸಿ, ಪುಟ್ಟಕ್ಕ ಮತ್ತು ಮೂವರು ಹೆಣ್ಣುಮಕ್ಕಳನ್ನು ಮನೆಯಿಂದ ಹೊರಹಾಕಬೇಕು ಎಂದು ದಿನಕ್ಕೊಂದು ಸಂಚು ಮಾಡುತ್ತಿದ್ದಾರೆ. ಆದರೆ ನ್ಯಾಯವಾಗಿ, ನಿಷ್ಠೆಯಿಂದ ಬದುಕುತ್ತಿರುವ ಪುಟ್ಟಕ್ಕ, ಮನೆ ಬಿಟ್ಟು ಹೋಗಲು, ಮೆಸ್ ನಿಲ್ಲಿಸಲು ತಯಾರಿಲ್ಲ. ಬರುತ್ತಿರುವ ಸಮಸ್ಯೆಗಳನ್ನೆಲ್ಲಾ ಹೇಗೋ ನಿಭಾಯಿಸಿ ಮನೆ ಬಿಟ್ಟು ಹೋಗದ ಹಾಗೆ ತಾಳ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾಳೆ ಪುಟ್ಟಕ್ಕ. ಇದನ್ನು ಸಹಿಸದೆ ರಾಜೇಶ್ವರಿ ಹೊಸ ಪ್ಲಾನ್ ಮಾಡಿದ್ದಾಳೆ.

ಪುಟ್ಟಕ್ಕನ ಬಗ್ಗೆ ಇಲ್ಲ ಸಲ್ಲದ್ದನ್ನು ಹೇಳಿ, ಪುಟ್ಟಕ್ಕನ್ಆ ಸಂಸಾರವನ್ನು ಮನೆಯಿಂದ ಖಾಲಿ ಮಾಡಿಸಲು, ಮೆಸ್ ಮುಚ್ಚಿಸಲು ಬಂಗಾರಮ್ಮನ ಸಹಾಯ ಕೇಳಿದ್ದಾಳೆ ರಾಜೇಶ್ವರಿ. ತನ್ನ ಜೊತೆಯಲ್ಲೇ ಬಂಗಾರಮ್ಮನನ್ನು ಪುಟ್ಟಕ್ಕನ ಮನೆಗೆ ಕರೆದುಕೊಂಡು ಬಂದಿದ್ದಾಳೆ. ಬಂಗಾರಮ್ಮನಿಗೆ ಪುಟ್ಟಕ್ಕನ ಸ್ವಭಾವ ಎಂಥದ್ದು ಎಂದು ಗೊತ್ತಿದೆ. ಪುಟ್ಟಕ್ಕನ ಒಳ್ಳೆಯ ಮನಸ್ಸನ್ನು ಅರಿತಿರುವ ಬಂಗಾರಮ್ಮ, ಜಗಳ ಮಾಡದೆ ಸಮಾಧಾನವಾಗಿ ಪುಟ್ಟಕ್ಕನ ಜೊತೆ ಮಾತನಾಡುತ್ತಿದ್ದಾಳೆ. ಈ ಕಡೆ ಪುಟ್ಟಕ್ಕ ಹೇಗಾದರೂ ಬಂಗಾರಮ್ಮನ ಮನವೊಲಿಸುವ ಪ್ರಯತ್ನದಲ್ಲಿದ್ದಾಳೆ.

ಮತ್ತೊಂದು ಕಡೆ ರಾಜೇಶ್ವರಿ ಮನೆಗೆ ಬಂದಿರುವ ವಿಚಾರ ಸ್ನೇಹಾಳಿಗೆ ತಿಳಿದು, ರಾಜೇಶ್ವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಮನೆಗೆ ಧಾವಿಸಿ ಬರುತ್ತಿದ್ದಾಳೆ. ಆದರೆ ರಾಜೇಶ್ವರಿ ಜೊತೆಗೆ ಬಂಗಾರಮ್ಮ ಕೂಡ ಮನೆಗೆ ಬಂದಿದ್ದಾರೆ ಎನ್ನುವ ವಿಚಾರ ಸ್ನೇಹಾಳಿಗೆ ಗೊತ್ತಿಲ್ಲ. ಒಂದು ವೇಳೆ ಈಗ ಸ್ನೇಹ ಮನೆಗೆ ಬಂದರೆ ಪುಟ್ಟಕ್ಕನ ಕುಟುಂಬಕ್ಕೆ ಆಪತ್ತು ಬರುವುದು ಖಂಡಿತ. ಯಾಕಂದ್ರೆ ಸ್ನೇಹಾಳಿಗೆ ಬಂಗಾರಮ್ಮನ ಜೊತೆ ಈಗಾಗಲೇ ಜಗಳವಾಗಿದೆ. ಒಂದು ವೇಳೆ ಸ್ನೇಹ ಪುಟ್ಟಕ್ಕನ ಮಗಳು ಎಂದು ಬಂಗಾರಮ್ಮನಿಗೆ ತಿಳಿದರೆ, ಏನಾಗಬಹುದು?

ಈ ವಿಚಾರ ಬಂಗಾರಮ್ಮನಿಗೆ ತಿಳಿದರೆ, ಆಕೆ ಖಂಡಿತ ಪುಟ್ಟಕ್ಕನಿಗೆ ಸಹಾಯ ಮಾಡಿ, ಪುಟ್ಟಕ್ಕನ ಪರವಾಗಿ ನಿಲ್ಲುವುದಿಲ್ಲ. ಅಷ್ಟು ಸಿಟ್ಟು ಸ್ನೇಹ ಮೇಲೆ ಬಂಗಾರಮ್ಮನಿದೆ ಇದೆ. ಸ್ನೇಹ ಜೊತೆಗೆ ಕಂಠಿ ಕೂಡ ಪುಟ್ಟಕ್ಕನ ಮನೆಗೆ ಬರುತ್ತಿದ್ದು, ಒಂದು ವೇಳೆ ಬಂಗಾರಮ್ಮ ಕಂಠಿ ಸ್ನೇಹಾಳ ಜೊತೆ ಪುಟ್ಟಕ್ಕನ ಮನೆಗೆ ಬರುವುದನ್ನು ನೋಡಿದರೆ, ಪುಟ್ಟಕ್ಕನ ಪ್ರಯತ್ನ ಎಲ್ಲವೂ ತಲೆಕೆಳಗಾಗುತ್ತದೆ. ಈಗ ಸ್ನೇಹ ಮನೆಗೆ ತೊಂದರೆ ಉಂಟುಮಾಡುವ ಹಾಗೆ ಸಂದರ್ಭ ಎದುರಾಗಿದ್ದು, ಮೂರು ಟ್ವಿಸ್ಟ್ ಗಳು ಒಂದೇ ಸಾರಿ ಬಂದಿವೆ. ಈ ಸಂದರ್ಭ ಯಾವ ರೀತಿಯ ತಿರುವು ಪಡೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.