ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಅಭಿನಯಿಸುವ ಮುನ್ನ ಸ್ನೇಹ ಮಾಡುತ್ತಿದ್ದ ಕೆಲಸ ಏನು ಗೊತ್ತಾ?

ಜೀಕನ್ನಡ ವಾಹಿನಿಯ ನಂಬರ್1 ಧಾರವಾಹಿಯ ಸ್ಥಾನದಲ್ಲಿದೆ ಪುಟ್ಟಕ್ಕನ ಮಕ್ಕಳು ಧಾರವಾಹಿ. ಪುಟ್ಟಕ್ಕ ಮತ್ತು ಆಕೆಯ ಮೂರು ಮಕ್ಕಳು, ಮೂರು ವಜ್ರಗಳಿದ್ದ ಹಾಗೆ ಎಂದರೆ ತಪ್ಪಲ್ಲ. ಇನ್ನು ಬಂಗಾರಮ್ಮನ ಕುಟುಂಬ ಹಾಗು ಬಂಗಾರಮ್ಮನ ಮಗ ಕಂಠಿಯ ಅಭಿನಯ ಎಲ್ಲವನ್ನು ಸಹ ಜನರು ಬಹಳ ಇಷ್ಟಪಡುತ್ತಿದ್ದಾರೆ. ಪುಟ್ಟಕ್ಕನ ಮೂರು ಮಕ್ಕಳಲ್ಲಿ ಇಬ್ಬರು ಬಹಳ ಸಾಫ್ಟ್ ಆದರೆ, ಸ್ನೇಹ ಮಾತ್ರ ಭಿನ್ನವಾಗಿದ್ದಾರೆ. ಸ್ನೇಹ ಧೈರ್ಯ ಇರುವ ಹುಡುಗಿ, ತಪ್ಪನ್ನು ತಪ್ಪು ಎಂದು ಹೇಳಿ, ಸಮಾಜದ ಪರವಾಗಿ ನಿಲ್ಲುವ ಸಾಮರ್ಥ್ಯ ಇರುವ ಹುಡುಗಿ.

ಸ್ನೇಹ ಪಾತ್ರದ ಗತ್ತು, ಆಕೆಯ ನಿರ್ಧಾರಗಳು ಎಲ್ಲವೂ ಸಹ ಮೆಚ್ಚಿಕೊಳ್ಳುವಂಥದ್ದು. ಸ್ನೇಹ ಪಾತ್ರವನ್ನು ಜನರಿಗೆ ಇಷ್ಟ ಆಗುವ ಹಾಗೆ, ಎಲ್ಲಾ ಮನೆಗಳಲ್ಲೂ ಸ್ನೇಹಳಂತ ಒಬ್ಬ ಮಗಳಿದ್ದರೆ ಆ ಮನೆಗೆ ಯಾವುದೇ ತೊಂದರೆ ಆಗುವುದಿಲ್ಲ ಎನ್ನುವ ಹಾಗೆ ನಿರ್ದೇಶಕರು ಈ ಪಾತ್ರವನ್ನು ಹೆಣೆದಿದ್ದಾರೆ. ಜನರ ಮೆಚ್ಚುಗೆ ಪಡೆದಿರುವ ಸ್ನೇಹ ಪಾತ್ರದಲ್ಲಿ ನಟಿಸುತ್ತಿರುವ ಕಲಾವಿದೆಯ ಹೆಸರು ಸಂಜನಾ ಬುರ್ಲಿ. ಈ ನಟಿ ಸ್ನೇಹ ಪಾತ್ರಕ್ಕೆ ಜೀವ ತುಂಬಿದ್ದು, ಇವರನ್ನು ಎಲ್ಲರೂ ಈಗ ಸಂಜನಾ ಎನ್ನುವುದಕ್ಕಿಂತ ಸ್ನೇಹ ಎಂದೇ ಕರೆಯಲು ಶುರುಮಾಡಿದ್ದಾರೆ. ಧಾರವಾಹಿಯಲ್ಲಿ ಸ್ನೇಹ ಯಾವಾಗಲೂ ಚೂಡಿದಾರ್ ಹಾಕಿ, ಜಡೆ ಹೆಣೆದು ಡೀಸೆಂಟ್ ಆಗಿ ಕಾಣಿಸಿಕೊಳ್ಳುತ್ತಾರೆ.

ಆದರೆ ನಿಜ ಜೀವನದಲ್ಲಿ ಸ್ನೇಹ ಹೇಗಿರುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಸೋಷಿಯಲ್ ಮೀಡಿಯಾದಲ್ಲಿ ಸ್ನೇಹ ಪಾತ್ರ ನಿರ್ವಹಿಸುತ್ತಿರುವ, ನಟಿ ಸಂಜನಾ ಬುರ್ಲಿ ಅವರ ಖಾತೆಯನ್ನು ನೋಡಿದರೆ, ನಿಜ ಜೀವನಕ್ಕೂ ಹಾಗೂ ಧಾರವಾಹಿಗು ಅವರಲ್ಲಿ ಬಹಳ ವ್ಯತ್ಯಾಸ ಇದೆ ಎಂದು ಗೊತ್ತಾಗುತ್ತದೆ. ರಿಯಲ್ ಲೈಫ್ ನಲ್ಲಿ ಬಹಳ ಮಾಡರ್ನ್ ಆಗಿ ಮುದ್ದಾಗಿ ಇದ್ದಾರೆ ಸಂಜನಾ ಬುರ್ಲಿ. ಇವರಿಗೆ ಇನ್ಸ್ಟಾಗ್ರಾಮ್ ನಲ್ಲಿ 29.9 ಸಾವಿರ ಫಾಲೋವರ್ಸ್ ಇದ್ದಾರೆ. ಸಂಜನಾ ಯಾವುದೇ ಫೋಟೋಸ್ ಪೋಸ್ಟ್ ಮಾಡಿದರು ಸಹ, ಅಭಿಮಾನಿಗಳು ಲೈಕ್ಸ್ ಮೂಲಕ ಮೆಚ್ಚುಗೆ ನೀಡಿ, ಕಮೆಂಟ್ಸ್ ನಲ್ಲಿ ಹಾರ್ಟ್ ಸಿಂಬಲ್ ಹಾಕಿ ಸಂತೋಷ ವ್ಯಕ್ತಪಡಿಸುತ್ತಾರೆ.

ಇತ್ತೀಚೆಗೆ ಸಂಜನಾ ಅವರು ಸೋಷಿಯಲ್ ಮೀಡಿಯಾದಲ್ಲಿ ಒಂದು ಹಳೆಯ ಫೋಟೋ ಶೇರ್ ಮಾಡಿದ್ದು, ಅಭಿಮಾನಿಗಳು ಅದನ್ನು ನೋಡಿ, ಸರ್ಪ್ರೈಸ್ ಆಗಿದ್ದಾರೆ. ಪುಟ್ಟಕ್ಕನ ಮಕ್ಕಳು ಧಾರವಾಹಿ ಶುರುವಾಗುವ ಮೊದಲು, ಕುರ್ತಾ ಧರಿಸಿ ತೆಗೆಸಿಕೊಂಡಿರುವ ಫೋಟೋ ಅದಾಗಿದ್ದು, ಬಹಳ ಮುದ್ದಾಗಿ ಕಾಣುತ್ತಿದ್ದಾರೆ ಸಂಜನಾ. ಧಾರವಾಹಿಗಿಂತ ಈ ಫೋಟೋದಲ್ಲಿ ಸುಂದರವಾಗಿ ಕಾಣಿಸುತ್ತಿದ್ದಾರೆ ಎನ್ನುತ್ತಿದ್ದಾರೆ ಅಭಿಮಾನಿಗಳು. ಲವ್ ಎಮೋಜಿ ಹಾಕಿ, ಮೆಚ್ಚುಗೆ ಕೊಡುತ್ತಿದ್ದಾರೆ ಅಭಿಮಾನಿಗಳು.

ಕಿರುತೆರೆಯಲ್ಲಿ ಈಗ ಪುಟ್ಟಕ್ಕನ ಮಕ್ಕಳು ಧಾರವಾಹಿಯ ಪಾತ್ರಧಾರಿಗಳದ್ದೇ ಹವಾ ಎಂದರೆ ತಪ್ಪಲ್ಲ. ಸೋಷಿಯಲ್ ಮೀಡಿಯಾದಲ್ಲಿ ಇವರಿಗೆ ಫ್ಯಾನ್ ಬೇಸ್ ಸಹ ದೊಡ್ಡದಾಗಿದೆ. ಸಾಕಷ್ಟು ಫ್ಯಾನ್ ಪೇಜ್ ಗಳು ಸಹ ಸಾಕಷ್ಟಿವೆ. ಧಾರವಾಹಿ ಕಥೆ ಬಗ್ಗೆ ಹೇಳುವುದಾದರೆ, ಸ್ನೇಹ ಈಗ ದೊರೆಯನ್ನು ಇಷ್ಟಪಡುತ್ತಿದ್ದಾಳೆ. ಕಂಠಿ ಬಗ್ಗೆ ಆಕೆಗೆ ಇರುವುದು ಸ್ನೇಹದ ಭಾವನೆ ಮಾತ್ರ. ಆದರೆ ಕಂಠಿ ತನ್ನ ಪ್ರೀತಿಯನ್ನು ಹೇಳಿಕೊಳ್ಳಲು ಚಡಪಡಿಸುತ್ತಿದ್ದಾನೆ. ಇನ್ನುಮುಂದೆ ಧಾರವಾಹಿ ಕಥೆ ಏನಾಗುತ್ತದೆ ಎಂದು ತಿಳಿದುಕೊಳ್ಳಬೇಕಿದೆ.