ಪುಟ್ಟಕ್ಕನ ಮಕ್ಕಳ ಪಾತ್ರಕ್ಕೆ ಹೊಸ ನಟಿಯ ಎಂಟ್ರಿ.. ಕಾರಣವೇನು ಗೊತ್ತಾ..

ಕಿರುತೆರೆ ಲೋಕದಲ್ಲಿ ಪುಟ್ಟಕ್ಕನ ಮಕ್ಕಳು ಧಾರವಾಹಿ ಹವಾ ಹೇಗಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಪ್ರತಿವಾರ ಟಿ.ಆರ್.ಪೋ ರೇಟಿಂಗ್ ನಲ್ಲಿ ಅಗ್ರಸ್ಥಾನ ಪಡೆದುಕೊಳ್ಳುವ ಧಾರವಾಹಿ ಇದು. ಪುಟ್ಟಕ್ಕನ ಮಕ್ಕಳು ಧಾರವಾಹಿಯನ್ನು ಕಿರುತೆರೆ ವೀಕ್ಷಕರು ಮಿಸ್ ಮಾಡದೆ ನೋಡುತ್ತಾರೆ, ಧಾರಾವಾಹಿಯ ಕಥೆ ಆ ರೀತಿ ಕುತೂಹಲಕಾರಿಯಾಗಿ ಸಾಗುತ್ತಿದೆ. ಎಲ್ಲ ಪಾತ್ರಗಳ ಅಭಿನಯ ಮತ್ತು ಹಳ್ಳಿ ಸೊಗಡಿನ ಸಂಭಾಷಣೆ ವೀಕ್ಷಕರಿಗೆ ಇನ್ನಷ್ಟು ಹತ್ತಿರವಾಗಿದೆ.

ಇದೀಗ ಈ ಧಾರವಾಹಿಯಲ್ಲಿ ಮೇಜರ್ ಆದ ಒಂದು ಬದಲಾವಣೆ ಉಂಟಾಗಿದೆ. ಹೌದು, ಇತ್ತೀಚೆಗೆ ಲಾಯತ್ ಚಂದ್ರು ಪಾತ್ರದಲ್ಲಿ ನಟಿಸುತ್ತಿದ್ದ ಖ್ಯಾತ ನಟ ಧಾರವಾಹಿಯಿಂದ ಹೊರಬಂದಿದ್ದರು, ಇದೀಗ ಜನರು ಮೆಚ್ಚಿಕೊಂಡಿದ್ದಾ ಮತ್ತೊಂದು ಪಾತ್ರ, ಪೂರ್ವಿ ಪಾತ್ರದಲ್ಲಿ ನಟಿಸುತ್ತಿದ್ದ, ಚಂದನ ಮಹಾಲಿಂಗಯ್ಯ ಪುಟ್ಟಕ್ಕನ ಮಕ್ಕಳು ಧಾರವಾಹಿಯಿಂದ ಹೊರಬಂದಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದ್ದು, ಇದು ನಿಜವೂ ಆಗಿದೆ. ಕಳೆದ ಕೆಲವು ದಿನಗಳಿಂದ ಪೂರ್ವಿ ಪಾತ್ರ ಧಾರವಾಹಿಯಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ.

ಆಗ ವೀಕ್ಷಕರಿಗೆ ಪೂರ್ವಿ ಪಾತ್ರ ಧಾರವಾಹಿಯಿಂದ ಹೊರಬಂದಿದೆಯೇ ಎನ್ನುವ ಅನುಮಾನ ಶುರುವಾಗಿತ್ತು. ಅದು ಈಗ ನಿಜವೇ ಆಗಿದೆ ಎಂದು ತಿಳಿದುಬಂದಿದೆ. ಪೂರ್ವಿ ಪಾತ್ರದ ನಟಿ ಚಂದನ ಮಹಾಲಿಂಗಯ್ಯ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಆ ಕಾರಣದಿಂದ ಅವರು ಧಾರವಾಹಿಯಿಂದ ಹೊರಬಂದಿದ್ದಾರೆ ಎನ್ನಲಾಗುತ್ತಿದೆ. ಇನ್ನು ಪೂರ್ವಿ ಪಾತ್ರಕ್ಕೆ ಬರುವವರು ಯಾರು ಎನ್ನುವ ಪ್ರಶ್ನೆಗೂ ಉತ್ತರ ಸಿಕ್ಕಿದ್ದು, ನಟಿ ಭವ್ಯಶ್ರೀ ಪೂಜಾರಿ ಇನ್ನುಮುಂದೆ ಪೂರ್ವಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ..

ಭವ್ಯಶ್ರೀ ಪೂಜಾರಿ ಅವರು ಈಗಾಗಲೇ ಹಲವು ಧಾರವಾಹಿಗಳಲ್ಲಿ ನಟಿಸಿದ್ದಾರೆ, ಇವರು ಹೆಚ್ಚಾಗಿ ಕಾಣಿಸಿಕೊಂಡಿರುವುದು ನೆಗಟಿವ್ ಶೇಡ್ ಇರುವ ಪಾತ್ರಗಳಲ್ಲಿ, ಚಂದ್ರಕಲಾ ಮೋಹನ್ ಅವರನ್ನು ರೋಲ್ ಮಾಡೆಲ್ ಆಗಿ ಇಟ್ಟುಕೊಂಡಿರುವ ಭವ್ಯಶ್ರೀ ಪೂಜಾರಿ ಅವರು, ಅವಳು, ಶಾಂತಂ ಪಾಪಂ, ಇಂತಿ ನಿನ್ನ ಪ್ರೀತಿಯ, ಸುಂದರಿ, ಪತ್ತೆದಾರಿ ಪ್ರತಿಭಾ, ಮಂಗಳಗೌರಿ ಮದುವೆ, ನಾಗಿಣಿ2, ಅಣ್ಣಯ್ಯ, ಕಿನ್ನರಿ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ ತೋತಾಪುರಿ ಸಿನಿಮಾ ಮೂಲಕ ಬೆಳ್ಳಿತೆರೆಗು ಎಂಟ್ರಿ ಕೊಟ್ಟಿದ್ದಾರೆ.

ಭವ್ಯಶ್ರೀ ಪೂಜಾರಿ ಅವರು ಬಹಳ ಬಡತನದ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ಇವರು ಮನೆಯಲ್ಲಿ ಕಷ್ಟ ಇತ್ತು ಎನ್ನುವ ಕಾರಣದಿಂದ ಹೆಚ್ಚು ಓದಲು ಆಗಲಿಲ್ಲ, ಆಗ ಇವರಿಗೆ ಸಹಾಯ ಮಾಡಿದ್ದು, ನಟನೆಯ ಕ್ಷೇತ್ರ. ಉತ್ತರ ಕನ್ನಡ ಜಿಲ್ಲೆಯ ಸುಳ್ಯದವರು ಭವ್ಯಶ್ರೀ. ಚಿಕ್ಕ ವಯಸ್ಸಿನಿಂದ ಯಕ್ಷಗಾನ ಮತ್ತು ಭರತನಾಟ್ಯ ಮಾಡುತ್ತಿದ್ದ ಇವರು, ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದರು, ಬಳಿಕ ಕಿರುತೆರೆಗೆ ಎಂಟ್ರಿ ಕೊಟ್ಟರು. ಈಗ ಭವ್ಯಶ್ರೀ ಅವರು ಪುಟ್ಟಕ್ಕನ ಮಕ್ಕಳು ಧಾರವಾಹಿಯ ಪೂರ್ವಿ ಪಾತ್ರದ ಮೂಲಕ, ಕಿರುತೆರೆ ವೀಕ್ಷಕರನ್ನು ಮೋಡಿ ಮಾಡುತ್ತಾರಾ ಎಂದು ಕಾದು ನೋಡಬೇಕಿದೆ.