ಪುಟ್ಟಕ್ಕನ‌ ಮಕ್ಕಳು ಧಾರಾವಾಹಿಯಲ್ಲಿ ಬಹುದೊಡ್ಡ ಬದಲಾವಣೆ..

ಪುಟ್ಟಕ್ಕನ ಮಕ್ಕಳು, ಜೀಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಂಬರ್1 ಧಾರಾವಾಹಿ. ಪ್ರಸ್ತುತ ಟಿ.ಆರ್.ಪಿ ಮತ್ತು ಜನಪ್ರಿಯತೆ ಎರಡರಲ್ಲೂ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮೊದಲ ಸ್ಥಾನದಲ್ಲಿದೆ. ಈ ಧಾರಾವಾಹಿಯ ಮೂಲಕ ಬೆಳ್ಳಿತೆರೆಯ ಸ್ಟಾರ್ ನಟಿ ಉಮಾಶ್ರೀ ಅವರು ಕಿರುತೆರೆಗೆ ಎಂಟ್ರಿ ಕೊಟ್ಟರು. ಉಮಾಶ್ರೀ ಅವರ ಅಭಿನಯದ ಬಗ್ಗೆ ಎರಡು ಮಾತಾಡುವ ಹಾಗಿಲ್ಲ, ಬೆಳ್ಳಿತೆರೆಯ ರಾಷ್ಟ್ರಪ್ರಶಸ್ತಿ ಪಡೆದ ಅವರು ಇಂದು ಕಿರುತೆರೆ ವೀಕ್ಷಕರನ್ನು ವೀಕ್ಷಕರನ್ನು ತಮ್ಮತ್ತ ಸೆಳೆದಿದ್ದಾರೆ. ಪುಟ್ಟಕ್ಕನ ಸಂಸಾರ, ಪ್ರತಿದಿನ ಆಕೆಯ ಮನೆಯಲ್ಲಿ ನಡೆಯುವ ಘಟನೆಗಳನ್ನು ನೋಡಲು ಕಿರುತೆರೆ ವೀಕ್ಷಕರು ತಪ್ಪದೇ ಸಂಜೆ 7:30ಕ್ಕೆ ಟಿವಿ ಮುಂದೆ ಹಾಜರಾಗುತ್ತಾರೆ.

ಪ್ರತಿ ಸಂಚಿಕೆಯಲ್ಲೂ ಧಾರಾವಾಹಿಯಲ್ಲಿ ಸಿಗುತ್ತಿರುವ ಟ್ವಿಸ್ಟ್ ಗಳು ಮುಂದಿನ ಎಪಿಸೋಡ್ ನಲ್ಲಿ ಏನಾಗುತ್ತದೆ ಎನ್ನುವ ಕುತೂಹಲ ಹೆಚ್ಚಿಸುತ್ತಿದೆ. ವೀಕ್ಷಕರಿಗೆ ಮನರಂಜನೆ ನೀಡುವಲ್ಲಿ, ಜೀಕನ್ನಡ ವಾಹಿನಿಯ ಮೊದಲ ಸ್ಥಾನದಲ್ಲಿದೆ. ಈ ವಾಹಿನಿಯ ಮತ್ತೊಂದು ಪ್ರಮುಖವಾದ ಧಾರಾವಾಹಿ ಪಾರು. ಈ ಧಾರಾವಾಹಿ ಶುರುವಾಗಿ ವರ್ಷಗಳೇ ಕಳೆದಿವೆ, ಪಾರು ಧಾರವಾಹಿಯ ನಾಯಕಿ ಪಾತ್ರದಲ್ಲಿ ನಟಿಸುತ್ತಿರುವ ಮೋಕ್ಷಿತಾ ಪೈ ಅವರ ಮೊದಲ ಧಾರಾವಾಹಿ ಇದು. ಮೋಕ್ಷಿತ ಅವರ ಮುಗ್ಧವಾದ ಅಭಿನಯ ನೋಡಿದರೆ, ಇದು ಅವರ ಮೊದಲ ಧಾರಾವಾಹಿ ಎಂದು ಖಂಡಿತ ಅನ್ನಿಸುವುದಿಲ್ಲ.

ಪಾರು ಧಾರಾವಾಹಿ ಮೋಕ್ಷಿತ ಅವರ ಕೆರಿಯರ್ ಗೆ ದೊಡ್ಡ ಆರಂಭ ತಂದುಕೊಟ್ಟಿದೆ. ಇವರು ಎಲ್ಲೇ ಹೊರಗಡೆ ಹೋದರು ಈಗ ಜನರು ಪಾರು ಎಂದೇ ಗುರುತಿಸುತ್ತಾರೆ. ಧಾರಾವಾಹಿಯಲ್ಲಿ ಮೋಕ್ಷಿತ ಅವರ ಅಭಿನಯ ನೋಡಿ, ಬೆಳ್ಳಿತೆರೆಯಲ್ಲಿ ನಟಿಸುವ ಅವಕಾಶಗಳು ಸಹ ಇವರನ್ನು ಹುಡುಕಿಕೊಂಡು ಬಂದಿವೆ. ಈಗಾಗಲೇ ನಿರ್ಭಯ2 ಎನ್ನುವ ಸಿನಿಮಾದಲ್ಲಿ ನಟಿಸಿದ್ದಾರೆ ಮೋಕ್ಷಿತ. ಮತ್ತೊಂದು ಸಿನಿಮಾವನ್ನು ಸಹ ಒಪ್ಪಿಕೊಂಡಿದ್ದು ಆದಷ್ಟು ಸಿನಿಮಾ ಆ ಸಿನಿಮಾ ಬಗ್ಗೆ ಕೂಡ ಮಾಹಿತಿ ಸಿಗಲಿದೆ..

ಮೋಕ್ಷಿತ ಅವರಿಗೆ ಬೆಳ್ಳಿತೆರೆಯಲ್ಲಿ ಮಾತ್ರವಲ್ಲ, ಕಿರುತೆರೆಯಲ್ಲಿ ಸಹ ಸಾಲು ಸಾಲು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಇದೀಗ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನಟಿಸುವ ಅವಕಾಶ ಮೋಕ್ಷಿತ ಅವರನ್ನು ಹುಡುಕಿಕೊಂಡು ಬಂದಿದ್ದು, ಇದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇನ್ನುಮುಂದೆ ಪುಟ್ಟಕ್ಕನ ಮಗಳಾಗಿ ಸಹ ಕಾಣಿಸಿಕೊಳ್ಳಲಿದ್ದಾರೆ ಮೋಕ್ಷಿತ. ಇದೇನು ಪಾರು ಧಾರಾವಾಹಿ ಬಿಟ್ಟು ಮೋಕ್ಷಿತ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನಟಿಸುತ್ತಾರಾ ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಿರುತ್ತದೆ..ಅದಕ್ಕೆ ಉತ್ತರ ಇಲ್ಲಿದೆ.

ಮೋಕ್ಷಿತ ಅವರು ಪುಟ್ಟಕ್ಕನ ಮಗಳ ಪಾತ್ರ ಒಪ್ಪಿಕೊಂಡಿರುವುದು ನಿಜ, ಆದರೆ ಪಾರು ಧಾರಾವಾಹಿಗೆ ಗುಡ್ ಬೈ ಹೇಳುತ್ತಿಲ್ಲ. ಪಾರು ಧಾರಾವಾಹಿ ಜೊತೆಯಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸಹ ನಟಿಸಲಿದ್ದಾರೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿ ಕನ್ನಡ ಮಾತ್ರವಲ್ಲದೆ, ತೆಲುಗು ಮತ್ತು ಮಲಯಾಳಂ ಭಾಷೆಯಲ್ಲಿ ಸಹ ತಯಾರಾಗಿ, ಜನಪ್ರಿಯತೆ ಗಳಿಸಿಕೊಂಡಿದೆ. ಇದೀಗ ಪುಟ್ಟಕ್ಕನ ತಮಿಳು ತಮಿಳು ಭಾಷೆಗೂ ರಿಮೇಕ್ ಆಗುತ್ತಿದೆ. ತಮಿಳಿನ ಅವತರಣಿಕೆಯಲ್ಲಿ ನಟಿಸುವ ಅವಕಾಶ ಮೋಕ್ಷಿತ ಅವರಿಗೆ ಸಿಕ್ಕಿದೆ.

ಮೋಕ್ಷಿತ ಅವರು ಸಹ ಸಂತೋಷವಾಗಿ ಈ ಪಾತ್ರವನ್ನು ಒಪ್ಪಿಕೊಂಡಿದ್ದಾರೆ. ಈ ಮೂಲಕ ಮೋಕ್ಷಿತ ತಮಿಳು ಕಿರುತೆರೆ ಲೋಕಕ್ಕೂ ಎಂಟ್ರಿ ಕೊಡಲಿದ್ದಾರೆ. ಪಾರು ಧಾರಾವಾಹಿಯನ್ನು ಬಿಡದೆ, ಎರಡು ಧಾರಾವಾಹಿಯನ್ನು ಸಹ ಬ್ಯಾಲೆನ್ಸ್ ಮಾಡಲಿದ್ದಾರೆ ಮೋಕ್ಷಿತ. ಕನ್ನಡದ ಈ ಹುಡುಗಿ ಇಂದು ಬೇರೆ ಭಾಷೆಯಲ್ಲೂ ಮಿಂಚಲು ಸಿದ್ಧವಾಗಿದ್ದಾರೆ, ಇವರ ಮುಂದಿನ ಕೆರಿಯರ್ ಚೆನ್ನಾಗಿರಲಿ ಎಂದು ಹಾರೈಸೋಣ.