ಪುನೀತ್ ಹಾಗೂ ಯುವ ರಾಜ್ ಕುಮಾರ್ ಬಹಳ ಕನಸು ಕಂಡು ಶುರು ಮಾಡಿದ್ದ ಸಂಸ್ಥೆಯಲ್ಲಿ ಇಂದು ಐಎಎಸ್ ಪಾಸ್ ಆದವರು ಎಷ್ಟು ಜನ ಗೊತ್ತಾ.. ಶಾಕ್ ಆದ ಇತರ ಸಂಸ್ಥೆಗಳು..

ಈಗಿನ ಕಾಲದಲ್ಲಿ ಎಲ್ಲಿ ನೋಡಿದರು ಯಾವ ಕ್ಷೇತ್ರದಲ್ಲಿ ನೋಡಿದರು ತುಂಬಾ ಗಟ್ಟಿಯಾದ ಸ್ಪರ್ಧೆ ಇದೆ. ಇನ್ನು ವಿದ್ಯಾಭ್ಯಾಸದಲ್ಲಂತೂ ಒಬ್ಬರಿಗಿಂತ ಇನ್ನೊಬ್ಬರು ಕಠಿಣ ಸ್ಪರ್ಧೆ ನೀಡುತ್ತಾರೆ. ಕೆಲವು ವಿದ್ಯಾರ್ಥಿಗಳಿಗೆ ಓದಿನಲ್ಲಿ ತುಂಬಾ ಆಸಕ್ತಿ ಇರುತ್ತದೆ ಆದರೆ ಅವರ ಮನೆಯಲ್ಲಿ ಅವರನ್ನು ಓದಿಸಲು ಸಾಧ್ಯವಾಗುವುದಿಲ್ಲ. ಇನ್ನು ಕೆಲ ವಿದ್ಯಾರ್ಥಿಗಳು ಸಿವಿಲ್ ಸರ್ವಿಸ್ ಎಕ್ಸಾಮ್ಸ್ ಗಳನ್ನು ಬರೆಯಬೇಕು ಎಂದು ತುಂಬಾ ಆಸೆ ಇಟ್ಟುಕೊಂಡಿರುತ್ತಾರೆ, ಆದರೆ ಅದರ ಕೋಚಿಂಗ್ ಗೆ ಬೇಕಾದ ಹಣ ಪಾವತಿಸಲು ಆಗದೆ ಅದೆಷ್ಟೋ ಜನ ತಮ್ಮ ಕನಸ್ಸುಗಳನ್ನು ಕನಸಾಗಿಯೇ ಬಿಟ್ಟುಬಿಡುತ್ತಾರೆ. ಈ ರೀತಿಯ ವಿದ್ಯಾರ್ಥಿಗಳ ನೆರವಿಗೆ ಬಂದವರು ನಮ್ಮ ದೊಡ್ಮನೆ ಕುಟುಂಬ.

ಯು ಪಿ ಎಸ್ ಸಿ ಸಿವಿಲ್ ಸರ್ವೀಸ್ ಪರೀಕ್ಷೆ ದೇಶದ ಕಠಿಣ ಪರೀಕ್ಷೆಗಳಲ್ಲಿ ಒಂದು, ಈ ಪರೀಕ್ಷೆಗಾಗಿ ವರ್ಷಕ್ಕೆ ಸಾವಿರಾರು ಮಕ್ಕಳು ಅರ್ಜಿಯನ್ನು ಸಲ್ಲಿಸುತ್ತಾರೆ. ಆದರೆ ಈ ಪರೀಕ್ಷೆಯಲ್ಲಿ ಗೆದ್ದು ಬರುವುದು ಕೇವಲ ಕೆಲವರು ಮಾತ್ರ. ಏಕೆಂದರೆ ಅಷ್ಟರ ಮಟ್ಟಿಗೆ ಕಠಿಣವಾಗಿರುತ್ತದೆ ಈ ಪರೀಕ್ಷೆ. ವರ್ಷಗಳು ಕಷ್ಟ ಪಟ್ಟು ಓದಿದರು ಕೂಡ ಕೆಲವರಿಗೆ ಈ ಪರೀಕ್ಷೆಯನ್ನು ಸಂಪೂರ್ಣ ಮಾಡಲು ಕಷ್ಟ. ಈ ಪರೀಕ್ಷೆಗೆ ಕೋಚಿಂಗ್ ಬಹಳ ಅಗತ್ಯ. ಕೆಲ ಬಡ ಮಕ್ಕಳಿಗೆ ಈ ಕೋಚಿಂಗ್ ಹಣ ಪಾವತಿಸುವ ತುಂಬಾ ಕಷ್ಟ.

ಇಂತಹವರ ನೆರವಿಗೆ ದೊಡ್ಮನೆ ಕುಟುಂಬ ಸದಾ ಇರುತ್ತದೆ. ರಾಜ್ ಕುಮಾರ್ ಅಕಾಡೆಮಿಯ ಮೂಲಕ ಬಡ ಮಕ್ಕಳಿಗೆ ಉಚಿತವಾದ ತರಬೇತಿ ನೀಡಲಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಡಾ. ರಾಜ್ ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿಯಲ್ಲಿ ಬದ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಿವಿಲ್ ಸರ್ವೀಸ್ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಈ ಅಕಾಡೆಮಿಯ ವಿದ್ಯಾರ್ಥಿಗಳು ಯು ಪಿ ಎಸ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದಿದ್ದಾರೆ. ಈ ಸಂಸ್ಥೆ ಪಾರ್ವತಮ್ಮನವರ ಕನಸಿನ ಕೂಸಾಗಿತ್ತು.. ಇದನ್ನು ನನಸು ಮಾಡಿದವರು ಯುವ ರಾಜ್ ಕುಮಾರ್.. ಯುವನಿಗೆ ಬೆಂಬಲವಾಗಿ ನಿಂತದ್ದು ಮತ್ಯಾರೂ ಅಲ್ಲ ನಮ್ಮ ಅಪ್ಪು..

2021 ರ ಯು ಪಿ ಎಸ್ ಸಿ ಪರೀಕ್ಷೆಯ ಫಲಿತಾಂಶವನ್ನು ಮೇ 30 ರಂದು ಪ್ರಕಟಿಸಲಾಗಿತ್ತು. ಈ ಪರೀಕ್ಷೆಯಲ್ಲಿ ನಮ್ಮ ಕರ್ನಾಟಕ ರಾಜ್ಯದಿಂದ 27 ಮಂದಿ ತೇರ್ಗಡೆಯಾಗಿದ್ದರು. ಈ 27 ಮಂದಿಯಲ್ಲಿ 8 ಮಂದಿ ನಮ್ಮ ಡಾ. ರಾಜ್ ಕುಮಾರ್ ಅಕಾಡೆಮಿಯ ವಿದ್ಯಾರ್ಥಿಗಲಾಗಿರುವುದು ವಿಶೇಷ.ಬೆನಕಾ ಪ್ರಸಾದ್, ಮೇಘನಾ, ರಾಜೇಶ್ ಪೊನಪ್ಪ, ಪ್ರೀತಿ ಪಂಚಾಲ್, ಪ್ರಶಾಂತ್ ಕುಮಾರ್, ರವಿ ನಂದನ್, ನಿಖಿಲ್ ಬಿ ಪಾಟೀಲ್, ದೀಪಕ್ ಆರ್ ಸೆಟ್ ಈ ವಿದ್ಯಾರ್ಥಿಗಳು ಡಾ ರಾಜ್ ಕುಮಾರ್ ಅವರ ಸಿವಿಲ್ ಸರ್ವಿಸ್ ಅಕಾಡೆಮಿಯಲ್ಲಿ ತರಬೇತಿ ಪಡೆದು ಉತ್ತಮ ಅಂಕಗಳನ್ನು ಗಳಿಸಿದ್ದಾರೆ.

ಸಾವಿರಾರು ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಭಾಗವಹಿಸಿ ಕೇವಲ ಕೆಲವರು ಮಾತ್ರ ಈ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಅದರಲ್ಲಿ 27 ಮಂದಿ ನಮ್ಮ ಕರ್ನಾಟಕ ರಾಜ್ಯದವರು ಎನ್ನುವುದು ಒಂದು ಕಡೆ ಹೆಮ್ಮೆಯಾದರೆ. ಇನ್ನೊಂದು ಕಡೆ 8 ಮಂದಿ ನಮ್ಮ ಡಾ ರಾಜ್ ಕುಮಾರ್ ಅಕಾಡೆಮಿಗೆ ಸೇರಿದವರು ಎನ್ನುವ ಹೆಮ್ಮೆ ಇನ್ನೊಂದು ಕಡೆ. ಇನ್ನು ಈ ಪರೀಕ್ಷೆಯ ಪ್ರಾರ್ಥಮಿಕ ಲಿಸ್ಟ್ ಅನೌನ್ಸ್ ಆಗಿದ್ದು, ತೇರ್ಗಡೆಯಾದವರ ಸಂಪೂರ್ಣ ಲಿಸ್ಟ್ ವೆಬ್ ಸೈಟ್ ನಲ್ಲಿ ಅಪ್ಲೋಡ್ ಆಗಿಲ್ಲ.