ಬೀದಿ ಬದಿಯಲ್ಲಿ ತರಕಾರಿ ಮಾರುತ್ತಿರುವ ಕನ್ನಡದ ಖ್ಯಾತ ನಟಿ..

ಚಿತ್ರರಂಗದಲ್ಲಿ ನಟಿಯರು ಒಂದಲ್ಲ ಒಂದು ವಿಚಾರಗಳಿಂದ ಸುದ್ದಿಯಾಗುತ್ತಲೇ ಇರುತ್ತಾರೆ. ಅವರು ಧರಿಸುವ ಬಟ್ಟೆಗಳು, ಚಪ್ಪಲಿಗಳು, ಶೂಗಳು, ಹಾಟ್ ಫೋಟೋಶೂಟ್ ಗಳು, ಹೀಗೆ ಒಂದಲ್ಲಾ ಒಂದು ವಿಚಾರದಿಂದ ಬಣ್ಣದ ಲೋಕದಲ್ಲಿ ಇರುವವರು ಲೈಮ್ ಲೈಟ್ ನಲ್ಲಿರುತ್ತಾರೆ. ನಟಿಯರು ಹೆಚ್ಚಾಗಿ ಫೋಟೋಗಳ ಮೂಲಕ ಸುದ್ದಿಯಾಗುತ್ತಾರೆ. ಇದೀಗ ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೊಡನೆ ನಟಿಸಿದ್ದ ಬಾಲಿವುಡ್ ಬೆಡಗಿ ಆದಾ ಶರ್ಮಾ, ತರಕಾರಿ ಮಾರುವ ಫೋಟೋ ಇಂದ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ.

ಈ ನಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತರಕಾರಿ ಮಾರುತ್ತಿರುವ ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ, ಇದರಲ್ಲಿ ಹಳೆಯ ಸೀರೆಯೊಂದನ್ನು ಧರಿಸಿ, ಡೀಗ್ಲಾಮರಸ್ ಆಗಿ ಮೇಕಪ್ ಮಾಡಿಕೊಂಡು, ರಸ್ತೆ ಬದಿಯಲ್ಲಿ ಕೂತು ತರಕಾರಿ ಮಾರುತ್ತಿರುವಂಥಹ ಫೋಟೋ ಇದಾಗಿದ್ದು, ನೋಡಿದರೆ ಆಕೆ ಸಿನಿಮಾ ನಟಿ ಎಂದು ಗುರುತು ಹಿಡಿಯಲು ಸಾಧ್ಯವಾಗದ ಹಾಗೆ ಕಾಣುತ್ತಾರೆ ಆದಾ ಶರ್ಮಾ. ಮೊದಲಿಗೆ ಎಲ್ಲರೂ ಈ ಫೋಟೋ ನೋಡಿ ಸಿನಿಮಾ ಚಿತ್ರೀಕರಣದ ಭಾಗವಾಗಿ ಈ ಫೋಟೋ ತೆಗೆದಿರಬಹುದು ಎಂದುಕೊಂಡಿದ್ದರು.

ಆದರೆ ಅದು ಸುಳ್ಳಾಗಿದ್ದು, ಆ ಫೋಟೋ ಜೊತೆಗೆ, ಎಲೆಗಳಲ್ಲಿ ತಮ್ಮ ದೇಹವನ್ನು ಮುಚ್ಚಿಕೊಂಡಿರುವ ಮತ್ತೊಂದು ಫೋಟೋ ಶೇರ್ ಮಾಡಿಕೊಂಡಿದ್ದಾರೆ ಆದಾ ಶರ್ಮಾ. ಆ ಫೋಟೋಗಳಿಗೆ ಕೆಲವು ಸಾಲುಗಳನ್ನು ಸಹ ಬರೆದಿದ್ದಾರೆ. “ತರಕಾರಿಯ ಬೆಲೆ ಹೆಚ್ಚಾಗಿದೆ ಎಂದು ಕೇಳಿದ್ದೀನಿ. ಫ್ಯಾಶನ್ ಎಂದರೆ ಫನ್ ಮಾಡುವುದು ಹಾಗಾಗಿ, ನೀವು ತಿನ್ನುವ ವಸ್ತುವನ್ನು ಸೀರಿಯಸ್ ಆಗಿ ತೆಗೆದುಕೊಳ್ಳಿ..” ಎಂದು ಬರೆದಿರುವ ಆದಾ ಶರ್ಮ, “ನನ್ನ ಫ್ಯಾಶನ್ ಗೆ ಪ್ರಕೃತಿಯೇ ಇನ್ಸ್ಪಿರೇಷನ್..” ಎಂದು ಸಹ ಬರೆದುಕೊಂಡಿದ್ದಾರೆ..

ಆದಾ ಶರ್ಮ ಅವರ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನು ನೋಡಿದ ಅಭಿಮಾನಿಗಳು ತರಾವರಿ ಕಮೆಂಟ್ಸ್ ಗಳನ್ನು ಬರೆದಿದ್ದಾರೆ. ನಟಿ ಆದಾ ಶರ್ಮಾ ಬಾಲಿವುಡ್ ಬ್ಯೂಟಿ, ಇವರು ಮೂಲತಃ ಮುಂಬೈನವರು. ಇವರ ತಂದೆ ಎಸ್.ಎಲ್.ಶರ್ಮಾ ಅವರು ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದರು, ತಾಯಿ ಡ್ಯಾನ್ಸರ್ ಆಗಿದ್ದರು. ಹಾಗಾಗಿ ಆದಾ ಶರ್ಮ ಅವರಿಗೆ ಬಣ್ಣದ ಪ್ರಪಂಚದ ಕಡೆಗೆ ಒಲವು ಇತ್ತು. ಬಹಳ ಬೇಗ 16 ವರ್ಷಕ್ಕೆ ನಟನೆಯ ಲೋಕಕ್ಕೆ ಎಂಟ್ರಿ ಕೊಟ್ಟರು ಆದಾ ಶರ್ಮಾ.

1920 ಎನ್ನುವ ಹಾರರ್ ಸಿನಿಮಾ ಮೂಲಕ ಇವರು ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು. ಬಳಿಕ ಹಲವು ಹಿಂದಿ ಸಿನಿಮಾಗಳಲ್ಲಿ ನಟಿಸಿದರು. ಕನ್ನಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ರಣವಿಕ್ರಮ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಆದಾ ಶರ್ಮ ಅವರು ಅಪ್ಪು ಅವರೊಡನೆ ನಟಿಸಿ ಒಳ್ಳೆಯ ಹೆಸರು ಪಡೆದುಕೊಂಡಿದ್ದರು. ತೆಲುಗಿನಲ್ಲಿ ನಟ ಅಲ್ಲು ಅರ್ಜುನ್ ಅವರೊಡನೆ ಸನ್ ಆಫ್ ಸತ್ಯಮೂರ್ತಿ ಸಿನಿಮಾದಲ್ಲಿ ನಟಿಸಿ, ಸೌತ್ ನಲ್ಲಿ ಸಹ ಗುರುತಿಸಿಕೊಂಡಿದ್ದರು. ಪ್ರಸ್ತುತ ಬಾಲಿವುಡ್ ನಲ್ಲಿ ಬ್ಯುಸಿ ಇರುವ ಇವರ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ.