ಮಗುವಿನ ಫೋಟೋ ಜೊತೆಗೆ ನೋವು ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್.. ನಿಜಕ್ಕೂ ಮನಕಲಕುತ್ತದೆ..

ಪ್ರಿಯಾಂಕ ಚೋಪ್ರಾ ಹಾಗೂ ನಿಕ್ ಜೋಡಿ ಮದುವೆಯ ವಿಚಾರದಿಂದಲೂ ಆಗಾಗ ಸುದ್ದಿಯಾಗುತ್ತಲೇ ಇದ್ದರು.. ಅತಿಯಾದ ವಯಸ್ಸಿನ ಅಂತರವಿದ್ದರೂ ಸಹ ಅನ್ಯೂನ್ಯವಾಗಿ ಜೀವನ ಸಾಗಿಸುತ್ತಿರುವ ಜೋಡಿಗೆ ಅಭಿಮಾನಿಗಳು ಶುಭ ಹಾರೈಸಿದ್ದೂ ಉಂಟು.. ಇನ್ನು ಪ್ರಿಯಾಂಕ ಹಾಗೂ ನಿಕ್ ಜೋಡಿ ಆಗಾಗ ಸಾಮಾಜಿಕ ಜಾಲತಾಣದಲ್ಲಿ ತಮ್ಮಿಬ್ಬರ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದದ್ದು ಹೊಸ ವಿಚಾರವೇನೂ ಅಲ್ಲ.. ಆ ಫೋಟೋಗಳು ವೈರಲ್ ಸಹ ಆಗುತ್ತಿದ್ದವು.. ಆದರೆ ಇಂದು ಪ್ರಿಯಾಂಕ ಹಾಗೂ ನಿಕ್ ಜೋಡಿ ಹಂಚಿಕೊಂಡಿರುವ ಫೋಟೋ ನಿಜಕ್ಕೂ ಭಾವುಕರನ್ನಾಗಿಸುತ್ತದೆ..

ಹೌದು ಇಂತಹ ಸುಂದರ ಜೋಡಿಯ ಜೀವನದಲ್ಲಿ‌ ಸಂತೋಷದ ಜೊತೆಗೇ ಅಷ್ಟೇ ನೋವಿನ ದಿನಗಳನ್ನೂ ಸಹ ಕಳೆಯುವಂತಾಗಿ ಹೋಯ್ತು.. ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಕಳೆದ ಜನವರಿಯಲ್ಲಿ ಬಾಡಿಗೆ ತಾಯ್ತನದ ಮೂಲಕ ಹೆಣ್ಣು ಮಗುವಿಗೆ ಪೋಷಕರಾಗಿದ್ದರು.. ಆ ಸಮಯದಲ್ಲಿ ಪ್ರಿಯಾಂಕಾ ತನ್ನ ಮಗಳ ಬಗ್ಗೆ ಹೇಳಿಕೊಂಡಿದ್ದು ಬಿಟ್ಟರೇ ಬೇರೆ ಯಾವುದೇ ವಿಷಯ, ಫೋಟೋಗಳನ್ನು ಅವರು ಶೇರ್ ಮಾಡಿರಲಿಲ್ಲ.. ಕಾರಣ ಆ ಕಂದ ಅವಧಿಕೂ ಮುನ ಹುಟ್ಟಿದ ಮಗುವಾಗಿದ್ದು ಆ ಮಗುವನ್ನು ಉಳಿಸಿಕೊಳ್ಳಲು ನಿಕ್ ಹಾಗೂ ಪ್ರಿಯಾಂಕ ಬಹಳ ಕಷ್ಟದ ದಿನಗಳನ್ನು ಎದುರಿಸಿದ್ದರು.. ಸಾಕಷ್ಟು ಕಣ್ಣೀರು ಹಾಕಿದ್ದರು.. ಬಹಳ ನಿರೀಕ್ಷೆ ಇಂದ ಮಗುವಿಗಾಗಿ ಕಾದಿದ್ದ ಜೋಡಿಗೆ ಮಗು ಅವಧಿಗೂ ಮುನ್ನ ಹುಟ್ಟಿ ಉಳಿಯುವುದೇ ಸಂಶಯ ಎನ್ನುವಂತಾಗಿತ್ತು..

ಆದರೆ ಮಗಳನ್ನು ಉಳಿಸಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನ ಮಾಡಿದ ಪ್ರಿಯಾಂಕ ಅವರೀಗ ತಮ್ಮ ಕಂದನನ್ನು ಮನೆಗೆ ಕರೆದುಕೊಂಡು ಬರುವಂತಾಗಿದೆ.. ಭಾನುವಾರ ತಾಯಂದಿರ ದಿನವಾದ ಹಿನ್ನೆಲೆ ಮೊದಲ ಬಾರಿಗೆ ತನ್ನ ಮುದ್ದು ಮಗಳ ಫೋಟೋ ಜೊತೆಗೆ ತಮ್ಮ ನೋವಿನ ದಿನಗಳ ಬಗ್ಗೆ ಹಂಚಿಕೊಂಡಿದ್ದಾರೆ.. ಹೌದು ಮೊದಲಿಗೆ ನಿಕ್ ಈ ಬಗ್ಗೆ ಫೋಟೋ ಶೇರ್ ಮಾಡಿಕೊಂಡಿದ್ದು.. ಮಗಳು ಮಾಲ್ಟಿ ಮೇರಿ ಮತ್ತು ಪತ್ನಿ ಪ್ರಿಯಾಂಕಾ ಚೋಪ್ರಾ ಫೋಟೋ ಶೇರ್ ಮಾಡಿದ್ದು ಮಗಳ ಬಗ್ಗೆ ಭಾವುಕರಾಗಿದ್ದಾರೆ..

“ವಿಶ್ವದ ಅದ್ಭುತ ತಾಯಂದಿರಿಗೆ ಮತ್ತು ಎಲ್ಲರನ್ನು ಪ್ರೀತಿಯಿಂದ ಆರೈಕೆ ಮಾಡುವವರಿಗೆ ತಾಯಂದಿರ ದಿನದ ಶುಭಾಶಯಗಳು. ಆದರೆ ನನ್ನ ಅದ್ಭುತ ಪತ್ನಿ ಪ್ರಿಯಾಂಕಾ ಚೋಪ್ರಾ ಅವರ ಮೊದಲ ತಾಯಂದಿರ ದಿನವಾಗಿರುವುದರಿಂದ ಅವರಿಗೆ ವಿಶೇಷ ತಾಯಂದಿರ ದಿನದ ಶುಭಾಶಯ ಹೇಳುವ ಮುನ್ನ ಆಕೆಯ ಬಗ್ಗೆ ಸ್ವಲ್ಪ ಹೇಳಿಕೊಳ್ಳಬೇಕು.. ನೀವು ನನಗೆ ಎಲ್ಲ ರೀತಿಯಲ್ಲೂ ಸ್ಫೂರ್ತಿ ನೀಡುತ್ತೀರಿ. ನೀವು ಈ ಹೊಸ ರೂಲ್ ತುಂಬಾ ಸುಲಭವಾಗಿ ನಿಭಾಯಿಸುತ್ತಿದ್ದೀರ. ನಿಮ್ಮೊಂದಿಗೆ ಈ ಪ್ರಯಾಣದಲ್ಲಿರುವುದಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ನೀವು ಈಗಾಗಲೇ ನಂಬಲಾಗದ ತಾಯಿಯಾಗಿದ್ದೀರಿ.

ತಾಯಂದಿರ ದಿನದ ಶುಭಾಶಯಗಳು. ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಕಮೆಂಟ್ ಮೂಲಕ ಪ್ರತಿಕ್ರಿಯೆ ‌ಈಡಿರುವ ಪ್ರಿಯಾಂಕಾ ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದಿದ್ದಾರೆ.. ಇನ್ನು ಈ ಬಗ್ಗೆ ಪ್ರಿಯಾಂಕ ಚೋಪ್ರಾ ಕೂಡ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು.. ಫೋಟೋ ಶೇರ್ ಮಾಡಿದ್ದು, ಈ ತಾಯಂದಿರ ದಿನದಂದು ನಾವು ಕಳೆದ ಕೆಲವು ತಿಂಗಳುಗಳಿಂದ ಅನುಭವಿಸುತ್ತಿರುವ ಪ್ರಯಾಣವನ್ನು ತಿಳಿಸಲು ಮಾತುಗಳೇ ಬರುತ್ತಿಲ್ಲ. ಈ ವೇಳೆ ನಮಗೆ ಅನೇಕರು ಸಹಾಯ ಮಾಡಿದ್ದಾರೆ.

ನಮ್ಮ ಪುಟ್ಟ ಹುಡುಗಿ ಅಂತಿಮವಾಗಿ ಮನೆಗೆ ಬಂದಿದ್ದಾಳೆ. ಇದರಿಂದ ನಮ್ಮ ಕುಟುಂಬದ ಪ್ರಯಾಣವು ವಿಶಿಷ್ಟವಾಗಿದೆ. ಹಲವು ತಿಂಗಳಿಂದ ನಾವು ಅನುಭವಿಸುತ್ತಿರುವ ಪ್ರತಿ ಕ್ಷಣವೂ ಅಮೂಲ್ಯ ಮತ್ತು ಪರಿಪೂರ್ಣವಾಗಿದೆ.. ನಮ್ಮ ಈ ಪುಟ್ಟ ಕಂದ ಕೊನೆಗೂ ಮನೆಗೆ ಬಂದಿರುವುದಕ್ಕೆ ತುಂಬಾ ಸಂತೋಷವಾಗಿದೆ. ಪ್ರತಿ ಹೆಜ್ಜೆಯಲ್ಲೂ ನಿಸ್ವಾರ್ಥವಾಗಿದ್ದ ರಾಡಿ ಚಿಲ್ಡ್ರನ್ಸ್ ಲಾ ಜೊಲ್ಲಾ ಮತ್ತು ಲಾಸ್ ಏಂಜಲೀಸ್‌ನ ಸೀಡರ್ ಸಿನಾಯ್ನಲ್ಲಿರುವ ಪ್ರತಿಯೊಬ್ಬ ವೈದ್ಯರು, ನರ್ಸ್ ಮತ್ತು ತಜ್ಞರಿಗೆ ಧನ್ಯವಾದ ಹೇಳಲು ಬಯಸುತ್ತೇವೆ. ನಮ್ಮ ಮುಂದಿನ ಅಧ್ಯಾಯ ಈಗ ಪ್ರಾರಂಭವಾಗುತ್ತದೆ. ಮಮ್ಮಿ ಮತ್ತು ಡ್ಯಾಡಿ ನಿನ್ನನ್ನು ಪ್ರೀತಿಸುತ್ತಾರೆ.. ಎಂದು ಬರೆದುಕೊಂಡಿದ್ದು ಅಭಿಮಾನಿಗಳು ಮಗುವಿಗೆ ಹಾರೈಸಿದ್ದಾರೆ..