ಇನ್ಸ್ಟಾಗ್ರಾಂ ನಲ್ಲಿ ವೀಡಿಯೋ ಹಾಕುತ್ತಿದ್ದ ಈ ಮಹಿಳಾ ಕಾನ್ಸ್ಟೆಬಲ್ ಸ್ಥಿತಿ ಏನಾಗಿದೆ ನೋಡಿ.. ಶಾಕ್ ಆದ ಯುವತಿ..

ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಮಾಡುವುದು ಕೆಲವೊಬ್ಬರಿಗೆ ಹವ್ಯಾಸವಾದರೆ ಕೆಲವೊಬ್ಬರಿಗೆ ಅದೇ ಅಭ್ಯಾಸವಾಗಿ ಬಿಟ್ಟಿರುತ್ತದೆ.. ವೀಡಿಯೋ ಗಳು ಇನ್ಸ್ಟಾಗ್ರಾಂ ರೀಲ್ಸ್ ಗಳನ್ನು ಮಾಡುವ ಮೂಲಕವೇ ಅನೇಕರು ಫೇಮಸ್ ಆಗಿ ಬಿಡುತ್ತಾರೆ.. ಕೆಲವರು ಇದರಿಂದ ಜೀವನ ಕಟ್ಟಿಕೊಂಡದ್ದೂ ಇದೆ.. ಇನ್ನೂ ಕೆಲವರು ಹೋಗಬಾರದ ಜಾಗಕ್ಕೆ ಹೋಗಿ ನಿಲ್ಲಬಾರದ ಜಾಗದಲ್ಲಿ ನಿಂತು ರೀಲ್ಸ್ ಮಾಡಲು ಹೋಗಿ ಜೀವ ಕಳೆದುಕೊಂಡದ್ದೂ ಇದೆ..

ಇನ್ನು ಈ ರೀಲ್ಸ್ ಮಾಡುವ ಅಭ್ಯಾಸ ಸಾಮಾನ್ಯರಿಂದ ಹಿಡಿದು ಸ್ಟಾರ್ ಗಳಿಗೂ ಇದೆ ಎನ್ನಬಹುದು.. ಆದರೆ ಮಹಿಳಾ ಕಾನ್ಸ್ಟೆಬಲ್ ಒಬ್ಬರು ಮಾಡಿದ ರೀಲ್ಸ್ ನಿಂದಾಗಿ ಮುಂದೆ ಆದದ್ದು ಮಾತ್ರ ಅವರು ಊಹಿಸಿರಲು ಅಸಾಧ್ಯವಾದದ್ದು‌.. ಹೌದು ಈಕೆಯ ಹೆಸರು ಪ್ರಿಯಾಂಕ ಮಿಶ್ರಾ.. ಇನ್ಸ್ಟಾಗ್ರಾಂ ನಲ್ಲಿ ಸದಾ ಅಕ್ಟೀವ್ ಇರುತ್ತಿದ್ದ ಇವರು ಪೊಲೀಸ್ ಕಾನ್ಸ್ಟೆಬಲ್ ಆಗಿದ್ದರು.. ಆಗ್ರಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.. ಇವರು ಆಗಾಗ ಇನ್ಸ್ಟಾಗ್ರಾಂ ನಲ್ಲಿ ವೀಡಿಯೋಗಳನ್ನು ಹಾಕುತ್ತಿದ್ದರು.‌ ಜನರಿಂದ ಒಳ್ಳೆಯ ಪ್ರತಿಕ್ರಿಯೆ ಕೂಡ ಬರತೊಡಗಿತು.. ಹವ್ಯಾಸ ಹೋಗಿ ಅಭ್ಯಾಸವಾಯಿತು.. ಪದೇ ಪದೇ ವೀಡಿಯೋ ಮಾಡುವಲ್ಲಿಯೇ ಸಮಯ ಕಳೆಯುತ್ತಿದ್ದರು.. ಜೊತೆಗೆ ಪೊಲೀಸ್ ಸಮವಸ್ತ್ರದಲ್ಲಿಯೇ ಸಾಕಷ್ಟು ವೀಡಿಯೋಗಳನ್ನು ಮಾಡಿದ್ದರು.. ಸಾಕಷ್ಟು ಫಾಲೋವರ್ಸ್ ಗಳನ್ನು ಹೊಂದಿದ್ದರು..

ಕೊನೆಗೊಂದು ದಿನ ಉತ್ತರ ಪ್ರದೇಶದಲ್ಲಿ ಐದು ವರ್ಷದ ಮಕ್ಕಳು ಸಹ ಗನ್ನಿಡಿದುಕೊಳ್ಳುತ್ತಾರೆ ಎಂಬ ವೀಡಿಯೋವನ್ನು ನಿಜವಾದ ಗನ್ನಿಡಿದುಕೊಂಡೇ ಪೊಲೀಸ್ ಸಮವಸ್ತ್ರದಲ್ಲಿಯೇ ವೀಡಿಯೋ ಮಾಡಿ ಹಾಕಿದ್ದರು.. ಈ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿ ಹೋಯಿತು.. ರಾಷ್ಟ್ರ ಮಟ್ಟದಲ್ಲಿ ಈ ವಿಚಾರ ಚರ್ಚೆಯಾಗಿತ್ತು..

ಇದರಿಂದ ಎಚ್ಚೆತ್ತ ಉತ್ತರ ಪ್ರದೇಶದ ಪೊಲೀಸ್ ಇಲಾಖೆ ಪ್ರಿಯಾಂಕರನ್ನು ಅಮಾನತ್ತು ಮಾಡಿತ್ತು.. ಅಮಾನತಾದ ಬಳಿಕವೂ ಸಾಲು ಸಾಲು ವೀಡಿಯೋಗಳನ್ನು ಮಾಡಿ ಹಾಕುತ್ತಿದ್ದ ಪ್ರಿಯಾಂಕ ತಾನೇ ಪೊಲೀಸ್ ಕೆಲಸಕ್ಕೆ ರಾಜಿನಾಮೆ ನೀಡಿದಳು.. ಕೊನೆಗೆ ಆಕೆಯ ಪೊಲೀಸ್ ತರಬೇತಿಗಾಗಿ ಖರ್ಚು ಮಾಡಿದ್ದ ಒಂದೂವರೆ ಲಕ್ಷ ರೂಪಾಯಿ ಹಣವನ್ನು ವಾಪಸ್ ನೀಡುವಂತೆ ಇಲಾಖೆ ತಿಳಿಸಿತು.. ಕೊನೆಗೆ ಪ್ರಿಯಾಂಕ ವಿಧಿಯಿಲ್ಲದೇ ಆ ಹಣವನ್ನು ಹಿಂತಿರುಗಿಸಿ ಮನೆಗೆ ನಡೆದಳು..

ಆದರೆ ಇದೀಗ ಆಕೆಯ ಬದುಕು ಬದಲಾಗಿದೆ.. ಹೌದು ಕೆಲಸ ಹೋದರು ಪ್ರಿಯಾಂಕಗೆ ವೆಬ್ ಸೀರಿಸ್ ಹಾಗೂ ಕೆಲ ಮಾಡೆಲಿಂಗ್ ನ ಅವಕಾಶಗಳು ಒದಗಿ ಬಂದಿದೆ.. ಆದರೆ ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರಿಯಾಂಕ ಕೆಲಸ ಬಿಟ್ಟಿದ್ದಕ್ಕೆ ಪಶ್ಚಾತ್ತಾಪ ಪಡುತ್ತಿರುವುದಾಗಿ ತಿಳಿಸಿದ್ದಾರೆ.. ಹೌದು ಇನ್ಸ್ಟಾಗ್ರಾಂ ರೀಲ್ಸ್ ಮಾಡುವಾಗ ಕೆಲವೊಂದು ಟ್ರೋಲ್ ಆದವು ಅದು ಮನಸ್ಸಿಗೆ ನೋವನ್ನುಂಟು ಮಾಡುತ್ತಿತ್ತು.. ಅದರಲ್ಲೂ ಆ ವೀಡಿಯೋ ಆದ ಬಳಿಕ ನನ್ನನ್ನು ಬಹಳ ಟೀಕೆ ಮಾಡಿದರು.. ಅದನ್ನು ನೋಡಿ ನಾನೇ ವಿ ಆರ್ ಎಸ್ ತೆಗೆದುಕೊಳ್ಳಲು ಪ್ರಯತ್ನ ಪಟ್ಟೆ.. ಆದರೆ ಅದು ಸಾಧ್ಯವಾಗಲಿಲ್ಲ.. ಕೊನೆಗೆ ರಾಜಿನಾಮೆ ನೀಡಬೇಕಾಯಿತು.. ಆದರೆ ಈಗ ರಾಜಿನಾಮೆ ಕೊಡಬಾರದಿತ್ತು ಎಂದು ಅನಿಸಿತ್ತು.. ಬೇಸರವಾಯಿತು ಎಂದಿದ್ದಾರೆ..

ಅಷ್ಟೇ ಅಲ್ಲದೇ ಈಗ ಬೇರೆ ಬೇರೆ ಅವಕಾಶಗಳು ಬರುತ್ತಿವೆ ನಿಜ.. ಆದರೆ ನಾನು ಯಾವುದಕ್ಕೂ ಇನ್ನೂ ಸಹ ಒಪ್ಪಿಕೊಂಡಿಲ್ಲ.. ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕು ಎಂದಿದ್ದಾರೆ.. ಒಟ್ಟಿನಲ್ಲಿ ಇನ್ಸ್ಟಾಗ್ರಾಂ ರೀಲ್ಸ್ ನ ಆಸೆಯಿಂದ ಕಷ್ಟ ಪಟ್ಟು ಪಡೆದುಕೊಂಡಿದ್ದ ಸರ್ಕಾರಿ ನೌಕರಿಯೂ ಹೋಯಿತು.. ಒಂದೂವರೆ ಲಕ್ಷ ರೂಪಾಯಿಯೂ ಹೋಯಿತು.. ಒಟ್ಟಿನಲ್ಲಿ ಈಗ ಏನು ಮಾಡುವುದು ಎನ್ನುವ ಚಿಂತೆಯಲ್ಲಿ ಪ್ರಿಯಾಂಕ ಇರೋದಂತೂ ಸತ್ಯ..