ಕಿರುತೆರೆಗೆ ಕಾಲಿಟ್ಟ ಕನ್ನಡದ ಸ್ಟಾರ್ ನಟನ ಪತ್ನಿ..

ಕಿರುತೆರೆಯಲ್ಲಿ ಒಂದಾದ ಮೇಲೆ ಒಂದು ಹೊಸ ಧಾರಾವಾಹಿಗಳು ಶುರುವಾಗುತ್ತಿದೆ. ಕೆಲವು ಧಾರಾವಾಹಿಗಳು ವೀಕ್ಷಕರ ಮನಸ್ಸಿನಲ್ಲಿ ಸದಾ ಉಳಿದುಬಿಡುತ್ತದೆ. ಇನ್ನು ಕೆಲವು ಧಾರಾವಾಹಿಗಳ ಕಥೆ ವೀಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗದೆ ಅರ್ಧಕ್ಕೆ ನಿಂತು ಹೋಗುತ್ತದೆ. ಒಂದು ಧಾರವಾಹಿ ಕೊನೆಯಾದರೆ ಮತ್ತೊಂದು ಹೊಸ ಧಾರವಾಹಿ ಅದರ ಜಾಗಕ್ಕೆ ಬರುತ್ತದೆ. ಇದೀಗ ಸ್ಟಾರ್ ಸುವರ್ಣ ವಾಹಿನಿ ತನ್ನ ವೀಕ್ಷಕರನ್ನು ರಂಜಿಸಲು ಮತ್ತೊಂದು ಹೊಸ ಧಾರವಾಹಿಯನ್ನು ತಂದಿದೆ. ಈ ಧಾರವಾಹಿತ ವಿಶೇಷತೆ ಏನು ಎಂದರೆ ಈ ಧಾರಾವಾಹಿಯಲ್ಲಿ ನಟಿ ಹಾಗೂ ಸ್ಟಾರ್ ನಟನ ಪತ್ನಿ ಕಾಣಿಸಿಕೊಂಡಿದ್ದಾರೆ. ಹಾಗಾದರೆ ಯಾರು ಈ ನಟಿ ಎನ್ನುವ ಬಗ್ಗೆ ಸಂಪೂರ್ಣವಾಗಿ ತಿಳಿಸುತ್ತೆವೆ ಬನ್ನಿ…

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಒಂದು ಹೊಸ ಧಾರವಾಹಿ ಪ್ರಸಾರವಾಗುತ್ತಿದೆ, ಈ ಧಾರಾವಾಹಿಯ ಹೆಸರು ಅರ್ಧಾಂಗಿ. ಈ ಧಾರವಾಹಿ ಮೇ 23 ರಿಂದ ಸೋಮವಾರದಿಂದ ಶನಿವಾರ ರಾತ್ರಿ 7 ಕ್ಕೆ ಪ್ರಸಾರವಾಗಲಿದೆ. ಈ ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ಅಂಜನಾ ದೇಶಪಾಂಡೆ, ಹಾಗೂ ನಾಯಕ ನಟನಾಗಿ ಪೃಥ್ವಿ ಕಾಣಿಸಿಕೊಂಡಿದ್ದಾರೆ. ಅಮಾಯಕ ಬುದ್ದಿಬ್ರಷ್ಟ ಗಂಡನನ್ನು ತಾಯಿಯಂತೆ ನೋಡಿಕೊಳ್ಳುವ ಹೆಂಡತಿ, ಈ ಇಬ್ಬರ ನಡುವೆ ಈ ಅರ್ಧಾಂಗಿ ಧಾರಾವಾಹಿಯ ಕಥೆ ಸಾಗಲಿದೆ. ಇನ್ನು ಈ ಧಾರಾವಾಹಿಯಲ್ಲಿ ಸ್ಯಾಂಡಲ್ ವುಡ್ ನಟಿ ಪ್ರಿಯಾಂಕ ಉಪೇಂದ್ರ ಅವರು ಕಾಣಿಸಿಕೊಂಡಿದ್ದಾರೆ. ಹೌದು ಕೆಲವು ದಿನಗಳ ಹಿಂದೆ ಬಿಡುಗಡೆಯಾದ ಧಾರಾವಾಹಿಯ ಪ್ರೊಮೋದಲ್ಲಿ ನಟಿ ಪ್ರಿಯಾಂಕ ಉಪೇಂದ್ರ ಕಾಣಿಸಿಕೊಂಡಿದ್ದಾರೆ.

ಸ್ಯಾಂಡಲ್ವುಡ್ ನಟಿ ಪ್ರಿಯಾಂಕ ಉಪೇಂದ್ರ ಇದೀಗ ಕಿರುತೆರೆಗೂ ಎಂಟ್ರಿ ನೀಡಿದ್ದಾರೆ ಎನ್ನಲಾಗುತ್ತಿದೆ. ಸ್ಟಾರ್ ಸುವರ್ಣ ವಾಹಿನಿಯ ಅರ್ಧಾಂಗಿ ಧಾರಾವಾಹಿಯ ಪ್ರೊಮೋದಲ್ಲಿ ಪ್ರಿಯಾಂಕ ಉಪೇಂದ್ರ ಅವರನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಇದೇನು ಪ್ರಿಯಾಂಕ ಕಿರುತೆರೆಗೆ ಎಂಟ್ರಿ ಕೊಟ್ರಾ? ಈ ಧಾರಾವಾಹಿಯಲ್ಲಿ ಅವರ ಪಾತ್ರ ಏನು ಎನ್ನುವ ಸಾಕಷ್ಟು ಪ್ರಶ್ನೆಗಳು ಅಭಿಮಾನಿಗಳಲ್ಲಿ ಕಾಡುತ್ತಿತ್ತು. ಈ ಎಲ್ಲದಕ್ಕೂ ಇದೀಗ ಉತ್ತರ ಸಿಕ್ಕಿದೆ. ನಟಿ ಈ ಧಾರಾವಾಹಿಯಲ್ಲಿ ಕಾಣಿಸಿಕೊಂಡಿರುವುದು ನಿಜ ಆದರೆ ನಟಿ ಪ್ರಿಯಾಂಕ ಅವರು ಈ ಧಾರಾವಾಹಿಯಲ್ಲಿ ನಟಿಸುತ್ತಿಲ್ಲ. ಬದಲಿಗೆ ಪ್ರಿಯಾಂಕ ಉಪೇಂದ್ರ ಅವರು ಈ ಧಾರಾವಾಹಿಯ ರಾಯಭಾರಿಯಾಗಿ ಕಾಣಿಸಿಕೊಂಡಿದ್ದಾರೆ.

ಇನ್ನು ಈ ಧಾರಾವಾಹಿಯ ಬಗ್ಗೆ ಮಾತನಾಡಿದ ನಟಿ ಪ್ರಿಯಾಂಕ ಉಪೇಂದ್ರ ಅವರು, ಈ ಧಾರವಾಹಿ ನನ್ನ ಮನಸ್ಸಿಗೆ ತುಂಬಾ ಹತ್ತಿರವಾಗಿದೆ. ಈ ಧಾರಾವಾಹಿಯ ದಿಗಂತ್ ಹಾಗೂ ಅಧಿತಿಯ ಪಾತ್ರ ತುಂಬಾ ಸವಾಲುಗಳಿಂದ ಕೂಡಿದೆ. ನಾನು ಸಹ ಒಬ್ಬಳು ಅರ್ಧಾಂಗಿ, ನಾನು ಸಹ ನನ್ನ ಜೀವನದಲ್ಲಿ ತುಂಬಾ ಸವಾಲುಗಳನ್ನು ಎದುರಿಸಿದ್ದೇನೆ. ಕೋಲ್ಕತಾ ಮೂಲದವಳಾದ ನಾನು ಕರ್ನಾಟಕದ ಸೊಸೆಯಾಗಿ ಬಂದಾಗ ನನಗೆ ತುಂಬಾ ಕಷ್ಟವಾಗುತ್ತಿತ್ತು. ನಾನು ಕನ್ನಡ ಕಲಿತು, ಇಲ್ಲಿನ ಸಂಸ್ಕೃತಿ, ಸಾಂಪ್ರದಾಯವನ್ನು ಅಳವಡಿಸಿಕೊಳ್ಳಲು ನನಗೆ ತುಂಬಾ ಕಷ್ಟವಾಗುತ್ತಿತ್ತು. ಆ ವೇಳೆ ನನ್ನ ಪತಿ ಹಾಗೂ ನನ್ನ ಅತ್ತೆ ಮಾವನ ಬೆಂಬಲ ನನಗೆ ಸದಾ ಇತ್ತು ಎಂದಿದ್ದಾರೆ.

ಇನ್ನು ಈ ಧಾರಾವಾಹಿಯ ಬಗ್ಗೆ ಹೇಳುವುದಾದರೆ, ಈ ಧಾರವಾಹಿ ತಂಡ ಈ ಧಾರವಾಹಿಗಾಗಿ ತುಂಬಾ ಕಷ್ಟ ಪಟ್ಟಿದೆ. ಈ ಧಾರವಾಹಿ ತುಂಬಾ ಜನರಿಗೆ ಸ್ಫೂರ್ತಿ ನೀಡಲಿದೆ. ಇನ್ನು ಈ ಧಾರಾವಾಹಿಯ ನಾಯಕ ದಿಗಂತ್ ಹಾಗೂ ನಾಯಕಿ ಅಧಿತಿಯ ಪಾತ್ರ ತುಂಬಾ ಸವಾಲುಗಳಿಂದ ಕೂಡಿದೆ. ಇನ್ನು ಅವರು ಈ ಸವಾಲುಗಳನ್ನು ಹೇಗೆ ಎದುರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಇದು ಒಂದು ಒಳ್ಳೆಯ ಕೌಟುಂಬಿಕ ಧಾರವಾಹಿ ಇಂತಹ ಧಾರವಾಹಿಗಳಿಗೆ ನಾವು ಸಾತ್ ನೀಡಬೇಕು. ಇಂತಹ ಒಳ್ಳೆಯ ಧಾರವಾಹಿಯನ್ನು ಮಿಸ್ ಮಾಡದೆ ನೀವು ನೋಡಿ, ಇಂತಹ ಧಾರವಾಹಿಗಳಿಗೆ ನಿಮ್ಮ ಸಪೋರ್ಟ್ ತುಂಬಾ ಮುಖ್ಯ ಎಂದು ಅಭಿಮಾನಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ ನಟಿ ಪ್ರಿಯಾಂಕ ಉಪೇಂದ್ರ..