ಜೀವ ಕಳೆದುಕೊಂಡ ಸ್ಯಾಂಡಲ್ವುಡ್ ಸ್ಟಾರ್ ನಟನ ಸೊಸೆ.. ಕಾರಣವೇನು ಗೊತ್ತಾ.. ಬಿಚ್ಚಿಬಿದ್ದ ಕಲಾವಿದರು..

ಕಲಾವಿದರಿಗೆ ಕಲಾ ಜೀವನವೇ ಬದುಕು ನಿಜ.. ಅದಕ್ಕಾಗಿಯೇ ತಮ್ಮ ಜೀವನ ಶೈಲಿಯನ್ನು ಬದಲಿಸಿಕೊಂಡಿರುತ್ತಾರೆ.. ಅದರಲ್ಲೂ ತೆರೆಯ ಮೇಲೆ ಹೆಚ್ಚು ದಿನ ಉಳಿಯುವ ಸಲುವಾಗಿ ತಮ್ಮ ಸೌಂದರ್ಯದ ಬಗ್ಗೆ ಕಾಳಜಿ ಹಾಗೂ ಬಾಡಿ ಫಿಟ್ನೆಸ್ ಬಗ್ಗೆ ಕಾಳಜಿ ಎಲ್ಲವೂ ಸಾಮಾನ್ಯ.. ಇತ್ತೀಚಿನ ದಿನಗಳಲ್ಲಿ ಕಲಾವಿದರು ಮಾತ್ರವಲ್ಲದೇ ಸಾಮಾನ್ಯ ಜನರೂ ಸಹ ಇಂತಹ ಜೀವನ ಶೈಲಿ ಅನುಸರಿಸುತ್ತಿರೋದನ್ನು ನಾವು ನೋಡುತ್ತೇವೆ.. ಆದರೆ ಅದೇ ರೀತಿಯ ಕೆಲಸದಿಂದಾಗಿ ಇಂದು ಒಂದು ಜೀವವೇ ಇಲ್ಲವಾಗಿದೆ.. ಹೌದು ಕಳೆದ ಕೆಲ ತಿಂಗಳುಗಳ ಹಿಂದಷ್ಟೇ ಕಾಸ್ಮೆಟಿಕ್ ಚಿಕಿತ್ಸೆಗೆ ಒಳಗಾಗಿ ಕನ್ನಡ ಕಿರುತೆರೆಯ ಕಲಾವಿದೆ ಒಬ್ಬರು ಜೀವ ಕಳೆದುಕೊಂಡಿದ್ದರು.. ಆದರೀಗ ಸ್ಯಾಂಡಲ್ವುಡ್ ನ ಸ್ಟಾರ್ ನಟನ ಸೊಸೆ ಹಾಗೂ ಕನ್ನಡ ಕಿರುತೆರೆಯ ನಟನ ಪತ್ನಿ ಇಲ್ಲವಾಗಿದ್ದಾರೆ..

ಹೌದು ಕನ್ನಡದ ಖ್ಯಾತ ಹಿರಿಯನಟ ಕಲ್ಯಾಣ್ ಕುಮಾರ್ ಸೊಸೆ ಪ್ರಿಯದರ್ಶಿನಿ ನಿಧನರಾಗಿದ್ದಾರೆ. ಕಲ್ಯಾಣ್ ಕುಮಾರ್ ಪುತ್ರ, ನಟ ಭರತ್ ಕಲ್ಯಾಣ್ ಅವರ ಪತ್ನಿಯೂ ಆಗಿರುವ ಪ್ರಿಯದರ್ಶಿನಿ ಪ್ಯಾಲಿಯೋ ಡಯಟ್ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಈ ಕಾರಣದಿಂದಾಗಿಯೇ ಅವರು ನಿಧನರಾಗಿದ್ದಾರೆ ಎನ್ನುವುದು ಸದ್ಯಕ್ಕಿರುವ ಮಾಹಿತಿ. ಡಯಟ್ ಕಾರಣದಿಂದಾಗಿಯೇ ಅವರು ಕೆಲ ದಿನಗಳಿಂದ ಕೋಮಾದಲ್ಲಿ ಇದ್ದರು, ಹಲವು ದಿನಗಳಿಂದ ಅವರಿಗೆ ತೀವ್ರ ನಿಗಾಘಟಕದಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು.

ಪ್ರಿಯದರ್ಶಿನಿ ತೂಕದ ಕಾರಣಕ್ಕಾಗಿ ಪ್ಯಾಲಿಯೋ ಡಯಟ್ ನಲ್ಲಿದ್ದರು ಎಂದು ಹೇಳಲಾಗುತ್ತಿದ್ದು, ಡಯಟ್ ಬದಲಾವಣೆ ಕಾರಣದಿಂದಾಗಿ ಅವರು ಮಧುಮೇಹದಿಂದಲೂ ಬಳಲುತ್ತಿದ್ದರು. ಡಯಟ್ ಬದಲಾಗಿದ್ದರಿಂದ ಮಧುಮೇಹ ಏಕಾಏಕಿ ಏರಿಕೆ ಕಂಡಿದೆ. ಕೂಡಲೇ ಅವರನ್ನು ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರು ಕೋಮಾಗೆ ಜಾರಿದ್ದಾರೆ. ಹಾಗಾಗಿ ತೀವ್ರ ನಿಗಾಘಟಕದಲ್ಲೇ ಅವರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ನಿಧನರಾಗಿದ್ದಾರೆ.

ಸತತ ಮೂರು ತಿಂಗಳಿಂದಲೂ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಕೋಮಾಗೆ ಜಾರಿದ ನಂತರ  ಅವರ ಆರೋಗ್ಯ ಗಂಭೀರವಾಗುತ್ತಲೇ ಸಾಗಿತು. ಕೋಮಾದಿಂದ ಆಚೆ ಅವರು ಬರಲೇ ಇಲ್ಲ ಎಂದೂ ಹೇಳಲಾಗುತ್ತಿದೆ. ಚೆನ್ನೈನಲ್ಲಿರುವ  ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇವರಿಗೆ ಇಬ್ಬರು ಮಕ್ಕಳಿದ್ದು, ಕಿರುತೆರೆಯ ಖ್ಯಾತ ನಟ, ಪತಿ ಭರತ್ ಅವರನ್ನು ಮದುವೆಯಾಗಿದ್ದರು.

ಕಲ್ಯಾಣ್ ಕುಮಾರ್ ಪುತ್ರ ಭರತ್ ಕಲ್ಯಾಣ್ ತಮಿಳು ಕಿರುತೆರೆಯ ಫೇಮಸ್ ನಟ. ಕನ್ನಡಲ್ಲೂ ಅವರು ಸಿನಿಮಾ ಮಾಡಿದ್ದಾರೆ. ಸಿನಿಮಾ ರಂಗದಲ್ಲಿ ಅಷ್ಟೇನೂ ಅವರು ಹೆಸರು ಮಾಡಲಿಲ್ಲ. ಹಾಗಾಗಿ ಅನಿವಾರ್ಯವಾಗಿ ಅವರು ಕಿರುತೆರೆಗೆ ಹೋಗಬೇಕಾಯಿತು. ಇದೀಗ ಕಿರುತೆರೆಯಲ್ಲಿ ಫೇಮಸ್ ನಟನಾಗಿ ಭರತ್ ಬೆಳೆದಿದ್ದಾರೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್, ಶ್ರೀ ಅಂಬಾ ಭವಾನಿ ದೈವ ಶಕ್ತಿ ಜ್ಯೋತಿಷ್ಯರು.. ಮೊ.9845642321 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ‌ ಉಲ್ಭಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಡುತ್ತಾರೆ.. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ.. ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ.. 9845642321 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ತೊಂದರೆ ಪ್ರೀತಿಯಲ್ಲಿ ನಂಬಿ ಮೋಸ.. ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ವಿಚಾರ ಜನರ ದೃಷ್ಟಿಯಿಂದ ಮನೆಯಲ್ಲಿ ಆಗುವ ತೊಂದರೆ ಹಣಕಾಸಿನ ತೊಂದರೆ ಸ್ತ್ರೀ ಪುರುಷ ವಶೀಕರಣ ಇನ್ನೂ ಅನೇಕ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಗಳಿಗೆ ಶಾಶ್ವತ ಪರಿಹಾರ ಪಡೆದುಕೊಳ್ಳಿ.. 9845642321