ಸರ್ಜಾ ಕುಟುಂಬಕ್ಕೆ ಮತ್ತೊಂದು ನೋವು.. ಖುದ್ದು ವಿಚಾರ ತಿಳಿಸಿದ ಧೃವ ಸರ್ಜಾ.. ಯಾವ ಕುಟುಂಬಕ್ಕೂ ಇಂತಹ ನೋವು ಬೇಡ..

ಚಿರು ಸರ್ಜಾ ಇಲ್ಲವಾಗಿ ಮೊನ್ನೆಮೊನ್ನೆಯಷ್ಟೇ ತಿಂಗಳು ಕಳೆದಿದೆ.. ಸರ್ಜಾ ಕುಟುಂಬ ಇನ್ನೂ ಆ ನೋವಿನಿಂದ ಹೊರ ಬಂದಿಲ್ಲ.. ಪ್ರತಿದಿನ ಮನೆಯ ಮಗನಿಲ್ಲದ ನೋವು ಕಾಡುತ್ತಲೇ ಇದೆ.. ಚಿರು ಇಲ್ಲವೆಂದು ಅರಗಿಸಿಕೊಳ್ಳಲು ಸಹ ಅವರಿಗೆ ಸಾಧ್ಯವಾಗುತ್ತಿಲ್ಲ.. ಇಂತಹ ಸಮಯದಲ್ಲಿ ಆ ಕುಟುಂಬಕ್ಕೆ ಮತ್ತೊಂದು ನೋವಿನ ಸಂಗತಿ ಎದುರಾಗಿದೆ.. ಹೌದು ಈ ಹಾಳು‌ ಕೊರೊನಾ ಅದೆಷ್ಟು ನೋವು ತಂದೊಡ್ಡುವುದೋ.. ದಿನದಿಂದ ದಿನಕ್ಕೆ ಜನರನ್ನು ಬಲಿ ಪಡೆಯುತ್ತಿರುವ ಈ ಕೊರೊನಾ ಸಾವಿರ ಸಂಖ್ಯೆಯಲ್ಲಿ ಸೋಂಕಿತರು ಹೆಚ್ಚಾಗುತ್ತಿದ್ದಾರೆ..

ಇದೀಗ ನಟ ಧೃವ ಸರ್ಜಾ ಹಾಗೂ ಪತ್ನಿ ಪ್ರೇರಣಾ ಇಬ್ಬರೂ ಸಹ ಕೊರೊನಾ ಪಾಸಿಟಿವ್ ಆಗಿದ್ದು ಈ ಬಗ್ಗೆ ಖುದ್ದು ಧೃವ ಅವರೇ ಮಾತನಾಡಿ ವಿಷಯ ತಿಳಿಸಿದ್ದಾರೆ.. ಮೊನ್ನೆ ಮೊನ್ನೆಯಷ್ಟೇ ಆ ಕುಟುಂಬ ಚಿರು ಸರ್ಜಾರನ್ನು‌ ಕಳೆದುಕೊಂಡ ನೋವಿನಲ್ಲಿದೆ.. ಇನ್ನು ಆ ನೋವಿನಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ.. ಅದಾಗಲೇ ಧೃವ ಸರ್ಜಾ ಅವರಿಗೆ ಹಾಗೂ ಪ್ರೇರಣಾ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ಮತ್ತಷ್ಟು ಆತಂಕ ಹೆಚ್ಚಿಸಿದೆ..

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಧೃವ ಸರ್ಜಾ ಅವರು ನಾನು ಹಾಗೂ ನನ್ನ ಪತ್ನಿ ಪ್ರೇರಣಾ ಇಬ್ಬರಿಗೂ ಕೊರೊನಾ ಪಾಸಿಟಿವ್ ಆಗಿದೆ.. ಸಣ್ಣ ಪ್ರಮಾಣದಲ್ಲಿ ಕೊರೊನಾ ಲಕ್ಷಣ ಕಂಡುಬಂದಿದೆ.. ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇವೆ.. ಆದಷ್ಟು ಬೇಗ ಗುಣಮುಖರಾಗಿ‌ ಮರಳುತ್ತೇವೆ ಎಂದಿದ್ದಾರೆ.. ಜೊತೆಗೆ ತಮ್ಮ ಜೊತೆ ಸಂಪರ್ಕಕ್ಕೆ ಬಂದವರು ಸಹ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ..

ಕೆಲ ದಿನಗಳ ಹಿಂದಷ್ಟೇ ಅಣ್ಣನ ಸಾವಿನ ನೋವಿನಿಂದ ಹೊರ ಬರಲಾಗದೆ ಧ್ರುವ ಸರ್ಜಾ ಅವರಿಗೆ ನಿದ್ರೆ ಬಾರದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಂದಿದ್ದರು.. ಆನಂತರ ಧೃವ ಅವರು ಆರೋಗ್ಯವಾಗಿದ್ದಾರೆ.. ಆ ನೋವಿನಿಂದ ಹೊರ ಬರಲು ಅವರಿಗೆ ಸಮಯ ಬೇಕು ಎಂದು ಆಪ್ತರು ತಿಳಿಸಿದ್ದರು.. ಇದೀಗ ಕೊರೊನಾ ಕಾಣಿಸಿಕೊಂಡದ್ದರ ಬಗ್ಗೆ ಖುದ್ದು ಧೃವ ಸರ್ಜಾ ಅವರೇ ತಿಳಿಸಿದ್ದು, ಆದಷ್ಟು ಬೇಗ ಗುಣ ಮುಖರಾಗಿ ಮರಳಲಿ ಎಂದು ಪ್ರತಿಯೊಬ್ಬರೂ ಹಾರೈಸುತ್ತಿದ್ದಾರೆ.. ಈಗಾಗಲೇ ಆ ಕುಟುಂಬ ಅನುಭವಿಸಿರುವ ನೋವು ಸಾಕು.. ಧೃವ ಹಾಗೂ ಪ್ರೇರಣಾ ಅವರು ಆದಷ್ಟು ಬೇಗ ಗುಣಮುಖರಾಗಿ‌‌ ಮನೆಗೆ ಮರಳುವಂತಾಗಲಿ..