ಧೃವ ಸರ್ಜಾ ಹಾಗೂ ಪ್ರೇರಣಾ ಅವರ ವಿಚಾರದಲ್ಲೀಗ ಸಿಹಿ ಸುದ್ದಿ..

ಕಳೆದ ತಿಂಗಳಷ್ಟೇ ಸರ್ಜಾ ಕುಟುಂಬದಲ್ಲಿ ಯಾರೂ ಊಹಿಸದ ಘಟನೆ ನಡೆದುಹೋಗಿ ಚಿರು ಸರ್ಜಾ ಹೃದಯಾಘಾತದಿಂದ ಇನ್ನಿಲ್ಲವಾದರು.. ಇನ್ನೂ ಸಹ ಯಾರಿಂದಲೂ ಆ ಘಟನೆ ಮರೆಯಲಾಗಿಲ್ಲ.. ಸರ್ಜಾ ಕುಟುಂಬ ಆ ನೋವಿನಿಂದ ಹೊರ ಬರಲಾಗದೆ ದುಃಖಿಸುವ ಸಮಯದಲ್ಲಿಯೇ ಮತ್ತೊಂದು ಆತಂಕದ ಸುದ್ದಿ ನಿನ್ನೆ ಬಂದಿತ್ತು..

ಹೌದು ನಿನ್ನೆಯಷ್ಟೇ ಸ್ಯಾಂಡಲ್ವುಡ್ ನಟ ಧೃವ ಸರ್ಜಾ ಹಾಗೂ ಪ್ರೇರಣಾ ಅವರಿಗೆ ಕೊರೊನಾ ಪಾಸಿಟಿವ್ ಆಗಿದ್ದು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು‌. ಆದರೆ ಸದ್ಯ ಇದೀಗ ಧೃವ ಹಾಗೂ ಪ್ರೇರಣಾ ಅವರ ಕಡೆಯಿಂದ ಸಿಹಿಸುದ್ದಿಯೊಂದು ಬಂದಿದೆ..

ಹೌದು ಕಳೆದ ತಿಂಗಳಷ್ಟೇ ಚಿರು ಸರ್ಜಾ ಅವರು ಅಕಾಲಿಕವಾಗಿ ಹೃದಯಾಘಾತದಿಂದ ಜೀವ ಕಳೆದುಕೊಂಡಿದ್ದರು.. ಇನ್ನೂ ಆ ನೋವಿನಿಂದಲೇ ಹೊರ ಬರಲಾಗದೇ ಕುಟುಂಬ ನೋವನ್ನು ಅನುಭವಿಸುತಿತ್ತು.. ಅದಾಗಲೇ ಗಾಯದ ಮೇಲೆ ಬರೆ ಎಂಬಂತೆ ಆ ನೋವಿನ ಜೊತೆಗೆ ನಿನ್ನೆ ಧೃವ ಹಾಗೂ ಪ್ರೇರಣಾ ಇಬ್ಬರಿಗೂ ಕೊರೊನಾ ಇರುವುದು ಕಂಡುಬಂದಿದ್ದು ಕುಟುಂಬಕ್ಕೆ ಮಾತ್ರವಲ್ಲದೇ ಆಪ್ತರು ಸ್ನೇಹಿತರು ಎಲ್ಲತಿಗೂ ಆತಂಕವನ್ನುಂಟು ಮಾಡಿತ್ತು..

ಆದರೀಗ ಸದ್ಯ ಧೃವ ಹಾಗೂ ಪ್ರೇರಣಾ ಅವರ ಕಡೆಯಿಂದ ಒಳ್ಳೆಯ ಸುದ್ದಿಯೊಂದು ಬಂದಿದೆ.. ಹೌದು ನಿನ್ನೆ ರಾತ್ರಿಯೇ ಧೃವ ಹಾಗೂ ಪ್ರೇರಣಾ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.. ಹೌದು ನಿನ್ನೆಯಷ್ಟೇ ಧೃವ ಸರ್ಜಾ ಅವರು ಹಾಗೂ ಪತ್ನಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.. ಆದರೆ ನಿನ್ನೆ ರಾತ್ರಿಯೇ ಅವರಿಬ್ಬರನ್ನೂ ಸಹ ಡಿಸ್ಚಾರ್ಜ್ ಮಾಡಲಾಗಿದೆ..

ಕೊರೊನಾ ಲಕ್ಷಣಗಳು ಸಣ್ಣ ಪ್ರಮಾಣದಲ್ಲಿ ಮಾತ್ರ ಕಾಣಿಸಿಕೊಂಡಿರುವುದರಿಂದ ಇದಕ್ಕೆ ಆಸ್ಪತ್ರೆಯಲ್ಲಿ ಇರುವ ಅಗತ್ಯವಿಲ್ಲ.. ಬದಲಿಗೆ ಮನೆಯಲ್ಲೇ ಹೋಂ ಕ್ವಾರಂಟೈನ್ ಆಗಿ.. ವೈದ್ಯರಿಂದ ಫೋನ್ ಮೂಲಕ ಸಲಹೆಗಳನ್ನು ಪಡೆದುಕೊಂಡು ಮನೆಯಲ್ಲಿಯೇ ವಿಶ್ರಾಂತಿ ಪಡೆದರೆ ಸಾಕು ಎಂದಿದ್ದಾರೆ.. ಆದ್ದರಿಂದ ಧೃವ ಹಾಗೂ ಪ್ರೇರಣಾ ಅವರನ್ನು ನಿನ್ನೆ ರಾತ್ರಿಯೇ ಡಿಸ್ಚಾರ್ಜ್ ಮಾಡಲಾಗಿದ್ದು ಸದ್ಯ ಇಬ್ಬರೂ ಮನೆಯಲ್ಲಿಯೇ ಸೆಲ್ಫ್ ಐಸೋಲೇಟ್ ಆಗಿದ್ದಾರೆ..

ಯಾರ ಸಂಪರ್ಕಕ್ಕೂ ಬಾರದೆ ಪ್ರತ್ಯೇಕವಾಗಿರುವ ಇಬ್ಬರಿಗೂ ವೈದ್ಯರು ಫೋನ್ ಮೂಲಕವೇ ಹೇಗಿರಬೇಕೆಂದು ತಿಳಿಸಿದ್ದು ಅದೇ ರೀತಿಯಾದ ಚಿಕಿತ್ಸಾ ಕ್ರಮಗಳನ್ನು ಅನುಸರಿಸುತ್ತಿದ್ದು ಇನ್ನು 5-6 ದಿನಗಳಲ್ಲಿ ಗುಣಮುಖರಾಗಲಿದ್ದಾರೆ ಎನ್ನಲಾಗಿದೆ..

ನಿನ್ನೆ ಈ ವಿಚಾರ ತಿಳಿದ ಕೂಡಲೇ ಎಲ್ಲರೂ ಸಹ ಧೃವ ಹಾಗೂ ಪ್ರೇರಣಾ ಗುಣಮುಖರಾಗಿ ಎಂದು ಹಾರೈಸಿದ್ದು ಸ್ನೇಹಿತರು ಕುಟುಂಬದವರು ಹಾಗೂ ಚಿತ್ರರಂಗದ ಆಪ್ತರು ಫೋನ್ ಮೂಲಕ ಅವರ ಆರೋಗ್ಯ ವಿಚಾರಿಸಿದ್ದರು.. ಸದ್ಯ ಇದೀಗ ಕುಟುಂಬದಲ್ಲಿ ಆತಂಕ ಕೊಂಚ ಕಡಿಮೆಯಾದಂತಾಗಿದೆ..