ತನ್ನ ಜೊತೆಯಲ್ಲಿ ಇಲ್ಲದ ಆ ಮಹಿಳೆಯಿಂದಲೇ ಕೆಜಿಎಫ್ ನಲ್ಲಿ ಆ ದೃಶ್ಯ ಹುಟ್ಟಿದ್ದು ಎಂದ ಪ್ರಶಾಂತ್ ನೀಲ್.. ಆಕೆ ಯಾರು ಗೊತ್ತಾ..

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಗಳಿಕೆಯಲ್ಲಿ ದಾಖಲೆ ಬರೆಯುತ್ತಿರುವ ಕೆಜಿಎಫ್ ಸಿನಿಮಾ ತಯಾರಾದ ಹಿಂದೆ ನೂರಾರು ಕತೆಗಳಿವೆ.. ಸಧ್ಯ ಇದೀಗ ಸಿನಿಮಾ ಸಕ್ಸಸ್ ಕಂಡಿದ್ದು ಒಂದೊಂದೇ ಕತೆಗಳು‌ಆಚೆ ಬರುತ್ತಿದೆ.. ಹೌದು ಕೆಜಿಎಫ್ ಕನ್ನಡ ಸಿನಿಮಾ ಇಂಡಸ್ಟ್ರಿಯ ಕಡೆ ಸಂಪೂರ್ಣ ಭಾರತ ಮಾತ್ರವಲ್ಲ ಹೊರ ದೇಶದ ಸಿನಿಮಾ ಪ್ರಿಯರು ಕೂಡ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಎಂದರೆ ತಪ್ಪಾಗಲಾರದು.. ಸಿನಿಮಾದಲ್ಲಿ ಕೇವಲ ಆಕ್ಷನ್ ಮಾತ್ರವಲ್ಲದೇ ಸೆಂಟಿಮೆಂಟ್ ಇರುವ ಕಾರಣ ಸಿನಿಮಾ ಹೆಚ್ಚು ಜನರ ಮನಸ್ದಿಗೆ ಹತ್ತಿರವಾಯಿತೆಂದರೆ ತಪ್ಪಾಗಲಾರದು.. ಅದೇ ರೀತಿ ಕೆಜಿಎಫ್ ಸಿನಿಮಾದಲ್ಲಿನ ಮನಮುಟ್ಟುವ ಸಮಾಧಿ ದೃಶ್ಯವೊಂದರ ಹಿಂದೆ ಪ್ರಶಾಂತ್ ನೀಲ್ ಅವರ ನಿಜ ಜೀವನದಲ್ಲಿ ನಡೆದ ಘಟನೆ ಇರುವುದು ಹೊರಬಂದಿದೆ.. ಹೌದು ಖುದ್ದು ಪ್ರಶಾಂತ್ ನೀಲ್ ಅವರೇ ಈ ವಿಚಾರವನ್ನು ಹೇಳಿಕೊಂಡು ಬೇಸರ ವ್ಯಕ್ತ ಪಡಿಸಿದ್ದಾರೆ..

ಹೌದು ಕೆಜಿಎಫ್ ಸಿನಿಮಾ ತೆರೆ ಮೇಲೆ ಹೇಗೆ ಯಶ್ ರವೀನಾ ಟಂಡನ್ ಅಧೀರ ಗರುಡ ರೀನಾ ಯಶ್ ಅವರ ತಾಯಿ ಇನ್ನು ಅನೇಕರಿಂದ ಕೂಡಿ ಒಂದೊಳ್ಳೆ ಚಿತ್ರವಾಗಿ ಕಣ್ಣ ಮುಂದೆ ಬಂತೋ ಅದೇ ರೀತಿ ತೆರೆಯ ಹಿಂದೆಯೂ ಕೂಡ ಅಷ್ಟೇ ಪ್ರಮುಖರು ಸಿನಿಮಾದ ಪಿಲ್ಲರ್ ಗಳಾಗಿ ನಿಂತಿದ್ದರೆಂದರೆ ಒಪ್ಪಲೇ ಬೇಕಾದ ಮಾತು.. ಹೌದು ಯಶ್ ತೆರೆಯ ಮೇಲೆ ಹೀರೋ ಅಷ್ಟೇ ಅಲ್ಲ ತೆರೆಯ ಹಿಂದೆಯೂ ಸಹ ಸಿನಿಮಾ ಚೆನ್ನಾಗಿ ಬರಲೆಂದು ಸಾಕಷ್ಟು ಕೆಲಸ ಮಾಡಿದ್ದುಂಟು.. ಇನ್ನು ನಿರ್ದೇಶಕರಾದ ಪ್ರಶಾಂತ್ ನೀಲ್ ನಿರ್ಮಾಪಕರಾದ ವಿಜಯ್ ಕಿರಗಂದೂರ್ ಡಿಓಪಿ ಭುವನ್ ಗೌಡ ಹೀಗೆ ಸಾಕಷ್ಟು ಮಂದಿ ಕೆಜಿಎಫ್ ನ ತೆರೆಯ ಹಿಂದಿನ ಪಿಲ್ಲರ್ ಗಳಾಗಿದ್ದರು.. ಎಲ್ಲರ ಪರಿಶ್ರಮ ಡೆಡಿಕೇಶನ್ ನಿಂದಾಗಿ ಇಂದು ಪ್ರಪಂಚದಾದ್ಯಂತ ಕೆಜಿಎಫ್ ಹೆಸರು ಮಾಡುತ್ತಿದೆ..

ಇನ್ನು ಕತೆಯ ವಿಚಾರಕ್ಕೆ ಬಂದರೆ ಕತೆಯಲ್ಲಿ ಆ ಚಿತ್ರತಂಡದ ಸಾಕಷ್ಟು ಮಂದಿಯ ನಿಜ ಜೀವನದ ಕತೆಯೂ ಬೆರೆತು ಹೋಗಿದೆ.. ಹೌದು ಕೆಜಿಎಫ್ ಸಿನಿಮಾದಲ್ಲಿ ಮೂಡಿ ಬಂದಿರುವ ಕೆಲ ದೃಶ್ಯಗಳು ಕೆಲವರ ನಿಜ ಜೀವನದ ದೃಶ್ಯಗಳಾಗಿವೆ.. ಅಂತಹ ಕೆಲ ಪ್ರಮುಖ ದೃಶ್ಯಗಳಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಅವರ ಕತೆಯೂ ಇದೆ.. ಜೊತೆಗೆ ಕೆಜಿಎಫ್ ಒಂದರಲ್ಲಿನ ದೃಶ್ಯದಲ್ಲಿ ಯಶ್ ಅವರ ಜೀವನದ ಸಣ್ಣ ಘಟನೆಯೂ ಇದೆ.. ಹೌದು ಈ ಹಿಂದೆ ಕೆಜಿಎಫ್ ಸಿನಿಮಾದಲ್ಲಿ ತಾಯಿ ಮಗುವಿಗಾಗಿ ಬನ್ ಒಂದನ್ನು ಹಿಡಿದು ಬರುವಾಗ ಅದು ರಸ್ತೆಗೆ ಬಿದ್ದ ಸಮಯದಲ್ಲಿ ಅದನ್ನು ಮರಳಿ ತೆಗೆದುಕೊಳ್ಳಲು ಮುಜುಗರ ಪಡುತ್ತಿದ್ದ ತಾಯಿಯನ್ನು ನೋಡಿದ ಯಶ್ ಕಾರ್ ಅಡ್ಡಗಟ್ಟಿ ಬನ್ ಕೊಟ್ಟು ತಾಯಿಗಿಂತ ದೊಡ್ಡ ಯೋಧ ಯಾರೂ ಇಲ್ಲ.. ಎನ್ನುವ ಮಾತನ್ನು ಆಡಿದ್ದರು..

ಆ ಮಾತು ರಾಧಿಕಾ ಪಂಡಿತ್ ಅವರು ತಮ್ಮ ಮಕ್ಕಳ ವಿಚಾರಕ್ಕೆ ನಡೆದುಕೊಂಡ ಘಟನೆಯಿಂದ ಹುಟ್ಟಿದ್ದಾಗಿತ್ತು.. ಹೌದು ರಾಧಿಕಾ ಪಂಡಿತ್ ಗರ್ಭಿಣಿಯಾಗಿದ್ದ ಸಮಯದಲ್ಲಿ ಯಶ್ ಮರೆತು ತಮ್ಮ ಫೋನ್ ಅನ್ನು ಬೆಡ್ ಮೇಲೆ ಇಟ್ಟಾಗ ಅದನ್ನು ನೋಡಿ ರಾಧಿಕಾ ಅವರು ದೊಡ್ಡ ಗಲಾಟೆಯನ್ನೇ ಮಾಡಿದ್ದರಂತೆ.. ನಿಮಗೆ ಗೊತ್ತಾಗಲ್ವಾ ಇಂತಹ ಸಮಯದಲ್ಲಿ ಫೋನ್ ಹತ್ತಿರ ಇಡಬಾರದು ಎಂದು ಜೀವನದಲ್ಲಿ ಮೊದಲ ಬಾರಿಗೆ ಏರು ಧ್ವನಿಯಲ್ಲಿ ಮಾತನಾಡಿದ್ದರಂತೆ.. ಆಗಲೇ ತಾಯಿ ತನ್ನ ಮಕ್ಕಳಿಗಾಗಿ ಏನು ಬೇಕಾದರೂ ಮಾಡ್ತಾಳೆ ಎಂದು ತಾಯಿಗಿಂತ ದೊಡ್ಡ ಯೋಧ ಮತ್ತೊಬ್ಬನಿಲ್ಲ ಎನ್ನುವ ಮಾತು ಯಶ್ ಗೆ ಹುಟ್ಟಿತಂತೆ.. ಅದನ್ನೇ ಸಿನಿಮಾದಲ್ಲಿ ಬಳಸಿಕೊಂಡಿದ್ದರು..

ಇನ್ನು ಕೆಜಿಎಫ್ 2 ರಲ್ಲಿ ಯಶ್ ತನ್ನ ತಾಯಿಯ ಸಮಾಧಿಯನ್ನು ಮೈಸೂರಿನಿಂದ ಕೆಜಿಎಫ್ ಗೆ ಸ್ಥಳಾಂತರಿಸುವ ದೃಶ್ಯವೊಂದಿದೆ.. ಆ ದೃಶ್ಯ ಎಂತವರ ಕಣ್ಣಲ್ಲೂ ನೀರು ತರಿಸುವಂತಿದೆ.. ಆ ದೃಶ್ಯದ ಹಿಂದೆ ಪ್ರಶಾಂತ್ ನೀಲ್ ಅವರ ನಿಜ ಜೀವನದ ಕತೆ ಇದೆ.. ಹೌದು ಪ್ರಶಾಂತ್ ನೀಲ್ ಅವರು ಬಹಳ ಸಣ್ಣವರಿದ್ದಾರ ತನ್ನ ಅಜ್ಜಿಯನ್ನು ಬಹಳ ಪ್ರೀತಿಸುತ್ತಿದ್ದರಂತೆ. ಇವರು ಎಷ್ಟೇ ಕೋಪ ಮಾಡಿಕೊಂಡರೂ ಎಷ್ಟೇ ಕೂಗಾಡಿದರೂ ತನ್ನ ಅಜ್ಜಿ ಊಟ ತಂದು ಕೊಟ್ಟು ಅದನ್ನು ತಿನ್ನುವವರೆಗೂ ಪಕ್ಕದಲ್ಲಿಯೂ ಕೂತಿರುತ್ತಿದ್ದರಂತೆ.. ಅಜ್ಜಿ ಅಷ್ಟು ಪ್ರೀತಿ ಮಾಡುತ್ತಿದ್ದರಂತೆ.. ಆದರೆ ಕೆಲ ವರ್ಷಗಳ ಹಿಂದೆ ತನ್ನ ಅಜ್ಜಿ ತೀರಿಕೊಂಡಾಗ ಪ್ರಶಾಂತ್ ನೀಲ್ ಅವರ ಬಳಿ ಒಂದು ಸಣ್ಣ ಸ್ವಂತ ಮನೆಯೂ ಸಹ ಇರಲಿಲ್ಲ.. ಆರ್ಥಿಕವಾಗಿ ಕಷ್ಟದಲ್ಲಿದ್ದರು.. ಅದೇ ಕಾರಣಕ್ಕೆ ಅಜ್ಜಿಯನ್ನು ಆಂಧ್ರದಲ್ಲಿನ ಹಳ್ಳಿಯಲ್ಲಿ ಅಂತ್ಯ ಸಂಸ್ಕಾರ ಮಾಡಬೇಕಾಯಿತು..

ತೆಆಗ ಪ್ರಶಾಂತ್ ನೀಲ್ ಅವರು ಅಂದುಕೊಂಡಿದ್ದರಂತೆ.. ಮುಂದೆ ನಾನು ಸ್ವಂತ ಮನೆ ಕಟ್ಟಿ ಅಜ್ಜಿಯ ಸಮಾಧಿಯನ್ನು ನನ್ನ ಮನೆಗೇ ತೆಗೆದುಕೊಂಡು ಹೋಗಿ ಇಡಬೇಕು ಎಂದು.. ಅದೇ ಕತೆ ಕೆಜಿಎಫ್ ನಲ್ಲಿ ದೃಶ್ಯವಾಗಿ ಹುಟ್ಟಿದ್ದು ಜನರ ಮನಸ್ಸಿಗೆ ಬಹಳ ಹತ್ತಿರವಾಗಿದೆ.. ತೆರೆಯ ಮೇಲೆ ಬರುವ ಎಲ್ಲಾ ಕತೆಗಳು ಕಾಲ್ಪನಿಕವಾಗಿರುವುದಿಲ್ಲ.. ಬದಲಿಗೆ ಈ ರೀತಿ ಒಬ್ಬೊಬ್ಬರ ಜೀವನದ ನಿಜವಾದ ಕತೆಯೂ ಆಗಿರುತ್ತದೆ.. ಕೇವಲ ಚಿತ್ರತಂಡ ಮಾತ್ರವಲ್ಲ ಸಿನಿಮಾ ನೋಡುವ ಪ್ರೇಕ್ಷಕನ ಜೀವನದಲ್ಲಿಯೂ ಇಂತಹ ಸಾಕಷ್ಟು ಘಟನೆಗಳು ನಡೆದಿದ್ದು ತೆರೆ ಮೇಲೆ ತಮ್ಮದೇ ಕತೆ ನೋಡುವ ಅನುಭವ ಸಾಕಷ್ಟು ಜನರ ಅನುಭವಕ್ಕೂ ಬಂದಿರುತ್ತದೆ..