ತಾಯಿಯಾಗುತ್ತಿರುವ ಕನ್ನಡದ ಮತ್ತೊಬ್ಬ ಖ್ಯಾತ ನಟಿ..

ಕನ್ನಡ ಚಿತ್ರರಂಗದಲ್ಲಿ ಸದ್ಯ ಸಾಲು ಸಾಲು ಶುಭ ಸುದ್ದಿಗಳನ್ನು ಕೇಳುತ್ತಿದ್ದು ಇದೀಗ ಸ್ಯಾಂಡಲ್ವುಡ್ ನ ಖ್ಯಾತ ನಟಿಯೊಬ್ಬರು ತಾಯೊಯಾಗುತ್ತಿರುವ ಸಂತೋಷ ಹಂಚಿಕೊಂಡಿದ್ದಾರೆ.. ತಮ್ಮ ಅದ್ಭುತ ನಟನೆ ಹಾಗೂ ಸೌಂದರ್ಯದ ಮೂಲಕ ನಟಿ ದೇಶದ ಮೂಲೆ ಮೂಲೆಯಲ್ಲಿ ಅಭಿಮಾನಿ ಬಳಗವನ್ನು ಹೊಂದಿರುವ ನಟಿ ಕನ್ನಡದ ಜೊತೆಗೆ ತೆಲುಗು, ತಮಿಳು, ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿ ಅಲ್ಲಿಯೂ ಸಹ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ.. ಹೌದು ಅಬರು ಮತ್ಯಾರೂ ಅಲ್ಲ ನಟಿ ಪ್ರಣೀತಾ ಸುಭಾಶ್.. ಇದೀಗ ನಟಿ ಪ್ರಣಿತಾ ತಾಯುಯಾಗುತ್ತಿದ್ದು, ನಟಿ ತಮ್ಮ ಬೇಬಿ ಬಂಪ್ ಫೋಟೋ ಚಿತ್ರೀಕರಣ ಮಾಡಿಸಿದ್ದಾರೆ. ಈ ಫೋಟೋಗಳನ್ನು ತಮ್ಮ ಸೋಷಿಯಲ್ ಮಿಡಿಯಾದಲ್ಲಿ ನಟಿ ಹಂಚಿಕೊಂಡಿದ್ದು, ಸದ್ಯ ಈ ಫೋಟೋಗಳು ಸಕತ್ ವೈರಲ್ ಆಗುತ್ತಿದೆ.

ಕನ್ನಡದ 2010 ರಲ್ಲಿ ತೆರೆಕಂಡ ಪೊರ್ಕಿ ಸಿನಿಮಾದಲ್ಲಿ ನಾಯಕಿಯಾಗಿ ನಟ ದರ್ಶನ್ ಜೊತೆಗೆ ಅಭಿನಯಿಸುವ ಮೂಲಕ ನಟಿ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಅಭಿನಯಿಸಿದ ಮೊದಲ ಸಿನಿಮಾದಿಂದಲೇ ನಟಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ನಂತರ ಒಂದಾದ ಮೇಲೆ ಒಂದು ಹಿಟ್ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ನಟಿ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡದ ನಟ ದರ್ಶನ್, ಗಣೇಶ್, ದುನಿಯಾ ವಿಜಯ್ ಸೇರಿದಂತೆ ತೆಲುಗಿನ ನಟ ಮಂಚು ಮನೋಜ್, ಪವನ್ ಕಲ್ಯಾಣ್, ಮಹೇಶ್ ಬಾಬು ನಂತಹ ದೊಡ್ಡ ದೊಡ್ಡ ಸ್ಟಾರ್ ಕಲಾವಿದರ ಜೊತೆ ನಟಿಸಿ ನಟಿ ಪ್ರಣಿತಾ ಸೈ ಎನಿಸಿಕೊಂಡಿದ್ದಾರೆ.

ತೆಲುಗಿನಲ್ಲಿ 2010 ರಲ್ಲಿ ತೆರೆಕಂಡ ಬಾವ ಸಿನಿಮಾದಲ್ಲಿ ನಟ ಸಿದ್ದಾರ್ಥ್ ಜೊತೆ ನಾಯಕಿಯಾಗಿ ಅಭಿನಯಿಸುವ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟರು. ಈ ಸಿನಿಮಾದಲ್ಲಿ ಅವರ ನಟನೆಯ ಮೂಲಕ ಟಾಲಿವುಡ್ ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದರು. ನಂತರ ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಸಹ ನಟಿಸಿ ಅಲ್ಲಿಯೂ ಸಹ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ ನಟಿ ಪ್ರಣೀತಾ. ಇತ್ತೀಚೆಗೆ ನಟಿ ಕನ್ನಡದ ರಾಮನ ಅವತಾರ ಸಿನಿಮಾದಲ್ಲಿ ನಟಿಸಿದ್ದು, ಶೀಘ್ರದಲ್ಲೇ ಅವರ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಇನ್ನು ನಟಿ ಪ್ರಣೀತಾ ತಮ್ಮ ಅಭಿಮಾನಿಗಳ ಜೊತೆ ಮತ್ತೊಂದು ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.

ನಟಿ ಪ್ರಣಿತಾ 30 ಮೇ 2021 ರಂದು ಬೆಂಗಳೂರಿನ ಉದ್ಯಮಿ ನಿತಿನ್ ರಾಜು ಅವರ ಜೊತೆಗೆ ಕುಟುಂಬಸ್ಥರು ಹಾಗೂ ಆಪ್ತರ ಸಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಟಿ ಪ್ರಣೀತಾ ತಮ್ಮ ಮದುವೆಯ ಬಗ್ಗೆ ಯಾವುದೇ ಸೂಚನೆಗಳನ್ನು ನೀಡಿರಲಿಲ್ಲ, ಮದುವೆಗೆ ಅಜಾರಾಗಿದ್ದ ಸ್ನೇಹಿತರಲ್ಲಿ ಒಬ್ಬರು ಫೋಟೋ ಕ್ಲಿಕ್ಕಿಸಿ ಹಂಚಿಕೊಂಡ ಕಾರಣ ನಟಿ ಪ್ರಣೀತಾ ಮದುವೆಯ ಬಗ್ಗೆ ಎಲ್ಲರಿಗೂ ತಿಳಿಯಿತು. ನಂತರ ಮರು ದಿನ ಮಾಧ್ಯಮಗಳ ಬಳಿ ಮಾತನಾಡಿದ ಪ್ರಣೀತಾ, ತಾವು ಮದುವೆಯಾಗಿರುವ ವಿಚಾರವನ್ನು ಅಧಿಕೃತವಾಗಿ ಘೋಷಿಸಿದರು. ಇತ್ತೀಚೆಗೆ ನಟಿ ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಾವು ತಾಯಿಯಾಗುತ್ತಿರುವ ವಿಚಾರವನ್ನು ತಮ್ಮ ಅಭಿಮಾನಿಳಿಗೆ ತಿಳಿಸಿದ್ದರು.

ತಮ್ಮ ಸ್ಕ್ಯಾನಿಂಗ್ ನ ಫೋಟೋಗಳನ್ನು ಕೈಯಲ್ಲಿ ಹಿಡಿದು ತಮ್ಮ ಪತಿಯನ್ನು ತಬ್ಬಿಕೊಂಡಿರುವ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಮನೆಗೆ ಪುಟ್ಟ ಅಥಿತಿಯ ಆಗಮನದ ಬಗ್ಗೆ ನಟಿ ವಿಷಯ ಹಂಚಿಕೊಂಡಿದ್ದರು. ಇದೀಗ ನಟಿ ತಮ್ಮ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿದ್ದು, ಈ ಫೋಟೋಗಳಲ್ಲಿ ನಟಿ ತುಂಬಾ ಸುಂದರವಾಗಿ ಕಾಣಿಸುತ್ತಿದ್ದಾರೆ. ನಟಿ ಕಪ್ಪು ಬಣ್ಣದ ಡ್ರೆಸ್ ಧರಿಸಿ , ಕ್ಯಾಪ್ ತೊಟ್ಟು ಹೊಸದಾಗಿ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿದ್ದಾರೆ. ಇದೀಗ ಈ ಫೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗಿತ್ತಿದೆ. ಅಭಿಮಾನಿಗಳು ಪ್ರಣಿತಾ ಅವರ ಫೋಟೋಗಳಿಗೆ ಲೈಕ್ ಹಾಗೂ ಕಾಮೆಂಟ್ ಮಾಡುವ ಮೂಲಕ ತಮ್ಮ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.