ತನ್ನ ಮಗನನ್ನು‌ ಓದಿಸುವ ಸಲುವಾಗಿ ಈ ತಾಯಿ ಮಾಡ್ತಾ ಇರೋ ಕೆಲಸ ನೋಡಿ.. ಆದರೆ ಆಗಿದ್ದೇ ಬೇರೆ..

ತಾಯಿ ಎಂಬ ಪದಕ್ಕೆ ಸರಿ ಸಮಾನವಾದದ್ದು ಯಾವುದೂ ಇಲ್ಲ ಎಂಬ ಮಾತು ಅಕ್ಷರಶಃ ಸತ್ಯ..‌ ತನಗೆ ಏನೇ ಆದರೂ ಮಕ್ಕಳ ಒಳಿತನ್ನು ಬಯಸುವವಳು ತಾಯಿ ಮಾತ್ರ.. ಅವರ ಆಸೆ ಕನಸನ್ನು ಈಡೇರಿಸಲು ಆಕೆ ಏನು ಬೇಕಾದರೂ ಮಾಡಬಲ್ಲಳು.. ಆದರೆ ಕೆಲವೊಮ್ಮೆ ದೇವರು ಕೊಡುವ ಪ್ರತಿಫಲವೇ ಬೇರೆ ಆಗಿರುತ್ತದೆ..

ಹೌದು ಇಲ್ಲೊಬ್ಬ ತಾಯಿ ತನ್ನ ಮಗನನ್ನು ಓದಿಸುವ ಸಲುವಾಗಿ ಪ್ರತಿದಿನವೂ ಆತನನ್ನು ಹೊತ್ತು‌ ಶಾಲೆಗೆ ಕರೆತರ್ತಾಳೆ.. ಇದಕ್ಕೆ ಕಾರಣವೂ ಇದೆ.. ಆ ಹುಡುಗನ ಹೆಸರು ಪ್ರಮೋದ್.. ಬಾಗಲಕೋಟೆಯವ.. ಕಾಲುಗಳಿದೆ ಆದರೆ ಆ ಕಾಲುಗಳು ಸ್ವಾಧೀನವಿಲ್ಲದೆ ನಡೆಯಲು ಸಾಧ್ಯವಿಲ್ಲ.. ಜೊತೆಗೆ ಕಿಡ್ನಿ ಸಮಸ್ಯೆಯೂ ಇದೆ.. ಇಷ್ಟಕ್ಕೆ ಸಾಲದು ಎಂಬಂತೆ.. ಎಲ್ಲರಿಗೂ ಹೃದಯ ಎಡ ಭಾಗದಲ್ಲಿ ಇದ್ದರೆ.. ಈತನಿಗೆ ಹೃದಯ ಬಲಭಾಗದಲ್ಲಿದೆ.. ಇದೆಲ್ಲಕ್ಕೂ ಮಿಗಿಲಾಗಿ ಮತ್ತೊಂದಿದೆ ಅದು ಓದುವ ಹಟ.. ಹೌದು ಇಷ್ಟೆಲ್ಲಾ ನೋವಿದ್ದರೂ ಕೂಡ ಓದಬೇಕೆಂಬ ಆಸೆ ಆತನಲ್ಲಿ ತುಡಿಯುತ್ತಿದೆ..

ಆತನ ಆಸೆಯನ್ನು ಮಣ್ಣಾಗಿಸದೇ ಆತನ ಓದಿನ ಕನಸಿಗೆ ನೀರೆರೆದು ಚಿಗುರಿಸುತ್ತಿರುವವರು ಆತನ ತಾಯಿ.. ಹೌದು ಟೈಲರಿಂಗ್ ಕೆಲಸ ಮಾಡಿಕೊಂಡಿರುವ ಪ್ರಮೋದ್ ನ ತಾಯಿ ಪ್ರತಿದಿನ ಮಗನನ್ನು ಹೊತ್ತುಕೊಂಡು ಒಂದು ಕಿಮೀ ನಡೆದು ತಂದು ಶಾಲೆಗೆ ಬಿಡ್ತಾರೆ.. ಅಪ್ಪ ಪೆಟ್ರೋಲ್ ಬಂಕ್ ನಲ್ಲಿ‌ ಕೆಲಸ.. ಇವರಿಗೆ ಮೂರು ಮಕ್ಕಳು ಮಧ್ಯದವ ಈ ಪ್ರಮೋದ್.. ಮಗನಿಗೆ ಹೀಗಾಗಿದೆ ಎಂದು ಮೂಲೆಯಲ್ಲಿ ಕೂರಿಸದೆ ಆತನ ಆಸೆಯಂತೆ ಓದಿಸುತ್ತಿರುವ ಈ ತಂದೆ ತಾಯಿ ನಿಜಕ್ಕೂ ಗ್ರೇಟ್..

ಎಲ್ಲಾ ಇರುವ ಕೆಲವರು ಓದದೆ ಜೀವನದ ಗುರಿ ತಲುಪದೇ ಇಲ್ಲ ಸಲ್ಲದ ನೆಪಗಳು ಹೇಳುವವರು ಪ್ರಮೋದ್ ನನ್ನು ನೋಡಿ ಕಲಿಯೋದು ಸಾಕಷ್ಟಿದೆ..

Tags: