ಕುಟುಂಬಕ್ಕೆ ತಿಳಿಯದಂತೆ ಬುಲೆಟ್ ಪ್ರಕಾಶ್ ಅವರ ಆಸ್ಪತ್ರೆ ಬಿಲ್ ಕಟ್ಟಿ ಹೋದ ವ್ಯಕ್ತಿ ಯಾರು ಗೊತ್ತಾ?

ಸ್ಯಾಂಡಲ್ವುಡ್ ನ ಪ್ರತಿಭಾವಂತ ಕಲಾವಿದ ಬುಲೆಟ್ ಪ್ರಕಾಶ್ ಬಹು ಅಂಗಾಂಗ ವೈಫಲ್ಯದಿಂದ ನಿನ್ನೆ ಇಹಲೋಕ ತ್ಯಜಿಸಿದ್ದಾರೆ.. ಇದ್ದಷ್ಟು ದಿನ ಮತ್ತೊಬ್ಬರನ್ನು ನಗಿಸುವ ಕೆಲಸವನ್ನೇ ಮಾಡಿದ ಬುಲೆಟ್ ಪ್ರಕಾಶ್ ಅವರಿಗೆ ಜೀವನದಲ್ಲಿ ನುಂಗಲಾರದ ನೋವು ಬಹಳಷ್ಟಿತ್ತು.. ಆದರೆ ಯಾವುದನ್ನು ತೋರಿಕೊಳ್ಳುತ್ತಿರಲಿಲ್ಲ..

ಎರಡು ವರ್ಷದ ಹಿಂದೆ ತೂಕ ಇಳಿಸುವ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಬುಲೆಟ್ ಪ್ರಕಾಶ್ ಅವರು ತೀರಾ ಸಣ್ಣಗಾಗಿ ಹೋಗಿದ್ದರು.‌ ಸಾಲು ಸಾಕು ಅವಕಾಶಗಳು ಕೈತಪ್ಪಿದವು.. ಕಣ್ಣೀರಿಟ್ಟಿದ್ದರು.. ಆನಂತರ ಇಂತಹ ಕಲಾವಿದನನ್ನು ಕೈಬಿಡಬಾರದೆಂದು ಬಹಳಷ್ಟು ಸಿನಿಮಾಗಳ ಆಫರ್ ಬಂದವು.. ಪೊಗರು, ಗಾಳಿಪಟ 2 ಹೀಗೆ ಇನ್ನು ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದರು..

ಆದರೆ ವಿಧಿ ಬರೆದದ್ದೇ ಬೇರೆ ಇತ್ತು.. ಕಳೆದ ತಿಂಗಳಿನಿಂದ ಬುಲೆಟ್ ಪ್ರಕಾಶ್ ಅವರ ಆರೋಗ್ಯದಲ್ಲಿ ಏರು ಪೇರು ಕಂಡುಬಂತು.. ಒಂದಲ್ಲಾ ಎರಡಲ್ಲಾ ಮೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು..

ಆದರೆ ಚಿಕಿತ್ಸೆ ಫಲಕಾರಿಯಾಗಲೇ ಇಲ್ಲ.. ಗ್ಯಾಸ್ಟ್ರಿಕ್ ತೊಂದರೆ ಎಂದು ಆಸ್ಪತ್ರೆಗೆ ದಾಖಲಾದರು.. ಆದರೆ ಲಿವರ್ ಮತ್ತು ಕಿಡ್ನಿ ಕೂಡ ಇನ್ಫೆಕ್ಷನ್ ಆಗಿದೆ ಎಂದು ತಿಳಿಯುವ ಹೊತ್ತಿಗೆ ಕಾಲ ಮಿಂಚಿ ಹೋಗಿತ್ತು..‌ ಬುಲೆಟ್ ಪ್ರಕಾಶ್ ಅವರ ಆರೋಗ್ಯ ತೀರಾ ಗಂಭೀರ ಸ್ಥಿತಿ ತಲುಪಿಯಾಗಿತ್ತು.. ವೆಂಟಿಲೇಟರ್ ನಲ್ಲಿ ಇರಿಸಲಾಗಿತ್ತು.

ನಿನ್ಮೆ ಸಂಜೆಯ ಸುಮಾರಿಗೆ ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ ತನ್ನ ಕಲಾ ಬದುಕು ಮುಗಿಸಿ ಬಾರದೂರಿಗೆ ಪಯಣವನ್ನು ಬೆಳೆಸಿಯೇ ಬಿಟ್ಟ.. ಜೀವನದಲ್ಲಿ ಸಾಲು ಸಾಲು ಜ್ವಾಬ್ದಾರಿಗಳು ಇದ್ದ ಬುಲೆಟ್ ಪ್ರಕಾಶ್ ಅವರು ಅದಕ್ಕಿಂತ ಹೆಚ್ಚಾಗಿ ಜೀವನದಲ್ಲಿ ಒಳ್ಳೆಯ ಸ್ನೇಹಿತರನ್ನು ಸಂಪಾದಿಸಿದ್ದರು.. ಕೊನೆಗಾಲದಲ್ಲಿ ಬುಲೆಟ್ ಪ್ರಕಾಶ್ ಇಲ್ಲವಾದ ನಂತರ ಅವರ ಕುಟುಂಬಕ್ಕೆ ಆ ಸ್ನೇಹಿತರೇ ನೆರವಾಗಿ ನಿಂತರು.. ಹೌದು ಯಾರಿಗೂ ತಿಳಿಯದಂತೆ ವ್ಯಕ್ತಿಯೊಬ್ಬ ಬಂದು ಆಸ್ಪತ್ರೆ ಬಿಲ್ ಕಟ್ಟಿ ಹೋದರು..

ಆತ ಮತ್ಯಾರೂ ಅಲ್ಲ.. ಬಿಜೆಪಿ ನಾಯಕ ಆರ್.ಅಶೋಕ್ ಅವರು.. ಹೌದು ಆರ್.ಅಶೋಕ್ ಅವರು ಬಂದು ಕುಟುಂಬಕ್ಕೆ ತಿಳಿಯದಂತೆ ಆಸ್ಪತ್ರೆ ಬಿಲ್ ಕಟ್ಟಿ ಹೋದರು.. ಕೊನೆ ಸಮಯದಲ್ಲಿ ಎಲ್ಲಾ ವ್ಯವಸ್ಥೆ ಮಾಡುತ್ತಿರುವ ನೆನಪಿರಲಿ ಪ್ರೇಮ್ ಹಾಗೂ ದುನಿಯಾ ವಿಜಯ್ ಅವರು ಈ ವಿಚಾರ ತಿಳಿಸಿ ಅಶೋಕ್ ಅವರಿಗೆ ಧನ್ಯವಾದ ತಿಳಿಸಿದರು..

ಅಶೋಕ್ ಅವರು ಬುಲೆಟ್ ಪ್ರಕಾಶ್ ಅವರ ಆಸ್ಪತ್ರೆ ಬಿಲ್ ಕಟ್ಟಿ ಪಾರ್ಥೀವ ಶರೀರವನ್ನು ತೆಗೆದುಕೊಂಡು ಹೋಗಲು ಅನುವು ಮಾಡಿದ್ದಾರೆ ಎಂಬ ವಿಷಯ‌ ತಿಳಿದ ಬಳಿಕ.. ಅಶೋಕ್ ಅವರು ಬಿಲ್‌ಕಟ್ಟಿದ್ದಾರೆ ಎಂಬ ವಿಚಾರ ತಿಳಿದ ನಂತರ.. ಆ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೀಡಲಾಗುವುದೆಂದು ಸರ್ಕಾರ ತಿಳಿಸಿದೆ..

ಬುಲೆಟ್ ಪ್ರಕಾಶ್ ಅವರ ಜೀವನದ ಒಂದು ಭಾಗವಾಗಿದ್ದ ದರ್ಶನ್ ಅವರು ಬುಲೆಟ್ ಪ್ರಕಾಶ್ ಅವರು ಅಗಲಿದ್ದಾರೆ ಎಂಬ ವಿಷಯ ಕೇಳುತ್ತಿದ್ದಂತೆ ಕುಟುಂಬಕ್ಕೆ ಫೋನ್ ಮಾಡಿ ಮಾತನಾಡಿದ್ದಾರೆ… ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ..‌ ಅವರೇ ಹೋದ ಮೇಲೆ ನಮಗ್ಯಾರು ದಿಕ್ಕು ಎಂದು ಬುಲೆಟ್ ಪ್ರಕಾಶ್ ಅವರ ಮಡದಿ ಕಣ್ಣೀರಿಟ್ಟಿದ್ದಾರೆ.. ಆ ಕೂಡಲೇ ದರ್ಶನ್ ಅವರು ಜವಬ್ದಾರಿ ಎಲ್ಲವನ್ನು ಬಿಟ್ಟಾಕಿ.. ಮಕ್ಕಳ ಎಲ್ಲಾ ಜವಬ್ದಾರಿ ನನ್ನದು.. ಅದನ್ನೆಲ್ಲಾ ಯೋಚಿಸಬೇಡಿ.. ಎಂತಹ ಕಷ್ಟ ಬಂದರೂ ನಾನಿದ್ದೇನೆ..

ಯಾವುದೇ ಸನಯದಲ್ಲಾದರೂ ಫೋನ್ ಮಾಡಿ ಎಂದು ತಿಳಿಸಿದ್ದಾರೆ.. ಮನುಷ್ಯ ಇದ್ದಾಗ ಸಹಾಯ ಮಾಡುವುದು ಒಂದು ರೀತಿ.. ಆದರೆ ಆ ಮನುಷ್ಯ ಇಲ್ಲವಾದಾಗ ಆ ಕುಟುಂಬಕ್ಕೆ ನೆರವಾಗಿ ನಿಲ್ಲೋದು ಇದೆಯಲ್ಲಾ ನಿಜಕ್ಕೂ ಅದು ದೊಡ್ಡಗುಣದಲ್ಲಿ‌ ದೊಡ್ಡಗುಣ.. ಹ್ಯಾಟ್ಸ್ ಆಫ್ ದರ್ಶನ್ ಸರ್..‌ ಬುಲೆಟ್ ಪ್ರಕಾಶ್ ಅವರ ಆತ್ಮಕ್ಕೆ ಶಾಂತಿ‌ ಸಿಗಲಿ..‌ ಕನ್ನಡದ ಅತ್ಯುತ್ತಮ ಕಲಾವಿದ.. ಮತ್ತೊಮ್ಮೆ ಇದೇ ನಾಡಲ್ಲಿ ಹುಟ್ಟಿ ಬರಲಿ..

Latest from News

Go to Top