ಗಂಡನಿದ್ದರೂ ಮತ್ತೊಬ್ಬನ‌ ಜೊತೆ ಆ ಕೆಲಸ ಮಾಡಿದಳು.. ಆದರೆ ಕೊನೆಗೆ ಇವಳ ಕತೆ ಏನಾಯ್ತು ಗೊತ್ತಾ.

ಪ್ರೀತಿ ಪ್ರೇಮ ಅನ್ನೋದು ವಯಸ್ಸಿನಲ್ಲಿ ಆಗೋದು ಸಹಜ.. ಮದುವೆಗೆ ಮುನ್ನ ಸಾಕಷ್ಟು ಜನರು ಪ್ರೀತಿಸ್ತಾರೆ.. ಅದರಲ್ಲಿ ಕೆಲವರು ಪ್ರೀತಿಸಿದವರನ್ನೇ ಕೈ ಹಿಡಿದು ಸಂಸಾರವನ್ನೂ ಮಾಡ್ತಾರೆ.. ಮತ್ತೆ ಕೆಲವರು ಸಮಯ ಕಳೆಯಲು ಪ್ರೀತಿ ಮಾಡಿ ನಂತರ ಅವರನ್ನು ಬಿಟ್ಟು ಬೇರೆಯವರ ಜೊತೆ ಜೀವನ ಕಟ್ಟಿಕೊಳ್ತಾರೆ.. ಇನ್ನೂ ಕೆಲವರು ಮನೆಯವರಿಗಾಗಿ ಪ್ರೀತಿಯನ್ನು ಬಿಟ್ಟು ಅಪ್ಪ ಅಮ್ಮ ತೋರಿದವರನ್ನ ಮದುವೆ ಆಗ್ತಾರೆ.. ಇದಿಷ್ಟೂ ಸಹ ಮದುವೆಗೆ ಮುನ್ನ ಆದರೆ ಸಾಮಾನ್ಯ ಎನಿಸುತ್ತದೆ.. ಆದರೆ ಮದುವೆಯಾದ ನಂತರ ಮಕ್ಕಳೂ ಸಹ ಆದನಂತರ ಬೇರೊಬ್ಬನ ಜೊತೆ ಪ್ರೀತಿಯಲ್ಲಿ ಬಿದ್ದರೆ ಹೇಗಾಗಬೇಡ..

ಹೌದು ಅದೇ ರೀತಿ ಮದುವೆಯ ನಂತರ ಪ್ರೀತಿಯಲ್ಲಿ ಬಿದ್ದ ಹೆಂಗಸಿನ ಕತೆ ನೋಡಿದ್ರೆ ಇವಳಿಗೆ ಬೇಕಿತ್ತಾ ಎನ್ನುವಂತಾಗಿದೆ.. ಹೌದು ಮನೆಯಲ್ಲಿ ಗಂಡ ಮಕ್ಕಳು ಎಲ್ಲರೂ ಸಹ ಇದ್ದರು..ಆದರೂ ಇವಳಿಗೆ ಮತ್ತೊಬ್ಬನ ಸಂಗ ಬೇಕಿತ್ತು.. ಅವನಿಗಾಗಿ ಗಂಡ ಮಕ್ಕಳನ್ನು ಬಿಟ್ಟು ಮನೆಯಿಂದ ಓಡಿ ಬಂದದ್ದೂ ಆಯ್ತು..ಆದರೆ ಈಗ ಅವಳ ಸ್ಥಿತಿ ಕಂಡರೆ ನಿಜಕ್ಕೂ ಅಸಹ್ಯವನ್ನುಂಟು ಮಾಡುತ್ತದೆ..

ಹೌದು ಈಕೆಯ ಹೆಸರು ಬಸವಲಿಂಗಮ್ಮ.. ಈಕೆ ಯಾದಗಿರಿಯ ಹೊಸಹಳ್ಳಿ ಕ್ರಾಸ್ ನ ನಿವಾಸಿ.. ಈಕೆಯನ್ನು ಅಲ್ಲಿಯೇ ಹತ್ತಿರದ ಊರಿನ ಪುರುಷನ ಜೊತೆ ಮನೆಯವರು ಮದುವೆ ಮಾಡಿಕೊಟ್ಟಿದ್ದರು.. ಜೀವನ ಚೆನ್ನಾಗಿತ್ತು.. ಮಕ್ಕಳೂ ಆಗಿದ್ದವು.. ಆದರೆ ಅದೇ ಊರಿನ ಪ್ರಕಾಶ್ ರೆಡ್ಡಿ ಎಂಬಾತ ಬಸವಲಿಂಗಮ್ಮನ ಹಿಂದೆ ಬಿದ್ದ.. ಈಕೆಯೂ ಸಹ ಅವನ ಮೋಹಕ್ಕೆ ಬಿದ್ದಳು.. ಗಂಡ ಮಕ್ಕಳ ನೆನಪೇ ಆಗದಷ್ಟು ಆತನ ಬಳಿ ಸುಖವುಂಡಳೋ ಎನೋ ಕೊನೆಗೆ ಗಂಡ ಮಕ್ಕಳನ್ನು ಬಿಟ್ಟು ಹೋಗುವ ನಿರ್ಧಾರ ಮಾಡಿಬಿಟ್ಟಳು..

ಹೌದು ಬಸವಲಿಂಗಮ್ಮಳನ್ನು ಮದುವೆಯಾಗುವುದಾಗಿ ಪ್ರಕಾಶ್ ರೆಡ್ಡಿ ಹೇಳುತ್ತಲೇ ಇದ್ದ.. ಅದೇ ಕಾರಣಕ್ಕೆ ಬಸವಲಿಂಗಮ್ಮ ತನ್ನ ಗಂಡ ಹಾಗೂ ಮಕ್ಕಳನ್ನು ಬಿಟ್ಟು ಮನೆಯಿಂದ ಹೊರ ಬಂದಳು.. ಆಗಲೇ ಕತೆಯಲ್ಲಿ ನಿಜವಾದ ಟ್ವಿಸ್ಟ್ ಸಿಕ್ಕಿದ್ದು.. ಹೌದು ಪ್ರಕಾಶ್ ರೆಡ್ಡಿಯನ್ನು ನಂಬಿ ಬಂದ ಬಸವಲಿಂಗಮ್ಮಳ‌ ಕತೆ ಈಗ ಬೀದಿಗೆ ಬಿದ್ದಿದೆ.. ಪ್ರಕಾಶ್ ರೆಡ್ಡಿ ಬಸವಲಿಂಗಮ್ಮಳಿಗೆ ಕೈಕೊಟ್ಟಾಯಿತು.. ಹೌದು ಗುರುಮಠಕಲ್ ತಾಲೂಕಿನ ಎಲ್ಲೇರಿ ಗ್ರಾಮದ ಪ್ರಕಾಶ್ ರೆಡ್ಡಿ ಬಸವಲಿಂಗಮ್ಮಳಿಂದ ಆಸೆ ತೀರಿಸಿಕೊಂಡು ಆಕೆಗೆ ಕೈಕೊಟ್ಟು ಹೋಗಿದ್ದಾನೆ..

ಇತ್ತ ಬಸವಲಿಂಗಮ್ಮ ಮಾತ್ರ ತನ್ನ ಪ್ರಿಯಕರನ‌ ಫೋಟೋ ಹಿಡಿದು ಬೀದಿಯಲ್ಲಿ ನಿಂತಿದ್ದಾಳೆ.. ಅಷ್ಟೇ ಅಲ್ಲದೇ ಇಷ್ಟಾದರೂ ಸಹ ತನಗೆ ತನ್ನ ಪ್ರಿಯಕರನೇ ಬೇಕು ಎಂದು ಪೊಲೀಸ್ ಠಾಣೆಯ ಮೆಟ್ಟಿಲನ್ನೂ ಸಹ ಏರಿದ್ದಾಳೆ.. ಇತ್ತ ರಸ್ತೆಯಲ್ಲಿ ನಿಂತು ಪರದಾಡುತ್ತಿದ್ದರೂ ಸಹ ನನಗೆ ಗಂಡ ಮಕ್ಕಳು ಬೇಕು ಎನ್ನುವ ಮಾತನಾಡದೇ ಈಗಲೂ ಸಹ ಪ್ರಿಯಕರನೇ ಬೇಕೆಂದು ಹಟ ಹಿಡಿದಿದ್ದು ಜಿಲ್ಲಾ ಉಸ್ತುವಾರಿ ಸಚಿವರ ಬಳಿಗೂ ಹೋಗಿದ್ದಾಳೆ ಎನ್ನಲಾಗಿದೆ..

ಅಲ್ಲಮ್ಮಾ ತಾಯಿ ಗಂಡ ಇದ್ದ ಮಕ್ಕಳಿದ್ದೋ.. ಗಂಡನಿಂದಲೇ ಎಲ್ಲಾ ಸುಖವನ್ನು ಪಡೆಯಬಹಿದಾಗಿತ್ತು.. ಆದರೂ ಸಹ ಮತ್ತೊಬ್ಬನ ಮೋಹಕ್ಕೆ ಬಿದ್ದು ಜೀವನವನ್ನೇ ಹಾಳು ಮಾಡಿಕೊಂಡರೂ ಸಹ ಈಗಲೂ ಆ ಪ್ರಿಯಕರನೇ ಬೇಕು ಅವನ ಜೊತೆ ಮದುವೆ ಮಾಡಿಸಿ‌ ಎನ್ನುತ್ತಿರುವ ನಿನ್ನ‌ಮಾತುಗಳು‌ ನಿಜಕ್ಕೂ ಅಬ್ಬಬ್ಬಾ ಗ್ರೇಟ್ ಬಿಡು.. ಬಸವಲಿಂಗಮ್ಮಳ ಗಂಡನಿಗೆ ಮುಂದೆ ಒಳ್ಳೆಯ ಜೀವನ ಸಿಗುವಂತಾಗಲಿ..