ಬುಲೆಟ್ ಪ್ರಕಾಶ್ ಅಗಲಿದ ಸುದ್ದಿ ತಿಳಿದಂತೆ ದರ್ಶನ್ ಮಾಡಿರುವ ಕೆಲಸ ನೋಡಿ..

ಕನ್ನಡ ಚಿತ್ರರಂಗದ ಪ್ರತಿಭಾವಂತ ಹಾಸ್ಯ ಕಲಾವಿದ ಬುಲೆಟ್ ಪ್ರಕಾಶ್ ಅವರು ನಿನ್ನೆ ಕೊನೆಯುಸಿರೆಳೆದಿದ್ದಾರೆ.. ಬಹು ಅಂಗಾಂಗ ವೈಫಲ್ಯದಿಂದ ನಿನ್ನೆ ಇಹಲೋಕ ತ್ಯಜಿಸಿದ್ದಾರೆ..

ಕಳೆದ ಕೆಲ ತಿಂಗಳಿನ ಹಿಂದೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು.. ಆ ಬಳಿಕ ಚೇತರಿಸಿಕೊಂಡು ಮತ್ತೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು.. ಆದರೀಗ ಆರೋಗ್ಯ ಏರು ಪೇರಾದ ಕಾರಣ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು.. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ..

ಕಳೆದ ಮಾರ್ಚ್ 30 ರಂದು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು… ಆದರೆ ಮೂರು ದಿನಗಳ ಹಿಂದೆ ಕಿಡ್ನಿ ಹಾಗೂ ಲಿವರ್ ಗೂ ಇನ್ಫೆಕ್ಷನ್ ಆದ ಕಾರಣ ಚಿಕಿತ್ಸೆ ನೀಡಲಾಗುತಿತ್ತು.. ನಿನ್ನೆ ತೀರಾ ಗಂಭೀರ ಸ್ಥಿತಿ ತಲುಪಿದ ಬುಲೆಟ್ ಪ್ರಕಾಶ್ ಅವರನ್ನು ವೆಂಟಿಲೇಟರ್ ನಲ್ಲಿ‌ ಇರಿಸಲಾಗಿತ್ತು.. ಕೊನೆಯ ಕ್ಷಣದ ವರೆಗೂ ಬದುಕುತ್ತಾರೆ ಅನ್ನೋ ಭರವಸೆಯಲ್ಲಿ‌ ಕುಟುಂಬವಿತ್ತು.. ಆದರೆ ವಿಧಿಯ ನಿರ್ಣಯವೇ ಬೇರೆ ಇದ್ದ ಕಾರಣ ನಿನ್ನೆ ನಮ್ಮನ್ನೆಲ್ಲಾ ಬಿಟ್ಟು ಅಗಲಿದ್ದಾರೆ..

ಇನ್ನು ದರ್ಶನ್ ಅವರಿಗೆ ಬುಲೆಟ್ ಪ್ರಕಾಶ್ ಅವರು ಎಷ್ಟು ಆತ್ಮೀಯರೆಂದು ಎಲ್ಲರಿಗೂ ತಿಳಿದೇ ಇದೆ.. ಬುಲೆಟ್ ಪ್ರಕಾಶ್ ಅವರು ತೀರಿ ಹೋದ ವಿಚಾರ ಕೇಳಿ ಬಹಳ ದುಃಖ ಪಟ್ಟ ದರ್ಶನ್ ಅವರು ಕುಟುಂಬಕ್ಕೆ ಫೋನ್ ಮಾಡಿ ಮಾತನಾಡಿದ್ದಾರೆ.. ಈ ಸಮಯದಲ್ಲಿ ಮಗಳ ಮದುವೆ ಮಾಡಬೇಕು ಅಂತ ಬಹಳಷ್ಟು ಬಾರಿ ಹೇಳುತ್ತಲೇ ಇದ್ದರು ಎಂದಿದ್ದಾರೆ ಕುಟುಂಬದವರು..

ಆತಕ್ಷಣ ಮರು ಮಾತನಾಡದೇ ಮಗಳ ಮದುವೆ ಮಾಡುವ ಜವಬ್ದಾರಿ‌ ನನ್ನದು.. ಯಾವುದೇ ಕಾರಣಕ್ಕೂ ಚಿಂತೆ ಮಾಡಬೇಡಿ.. ಯಾವುದೇ ಸಮಯದಲ್ಲಾದರೂ ಏನೇ ತೊಂದರೆ ಇದ್ದರು ಫೋನ್ ಮಾಡಿ.. ನಾನಿದ್ದೇನೆ ಎಂದಿದ್ದಾರೆ..

ನಿಜಕ್ಕೂ ವ್ಯಕ್ತಿ ಇದ್ದಾಗ ನಡೆದುಕೊಳ್ಳೋದು ಬೇರೆ.. ಆದರೆ ಆ ವ್ಯಕ್ತಿ ಇಲ್ಲವಾದಾಗಲೂ ಆ ಕುಟುಂಬಕ್ಕೆ ಬೆನ್ನೆಲುಬಾಗಿ‌ ನಿಲ್ಲುವವನೇ ನಿಜವಾದ ಮನುಷ್ಯತ್ವ ಇರುವ ಮನುಷ್ಯ..

ಬುಲೆಟ್ ಪ್ರಕಾಶ್ ಅವರ ಕುಟುಂಬದ ನೆರವಿಗೆ ನಿಂತ ದರ್ಶನ್ ಅವರ ದೊಡ್ಡ ಗುಣಕ್ಕೆ ಧನ್ಯವಾದಗಳು.. ಬುಲೆಟ್ ಪ್ರಕಾಶ್ ಅವರ ಆತ್ಮಕ್ಕೆ ಚಿರ ಶಾಂತಿ ಸಿಗಲಿ.. ಆ ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ‌ ನೀಡಲಿ..

Latest from News

Go to Top