ಕಾಂತಾರ ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಸಿಹಿ ಸುದ್ದಿ ನೀಡಿದ ರಿಷಭ್ ಶೆಟ್ಟಿ..

ಕಾಂತಾರ ಸಧ್ಯ ಕನ್ನಡ ಸಿನಿಮಾ ಇಂಡಸ್ಟ್ರಿಯ ಹೆಮ್ಮೆ.. ಕನ್ನಡ ನಾಡಿನ ಸಂಸ್ಕೃತಿಯ ಒಂದು ಭಾಗವಾಗಿರುವ ಕರಾವಳಿ ಸಂಸ್ಕೃತಿಯನ್ನು ತೆರೆ ಮೇಲೆ ತಂಡಿರುವ ಒಂದು ದಂತಕತೆ ಇದೀಗ ಸಿನಿಮಾ ರಂಗದಲ್ಲಿ ಹೊಸ ದಾಖಲೆ ಬರೆಯುತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ ಐವತ್ತು ಕೋಟಿ ಗಳಿಕೆಯ ದಾಖಲೆ ಬರೆಯುತ್ತಿದೆ.. ಹೌದು ರಿಷಭ್ ಶೆಟ್ಟಿ ಅವರ ಕನಸಿನ ಸಿನಿಮಾ ಕಾಂತಾರಕ್ಕೆ ಇದೀಗ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದ್ದು ಬಾಕ್ಸ್ ಆಫೀಸಿನಲ್ಲಿ ಹೊಸ ದಾಖಲೆ ಬರೆದು ಅತಿ ವೇಗವಾಗಿ ಐವತ್ತು ಕೋಟಿ ಗಳಿಕೆ ಕಾಣುತ್ತಿರುವ ಕನ್ನಡ ಭಾಷೆಯ ಸಿನಿಮಾ ಆಗಿದೆ.. ಇನ್ನು ಇದೇ ಸಂತೋಷದಲ್ಲಿರುವ ನಟ ರಿಷಭ್ ಶೆಟ್ಟಿ ಅವರೀಗ ತಮ್ಮ ವ್ಯಯಕ್ತಿಕ ಜೀವನದ ಮತ್ತೊಂದು ಸಂಭ್ರಮವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ..

ಹೌದು ನಟ ನಿರ್ದೇಶಕ ನಿರ್ಮಾಪಕ ರಿಷಭ್ ಶೆಟ್ಟಿ ಹಾಗೂ ಪ್ರಗತಿ ಜೋಡಿ ತಮ್ಮ ಮುದ್ದು ಮಗಳ ಕುರಿತು ಸಂತೋಷ ಹಂಚಿಕೊಂಡಿದೆ.. ಕಳೆದ ಏಳು ತಿಂಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ ರಿಷಭ್ ಶೆಟ್ಟಿ ಅವರ ಮಡದಿ ಪ್ರಗತಿ ಶೆಟ್ಟಿ ಮನೆಗೆ ಮಹಾಲಕ್ಷ್ಮಿಯನ್ನು ಬರಮಾಡಿಕೊಂಡಿದ್ದರು.. ಇದೀಗ ತಮ್ಮ ಮನೆಯ ಮಹಾಲಕ್ಷ್ಮಿಗೆ ವಿಶೇಷ ಹೆಸರನ್ನಿಟ್ಟಿದ್ದು ಮಗಳ ಫೋಟೋವನ್ನು ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಮಗಳಿಗೆ ಇಟ್ಟ ಹೆಸರನ್ನೂ ಸಹ ತಿಳಿಸಿ ನಿಮ್ಮೆಲ್ಲರ ಹಾರೈಕೆ ಮಗಳ ಮೇಲಿರಲಿ ಎಂದಿದ್ದಾರೆ.. ಹೌದು ಸಿನಿಮಾರಂಗದಲ್ಲಿ ಬ್ಯುಸಿ ಆಗಿರುವ ಸಮಯದಲ್ಲಿಯೇ ವ್ಯಯಕ್ತಿಕ ಜೀವನದ ಕಡೆಯೂ ಗಮನ ಕೊಟ್ಟ ರಿಷಭ್ ಶೆಟ್ಟಿ ಅವರು ಪ್ರಗತಿ ಅವರನ್ನು ಪ್ರೀತಿಸಿ ಮದುವೆಯಾದರು.. ನಂತರ ಈ ಜೋಡಿಗೆ ಗಂಡು ಮಗುವಾಗಿದ್ದು ರಣವಿತ್ ಶೆಟ್ಟಿ ಎಂಬ ಹೆಸರನ್ನಿಟ್ಟರು..

ಇನ್ನು ಇದೇ ವರ್ಷ ಜನವರಿಯಲ್ಲಿ ತಮ್ಮ ಕುಟುಂಬಕ್ಕೆ ಮತ್ತೊಂದು ಮಗುವಿನ ಆಗಮನವಾಗುತ್ತಿರುವ ವಿಚಾರ ಹಂಚಿಕೊಂಡಿದ್ದ ರಿಷಭ್ ಶೆಟ್ಟಿ ಬೇಸಿಗೆ ಶುರುವಾಗುತ್ತಿದ್ದಂತೆ ನಮ್ಮ ಕುಟುಂಬಕ್ಕೆ ಮತ್ತೊಂದು ಮಗುವಿನ ಆಗಮನವಾಗುತ್ತಿದೆ.. ರಣವಿತ್ ಶೆಟ್ಟಿ ಅಣ್ಣನಾಗುತ್ತಿದ್ದಾನೆ.. ಈ ವಿಚಾರ ತಿಳಿಸಲು ಸಂತೋಷವಾಗುತ್ತಿದೆ ಎಂದಿದ್ದರು.. ಅದರಂತೆ ಮಾರ್ಚ್ ನಾಲ್ಕರಂದು ಹೆಣ್ಣು ಮಗುವಿನ ವಿಚಾರ ತಿಳಿಸಿ ಪತ್ನಿಯ ಫೋಟೋ ಹಂಚಿಕೊಂಡು ಇಷ್ಟೇ ಚೆಂದದ ಮಗಳು ಹುಟ್ಟಿದ್ದಾಳೆ ಎಂದಿದ್ದರು.. ಇದೀಗ ಮಗಳು ನನಗೆ ಅದೃಷ್ಟ.. ಮಗಳು ಬಂದ ನಂತರ ಕಾಂತಾರ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಕಂಡಿದೆ.. ಎಂದಿದ್ದರು.. ಇದೀಗ ಮಗಳಿಗೆ ವಿಶೇಷವಾದ ಹೆಸರನ್ನೂ ಸಹ ಇಟ್ಟಿದ್ದಾರೆ..

ಹೌದು ನವರಾತ್ರಿಯ ಅಂಗವಾಗಿ ಸಾಮಾಜಿಕ ಜಾಲತಾಣದಲ್ಲಿ ಮಗಳ ಫೋಟೋ ಹಂಚಿಕೊಂಡಿರುವ ರಿಷಭ್ ಶೆಟ್ಟಿ ಅವರು “ಎಲ್ಲರಿಗೂ ನವರಾತ್ರಿ ದಸರಾ ಹಬ್ಬದ ಶುಭಾಶಯಗಳು. ನಾಡಹಬ್ಬಕ್ಕೆ ಕಾಂತಾರದ ಯಶಸ್ಸು.. ನಾಡಿನ ಜನರ ಪ್ರೀತಿ ಮತ್ತಷ್ಟು ಸಂಭ್ರಮವನ್ನು ತಂದಿದೆ. ಇದಕ್ಕೆ ಕಲಶಪ್ರಾಯವಾಗಿ ಮಗಳು ರಾಧ್ಯಾಳ ಮುಗ್ಧ ನಗುವೂ ಜೊತೆಯಾಗಿದೆ.. ಮಗಳಿಗೆ ನಿಮ್ಮೆಲ್ಲರ ಆಶೀರ್ವಾದವಿರಲಿ.. ಎಂದು ಬರೆದು ಪೋಸ್ಟ್ ಮಾಡಿದ್ದು ಈ ಹಿಂದೆ ಮಗನಿಗೆ ರಣವಿತ್ ಶೆಟ್ಟಿ ಎಂದು ಹೆಸರನ್ನಿಟ್ಟಿದ್ದು ಈಗ ಮಗಳಿಗೆ ರಾಧ್ಯಾ ಎಂಬ ಹೆಸರನ್ನಿಟ್ಟಿದ್ದಾರೆ..

ರಿಷಭ್ ಶೆಟ್ಟಿ ಅವರ ಮುದ್ದು ಮಗಳ ಫೋಟೋಗೆ ಅಭಿಮಾನಿಗಳು ಸ್ನೇಹಿತರು ಮೆಚ್ಚುಗೆ ವ್ಯಕ್ತ ಪಡಿಸಿ ಶುಭ ಹಾರೈಸಿದ್ದಾರೆ. ಅತ್ತ ಕುಟುಂಬದ ವಿಚಾರದಲ್ಲಿಯೂ ಮಡದಿ ಮುದ್ದಾದ ಎರಡು ಮಕ್ಕಳು ಹೀಗೆ ಚೆಂದದ ಸಂಸಾರ.. ಇತ್ತ ವೃತ್ತಿ ಬದುಕಿನಲ್ಲಿಯೂ ಸಾಲು ಸಾಲು ಹಿಟ್ ಸಿನಿಮಾಗಳು.. ಕಳೆದ ವರ್ಷವಷ್ಟೇ ಹನ್ನೊಂದು ಕೋಟಿ ಕೊಟ್ಟು ದ್ವಾರಕೀಶ್ ಅವರ ಬಂಗಲೆಯನ್ನು ಕೊಂಡುಕೊಂಡ ರಿಷಭ್ ಅವರು ತಿಂಗಳ ಹಿಂದೆ ಆಡಿ ಕಾರ್ ಕೂಡ ಕೊಂಡುಕೊಂಡಿದ್ದರು. ಒಟ್ಟಿನಲ್ಲಿ ತಾವು ಪಟ್ಟ ಶ್ರಮಕ್ಕೆ ಇದೀಗ ಒಳ್ಳೆಯ ಬದುಕು ಕಟ್ಟಿಕೊಂಡಿದ್ದು ಇವರ ಜೀವನ ಹೀಗೆ ಯಶಸ್ಸಿನ ಹಾದಿಯಲ್ಲಿ ಸಾಗಲಿ.. ಇವರಿಂದ ಕನ್ನಡಕ್ಕೆ ಮತ್ತಷ್ಟು ಒಳ್ಳೆಯ ಸಿನಿಮಾಗಳು ಬರಲಿ ಎಂದು ಹಾರೈಸಿದ್ದಾರೆ‌‌..