ರಸ್ತೆಯಲ್ಲಿ ಸಿಕ್ತು 45 ಲಕ್ಷ ರೂಪಾಯಿ.. ಆದರೆ ದುಡ್ಡು ನೋಡಿದ ತಕ್ಷಣ ಈ ಪೋಲೀಸ್ ಮಾಡಿದ್ದೇ ಬೇರೆ..

ಸಾಮಾನ್ಯವಾಗಿ ರಸ್ತೆಗಳಲ್ಲಿ ದುಡ್ಡು ಸಿಗೋದು ಹೊಸ ವಿಚಾರವೇನೂ ಅಲ್ಲ.. ಹತ್ತು ರೂಪಾಯಿಯೋ ಅಥವಾ ಇಪ್ಪತ್ತು ರೂಪಾಯಿಯೋ ಅಥವಾ ಕಾಯಿನ್ ಗಳೋ ಸಿಗೋದುಂಟು.. ಅದರಲ್ಲೂ ಈ ರೀತಿ ಚಿಲ್ಲರೆ ಕೂಡ ಕೆಲವರಿಗೆ ಮಾತ್ರವೇ ಸಿಗೋದುಂಟು.. ಮತ್ತಷ್ಟು ಮಂದಿಗೆ ನಯಾ ಪೈಸೆ ಕೂಡ ಸಿಕ್ಕ ಉದಾಹರಣೆಗಳಿಲ್ಲ.. ಆದರೆ ಒಂದೇ ಕ್ಷಣಕ್ಕೆ ರಸ್ತೆಯಲ್ಲಿ ಲಕ್ಷ ಲಕ್ಷ ಹಣ ಸಿಕ್ಕಾಗ ಯಾವ ರೀತಿ ಅನಿಸಿರಬೇಡ.. ಹೌದು ಅದೇ ರೀತಿ ರಸ್ತೆಯಲ್ಲಿ ಒಂದಲ್ಲಾ ಎರಡಲ್ಲಾ ಬರೋಬ್ಬರಿ 45 ಲಕ್ಷ ರೂಪಾಯಿ ಹಣ ಪೊಲೀಸ್ ಕಾನ್ಸ್ಟೆಬಲ್ ಒಬ್ಬತಿಗೆ ಸಿಕ್ಕಿದೆ.. ಆದರೆ ದುಡ್ಡು ಸಿಕ್ಕ ಮರುಕ್ಷಣವೇ ಆ ವ್ಯಕ್ತಿ ಮಾಡಿರೋ ಕೆಲಸ ನಿಜಕ್ಕೂ ಶಾಕ್ ಆಗುವಂತಿದೆ..

ಹೌದು ಸಾಮಾನ್ಯವಾಗಿ ಚುನಾವಣಾ ಸಮಯದಲ್ಲಿ ಪೊಲೀಸರಿಗೆ ಹೆದರಿ ಹಣದ ಚೀಲಗಳನ್ನು ಅಲ್ಲಲ್ಲಿ ಬಿಸಾಡಿ ಹೋದ ಸಾಕಷ್ಟು ಘಟನೆಗಳು ನಡೆದಿದೆ.. ಆ ರೀತಿ ಹಣ ಏನಾದರು ಸಾಮಾನ್ಯ ಜನರಿಗೆ ಸಿಕ್ಕಾಗ ಅದನ್ನು ಮರಳಿಸಿರುವ ಉದಾಹರಣೆ ಬಹಳಷ್ಟು ಕಡಿಮೆ.. ಸಿಕ್ಕಿದ್ದೆ ಚಾನ್ಸ್ ಎಂದು ಅದನ್ನು ನಮ್ಮ ನಮ್ಮ ಕಷ್ಟಗಳಿಗೆ ಬಳಸಿಕೊಳ್ಳುತ್ತೇವೆ.. ಆದರೆ ಈ ಪೋಲೀಸಪ್ಪ ಮಾತ್ರ ಮಾಡಿದ್ದೇ ಬೇರೆ.. ಹೌದು ರಸ್ತೆಯಲ್ಲಿ ಸಿಕ್ಕ 45 ಲಕ್ಷ ರೂಪಾಯಿ ಇದ್ದ ಬ್ಯಾಗ್​ ಅನ್ನು ಪೊಲೀಸ್ ಠಾಣೆಗೆ ಹಸ್ತಾಂತರಿಸಿ ಛತ್ತೀಸ್​ಗಢದ ಪೊಲೀಸ್ ಸಿಬ್ಬಂದಿಯೊಬ್ಬರು ಮಾನವೀಯತೆ ಮೆರೆದಿದ್ದಾರೆ. ಇವರ ಪ್ರಾಮಾಣಿಕತೆಯನ್ನು ಮೆಚ್ಚಿ ಪೊಲೀಸ್ ಇಲಾಖೆ ಬಹುಮಾನ ಘೋಷಿಸಿದೆ..

ರಸ್ತೆಯಲ್ಲಿ ನಡೆದುಕೊಂಡು ಹೋಗುವಾದ 10ರೂಪಾಯಿಯೋ ಅಥವಾ 100 ರೂಪಾಯಿ ಸಿಕ್ಕರೆ ತಮ್ಮ ಜೇಬಿಗೆ ಹಾಕಿಕೊಳ್ಳುವ ಈ ಸಮಾಜದಲ್ಲಿ ಒಂದಷ್ಟು ಪ್ರಾಮಾಣಿಕ ವ್ಯಕ್ತಿಗಳನ್ನು ಕೂಡ ಕಾಣುತ್ತೇವೆ. ಇಂತಹ ವ್ಯಕ್ತಿಗಳು ಕಂಡವರ ದುಡ್ಡು ನಮಗ್ಯಾಕೆ ಎಂದು ಹೇಳಿ ಹಣವನ್ನು ಸಂಬಂಧಪಟ್ಟ ವ್ಯಕ್ತಿಗಳಿಗೆ ನೀಡುವಷ್ಟು ಉದಾರ ಮನಸ್ಸನ್ನು ಹೊಂದಿರುತ್ತಾರೆ. ಇದಕ್ಕೆ ಹಲವಾರು ನಿದರ್ಶನಗಳನ್ನು ಕಾಣಬಹುದು. ಇಲ್ಲೊಬ್ಬ ಪೊಲೀಸ್ ಮನಸು ಮಾಡಿದರೆ ರಸ್ತೆಯಲ್ಲಿ ಸಿಕ್ಕ ಹಣದಲ್ಲಿ ಐಷಾರಾಮಿ ಕಾರು ಅಥವಾ ಸಣ್ಣ ಆಸ್ತಿಯನ್ನು ಖರೀದಿಸಬಹುದಿತ್ತು. ಆದರೆ ಇವರಲ್ಲಿನ ಒಳ್ಳೆಯ ಮನಸ್ಸು ಹಾಗೂ ಮನುಷ್ಯತ್ವ ಇದ್ದಿದ್ದರಿಂದ ತಮಗೆ ಸಿಕ್ಕ ಲಕ್ಷಾಂತರ ರೂಪಾಯಿ ಹಣವನ್ನು ಠಾಣೆಗೆ ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ..

ಛತ್ತೀಸ್​ಗಢದ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯೊಬ್ಬರು ರಸ್ತೆಯಲ್ಲಿ ನಡೆದುಕೊಂಡ ಹೋಗುತ್ತಿದ್ದಾ 45 ಲಕ್ಷ ರೂಪಾಯಿ ಉಳ್ಳ ಬ್ಯಾಗ್ ಸಿಕ್ಕಿದೆ. ಈ ಬ್ಯಾಗ್ ಅನ್ನು ಸ್ಥಳೀಯ ಪೊಲೀಸ್ ಠಾಣೆಗೆ ಹಸ್ತಾಂತರಿಸುವ ಮೂಲಕ ಮಾನವೀಯತೆ ಮೆರೆದಿದ್ದು, ಇವರ ಪ್ರಾಮಾಣಿಕತೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ..

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಖನಂದನ್ ರಾಥೋರ್ ಮಾತನಾಡಿ, ನವ ರಾಯ್‌ಪುರದ ಕಯಾಬಂಧ ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಟ್ರಾಫಿಕ್ ಕಾನ್‌ಸ್ಟೆಬಲ್ ನಿಲಂಬರ್ ಸಿನ್ಹಾ ಅವರು ಬೆಳಿಗ್ಗೆ ಮಾನಾ ಪೊಲೀಸ್ ಠಾಣಾ ವ್ಯಾಪ್ತಿಯ ರಸ್ತೆಯೊಂದರಲ್ಲಿ ಬ್ಯಾಗ್ ಅನ್ನು ಕಂಡುಕೊಂಡಿದ್ದಾರೆ. ಬ್ಯಾಗ್ ಪರಿಶೀಲಿಸಿದಾಗ ಅದರೊಳಗೆ 2000 ಮತ್ತು 500 ರೂ. ನೋಟುಗಳ ಕಂತೆ ಕಂಡುಬಂದಿದೆ. ಈ ಬ್ಯಾಗ್​ನಲ್ಲಿ ಒಟ್ಟು 45 ಲಕ್ಷ ರೂಪಾಯಿ ಪತ್ತೆಯಾಗಿದೆ..

ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಿವಿಲ್ ಲೈನ್ಸ್ ಠಾಣೆಗೆ ಬ್ಯಾಗ್ ಅನ್ನು ಹಸ್ತಾಂತರಿಸಿದ್ದಾರೆ ಎಂದಿದ್ದಾರೆ.. ಇನ್ನು ಈ ಪೋಲೀಸಪ್ಪನ ಒಳ್ಳೆಯ ಗುಣವನ್ನು ಮೆಚ್ಚಿ ಇವರಿಗೆ ಬಹುಮಾನವನ್ನೂ ಸಹ ಘೋಷಣೆ ಮಾಡಲಾಗಿದ್ದು.. ಆ ನಲವತ್ತೈದು ಲಕ್ಷ ರೂಪಾಯಿ ಹಣ ಯಾರದು ಎಂದು ತನಿಖೆ ಆರಂಭಿಸಿದ್ದಾರೆ.. ಒಟ್ಟಿನಲ್ಲಿ ಮನುಷ್ಯನಲ್ಲಿ ಒಳ್ಳೆಯತನ ಇನ್ನೂ ಇದೆ ಅನ್ನೋದಕ್ಕೆ ಆಗಾಗ ನಡೆಯುವ ಇಂತಹ ಗುಣಗಳು ಸಾಕ್ಷಿಯಾಗುತ್ತವೆ.. ಆ ಪೋಲೀಸಪ್ಪನ ಕುಟುಂಬ ಚೆನ್ನಾಗಿರಲಿ..

ಓಂ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.. ಮಹರ್ಷಿ ರವೀಂದ್ರ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9620202225. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9620202225