ಪತ್ನಿ ದೂರಾದಳು.. ಆದರೆ ಮಕ್ಕಳ ಜೊತೆ ಈತ ಮಾಡಿದ ಕೆಲಸವೇನು ಗೊತ್ತಾ? ಮನಕಲಕುವಂತಿದೆ..

ಮದುವೆ ಅನ್ನೋದು ಒಂದು ಬಾಂಧವ್ಯ ನಿಜ.. ಆದರೆ ಒಮ್ಮೆ ಮಕ್ಕಳಿಗೆ ಜನ್ಮ ನೀಡಿದರೆ ಆನಂತರ ಜವಬ್ದಾರಿ ಅನ್ನೋದು ಪ್ರತಿ ಅಪ್ಪ ಅಮ್ಮನ ಮೊದಲ ಕರ್ತವ್ಯವಾಗಬೇಕು.. ಎಂತಹುದೇ ಸಂದರ್ಭದಲ್ಲಿಯೂ ಕೂಡ ಮಕ್ಕಳ ಮೇಲಿನ ಜವಬ್ದಾರಿಯನ್ನು ಮರೆಯಬಾರದು..

ಆದರೆ ಇಲ್ಲೊಂದು ಮನಕಲಕುವ ಘಟನೆ ನಡೆದು ಹೋಗಿದೆ.. ಚೆನ್ನೈನ ಕೊಡೈಕಲ್ ಗ್ರಾಮದಲ್ಲಿ ವೆಂಕಟೇಶ್ ಹಾಗೂ ನಿರ್ಮಲಾ ಎಂಬ ದಂಪತಿ ವಾಸವಾಗಿತ್ತು.. ಅವರಿಗೆ ಎರಡು ವರ್ಷದ ಸಂಜನಾ ಶ್ರೀ ಹಾಗೂ ಒಂದು ವರ್ಷದ ರಿತಿಕಾಶ್ರೀ ಎಂಬ ಎರಡು ಪುಟ್ಟ ಕಂದಮ್ಮಗಳು ಇದ್ದವು‌..

ಆದರೆ ನಿರ್ಮಲಾ ಯಾವುದೋ ಕಾರಣಕ್ಕೆ ಮನೆಯಲ್ಲಿ ಮನನೊಂದು ಆ ಎರಡು ಮಕ್ಕಳನ್ನು ಮರೆತು ಎಲ್ಲರನ್ನು ತೊರೆದು ಇಲ್ಲವಾಗಿ ಹೋದಳು.. ಈ ವಿಚಾರ ತಿಳಿದ ವೆಂಕಟೇಶ್ ಕೊನೆ ಪಕ್ಷ ಆ ಎರಡು ಮಕ್ಕಳ ಮುಖವನ್ನಾದರೂ ನೋಡಬೇಕಿತ್ತು.. ಆದರೆ ಆತ ಮಾಡಿದ ಕೆಲಸವೇ ಬೇರೆ..

ಹೌದು ಆತ ಆ ಪುಟ್ಟ ಕಂದಮ್ಮಗಳ ಜವಬ್ದಾರಿ ತೆಗೆದುಕೊಂಡು ಜೀವನ ಸಾಗಿಸುವ ನಿರ್ಧಾರ ತೆಗೆದುಕೊಳ್ಳಬೇಕಿತ್ತು.. ಆದರೆ ಆತ ಏನೂ ಅರಿಯದ ಆ ಮಕ್ಕಳ ಜೊತೆ ತಾನೂ ಕೂಡ ಶತಾಬ್ದಿ ರೈಲಿಗೆ ತಲೆಕೊಟ್ಟೇ ಬಿಟ್ಟನು..

ಆ ಮಕ್ಕಳು ಕೊನೆ ಕ್ಷಣದಲ್ಲಿ ಅನುಭವಿಸಿದ ನೋವಿನ ಅರಿವಾದರೂ ಆತನಿಗೆ ಬರಬಾರದಿತ್ತ? ಆ ಮಕ್ಕಳ ಚೀರಾಟವಾದರೂ ಆತನ ಮನಸ್ಸು ಬದಲಿಸಬಾರದಿತ್ತಾ? ಮಕ್ಕಳನ್ನು ಹುಟ್ಟಿಸೋದು ದೊಡ್ಡ ಕಾರ್ಯವಲ್ಲ.. ಎಂತಹುದೇ ಕಷ್ಟವಾದರೂ ಆ ಮಕ್ಕಳನ್ನು ದಡ ಸೇರಿಸಲು ಪ್ರಯತ್ನ ಪಡುವುದೇ ನಿಜವಾದ ಜೀವನ..

ಅವರಿಗೆ ನೋವಾಗಿದೆ ನಿಜ.. ಜಗಳಗಳಿಂದ ಮನಸ್ದು ನೊಂದಿದೆ ನಿಜ.. ಆದರೆ ಆ ಮಕ್ಕಳು ಮಾಡಿದ ತಪ್ಪಾದರೂ ಏನು?

All Rights Reserved News Jagath.