ಸುಚೇಂದ್ರ ಪ್ರಸಾದ್ ಗೆ ಕೊನೆಯದಾಗಿ ಮುಖಕ್ಕೆ ಹೊಡೆದಂತೆ ಪವಿತ್ರಾ ಲೋಕೇಶ್ ಹೇಳಿದ ಮಾತು ನೋಡಿ..

ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿ ಸದ್ದು ಮಾಡುತ್ತಿರುವುದು ನಟಿ ಪವಿತ್ರಾ ಲೋಕೇಶ್ ಅವರ ಮೂರನೇ ಮದುವೆ ವಿಚಾರ. ತೆಲುಗಿನ ಖ್ಯಾತ ನಟ ನರೇಶ್ ಅವರ ಹಾಗೂ ಪವಿತ್ರಾ ಲೋಕೇಶ್ ಅವರು ಗುಟ್ಟಾಗಿ ಮದುವೆ ಆಗಿದ್ದಾರೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ. ಇಬ್ಬರು ಜೊತೆಯಾಗಿ ಮಹಾಬಲೇಶ್ವರ ದೇವಸ್ಥಾನಕ್ಕೆ ಹೋಗಿ ಬಂದ ನಂತರ ಈ ಸುದ್ದಿ ವೈರಲ್ ಆಯಿತು. ಈ ವಿಚಾರದ ಬಗ್ಗೆ ಮಾಧ್ಯಮಗಳಲ್ಲಿ ಅಂತೆ ಕಂತೆಗಳು ಕೇಳಿಬಂದರು ಸಹ, ಸಂಬಂಧ ಪಟ್ಟ ವ್ಯಕ್ತಿಗಳು ಕೆಲ ಸಮಯ ಸುಮ್ಮನಿದ್ದರು.

ಮೊದಲಿಗೆ ನರೇಶ್ ಅವರ ಮೂರನೇ ಪತ್ನಿ ಕರ್ನಾಟಕದ ಮಹಿಳೆ ಕನ್ನಡತಿ ರಮ್ಯಾ ರಘುಪತಿ ಅವರು ಮಾಧ್ಯಮದ ಎದುರು ಬಂದು ಮಾತನಾಡಿದರು, ನರೇಶ್ ಅವರ ನಿಜವಾದ ವ್ಯಕ್ತಿತ್ವ ಎಂಥದ್ದು, ಅವರಿಂದ ತಮಗೆ ಏನೆಲ್ಲಾ ಮೋಸ ಆಗಿದೆ ಎನ್ನುವುದನ್ನು ವಿವರಿಸಿದ್ದರು ರಮ್ಯಾ ರಘುಪತಿ. ಹಲವು ಕನ್ನಡ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದರು. ಬಳಿಕ ನರೇಶ್ ಅವರು ಸಹ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ಪತ್ನಿ ರಮ್ಯಾ ತಮ್ಮ ವಿರುದ್ಧ ಮಾಡಿದ ಆಪಾದನೆಗಳೆಲ್ಲವು ಸುಳ್ಳು ಎಂದು ಹೇಳಿ, ಪವಿತ್ರಾ ಅವರು ತಮ್ಮ ಸ್ನೇಹಿತೆ, ಸಂಗಾತಿ ಮತ್ತು ಫಿಲಾಸಫರ್ ಎಂದು ಹೇಳಿದ್ದರು. ಇನ್ನು ನಟ ಸುಚೇಂದ್ರ ಪ್ರಸಾದ್ ಅವರು ಮಾತನಾಡಿರುವ ಆಡಿಯೋ ಸಹ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಸುಚೇಂದ್ರ ಪ್ರಸಾದ್ ಅವರು, ಪವಿತ್ರಾ ಲೋಕೇಶ್ ಅವರಿಗೆ ಲಾಲಸೆ, ಅವರದ್ದು ಲಪಟಾಯಿಸುವ ಬುದ್ಧಿ, ಆತ ಲಂಪಟ. ಇದು ಹೆಚ್ಚು ಕಾಲ ಉಳಿಯುವುದಿಲ್ಲ 6 ತಿಂಗಳು ಅಷ್ಟೇ. ನಾನು ಅವರಿಂದ ತೊಂದರೆ ಅನುಭವಿಸಿದ್ದೇನೆ. ಅವರ ಬೇಕು ಬೇಡಗಳನ್ನು ಪೂರೈಸುವ ಪ್ರಯತ್ನ ಮಾಡಿದ್ದೇನೆ, ಪವಿತ್ರಾ ಲೋಕೇಶ್ ಹಣಕ್ಕಾಗಿ ಇದೆಲ್ಲ ಮಾಡುತ್ತಿದ್ದಾರೆ ಎಂದು ಸುಚೇಂದ್ರ ಪ್ರಸಾದ ಅವರು ಜರ್ನಲಿಸ್ಟ್ ಒಬ್ಬರ ಜೊತೆಗೆ ದೂರವಾಣಿಯಲ್ಲಿ ಮಾತನಾಡಿರುವ ಆಡಿಯೋ ಕ್ಲಿಪ್ ವೈರಲ್ ಆಗಿತ್ತು. ಹಲವರು ಈ ವಿಚಾರದ ಬಗ್ಗೆ ಚರ್ಚೆಗಳನ್ನು ಸಹ ಮಾಡಿದ್ದರು.

ಈ ವಿಷಯದ ಬಗ್ಗೆ ಇಷ್ಟು ದಿನಗಳ ಕಾಲ ಮೌನ ವಹಿಸಿದ್ದ ಪವಿತ್ರಾ ಲೋಕೇಶ್ ಅವರು ಸಹ ಈಗ ಮಾಧ್ಯಮದ ಎದುರು ಬಂದು ಮಾತನಾಡಿದ್ದಾರೆ. ಸುಚೇಂದ್ರ ಪ್ರಸಾದ್ ಅವರು ತಮ್ಮ ಬಗ್ಗೆ ಮಾತಮಾಡಿರುವ ಮಾತುಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ ಪವಿತ್ರಾ ಲೋಕೇಶ್. “ಸುಚೇಂದ್ರ ಪ್ರಸಾದ್ ಅವರ ಜೊತೆ ನಾನು 11 ವರ್ಷಗಳ ಕಾಲ ಜೀವನ ಮಾಡಿದ್ದೇನೆ, 5 ವರ್ಷಗಳಿಂದ ನಾನು ಅವರ ಜೊತೆಯಲ್ಲಿಲ್ಲ. ನಾನು ಸುಚೇಂದ್ರ ಪ್ರಸಾದ್ ಅವರ ಜೊತೆಯಲ್ಲಿದ್ದಾಗ, ಅವರ ಬಳಿ ಏನು ಇರಲಿಲ್ಲ.ಪಾಕೆಟ್ ನಲ್ಲಿ ಹಣ ಇರಲಿಲ್ಲ, ಕಾರ್ ಇರಲಿಲ್ಲ, ಮನೆ ಇರಲಿಲ್ಲ. ಆದರೂ ನಾನು ಅವರ ಜೊತೆ ಇದ್ದೆ. ಹಣಕ್ಕಾಗಿ ನಾನು ಅವರ ಜೊತೆ ಇದ್ದಿದ್ದರೆ, ಒಂದು ವರ್ಷ ಜೊತೆಯಲ್ಲಿ ಇರುತ್ತಿದ್ದೆ ಅಷ್ಟೇ, 11 ವರ್ಷಗಳು ಅಲ್ಲ..” ಎಂದಿದ್ದಾರೆ ಪವಿತ್ರಾ ಲೋಕೇಶ್.

“ನಾನು ಒಬ್ಬ ನಟಿ, ನಾನು ಎಲ್ಲೆಂದರಲ್ಲಿ ಓಡಾಡೋಕೆ ಆಗಲ್ಲ. ಸಮಾಜದಲ್ಲಿ ನನಗೆ ಗೌರವ ಇದೆ. ನನಗೆ ಓಡಾಡಲು ಕಾರ್ ಬೇಕು. ಅದು ಅವಶ್ಯಕತೆ, ಆಸೆ ಅಲ್ಲ. ಅವಶ್ಯಕತೆಯನ್ನು ಅವರು ಆಸೆ ಎಂದುಕೊಂಡರೆ ಅದು ಅವರ ಮೂರ್ಖತನ ಆಗುತ್ತದೆ. ಸುಚೇಂದ್ರ ಪ್ರಸಾದ್ ಅವರ ಎಜುಕೇಶನ್, ಅವರ ವ್ಯಕ್ತಿತ್ವ, ಅವರ ಪಾಂಡಿತ್ಯ ಇದೆಲ್ಲದಕ್ಕೂ ಗೌರವ ನೀಡಿ ನಾನು ಇಷ್ಟು ದಿನ ಸುಮ್ಮನೆ ಇದ್ದೆ, ಅವರೇ ಈ ರೀತಿ ಮಾತನಾಡಿರುವುದರಿಂದ ಹೀಗೆ ಹೇಳುತ್ತಿದ್ದೇನೆ. ಜೀವನ ಮಾಡಲು ಒಂದು ಕೆಲಸ ಅಂತ ಇರಬೇಕು. ಗಂಜಿ ಕುಡಿದು ಜೀವನ ಮಾಡು ಅಂದ್ರೆ ಮಾಡೋಕಾಗಲ್ಲ. ಸಮಾಜದಲ್ಲಿ ಗೌರವದಿಂದ ಬದುಕಲು ಹಣ ಬೇಕು..” ಎಂದು ಹೇಳಿ ಸುಚೇಂದ್ರ ಪ್ರಸಾದ್ ಅವರ ಮಾತಿಗೆ ಉತ್ತರ ಕೊಟ್ಟಿದ್ದಾರೆ ಪವಿತ್ರಾ ಲೋಕೇಶ್.

ಇನ್ನು ಮಾತನಾಡಿ, “ನಾನು ಈಗ ಸುಚೇಂದ್ರ ಪ್ರಸಾದ್ ಅವರ ಬಗ್ಗೆ ಮಾತನಾಡಲು ಬಂದಿಲ್ಲ. ಅವರ ಬಗ್ಗೆ ಇನ್ನೊಂದು ಸಾರಿ ಮಾತನಾಡುತ್ತೇನೆ. ಈಗ ನಾನು ರಮ್ಯಾ ರಘುಪತಿ ಅವರು ನನ್ನ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ಮಾತನಾಡಲು ಬಂದಿದ್ದೇನೆ..ನನಗೆ ರಕ್ಷಣೆ ಬೇಕು. ಸಮಾಜದಲ್ಲಿ ನನ್ನ ಮಾನಹಾನಿ ಆಗಿದೆ, ಹಾಗಾಗಿ ಸ್ಪಷ್ಟನೆ ಕೊಡಲು ಬಂದಿದ್ದೇನೆ. ಸುಚೇಂದ್ರ ಪ್ರಸಾದ್ ಅವರ ಬಗ್ಗೆ ಇನ್ನೊಂದು ಸಾರಿ ಮಾತನಾಡುತ್ತೇನೆ..” ಎಂದು ಮಾಧ್ಯಮಗಳ ಎದುರು ಸ್ಪಷ್ಟನೆ ನೀಡಿದ್ದಾರೆ ಪವಿತ್ರಾ ಲೋಕೇಶ್.