ಪವಿತ್ರಾ ಲೋಕೇಶ್ ಗಾಗಿ ನರೇಶ್ ಕೊಟ್ಟಿರುವ ದುಬಾರಿ ಬೆಲೆಯ ಉಡುಗೊರೆ ನೋಡಿ..

ಬಹುಭಾಷಾ ನಟಿ ಪವಿತ್ರಾ ಲೋಕೇಶ್ ಮತ್ತು ತೆಲುಗಿನ ಖ್ಯಾತ ನಟ ನರೇಶ್ ಅವರ ವಿಚಾರದಲ್ಲಿ ಈಗ ಮಾಧ್ಯಮದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂದು ಪ್ರತಿದಿನ ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಇವರ ಪ್ರಕರಣ ದಿನದಿಂದ ದಿನಕ್ಕೆ ಬೇರೆಯದೇ ಟ್ವಿಸ್ಟ್ ಗಳನ್ನು ಪಡೆಯುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದ ಹಾಗೆ ನಟಿ ಪವಿತ್ರಾ ಲೋಕೇಶ್, ನಟ ನರೇಶ್ ಹಾಗೂ ನರೇಶ್ ಅವರ ಪತ್ನಿ ರಮ್ಯಾ ರಘುಪತಿ ಅವರು ಪ್ರತ್ಯೇಕವಾಗಿ ಮಾಧ್ಯಮಗಳಲ್ಲಿ ಸಂದರ್ಶನಗಳಲ್ಲಿ ಮಾತನಾಡುವ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಇದೀಗ ಎಲ್ಲರನ್ನು ಕಾಡುತ್ತಿರುವ ವಿಚಾರ ಏನೆಂದರೆ, ಈ ವಿಚಾರ ಇಷ್ಟು ದೊಡ್ಡದಾಗಲು ಕಾರಣ ಏನು, ರಮ್ಯಾ ರಘುಪತಿ ಅವರಿಗೆ ಪವಿತ್ರಾ ಲೋಕೇಶ್ ಅವರ ಬಗ್ಗೆ ಅನುಮಾನ ಮೂಡಿದ್ದೇಕೆ? ಇದೆಲ್ಲಾ ಪ್ರಶ್ನೆಗಳು ಜನರಲ್ಲಿ ಮೂಡಿದ್ದು, ಇವುಗಳಿಗೆ ಉತ್ತರ ಕೊಡುತ್ತೇವೆ ನೋಡಿ. ಪವಿತ್ರಾ ಲೋಕೇಶ್ ಅವರು ಹಾಗು ನರೇಶ್ ಅವರು ಜೊತೆಯಾಗಿ ಮಹಾಬಲೇಶ್ವರ ದೇವಸ್ಥಾನಕ್ಕೆ ಹೋಗಿಬಂದ ಬಳಿಕ ಅವರಿಬ್ಬರ ಮದುವೆ ಆಗಿದೆ ಎನ್ನುವ ಸುದ್ದಿ ಜೋರಾಗಿಯೇ ಸದ್ದು ಮಾಡುತ್ತಿದೆ. ತೆಲುಗು ಮತ್ತು ಕನ್ನಡ ಮಾಧ್ಯಮ ಎರಡು ಕಡೆ ಈ ಮದುವೆ ಸುದ್ದಿ ಪ್ರತಿದಿನ ಬೇರೆ ಬೇರೆ ತಿರುವುಗಳನ್ನೇ ಪಡೆದುಕೊಳ್ಳುತ್ತಿದೆ.

ನರೇಶ್ ಮತ್ತು ಪವಿತ್ರಾ ಲೋಕೇಶ್ ಅವರು ಕೆಲವು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ಹಾಗೂ ಹಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಇದರಿಂದಾಗಿ ಅವರ ಬಗೆಗಿನ ಗಾಸಿಪ್ ಗಳು ಶುರುವಾದವು. ಇವರಿಬ್ಬರು ಜೊತೆಯಾಗಿದ್ದಾರೆ, ಲೈವ್ ಇನ್ ರಿಲೀಷನ್ಷಿಪ್ ನಲ್ಲಿದ್ದಾರೆ ಎಂದು ಕೆಲವು ಕಡೆ ವರಡಿಯಾದರೆ. ಇನ್ನು ಕೆಲವು ಕಡೆ ಇವರಿಬ್ಬರ ಮದುವೆ ನಡೆದೇ ಹೋಗಿದೆ ಎಂದು ಸುದ್ದಿಯಾಗಿದೆ. ಇನ್ನು ನರೇಶ್ ಅವರ ಮೂರನೇ ಪತ್ನಿ, ರಮ್ಯಾ ರಘುಪತಿ ಅವರು ಸಹ ಪವಿತ್ರಾ ಲೋಕೇಶ್ ಮತ್ತ್ ನರೇಶ್ ಅವರ ಬಗ್ಗೆ ಮಾತನಾಡಿದ್ದಾರೆ.

ಪವಿತ್ರಾ ಲೋಕೇಶ್ ಒಂದು ಬಾರಿ ನಮ್ಮ ಮನೆಗೆ ಬಂದಿದ್ದರು. ನಾನು ಬೆಳ್ಳಿತಟ್ಟೆಯಲ್ಲಿ ಊಟ ಬಡಿಸಿದ್ದೆ, ಅವರು ಹಾಕಿರುವ ಒಡವೇಗಳು ನಮ್ಮ ಅತ್ತೆಯದ್ದು. 4 ವರ್ಷಗಳಿಂದ ಅವರಿಬ್ಬರು ಲಿವ್ ಇನ್ ರಿಲೀಷನ್ಷಿಪ್ ನಲ್ಲಿದ್ದಾರೆ. ನರೇಶ್ ಹೆಣ್ಣುಬಾಕ, ನನಗೆ ಬಹಳ ಮೋಸ ಮಾಡಿದ್ದಾರೆ, ನನ್ನನ್ನು ಸಿಕ್ಕಿ ಹಾಕಿಸುವ ಪ್ರಯತ್ನ ಮಾಡಿದ್ದರು ಎಂದು ರಮ್ಯಾ ರಘುಪತಿ ಅವರು ಆರೋಪ ಮಾಡಿದ್ದರು. ಇತ್ತ ನರೇಶ್ ಅವರು ಬೆಂಗಳೂರಿಗೆ ಬಂದು ಸುದ್ದಿಗೋಷ್ಠಿ ನಡೆಸಿ ರಮ್ಯಾ ರಘುಪತಿ ಅವರ ಬಗ್ಗೆ ಹಲವು ವಿಚಾರಗಳನ್ನು ಹೇಳಿಕೊಂಡರು. ಜೊತೆಗೆ ಪವಿತ್ರಾ ಲೋಕೇಶ್ ಹಾಗು ತಮ್ಮ ಬಗ್ಗೆ ಅನುಮಾನ ಮೂಡಿರುವುದು ಏಕೆ ಎಂದು ಸಹ ತಿಳಿಸಿದ್ದಾರೆ.

ನರೇಶ್ ಅವರು ಹೇಳಿರುವ ಪ್ರಕಾರ, ಪವಿತ್ರಾ ಲೋಕೇಶ್ ಅವರು ಶಿವನ ಭಕ್ತೆ ಆಗಿದ್ದು, ಒಂದು ನಿರ್ದೇಶನ ಮಾಡಲಿರುವ ಪ್ರಾಜೆಕ್ಟ್ ನ ಸ್ಕ್ರಿಪ್ಟ್ ವರ್ಕ್ ಗೆ ಸಹಾಯ ಮಾಡ್ತೀರಾ ಎಂದು ನರೇಶ್ ಅವರನ್ನು ಕೇಳಿದ್ದರಂತೆ ಪವಿತ್ರಾ ಲೋಕೇಶ್. ಆಗ ನರೇಶ್ ಅವರು ಸಹಾಯ ಮಾಡುವುದಾಗಿ ಹೇಳಿ, ಪವಿತ್ರಾ ಲೋಕೇಶ್ ಅವರು ಹಾಗೂ ನರೇಶ್ ಅವರು ಜೊತೆಯಾಗಿ ಒಂದು ದೇವಸ್ಥಾನವನ್ನು ದತ್ತು ಪಡೆದಿದ್ದಾರೆ. ಅದು ಬಹಳ ಸುಂದರವಾದ ದೇವಸ್ಥಾನ ಆಗಿದ್ದು, ಅದನ್ನು ಗಿಫ್ಟ್ ಆಗಿ ಪವಿತ್ರಾ ಲೋಕೇಶ್ ಅವರಿಗೆ ನೀಡಿದ್ದಾರಂತೆ ನರೇಶ್ ಅವರು.

ಈ ಗಿಫ್ಟ್ ಅನ್ನು ಪವಿತ್ರಾ ಲೋಕೇಶ್ ಅವರಿಗೆ ಕೊಟ್ಟ ಬಳಿಕ, ರಮ್ಯಾ ರಘುಪತಿ ಅವರಿಗೆ ಅನುಮಾನ ಶುರುವಾಗಿದೆ ಎಂದು ನರೇಶ್ ಅವರು ಹೇಳಿದ್ದಾರೆ. ನಾಲ್ಕು ವರ್ಷಗಳಿಂದ ಪವಿತ್ರಾ ಲೋಕೇಶ್ ಅವರು ನನಗೆ ಗೊತ್ತು. ಸಿನಿಮಾಗಳಲ್ಲಿ ನಟಿಸಿದ್ದೇವೆ, ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದೇವೆ, ಆಗ ರಮ್ಯಾ ಅವರಿಗೆ ಏನು ತೊಂದರೆ ಇರಲಿಲ್ಲ. ಈಗ ದೇವಸ್ಥಾನವನ್ನು ಗಿಫ್ಟ್ ಆಗಿ ಕೊಟ್ಟ ಬಳಿಕ ಈ ಅನುಮಾನಗಳು ಶುರುವಾಗಿದೆ ಎಂದು ನರೇಶ್ ಅವರು ಮಾಧ್ಯಮದ ಎದುರು ತಿಳಿಸಿದ್ದಾರೆ.