ನಿರ್ದೇಶಕ ಪವನ್ ಒಡೆಯರ್ ಬಳಸಿದ ಅದೊಂದು ಪದ.. ಯಶ್ ಹಾಗೂ ದರ್ಶನ್ ವಿಚಾರದಲ್ಲಿ ಏನಾಗಿದೆ ನೋಡಿ..

ಸ್ಯಾಂಡಲ್ವುಡ್ ಮಾತ್ರವಲ್ಲ ಎಲ್ಲಾ ಭಾಷೆಯ ಚಿತ್ರರಂಗದಲ್ಲಿಯೂ ಫ್ಯಾನ್ ವಾರ್ ಇದ್ದದ್ದೇ.. ಅವರವರ ಅಭಿಮಾನಿಗಳಿಗೆ ಅವರವರ ನೆಚ್ಚಿನ ನಟರು ಸ್ಪೂರ್ತಿ ಇದ್ದಂತೆ.. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ನೆಚ್ಚಿನ ನಟನ ಬಗ್ಗೆ ಪೋಸ್ಟ್ ಹಾಕೋದು ಕಾಮನ್.. ಇನ್ನು ನಮ್ಮ ಸ್ಯಾಂಡಲ್ವುಡ್ ನಲ್ಲಿಯೂ ಕೂಡ ಇಂತಹ ಫ್ಯಾನ್ ವಾರ್ ಗಳಿಗೇನು ಕಡಿಮೆ ಇಲ್ಲ.. ಆಗಾಗ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧದ ಪೋಸ್ಟ್ ಗಳು ಹರಿದಾಡುತ್ತಲೇ ಇರುತ್ತವೆ..

ಇನ್ನು ನಮ್ಮ್ ಕನ್ನಡ ಚಿತ್ರರಂಗದಲ್ಲಿ ನೆಚ್ಚಿನ ನಟರನ್ನ ಬಾಸ್ ಅನ್ನೋದು ಎಲ್ಲರಿಗೂ ತಿಳಿದಿದೆ.. ದರ್ಶನ್ ಅವರನ್ನ ಡಿ ಬಾಸ್ ಎಂದೇ ಕರೆಯಲಾಗುವುದು.. ಯಶ್ ಅವರನ್ನೂ ಸಹ ಅಭಿಮಾನಿಗಳು ಯಶ್ ಬಾಸ್ ಎನ್ನುತ್ತಾರೆ..

ಇದೀಗ ನಿರ್ದೇಶಕ ಪವನ್ ಒಡೆಯರ್ ಅವರು ಸಾಮಾಜಿಕ ಜಾಲತಾಣದಲ್ಲಿ ಯಶ್ ಅವರ ಫೋಟೋವೊಂದನ್ನು ಪೋಸ್ಟ್ ಮಾಡಿದ್ದು ಅದರಲ್ಲಿ ಯಶ್ ಅವರನ್ನು ಬಾಸ್ ಎಂದು ಬರೆದಿದ್ದಾರೆ.. ಹೌದು ಆಲ್ಬಂವೊಂದರ ಚಿತ್ರೀಕರಣದ ವೇಳೆ ತೆಗೆಸಿಕೊಂಡಿರುವ ಫೋಟೋವೊಂದನ್ನು ಪೋಸ್ಟ್ ಮಾಡಿರುವ ಪವನ್ ಒಡೆಯರ್ ಅವರು “ಶೂಟಿಂಗ್ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡ ರೀತಿ.. ಲವ್ ಯು ಬಂಗಾರ.. ಪ್ರೌಡ್ ಟು ಬಿ ಯುವರ್ ಬ್ರದರ್.. ಬಾಸ್” ಎಂದು ಬರೆದು ಪೋಸ್ಟ್ ಮಾಡಿದ್ದು ಸದ್ಯ್ ಯಶ್ ಹಾಗೂ ದರ್ಶನ್ ಅವರ ಅಭಿಮಾನಿಗಳ ನಡುವೆ ವಾಗ್ಯುದ್ಧಕ್ಕೆ ಕಾರಣವಾಗಿದೆ..

ಹೌದು ಈ ಪೋಸ್ಟ್ ನೋಡಿದ ದರ್ಶನ್ ಅವರ ಅಭಿಮಾನಿಗಳು ಕರ್ನಾಟಕಕ್ಕೆ ಒಬ್ಬರೇ ಬಾಸ್ ಅದು ಡಿ ಬಾಸ್ ಎಂದು ಕಮೆಂಟ್ ಹಾಕಿದ್ದರೆ.. ಇತ್ತ ಯಶ್ ಅವರ ಅಭಿಮಾನಿಗಳು ಯಶ್ ಅವ್ರೇ ಬಾಸ್ ಎಂದು ಕಮೆಂಟ್ ಮಾಡಿದ್ದಾರೆ.. ಇದು ತೀರಾ ವ್ಯಯಕ್ತಿಕವಾಗಿ ಹೋಗಿ ಪವನ್ ಒಡೆಯರ್ ಅವರನ್ನು ಟೀಕಿಸಿದ್ದಾರೆ..

ಅದೇನೆ ಆಗಲಿ ದರ್ಶನ್ ಹಾಗೂ ಯಶ್ ಅವರಿಬ್ಬರೂ ಒಳ್ಳೆಯ ಸ್ನೇಹಿತರು.. ಇಬ್ಬರೂ ಕೂಡ ಅವರವರ ಅಭಿಮಾನಿಗಳಿಗೆ ಸ್ಪೂರ್ತಿ.. ಇಬ್ಬರೂ ಬಹಳ ಕಷ್ಟ ಪಟ್ಟು‌ ಮೇಲೆ ಬಂದವರು.. ಅಭಿಮಾನಿಗಳಿಗೆ ಅವರು ಜೀವನದಲ್ಲಿ ಮಾಡಿರುವ ಸಾಧನೆ ಸ್ಪೂರ್ತಿಯಾಗಲಿ.. ಸಾಮಾಜಿಕ ಜಾಲತಾಣದಲ್ಲಿ ಯಾರೋ ಹಾಕಿದ ಪೋಸ್ಟ್ ಒಂದಕ್ಕೆ ಪ್ರಾಮುಖ್ಯತೆ ಕೊಟ್ಟು ವ್ಯಯಕ್ತಿಕ‌ ನಿಂದನೆ ಮಾಡಬಾರದೆಂಬುದು ಕೆಲವರ ಅಭಿಪ್ರಾಯವಾಗಿದೆ..