ಯಶ್ ಬಾಸ್.. ವಿವಾದಕ್ಕೆ ತೆರೆ ಎಳೆದ ಪವನ್ ಒಡೆಯರ್.. ಕೊನೆಗೆ ಬಾಸ್ ಅಂತ ಒಪ್ಪಿಕೊಂಡಿದ್ದು ಯಾರನ್ನ ಗೊತ್ತಾ?

ಕನ್ನಡ ಚಿತ್ರರಂಗದ ಯಾವುದೇ ಚಿತ್ರೀಕರಣದ ಕೆಲಸಗಳು ನಡೆಯುತ್ತಿಲ್ಲ.. ಆದರೆ ಮುಂದಿನ ಸಿನಿಮಾಗಳ ತಯಾರಿ.. ಈಗಾಗಲೇ ಶೂಟಿಂಗ್ ಆಗಿರುವ ಸಿನಿಮಾಗಳ ಡಬ್ಬಿಂಗ್ ಕೆಲಸ.. ಆಲ್ಬಂ ಕೆಲಸಗಳು ಮಾತ್ರ ಲಾಕ್ ಡೌನ್ ಸಡಿಲಿಕೆಯ ಬಳಿಕ ಎಂದಿನಂತೆ ನಡೆಯುತ್ತಿವೆ.. ಇನ್ನು ವೈದ್ಯಕೀಯ ಶಿಕ್ಷಣ ಇಲಾಖೆ ಕಡೆಯಿಂದ ಬದಲಾಗು ನೀನು ಎಂಬ ಹಾಡೊಂದು ತಯಾರಾಗುತ್ತಿದ್ದು ಅದರ ಉಸ್ತುವಾರಿಯನ್ನು ನಿರ್ದೇಶಕ ಪವನ್ ಒಡೆಯರ್ ವಹಿಸಿಕೊಂಡಿದ್ದಾರೆ..

ಇನ್ನು ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಮೊನ್ನೆಯಷ್ಟೇ ಪವನ್ ಒಡೆಯರ್ ವಿವಾದವೊಂದನ್ನು ಸೃಷ್ಟಿಸಿಕೊಂಡಿದ್ದರು.. ಹೌದು ಬದಲಾಗು ನೀನು‌ಎಂಬ ಆಲ್ಬಂ ಹಾಡಿನಲ್ಲಿ ಯಶ್ ಅಪ್ಪು ಶಿವಣ್ಣ ಕ್ರೇಜಿ ಸ್ಟಾರ್ ರವಿಚಂದ್ರನ್ ಸೇರಿದಂತೆ ಸ್ಯಾಂಡಲ್ವುಡ್ ನ ಕೆಲವು ನಟರು ನಟಿಯರು ನಿರೂಪಕಿ ಅನುಶ್ರೀ ಹೀಗೆ ಹಲವಾರು ಮಂದಿ ಕಾಣಿಸಿಕೊಳ್ಳಲಿದ್ದಾರೆ.. ಸದ್ಯ ಅವರವರು ಇರುವ ಬಳಿಯೇ ಹೋಗಿ ಚಿತ್ರೀಕರಣ ಮಾಡಲಾಗುತ್ತಿದೆ.. ಅದೇ ರೀತಿ ಮೊನ್ನೆ ಯಶ್ ಅವರ ಬಳಿ ಹೋಗಿ ಚಿತ್ರೀಕರಣ ಮುಗಿಸಿಕೊಂಡು ಬರಲಾಗಿತ್ತು.. ಆ ಸಮಯದಲ್ಲಿ ಪವನ್ ಒಡೆಯರ್ ಅವರು ತೆಗೆದುಕೊಂಡ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ.. “ಶೂಟಿಂಗ್ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿದೆ.. ಲವ್ ಯು ಬಂಗಾರ.. ನಿಮ್ಮ ಬ್ರದರ್ ಆಗಿರಲು ನನಗೆ ಹೆಮ್ಮೆ ಬಾಸ್..” ಎಂದ್ಯ್ ಬರೆದು ಪೋಸ್ಟ್ ಮಾಡಿದ್ದರು..

ಆದರೆ ಈ ಪೋಸ್ಟ್ ಗೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದು ಕನ್ನಡ ಇಂಡಸ್ಟ್ರಿಯಲ್ಲಿ ಒಬ್ಬರೇ ಬಾಸ್ ಅದು ಡಿ ಬಾಸ್ ಎಂದು ದರ್ಶನ್ ಅವರ ಅಭಿಮಾನಿಗಳು ಕಮೆಂಟ್ ಹಾಕಿದ್ದರು.. ಅತ್ತ ಯಶ್ ಅವರ ಅಭಿಮಾನಿಗಳು ಕೂಡ ಕಮೆಂಟ್ ಮಾಡಿದ್ದು, ನೋಡು ನೋಡುತ್ತಿದ್ದಂತೆ ಇಬ್ಬರು ನಟರ ಅಭಿಮಾನಿಗಳ ನಡುವೆ ವಾಗ್ಯುದ್ಧವೇ ಆರಂಭವಾಗಿತ್ತು.. ಪವನ್ ಒಡೆಯರ್ ಅವರನ್ನು ಬಹಳ ವ್ಯಯಕ್ತಿಕವಾಗಿ ಟೀಕಿಸಲಾಗಿತ್ತು..

ಇದೀಗ ಆ ಎಲ್ಲಾ ವಿಚಾರಗಳಿಗೂ ಸ್ವತಃ ಪವನ್ ಒಡೆಯರ್ ತೆರೆ ಎಳೆದಿದ್ದಾರೆ.. ಹೌದು ಯಶ್ ಬಾಸ್ ವಿವಾದಕ್ಕೆ ಅಂತ್ಯ ಹಾಡಿದ್ದು ದಯಮಾಡಿ ಅಭಿಮಾನಿಗಳು‌ ಈ ವಿಚಾರವನ್ನು‌ ಇಲ್ಲಿಯೇ ಕೈ ಬಿಟ್ಟರೆ ಇಬ್ಬರು ಸ್ಟಾರ್ ನಟರಿಗೆ ಗೌರವ ಕೊಟ್ಟಂತಾಗುತ್ತದೆ..

“ನಾನು ಪ್ರತಿಯೊಬ್ಬರನ್ನೂ ಬಾಸ್ ಎಂದೇ ಕರೆಯುತ್ತೇನೆ.. ನನ್ನ ಆಪ್ತರು ಯಾರೇ ಸಿಕ್ಕರೂ ಬಾಸ್ ಎನ್ನುತ್ತೇನೆ.. ನಾನು ಯಾರಿಗೂ ಅವಮಾನ ಮಾಡುವಂತೆ ಮಾತನಾಡಿಲ್ಲ.. ನಾನು ಎಲ್ಲಾ ನಟರೊಂದಿಗೂ ಆತ್ಮೀಯನಾಗಿದ್ದೇನೆ.. ಅಭಿಮಾನಿಗಳು ಅವರವರ ನೆಚ್ಚಿನ ನಟನನ್ನು ಬಾಸ್ ಎನ್ನುವುದು ಯಾವ ತಪ್ಪು ಇಲ್ಲ.. ಅಭಿಮಾನಿಗಳಿಗೆ ಅವರವರ ಹೀರೋಗಳೇ ಬಾಸ್ ಗಳು.. ಯಾವ ನಟರು ನಮ್ಮನ್ನು ಬಾಸ್ ಎಂದು ಕರೆಯಿರಿ ಅನ್ನೋದಿಲ್ಲ.. ಇನ್ನೂ ಹೇಳಬೇಕೆಂದರೆ ನಿಮ್ಮ ನಿಮ್ಮ ಜೀವನಕ್ಕೆ ನೀವುಗಳೇ ಬಾಸ್ ಆಗಬೇಕು ಅಂತ ಸ್ಟಾರ್ ಗಳು ಹೇಳುತ್ತಾರೆ..

ಅಭಿಮಾನಿಗಳು ಅದನ್ನು ಅರ್ಥ ಮಾಡಿಕೊಳ್ಳಬೇಕು.. ನನಗೆ ಬೈದದ್ದರಿಂದ ಬೇಸರವಿಲ್ಲ.. ಅವರುಗಳು ಅವರ ಹೀರೋಗಳನ್ನು ಎಷ್ಟು ಪ್ರೀತಿಸುತ್ತಾರೆ ಎಂದು ಸಂತೋಷವಾಯಿತು.. ಅವರು ಪ್ರೀತಿಸೋದ್ರಿಂದಲೇ ಚಿತ್ರಮಂದಿರಕ್ಕೆ ಬಂದು ದುಡ್ಡು ಕೊಟ್ಟು ಸಿನಿಮಾ ನೋಡೋದು.. ಅವರುಗಳಿಂದಲೇ ಚಿತ್ರರಂಗ ಬೆಳೆಯುತ್ತಿರುವುದು.. ಎಲ್ಲವನ್ನು ಸಮನಾಗಿ ಸ್ವೀಕರಿಸಿದ್ದೇನೆ.. ನಾನು ಆಪ್ತರು ಯಾರೇ ಸಿಕ್ಕರೂ ಬಾಸ್ ಎಂದೇ ಮೊದಲಿನಿಂದಲೂ ಕರೆದಿದ್ದೇನೆ.. ಅದೇ ರೀತಿ ಈಗಲೂ ಕರೆದಿದ್ದೇನೆ ಅಷ್ಟೇ.. ಅದನ್ನು ಬಿಟ್ಟು ಯಾವ ನಟರಿಗೂ ನಾನು ಅವಮಾನ ಆಗುವಂತೆ ಮಾತನಾಡಿಲ್ಲ.. ಇದನ್ನು ಇಲ್ಲಿಗೆ ನಿಲ್ಲಿಸಿ ಎಂದು ಮನವಿ‌ ಮಾಡಿದ್ದಾರೆ..