ಸಾಲು ಸಾಲು ಸಿನಿಮಾ ಮಾಡಿದರೂ ಒಂದು ಗ್ರಾಂ ಬಂಗಾರವೂ ಇಲ್ಲ.. ನಟಿ ಪದ್ಮಜಾ ರಾವ್ ಬಂದ ಹಣವೆಲ್ಲಾ ಏನು ಮಾಡಿಬಿಟ್ರು ಗೊತ್ತಾ..

ಕಲಾವಿದರಾಗಲಿ ಅಥವಾ ಸಾಮಾನ್ಯ ಮಹಿಳೆಯರಾಗಲಿ ದುಡಿಯುವ ಹೆಣ್ಣು ಮಕ್ಕಳಾಗಲಿ ಅಥವಾ ಮನೆಯಲ್ಲಿಯೇ ಇರುವ ಮಹಿಳೆಯರಾಗಲಿ ತಮ್ಮ ಕೈಯಲ್ಲಿ ಒಂದಿಷ್ಟು ಹಣ ಬಂದ ಕೂಡಲೇ ಅವರು ಮಾಡುವ ಕೆಲಸವೇ ಬಂಗಾರ ಕೊಳ್ಳುವುದು.. ಹೆಣ್ಣು ಮಕ್ಕಳಿಗೆ ಬಂಗಾರವೆಂದರೆ ಎಷ್ಟು ಪ್ರೀತಿ ಎಂಬುದು ಎಲ್ಲರಿಗೂ ತಿಳಿದೇ ಇದೆ.. ಆದರೆ ನಟಿ ಪದ್ಮಜಾ ರಾವ್ ಅವರ ಬಳಿ ಒಂದು ಗ್ರಾಂ ಬಂಗಾರವೂ ಇಲ್ಲವೆಂದರೇ ಆಶ್ವರ್ಯ ಆಗೋದು ಖಚಿತ.. ಆದರೂ ಸಹ ನಂಬಲೇ ಬೇಕು.. ಹೌದು ದುಡಿಯುವ ಹೆಣ್ಣು ಮಕ್ಕಳು ತಾವು ದುಡಿದ ಹಣದಲ್ಲಿ ಬಂಗಾರ ಕೊಂಡರೆ, ಮನೆಯಲ್ಲಿ‌ಇರುವ ಮಹಿಳೆಯರು ಮನೆಯ ಖರ್ಚಿಗೆ ಕೊಡುವ ಹಣದಲ್ಲಿಯೇ ಉಳಿಸಿ ಸೇರಿಸಿ ಬಂಗಾರ ಕೊಳ್ಳುತ್ತಾರೆ.. ಇನ್ನು ಸಿನಿಮಾ ಕಲಾವಿದರಂತೂ ಹೇಳಲೇ ಬೇಕಿಲ್ಲ.. ಅವರ ಬಳಿ ಸಾಕಷ್ಟು ಬಂಗಾರದ ಸಂಗ್ರಹ ಇದ್ದೇ ಇರುತ್ತದೆ ಎನ್ನುವ ನಂಬಿಕೆ ಸಾಮಾನ್ಯ ಜನರಿಗೆ.. ಆದರೆ ನಟಿ ಪದ್ಮಜಾ ರಾವ್ ಅವರು ಮಾತ್ರ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದರೂ ಸಹ ಅವರ ಬಳಿ ಒಂದು ಗ್ರಾಂ ಬಂಗಾರವೂ ಇಲ್ಲ.. ಇಷ್ಟು ವರ್ಷದಲ್ಲಿ ಒಂದು ಗ್ರಾಂ ಬಂಗಾರವನ್ನೂ ಮಾಡಿಸಿಕೊಳ್ಳಲು ಸಾಧ್ಯವಾಗಿಲ್ಲ..

ಹಾಗದರೆ ಬಂದ ಹಣವನ್ನೆಲ್ಲಾ ಏನು‌ ಮಾಡಿಬಿಟ್ಟರು ಖುದ್ದು ಪದ್ಮಜಾ ರಾವ್ ಅವರೇ ತಮ್ಮ ಕತೆಯನ್ನು ಹೇಳಿಕೊಂಡಿದ್ದಾರೆ.. ನಟಿ‌ ಪದ್ಮಜಾ ರಾವ್ ಎಂದೊಡನೆ ನಮಗೆ ನೆನಪಾಗುವುದು ಮುಂಗಾರು ಮಳೆ ಸಿನಿಮಾ.. ಹೌದು ಮುಂಗಾರು ಮಳೆ ಸಿನಿಮಾ ಮೂಲಕ ಅನೇಕ ಕಲಾವಿದರು ತಮ್ಮ ಬದುಕು ಕಟ್ಟಿಕೊಂಡರು.. ಅದರಲ್ಲಿ ಪದ್ಮಜಾ ರಾವ್ ಅವರೂ ಸಹ ಒಬ್ಬರು.. ಮುಂಗಾರು ಮಳೆ ಸಿನಿಮಾ ನಂತರ ಪದ್ಮಜಾ ರಾವ್ ಅವರಿಗೆ ಅನೇಕ ಸಿ‌ನಿಮಾಗಳ ಅವಕಾಶ ದೊರೆತವು.. ಸಾಲು ಸಾಲು ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ಅಭಿನಯಿಸಿದರು.. ಯಾವ ಸಿನಿಮಾ ನೋಡಿದರೂ ನಾಯಕ ಅಥವಾ ನಾಯಕಿಯ ಅಮ್ಮನ ಪಾತ್ರದಲ್ಲಿ ಪದ್ಮಜಾ ರಾವ್ ಅವರೇ ಕಾಣುತ್ತಿದ್ದರು.. ಸದ್ಯ ಕೊರುತೆರೆಗೂ ಕಾಲಿಟ್ಟಿರುವ ಪದ್ಮಜಾ ರಾವ್ ಅವರು ಜೊತೆಜೊತೆಯಲಿ ಧಾರಾವಾಹಿಯಲ್ಲಿ ಆರ್ಯವರ್ಧನ್ ರ ತಾಯಿಯ ಪಾತ್ರಕ್ಕೆ ಎಂಟ್ರಿಕೊಟ್ಟಿದ್ದು ಕಿರುತೆರೆಯಲ್ಲಿಯೂ ಬ್ಯುಸಿ ಆಗಿದ್ದಾರೆ.. ಆದರೆ ಇಂತಹ ನಟಿ ಬಳಿ ಒಂದು ಗ್ರಾಂ ಬಂಗಾರ ಇಲ್ಲವಂತೆ..

ಹೌದು ಮಾದ್ಯಮದ ಸಂದರ್ಶನವೊಂದರಲ್ಲಿ ತಮ್ಮ ಬಗ್ಗೆ ಹೇಳಿಕೊಂಡಿರುವ ನಟಿ ಪದ್ಮಜಾ ರಾವ್ ಅವರು ತಮಗಿರುವ ಅಭ್ಯಾಸಗಳು ಆ ಅಭ್ಯಾಸಕ್ಕಾಗಿ ತನ್ನ ದುಡಿಮೆಯನ್ನೆಲ್ಲಾ ಹಾಕಿದ ವಿಚಾರವನ್ನೂ ಸಹ ಹಂಚಿಕೊಂಡಿದ್ದಾರೆ.. ಹೌದು ನಾನು ಹುಟ್ಟಿದ್ದು ಕರ್ನಾಟಕದಲ್ಲಿಯೇ ಆದರೆ ನನ್ನ ತಂದೆಗೆ ಬಾಂಬೆಗೆ ವರ್ಹಾವಣೆ ಆದ ಕಾರಣ ನಾನು ವಿಧ್ಯಾಭ್ಯಾಸ ಎಲ್ಲವನ್ನೂ ಮಾಡಿದ್ದು ಮುಂಬೈ ನಲ್ಲಿಯೇ.. ನನ್ನ ಮಾತೃಭಾಷೆ ಕನ್ನಡ ಆದರೆ ನಾನು ಅಲ್ಲಿ‌ ಓದಿದ್ದು ಮರಾಠಿ.. ಅದೇ ಕಾರಣಕ್ಕೆ ನಾನು‌ ಕನ್ನಡ ಮಾತನಾಡುವಾಗ ಆಗಾಗ ಮಧ್ಯದಲ್ಲಿ ಇಂಗ್ಲೀಷ್ ಬಂದುಬಿಡುತ್ತದೆ ಅದಕ್ಕೆ ಅನೇಕರು ನನ್ನನ್ನು ಟೀಕೆಯೂ ಸಹ ಮಾಡಿದ್ದಾರೆ.. ಸ್ಪಷ್ಟವಾಗಿ ಕನ್ನಡ ಮಾತನಾಡೋಕೆ ಆಗಲ್ವಾ ಎಂದೂ ಸಹ ಹೇಳಿದ್ದಾರೆ.. ಆದರೆ ಸಿನಿಮಾದಲ್ಲಿ ಸ್ಕ್ರಿಪ್ಟ್ ನೀಡೋದರಿಂದ ಸಿನಿಮಾಗಳಲ್ಲಿ‌ ಇಂತಹ ತೊಂದರೆ ಆಗಲಿಲ್ಲ. ಆದರೆ ನಿಜ ಜೀವನದಲ್ಲಿ‌ ಯಾರ ಬಳಿಯಾದರೂ ಮಾತನಾಡುವಾಗ ಈ ರೀತಿ ಆಗುತ್ತದೆ.. ನಾನು ಪಿಯುಸಿ ವರೆಗೆ ಅಲ್ಲಿ‌ ಓದಿದೆ..

ನಂತರ ಇಂಗ್ಲೀಷಿನಲ್ಲಿ ಎಂಎ ಮಾಡಿದೆ.. ಚಿಕ್ಕ ವಯಸ್ಸಿನಲ್ಲಿಯೇ ನಟಿಯಾಗಬೇಕು ಅನ್ನೋ ಕನಸು ಗುರಿ ಇದ್ದದ್ದರಿಂದ ನಾನು ಬೇರೆ ಕೆಲಸದ ಬಗ್ಗೆ ಪ್ರಯತ್ನವೂ ಮಾಡಲಿಲ್ಲ.. ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟೆ.. ಸಾಲು ಸಾಲು ಸಿನಿಮಾಗಳ ಅವಕಾಶ ಬಂತು.. ಆದರೆ ನನಗೆ ಇದುವರೆಗೂ ಒಂದು ಗ್ರಾಂ ಬಂಗಾರವನ್ನೂ ಸಹ ತೆಗೆದುಕೊಂಡಿಲ್ಲ.. ನನಗೆ ಕೈಯಲ್ಲಿ ಹಣ ನಿಲ್ಲೋದಿಲ್ಲ.. ನನಗೆ ಬಂಗಾರದ ಆಸೆಯೇ ಇಲ್ಲ.. ನನ್ನ ಬಳಿ ಇರೋದೆಲ್ಲಾ ಅಲಂಕಾರಿಕ ಒಡವೆಗಳು ಅಷ್ಟೇ.. ನನ್ನ ಮೇಲೆ ಎಲ್ಲರೂ ಹೇಳೋ‌ ಮಾತು ಒಂದೇ.. ಯಾವಾಗಲು ಹೊರ ದೇಶಗಳಲ್ಲಿ ಇರ್ತಾರೆ ಅಂತಾರೆ.. ಹೌದು ನಿಜ ಆದರೆ ಸದಾ ನಾನು ಬೇರೆ ದೇಶಗಳಲ್ಲಿ‌ ಇರೋದಿಲ್ಲ.. ಕೆಲಸದ ಕಾರಣಕ್ಕಾಗಿ ನಾನೇನು ಹೊರ ದೇಶಗಳಿಗೆ ಹೋಗೋದಿಲ್ಲ.. ಆದರೆ ನನ್ನ ಕುಟುಂಬದ ಜೊತೆ ಬೇರೆ ಬೇರೆ ದೇಶಗಳನ್ನು‌ ನೋಡ್ತೀನಿ‌ ಎಲ್ಲಾ ಕಡೆ ಹೋಗ್ತೀನಿ.. ಇದಕ್ಕೆ ಕಾರಣ ನನ್ನ ಕನಸುಗಳು..

ಹೌದು ನನಗೆ ಚಿಕ್ಕ ವಯಸ್ಸಿನಿಂದಲೂ ಬೇರೆ ಬೇರೆ ದೇಶಗಳನ್ನಿ ಹೊಸ ಹೊಸ ಜಾಗಗಳನ್ನು ನೋಡಬೇಕು ಅಂತ ಆಸೆಯಿತ್ತು.. ನನ್ನ ಕೈಗೆ ಸ್ವಲ್ಪ ಹಣ ಬಂದರೂ ಸಾಕು ನಾನು ಬೇರೆ ಬೇರೆ ದೇಶಗಳನ್ನು‌ ನೋಡಲು ಹೋಗಿ ಬಿಡ್ತೀನಿ.. ಹಣ ಖಾಲಿ ಆಗೋವರೆಗೂ ನನಗೆ ಸುತ್ತುವುದೇ ಕೆಲಸ.. ಇದೇ ಕಾರಣಕ್ಕೆ ಬಹಳಷ್ಟು ಜನ ನಾನು ಕೈಗೆ ಸಿಗೋದಿಲ್ಲ ಅಂತ ಹಲವಾರು ಅವಕಾಶಗಳು ಕಳೆದುಕೊಂಡದ್ದೂ ಇದೆ.. ನನಗೆ ಜೀವನದಲ್ಲಿ ಒಂದು ಮನೆ ಕಟ್ಟಬೇಕು ಅನ್ನೋ ಕನಸಿತ್ತು.. ಅದು ಕೂಡ ನೆರವೇರಿತು.. ಇನ್ನು ನನ್ನ ಮತ್ತೊಂದು ಕನಸು ಪ್ರಪಂಚವನ್ನು ಸುತ್ತೋದಷ್ಟೇ.. ಹೌದು ಅದೇ ನನ್ನ ಕನಸು ಇನ್ನು ಮುಂದೆಯೂ ಆ ಕನಸುಗಳನ್ನು ನೆರವೇರಿಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ..