ಪಾರು ನೋಡಲು ಮೇಲೆ ಬಿದ್ದ ಜನ.. ಕೊನೆಗೆ ಆಗಿದ್ದೇ ಬೇರೆ.. ಏನ್ ಕರ್ಮ ಗುರು..

ಜೀಕನ್ನಡದಲ್ಲಿ ಪ್ರಸಾರವಾಗುತ್ತಿರುವ ಉತ್ತಮವಾದ ಧಾರಾವಾಹಿಗಳಲ್ಲಿ ಒಂದು ಪಾರು. ಉತ್ತಮ ಕಥಾಹಂದರ ಮತ್ತು ಪಾತ್ರಗಳ ಅಭಿನಯಿಂದ ಪಾರು ಧಾರವಾಹಿ ಜನರಿಗೆ ಇಷ್ಟವಾಗಿದೆ. ಈ ಧಾರಾವಾಹಿಯ ನಾಯಕಿ ಪಾರು ಪಾತ್ರ ಅಂದ್ರೆ ವೀಕ್ಷಕರಿಗೆ ಅಚ್ಚುಮೆಚ್ಚು. ಇಂದು 800 ಸಂಚಿಕೆಗಳನ್ನು ಪೂರೈಸಿ ಮುನ್ನುಗ್ಗುತ್ತಿರುವ ಪಾರು ಧಾರವಾಹಿ, ದೊಡ್ಡ ಅಭಿಮಾನಿ ಬಳಗ ಹೊಂದಿದೆ. ಅದರಲ್ಲೂ ಹೆಚ್ಚಾಗಿ ಪಾರು ಪಾತ್ರಕ್ಕೆ ದೊಡ್ಡ ಅಭಿಮಾನಿ ಬಳಗ ಇದೆ ಎಂದರೆ ತಪ್ಪಾಗುವುದಿಲ್ಲ. ಪಾರು ಪಾತ್ರದಲ್ಲಿ ನಟಿಸುತ್ತಿರುವವರು. ಮೋಕ್ಷಿತ ಪೈ ಇವರಿಗೆ ಇದು ಮೊದಲ ಧಾರವಾಹಿಯಾಗಿದ್ದರು, ತಮ್ಮನ್ನು ತಾವು ಪಾತ್ರಕ್ಕೆ ಒಗ್ಗಿಸಿಕೊಂಡು ಜನರಿಗೆ ಬಹಳ ಇಷ್ಟವಾಗಿದ್ದಾರೆ. ಪಾರು ಮೋಕ್ಷಿತ ಅವರಿಗೆ ಎಷ್ಟು ದೊಡ್ಡ ಅಭಿಮಾನಿ ಬಳಗ ಇದೆಯಾ ಎನ್ನುವಂತಾಗಿದೆ..

ಮೋಕ್ಷಿತ ಅವರಿಗೆ ಕಿರುತೆರೆ ಲೋಕದಲ್ಲಿ ಭಾರಿ ಬೇಡಿಕೆ ಮತ್ತು ಅಭಿಮಾನಿ ಬಳಗ ಇದೆ. ಪಾರು ಪಾತ್ರ ಅಂದ್ರೆ ಜನರಿಗೆ ಬಹಳ ಇಷ್ಟ. ಆ ಪಾತ್ರದ ಮುಗ್ಧತೆ ಮತ್ತು ಸರಳತೆಯಿಂದಲೇ ಜನರಿಗೆ ಬಹಳ ಇಷ್ಟವಾಗಿದೆ. ಪಾರು ಪಾತ್ರ ಇಷ್ಟು ದೊಡ್ಡ ಮಟ್ಟದಲ್ಲಿ ಜನರ ಪ್ರೀತಿ ಗಳಿಸಿದ್ದು, ಸುಲಭವಾಗಿ ಅಲ್ಲ, ಮೋಕ್ಷಿತ ಅವರ ಈ ಜರ್ನಿ ಸುಲಭವಾಗಿರಲಿಲ್ಲ. ಪಾರು ಧಾರವಾಹಿಗೂ ಮೋಕ್ಷಿತ ಅವರ ನಿಜ ಜೀವನಕ್ಕೂ, ಹೊಂದಾಣಿಕೆ ಇದ್ದರೂ ಸಹ ಬಹಳ ಕಷ್ಟಪಟ್ಟು, ಪಾತ್ರಕ್ಕೆ ತಕ್ಕ ಹಾಗೆ ನಟಿಸಿ ಇಂದು ಪಾರು ಮನೆಮಾತಾಗಿದ್ದಾಳೆ. ಕರ್ನಾಟಕದ ಜನರು ನಮ್ಮ ಮನೆಯಲ್ಲೂ ಪಾರು ಅಂತಹ ಮಗಳು ಇರಬೇಕು ಎಂದುಕೊಳ್ಳುತ್ತಾರೆ.

ಧಾರಾವಹಿಯಲ್ಲಿ ಈಗ ಇತ್ತೀಚೆಗೆ ಪಾರು ಮತ್ತು ಆದಿ ಮದುವೆ ನಡೆದು, ಅತ್ತೆ ಅಖಿಲಾಂಡೇಶ್ವರಿಯ ಎದುರು ಒಳ್ಳೆಯ ಸೊಸೆ ಎನ್ನಿಸಿಕೊಳ್ಳಬೇಕು ಎಂದು ಪ್ರಯತ್ನ ಪಡುತ್ತಿದ್ದಾಳೆ ಪಾರು. ಧಾರಾವಾಹಿಯಲ್ಲಿ ಪಾರುಗೆ ಇರುವ ವಿಲ್ಲನ್ ಅಂದ್ರೆ ಅದು ಅನುಷ್ಕಾ. ದುಷ್ಟರು ಏನೇ ಮಾಡಿದರೂ ತನ್ನ ಒಳ್ಳೆಯತನದಿಂದ ಎಲ್ಲವನ್ನು ಗೆದ್ದು ಬರುತ್ತಿದ್ದಾಳೆ ಪಾರು. ಮೋಕ್ಷಿತ ಅವರು ಈ ಪಾತ್ರದ ಮೂಲಕ ಸಹಸ್ರಾರು ಜನರ ಪ್ರೀತಿ ಗಳಿಸಿದ್ದಾರೆ, ಅದಕ್ಕೆ ಸಾಕ್ಷಿ ಇತ್ತೀಚೆಗೆ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಅದೊಂದು ವಿಡಿಯೋ. ಆ ವಿಡಿಯೋ ನೋಡಿದರೆ ಜನರಿಗೆ ಪಾರು ಎಷ್ಟು ಇಷ್ಟವಾಗಿದ್ದಾಳೆ ಎಂದು ಗೊತ್ತಾಗುತ್ತದೆ.

ಇತ್ತೀಚೆಗೆ ಪಾರು ಟೀಮ್ ಶ್ರೀನಿವಾಸ ಕಲ್ಯಾಣ ಮಾಡಿಸಲು, ಚಾಮರಾಜನಗರಕ್ಕೆ ಚಿತ್ರೀಕರಣಕ್ಕಾಗಿ ಹೋಗಿತ್ತು. ಪಾರುವನ್ನು ನೋಡಲು ಸಾಕಷ್ಟು ಜನರು ಸ್ಥಳದಲ್ಲಿ ನೆರೆದಿದ್ದರು. ಸಾಮಾನ್ಯವಾಗಿ ಸ್ಟಾರ್ ನಟರು ಈ ರೀತಿ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ, ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದು, ನೂಕು ನುಗ್ಗಲು ಆಗಿ, ಅವರ ಜೊತೆ ಫೋಟೋ ತೆಗೆಸಿಕೊಳ್ಳಲು, ಆಟೋಗ್ರಾಫ್ ಪಡೆಯಲು ನಾ ಮುಂದು ತಾ ಮುಂದು ಎಂದು ಬರುತ್ತಾರೆ. ಆದರೆ ಪಾರುವನ್ನು ನೋಡಲು ಅಷ್ಟು ದೊಡ್ಡ ಮಟ್ಟದಲ್ಲಿ ಜನರು ಬಂದಿದ್ದು ನಿಜಕ್ಕೂ ಆಶ್ಚರ್ಯ ತಂದಿತ್ತು.

ಪಾರು ಬರುವ ಸ್ಥಳದಲ್ಲಿ ನೆರೆದಿದ್ದ ಸಹಸ್ರಾರು ಜನರು, ಪಾರು ಪಾರು ಎಂದು ಕೂಗುತ್ತಾ, ಮೋಕ್ಷಿತ ಅವರೊಡನೆ ಸೆಲ್ಫಿ ತೆಗೆದುಕೊಳ್ಳಲು, ಫೋಟೋ ತೆಗೆಸಿಕೊಳ್ಳಲು, ಅವರನ್ನು ನೋಡಲು ಜನರು ಮುಗಿಬಿದ್ದಿದ್ದರು. ಪಾರು ಅಭಿಮಾನಿಗಳ ಸಂಖ್ಯೆ ಕಂಡು ಎಲ್ಲರಿಗೂ ಅಚ್ಚರಿ ಆಗಿರುವುದಂತೂ ಖಂಡಿತ. ಅಂದಿನ ಅಭಿಮಾನಿಗಳ ವಿಡಿಯೋವನ್ನು ಮೋಕ್ಷಿತ ಅವರು ಬಹಳ ಸಂತೋಷದಿಂದ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈಗ ಕಿರುತೆರೆ ಮತ್ತು ಬೆಳ್ಳಿತೆರೆ ಎನ್ನುವ ಬೇಧವಿಲ್ಲದೆ, ಕಿರುತೆರೆಯ ಕಲಾವಿದರಿಗೂ ಜನರಿಂದ ಇಷ್ಟು ಪ್ರೀತಿ ಸಿಗುತ್ತಿರುವುದನ್ನು ನೋಡಲು ಆಶ್ಚರ್ಯ ಆಗುವುದಂತೂ ಸತ್ಯ.

ಈಗೆಲ್ಲಾ ಕಿರಿತೆರೆಯಲ್ಲಿ ಬಹಳ ಬೇಡಿಕೆ ಇದೆ, ಹೆಚ್ಚಿನ ಜನರನ್ನು ತಲುಪಬಹುದು ಎಂದು ಚಿತ್ರರಂಗದ ಕಲಾವಿದರು ಸಹ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಅಂಥದ್ರಲ್ಲಿ ಪಾರು ಗೆ ಇಷ್ಟು ದೊಡ್ಡ ಮಟ್ಟದಲ್ಲಿ ಅಭಿಮಾನಿಗಳಿದ್ದಾರೆ ಎನ್ನುವುದು ಸಂತೋಷದ ವಿಚಾರವೇ. ಇನ್ನು ಈ ವಿಡಿಯೋ ನೋಡಿದ ಕೆಲವರು ಇದೆಲ್ಲಾ ನೋಡಬೇಕಾ ಎಂದು ಟ್ರೋಲ್ ಸಹ ಮಾಡುತ್ತಿದ್ದಾರೆ. ಏನೇ ಆದರೂ ಪಾರು ಜನಪ್ರಿಯತೆ ಅಂತು ಕಡಿಮೆ ಆಗಿಲ್ಲ.