ಎಲ್ಲರೂ ಶಿವಣ್ಣ ಉಪೇಂದ್ರರನ್ನ ನೆನಪಿಸಿಕೊಂಡರು.. ಆದರೆ ಓಂ ಸಿನಿಮಾ ವಿಚಾರದಲ್ಲಿ ರಾಘವೇಂದ್ರ ರಾಜ್ ಕುಮಾರ್ ಅವರು ನೆನಪಿಸಿಕೊಂಡದ್ದು ಬೇರೆಯವರನ್ನ.. ದೊಡ್ಡ ಗುಣ ಅಂದರೆ ಇದೇ..

ಮೊನ್ನೆ‌ಮೊನ್ನೆಯಷ್ಟೇ ಕನ್ನಡದ ಸಾರ್ವಕಾಲಿಕ ಹಿಟ್ ಸಿನಿಮಾ ಓಂ ಸಿನಿಮಾ ಬಿಡುಗಡೆಯಾಗಿ 25 ವರ್ಷಗಳನ್ನು ಪೂರೈಸಿದ್ದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಗಳನ್ನು ಹಾಕುವ ಮೂಲಕ ಸಂಭ್ರಮಾಚರಣೆ ಮಾಡಿದರು.. ಸಿನಿಮಾ ಕುರಿತ ಅನೇಕ ರೋಚಕ ಸಂಗತಿಗಳು ಹೊರ ಬಂದವು.. ಶಿವಣ್ಣ ಉಪೇಂದ್ರ ಅವರು ಕೂಡ ಲೈವ್ ಬಂದು ಅಭಿಮಾನಿಗಳೊಂದಿಗೆ ಮಾತನಾಡಿದರು.. ಇನ್ನು ಬಹುತೇಕ ಎಲ್ಲರೂ ಶಿವಣ್ಣ ಹಾಗೂ ಉಪೇಂದ್ರ ಅವರ ಕುರಿತು ಮಾತನಾಡಿದರು.. ಆದರೆ ರಾಘವೇಂದ್ರ ರಾಜ್ ಕುಮಾರ್ ಅವರು ಮಾತ್ರ ನೆನಪಿಸಿಕೊಂಡದ್ದು ಬೇರೆಯವರನ್ನು..

ಹೌದು ಓಂ ಸಿನಿಮಾ ರಾಜ್ ಕುನಾರ್ ಅವರ ಹೋಂ ಬ್ಯಾನರ್ ಅಡಿಯಲ್ಲಿ ತಯಾರಾದ ಸಿನಿಮಾ.. ಅವರ ಹೋಂ ಬ್ಯಾನರ್ ನ ಸಂಪೂ ಜವಬ್ದಾರಿ ರಾಘವೇಂದ್ರ ರಾಜ್ ಕುಮಾರ್ ಅವರದ್ದೇ.. ಅಂದು ಓಂ ಸಿನಿಮಾದ ಸಮಯದಲ್ಲಿ ಪ್ರತಿಯೊಂದನ್ನು ಅರಿತಿದ್ದರು‌‌.. ಯಾವುದರಲ್ಲೂ ಸ್ವಲ್ಪವೂ ಕಾಂಪ್ರಮೈಸ್ ಆಗದ ರೀತಿಯಲ್ಲಿ ಸಿನಿಮಾ ನಿರ್ಮಾಣಗೊಳ್ಳಲು ಸಹಕರಿಸಿದ್ದರು..

ಇಂದು 25 ವರ್ಷದ ಸಂಭ್ರಮದಲ್ಲಿ ಎಲ್ಲರೂ ಹೀರೋ ಹಾಗೂ ಡೈರೆಕ್ಟರ್ ಗಳನ್ನು ನೆನಪಿಸಿಕೊಳ್ಳುವುದು ಸಹಜ.. ಆದರೆ ಒಬ್ಬ ನಿರ್ನಾಪಕನಾಗಿ ರಾಘಣ್ಣ ಆ ಸಿನಿಮಾದ ನಾಯಕನಟಿ ಪ್ರೇಮ ಅವರನ್ನು ಸಹ ನೆನಪಿಸಿಕೊಂಡು ಅವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.. ಸಿನಿಮಾ ಸ್ವಲ್ಪ ಹಿಟ್ ಆದರೆ ಸಾಕು ನನ್ನ ಸಿನಿಮಾ ಎನ್ನುವ ನಿರ್ಮಾಪಕರ ನಡುವೆ ರಾಘವೇಂದ್ರ ರಾಜ್ ಕುಮಾರ್ ಅವರು ವಿಶೇಷವೇ ಸರಿ.. ಕ್ರೆಡಿಟ್ಸ್ ಪೂರ್ತಿ ನಿರ್ದೇಶಕರಿಗೆ ಸೇರಬೇಕು.. ಶಿವಣ್ಣ ಹಾಗೂ ಪ್ರೇಮ ಅವರ ನಟನೆಗೆ ಸೇರಬೇಕು ಎಂದಿದ್ದಾರೆ.. ಆಗಿನ ಕಾಲದಲ್ಲಿ ಹೀರೋಯಿನ್ ಗಳಿಗೆ ಅಷ್ಟಾಗಿ ಸಕ್ಸಸ್ ನಲ್ಲಿ ಪ್ರಾಮುಖ್ಯತೆ ನೀಡುತ್ತಿರಲಿಲ್ಲ.. ಆದರೆ 25 ವರ್ಷಗಳ ಬಳಿಕವೂ ಪ್ರೇಮ ಅವರನ್ನೂ ಸಹ ನೆನೆದು ಅವರಿಗೂ ಧನ್ಯವಾದ ತಿಳಿಸಿದ ರಾಘಣ್ಣನ ಗುಣ ಮೆಚ್ಚುವಂತದ್ದು..

ಹೌದು ಮೊನ್ನೆ ಓಂ 25ನೇ ವರ್ಷದ ಸಂಭ್ರಮದ ದಿನದಂದು ರಾಘವೇಂದ್ರ ರಾಜ್ ಕುಮಾರ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಬರೆದು ಓಂ ಸಿನಿಮಾದ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ..