ಮದುವೆ ನಂತರ ಆದ ಬದಲಾವಣೆಯ ಬಗ್ಗೆ ಬೇಸರ ವ್ಯಕ್ತ ಪಡಿಸಿದ ನಿವೇದಿತಾ ಗೌಡ..

ಸೋಷಿಯಲ್ ಮೀಡಿಯಾದಲ್ಲಿ ಸದಾ ಒಂದಲ್ಲ ಒಂದು ಕಾರಣದಿಂದ ಸುದ್ದಿಯಾಗುವ ಸೆಲೆಬ್ರಿಟಿಗಳಲ್ಲಿ ಒಬ್ಬರು ನಿವೇದಿತಾ ಗೌಡ. ಬಿವ್ ಬಾಸ್ ಕನ್ನಡ ಸೀಸನ್ 5ರಲ್ಲಿ ಕಾಮನ್ ಮ್ಯಾನ್ ಆಗಿ ಎಂಟ್ರಿ ಕೊಟ್ಟ ಟಿಕ್ ಟಾಕ್ ಸ್ಟಾರ್ ನಿವೇದಿತಾ ಗೌಡ, ಬಗ್ ಬಾಸ್ ಶೋ ಇಂದ ದೊಡ್ಡ ಸೆಲೆಬ್ರಿಟಿಯೇ ಆದರು. ಬಿಗ್ ಬಾಸ್ ಮನೆಯೊಳಗಿದ್ದಾಗ ಸ್ಟೈಲ್ ಆಗಿ ಕನ್ನಡ ಮಾತನಾಡುವ ಮೂಲಕವೇ ಹೆಚ್ಚು ಸುದ್ದಿಯಾಗುತ್ತಿದ್ದರು ನಿವೇದಿತಾ ಗೌಡ. ಈಗಲೂ ಕೂಡ ಕೆಲವು ವಿಚಾರಗಳಿಗೆ ಆಗಾಗ ಟ್ರೋಲ್ ಆಗುತ್ತಲೇ ಇರುತ್ತಾರೆ. ಮದುವೆ ನಂತರ ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಶುರುಮಾಡಿರುವ ನಿವೇದಿತಾ, ಕೆಲವು ನೆಗಟಿವ್ ಕಮೆಂಟ್ಸ್ ಗಳನ್ನು ಎದುರಿಸಿದ್ದು ಅದೆಲ್ಲದಕ್ಕೂ ಯೂಟ್ಯೂಬ್ ಮೂಲಕವೇ ಉತ್ತರ ಕೊಟ್ಟಿದ್ದಾರೆ. ನಿವೇದಿತಾ ಕೊಟ್ಟಿರುವ ಖಡಕ್ ಉತ್ತರಗಳು ಹೇಗಿವೆ ಗೊತ್ತಾ? ತಿಳಿಸುತ್ತೇವೆ ಮುಂದೆ ಓದಿ..

ಬಿಗ್ ಬಾಸ್ ಕನ್ನಡ ಸೀಸನ್ 5 ರಲ್ಲಿ ಫಿನಾಲೆ ತಲುಪಿ ಎಲಿಮಿನೇಟ್ ಆದ ನಂತರ, ಕನ್ನಡ ಕಿರುತೆರೆಯ ಹಲವು ಶೋಗಳಲ್ಲಿ ಸಹ ಕಾಣಿಸಿಕೊಂಡರು ನಿವೇದಿತಾ. ನಂತರ 2020ರ ಆರಂಭದಲ್ಲಿ ಕನ್ನಡ ರಾಪರ್, ಬಿಗ್ ಬಾಸ್ ಕನ್ನಡ ಸೀಸನ್ 5ರ ವಿನ್ನರ್ ಚಂದನ್ ಶೆಟ್ಟಿ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆ ನಂತರ ಬೆಂಗಳೂರಿನಲ್ಲಿ ನೆಲೆಸಿರುವ ನಿವೇದಿತಾ, ಸುಂದರವಾಗಿ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಚಂದನ್ ನಿವೇದಿತಾ ಇಬ್ಬರು ಕೂಡ ತುಂಬಾ ಆಕ್ಟಿವ್, ತಮ್ಮ ಜೀವನದ ಸುಂದರ ಕ್ಷಣಗಳ ಫೋಟೋಗಳನ್ನು ಇಬ್ಬರು ಶೇರ್ ಮಾಡುತ್ತಾರೆ. ಹಾಗೆಯೇ ಆಗಾಗ ಇನ್ಸ್ಟಾಗ್ರಾಮ್ ರೀಲ್ಸ್ ಗಳನ್ನು ಸಹ ಮಾಡುತ್ತಾರೆ.

ಆಗಾಗ ಫೋಟೋಶೂಟ್ ಗಳಿಗೂ ಪೋಸ್ ನೀಡಿ ಅವುಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಕಲರ್ಸ್ ಕನ್ನಡ ವಾಹಿನಿಯ ರಾಜಾ ರಾಣಿ ಶೋನಲ್ಲಿ ಜೋಡಿಯಾಗಿ ಸ್ಪರ್ಧಿಸಿ, ಫಿನಾಲೆ ತಲುಪಿದ್ದರು ಚಂದನ್ ಮತ್ತು ನಿವೇದಿತಾ. ಇವರಿಬ್ಬರಿಂದ ರಾಜಾ ರಾಣಿ ಶೋ ವೀಕ್ಷಕರಿಗೆ ಒಳ್ಳೆಯ ಮನರಂಜನೆ ಸಿಗುತ್ತಿತ್ತು. ಇಬ್ಬರು ತಮ್ಮ ದಾಂಪತ್ಯ ಜೀವನವನ್ನು ಸುಂದರವಾಗಿ ಎಂಜಾಯ್ ಮಾಡುತ್ತಿದ್ದಾರೆ. ಇದರ ನಡುವೆ ನಿವೇದಿತಾ ಗೌಡ ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಒಂದನ್ನು ಶುರು ಮಾಡಿದ್ದಾರೆ.

ತಮ್ಮ ಯೂಟ್ಯೂಬ್ ಚಾನೆಲ್ ನ ಮೂಲಕ ಅನೇಕ ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಾರೆ ನಿವೇದಿತಾ, ತಮ್ಮ ಬ್ಯೂಟಿ ಸೀಕ್ರೆಟ್, ಹೇರ್ ಕೇರ್, ಡೈಲಿ ಲೈಫ್ ಸ್ಟೈಲ್ ರೊಟೀನ್ ಹೀಗೆ ಪ್ರತಿದಿನ ಒಂದಲ್ಲ ಒಂದು ವಿಚಾರ ಶೇರ್ ಮಾಡಿಕೊಳ್ಳುತ್ತಾರೆ. ಈ ಯೂಟ್ಯೂಬ್ ವಿಡಿಯೋಗಳಲ್ಲಿ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಕೆಲವರು ನಿವೇದಿತಾ ಗೌಡ ಅವರ ಬಗ್ಗೆ ನೆಗಟಿವ್ ಆಗಿ ಕಮೆಂಟ್ಸ್ ಬರೆದಿದ್ದಾರೆ, ಈ ರೀತಿ ಆಗುತ್ತಿರುವುದು ಇದೇ ಮೊದಲೇನಲ್ಲ, ಈ ಮೊದಲು ಕೂಡ ನಿವೇದಿತಾ ಗೌಡ ಶೇರ್ ಮಾಡುವ ಫೋಟೋಗಳಿಂದ ಮತ್ತು ಕೆಲವೊಮ್ಮೆ ಡ್ಯಾನ್ಸ್ ವಿಡಿಯೋಗಳಿಂದ ಕೂಡ ಟ್ರೋಲ್ ಆಗುತ್ತಿದ್ದರು, ನೆಗಟಿವ್ ಕಮೆಂಟ್ಸ್ ಗಳನ್ನು ಫೇಸ್ ಮಾಡುತ್ತಿದ್ದರು ನಿವೇದಿತಾ.

ಇದೀಗ ತಮ್ಮ ಬಗ್ಗೆ ಬಂದಿರುವ ನೆಗಟಿವ್ ಕಮೆಂಟ್ಸ್ ಗಳಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ. ಅದು ಯೂಟ್ಯೂಬ್ ಮೂಲಕವೇ ನಿವೇದಿತಾ ಉತ್ತರ ಕೊಟ್ಟಿರುವುದನ್ನು ಇಲ್ಲಿ ಗಮನಿಸಬೇಕಾಗಿದೆ. ಮನೆಯಲ್ಲಿ ನಿಮ್ಮಂತಹ ಹೆಣ್ಣುಮಕ್ಕಳಿದ್ದರೆ, ಅವರ ಹೊಟ್ಟೆ ತುಂಬಿದ ಹಾಗೆಯೇ ಎಂದು ಬರೆದಿರುವ ಕಮೆಂಟ್ಸ್ ಗೆ ಪ್ರತಿಕ್ರಿಯೆ ನೀಡಿರುವ ನಿವೇದಿತಾ ಗೌಡ, ಹೆಣ್ಣುಮಕ್ಕಳು ಮಾತ್ರ ಮನೆಕೆಲಸ ಮಾಡಬೇಕಾ? ಹೆಣ್ಣು ಮಾತ್ರ ಅಡುಗೆ ಮಾಡಬೇಕಾ? ಹೆಣ್ಣುಮಕ್ಕಳು ಮಾತ್ರ ಮಕ್ಕಳನ್ನ ನೋಡಿಕೊಳ್ಳಬೇಕಾ? ಗಂಡು ಮಕ್ಕಳು ಇವುಗಳನ್ನೆಲ್ಲ ಮಾಡಬಾರದ? ಗಂಡು ಮಕ್ಕಳು ಮನೆಯಲ್ಲಿ ಇರೋದು ಯಾಕೆ? ಅವರು ಇದನ್ನೆಲ್ಲ ಕಳಿತುಕೊಳ್ಳೋದು ಯಾವಾಗ? ಕೆಲಸದ ವಿಷಯಕ್ಕೆ ಬಂದರೆ ಹೆಣ್ಣು ಗಂಡು ಎಲ್ಲರೂ ಸರಿಸಮವೇ, ಈ ರೀತಿ ಕಮೆಂಟ್ ಗಳನ್ನು ಮಾಡಬೇಡಿ ಎಂದಿದ್ದಾರೆ ನಿವೇದಿತಾ ಗೌಡ.

ಮತ್ತೊಬ್ಬ ವ್ಯಕ್ತಿ, ನಿಮಗೆ ಈಗ ಮದುವೆಯಾಗಿದೆ ಈ ರೀತಿ ಮಾಡಬೇಡಿ ನಿಮ್ಮ ಗಂಡನಿಗೆ ಪ್ರೋತ್ಸಾಹ ಕೊಡಿ, ಹೀಗೆ ಚಂದನ್ ಮರಿಯಾದೆ ತೆಗೆಯಬೇಡಿ ಎಂದು ಕಮೆಂಟ್ ಮಾಡಿದ್ದಾರೆ. ಈ ಕಮೆಂಟ್ ಬರೆದಿರುವುದು ಒಬ್ಬ ಹುಡುಗಿ ಆಗಿದ್ದು, ಆಕೆಗೆ ತಕ್ಕ ಉತ್ತರ ಕೊಟ್ಟಿದ್ದಾರೆ ನಿವೇದಿತಾ. ಮದುವೆ ಆಗಿದೆ ಅಂದ ಮಾತ್ರಕ್ಕೆ ಹುಡುಗಿಯರು ಬೇರೆ ಕೆಲಸ ಮಾಡಬಾರಾದಾ? ಮದುವೆ ಆದಮೇಲೆ ಮನೆಯಲ್ಲೇ ಕುಳಿತು ಅಡುಗೆ ಮಾಡಿ ಪಾತ್ರೆ ತೋಳಿಬೇಕಾ? ಹುಡುಗಿಯರ ಲೈಫ್ ಇಷ್ಟೇನಾ? ಹುಡುಗಿಯರ ಜೀವನ ಇಷ್ಟಕ್ಕೆ ಸೀಮಿತ ಆಗಬಾರದು. ಇದು 21ನೇ ಶತಮಾನ, ಹುಡುಗಿಯರು ಈಗ ಸ್ವಾತಂತ್ರ್ಯವಾಗಿರಬೇಕು. ಗಂಡನ ಮೇಲೆ ಡಿಪೆಂಡ್ ಆಗಬಾರದು, ಗಂಡನಿಗೆ ಎಷ್ಟು ಅಂತ ತೊಂದರೆ ಕೊಡೋದು, ಗಂಡ ಕಷ್ಟಪಟ್ಟು ಸಂಪಾದನೆ ಮಾಡುವ ಹಣವನ್ನೆಲ್ಲಾ ನಾವು ಖರ್ಚು ಮಾಡಬೇಕಾ? ಅದಕ್ಕಿಂತ ನಾವು ಕೂಡ ಹಣ ಸಂಪಾದನೆ ಮಾಡಬಹುದು ಅಲ್ವಾ.. ಎಂದು ಆ ಹುಡುಗಿಗು ಅರ್ಥ ಆಗುವ ಹಾಗೆ ಮರುಪ್ರಶ್ನೆ ಹಾಕಿ ಉತ್ತರ ಕೊಟ್ಟಿದ್ದಾರೆ ನಿವೇದಿತಾ.

ಹೀಗೆ ನಿವೇದಿತಾ ಗೌಡ ಅವರು ಯೂಟ್ಯೂಬ್ ನಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡಿ, ತಮಗೆ ಬಂದಿರುವ ನೆಗಟಿವ್ ಕಮೆಂಟ್ಸ್ ಗಳಿಗೆಲ್ಲ ಉತ್ತರ ಕೊಟ್ಟಿದ್ದಾರೆ. ನಿವೇದಿತಾ ಗೌಡ ಅವರು ಮದುವೆ ನಂತರ ಹೇಗೆಲ್ಲಾ ಲೈಫ್ ಬದಲಾಗುತ್ತದೆ ಎಂದು ಇಲ್ಲಿ ತಿಳಿಸಿಕೊಟ್ಟಿದ್ದು, ಮದುವೆಯಾಗಿದ್ದರು ಗಂಡನ ಮೇಲೆ ಅಥವಾ ಇನ್ಯಾರ ಮೇಲು ಅವಲಂಬಿಸಬಾರದು, ಹೆಣ್ಣುಮಕ್ಕಳು ತಮ್ಮ ಕಾಲ ಮೇಲೆ ತಾವು ನಿಂತು, ಗಂಡನಿಗೆ ಮತ್ತು ಮನೆಯವರಿಗೆ ಸಪೋರ್ಟಿವ್ ಆಗಿರಬೇಕು ಎನ್ನುವುದನ್ನು ತಿಳಿಸಿಕೊಟ್ಟಿದ್ದಾರೆ.