ಎರಡನೇ ಮಗಳ ವಿಚಾರವಾಗಿ ಸಿಹಿ ಸುದ್ದಿ‌ ನೀಡಿದ ಶಿವಣ್ಣ..

ಕರುನಾಡ ಚಕ್ರವರ್ತಿ ಡಾ.ಶಿವ ರಾಜ್ ಕುಮಾರ್ ಅವರು ಕನ್ನಡದಲ್ಲಿ ಇಂದು ಪ್ರಮುಖ ಹಿರಿಯನಟ, ಶಿವಣ್ಣ ಅವರು ಅಣ್ಣಾವ್ರ ಹಾಗೆ ಕನ್ನಡ ಚಿತ್ರರಂಗಕ್ಕೆ ಸಪೋರ್ಟ್ ಮಾಡುವ ಆಧಾರ ಸ್ಥಂಬವಾಗಿ ನಿಂತಿದ್ದಾರೆ ಎಂದರ್ಸ್ ತಪ್ಪಾಗುವುದಿಲ್ಲ. ಕನ್ನಡ ಚಿತ್ರರಂಗದಲ್ಲಿ ಹೊಸಬರಿಂದ ಹಿಡಿದು ಹಿರಿಯ ಕಲಾವಿದರ ವರೆಗೂ ಎಲ್ಲರಿಗೂ ಶಿವಣ್ಣ ಸಪೋರ್ಟ್ ಮಾಡುತ್ತಾರೆ, ಸಿನಿಮಾಗಳ ಟೀಸರ್, ಟ್ರೈಲರ್ ರಿಲೀಸ್ ಕಾರ್ಯಕ್ರಮಗಳು, ಆಡಿಯೋ ರಿಲೀಸ್ ಸಮಾರಂಭದಲ್ಲಿ ಎಲ್ಲದಕ್ಕೂ ಸಾಥ್ ನೀಡಿ ಹೊಸಬರು ಬೆಳೆಯಬೇಕು ಎಂದು ಪ್ರೋತ್ಸಾಹ, ಇತ್ತೀಚೆಗೆ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಿವಣ್ಣ, ತಮ್ಮ ಎರಡನೇ ಮಗಳ ಬಗ್ಗೆ ಸಿಹಿ ಸುದ್ದಿ ನೀಡಿದ್ದಾರೆ..

ಶಿವಣ್ಣ ಮತ್ತು ಗೀತಕ್ಕ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು, ಮೊದಲನೆಯ ಮಗಳು ನಿರುಪಮಾ ಶಿವ ರಾಜ್ ಕುಮಾರ್, ಎರಡನೆಯ ಮಗಳು ನಿವೇದಿತಾ ಶಿವ ರಾಜ್ ಕುಮಾರ್. ನಿರುಪಮಾ ಅವರು ವೃತ್ತಿಯಲ್ಲಿ ವೈದ್ಯೆ, ಮೈಸೂರಿನಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿದ ನಿರುಪಮಾ, ಡಾಕ್ಟರ್ ಜೊತೆಯಲ್ಲೇ ಮದುವೆಯಾದರು. ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಿದರು ಶಿವಣ್ಣ, ಇಡೀ ದೊಡ್ಮನೆ ನಿರುಪಮಾ ಅವರ ಮದುವೆಯಲ್ಲಿ ಸಂಭ್ರಮಿಸಿತ್ತು. ಇಂದು ನಿರುಪಮಾ ಅವರು ಪತಿಯ ಜೊತೆ ಸುಂದರವಾದ ಸಂಸಾರ ನಡೆಸುತ್ತಿದ್ದಾರೆ.

ಇನ್ನು ಶಿವಣ್ಣ ಅವರ ಎರಡನೇ ಮಗಳು ನಿವೇದಿತಾ, ಇವರು ಶಿವಣ್ಣ ಅವರ ಅಂಡಮಾನ್ ಸಿನಿಮಾದಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದರು. ನಿವೇದಿತಾ ಅವರು ನಟಿಸಿದ್ದು ಅದೊಂದೇ ಸಿನಿಮಾ ಬಳಿಕ ಚಿತ್ರರಂಗದಿಂದ ನಟನೆಯಿಂದ ದೂರವೇ ಉಳಿದಿದ್ದರು. ಆದರೆ ನಾಲ್ಕು ವರ್ಷಗಳ ಹಿಂದೆ ನಿವೇದಿತಾ ಚಿತ್ರರಂಗಕ್ಕೆ ರೀಎಂಟ್ರಿ ಕೊಟ್ಟರು ಅದು ನಾಯಕಿಯಾಗಿ ಅಥವಾ ಅಭಿನಯದ ಮೂಲಕ ಅಲ್ಲ, ನಿರ್ಮಾಪಕಿಯಾಗಿ. ಹೌದು, ಶಿವಣ್ಣ ಅವರ ಮಗಳು ನಿವೇದಿತಾ, ಈಗಾಗಲೇ ಕೆಲವು ವೆಬ್ ಸೀರೀಸ್ ಗಳನ್ನು ನಿರ್ಮಾಣ ಮಾಡಿದ್ದಾರೆ.

ಕನ್ನಡದಲ್ಲಿ ಕೂಡ ವೆಬ್ ಸೀರೀಸ್ ಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಇತ್ತೀಚೆಗೆ ಟಾಕೀಸ್ ಎನ್ನುವ ಆಪ್ ಲಾಂಚ್ ಆಗಿದೆ, ಅದರಲ್ಲಿ ಕನ್ನಡ ಸಿನಿಪ್ರಿಯರು ಸಾಕಷ್ಟು ವೆಬ್ ಸೀರೀಸ್ ಗಳು ಮತ್ತು ಕನ್ನಡ ಸಿನಿಮಾಗಳನ್ನು ನೋಡಬಹುದು. ಇತ್ತೀಚೆಗೆ ಶಿವಣ್ಣ ಟಾಕೀಸ್ ಆಪ್ ವತಿಯಿಂದ ತಯಾರಾಗಿರುವ ಹೊಸ ವೆಬ್ ಸೀರೀಸ್ ಕುರಿತ ಪ್ರೆಸ್ ಮೀಟ್ ನಲ್ಲಿ ಮಾತನಾಡುತ್ತಾ, ಮಗಳು ನಿವೇದಿತಾ ಬಗ್ಗೆ ಹಾಗೂ ಮಗಳು ನಿರ್ಮಾಣ ಮಾಡಿರುವ ವೆಬ್ ಸೀರೀಸ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.ಅಪ್ಪು ಅವರು ಇಲ್ಲವಾದ ಮೇಲೆ ನೋವಿನಿಂದ ಹೊರಬರಲು ಶಿವಣ್ಣ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾರೆ, ಹೀಗೆ ಕಾರ್ಯಕ್ರಮಗಳಿಗೆ ಹೋಗಿ, ಸ್ನೇಹಿತರ ಜೊತೆ ಸಮಯ ಕಳೆದು, ನೋವನ್ನು ಮರೆಯುತ್ತಿದ್ದಾರೆ. ಮಗಳ ಬಗ್ಗೆ ಶಿವಣ್ಣ ಹೇಳಿದ್ದು ಹೀಗೆ..

ನಾಲ್ಕು ವರ್ಷದಿಂದ ನಾವು ಅಂದ್ರೆ ನನ್ನ ಮಗಳು ನಿವೇದಿತಾ ವೆಬ್ ಸೀರೀಸ್ ನಿರ್ಮಾಣ ಮಾಡಿದ್ದಾರೆ, ಹನಿಮೂನ್, ಬೈ ಮಿಸ್ಟಕ್, 80 ರೋಮಿಯೋ ಅಂತ ಮೂರು ವೆಬ್ ಸೀರೀಸ್ ಮಾಡಿದ್ದೀವಿ. ಇನ್ನು 7 ಕಥೆಗಳು ನಮ್ಮ ಬಳಿ ಇದೆ, ಒಂದು ಸಾರಿ 7 ಸ್ಟೋರಿಸ್ ಮಾಡಬೇಕು ಅಂತ ಸ್ಟಾರ್ಟ್ ಮಾಡಿದ್ದು, ಆದರೆ ಕೋವಿಡ್ ಬಂದು ಸ್ಟಾಪ್ ಆಗಿತ್ತು. ಈಗ ಟಾಕೀಸ್ ಬಂದಿರೋದ್ರಿಂದ ಧೈರ್ಯ ಇದೆ. ಯಾಕಂದ್ರೆ ಈಗ ಕನ್ನಡ ವೆಬ್ ಸೀರೀಸ್ ಅಥವ ಸಿನಿಮಾ ತಗೊಳ್ಳೋದಕ್ಕೆ ಭಯ ಪಡ್ತಾರೆ..ಬೇರೆ ಭಾಷೆಗಳು, ತಮಿಳು, ತೆಲುಗು ಹಿಂದಿ ಎಲ್ಲಾ ಹೋಗುತ್ತೆ, ಕನ್ನಡ ತಗೊಳ್ಳೋದಕ್ಕೆ ಯಾರು ಧೈರ್ಯ ಮಾಡ್ತಾ ಇರ್ಲಿಲ್ಲ ಎಂದು ಹೇಳಿರುವ ಶಿವಣ್ಣ ಮಗಳ ಬಗ್ಗೆ ಒಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಶಿವಣ್ಣ ಅವರ ಮಗಳು ವೆಬ್ ಸೀರೀಸ್ ಪ್ರೊಡ್ಯೂಸ್ ಮಾಡುತ್ತಿದ್ದಾರೆ ಎನ್ನುವದು ನಮಗೆಲ್ಲ ಗೊತ್ತಿರುವ ವಿಚಾರ, ಶಿವಣ್ಣ ಸಹ ಮಗಳು ನಿರ್ಮಾಣ ಮಾಡುವ ವೆಬ್ ಸೀರೀಸ್ ನಲ್ಲಿ ನಟಿಸುತ್ತಾರೆ ಎಂದು ಸಿಹಿ ಸುದ್ದಿ ನೀಡಿದ್ದಾರೆ. ‘ನಾನು ವೆಬ್ ಸೀರೀಸ್ ನಲ್ಲಿ ನಟಿಸಬೇಕು ಅಂತ ಇದ್ದೀನಿ.. ನನ್ನ ಮಗಳು ಪ್ರೊಡ್ಯೂಸ್ ಮಾಡೋ ವೆಬ್ ಸೀರೀಸ್ ನಲ್ಲಿ ನಟಿಸ್ತೀನಿ..’ ಎಂದಿದ್ದಾರೆ ಶಿವಣ್ಣ. ಈ ಮೂಲಕ ಬೆಳ್ಳಿತೆರೆಯಿಂದ ವೆಬ್ ಸೀರೀಸ್ ಲೋಕಕ್ಕೂ ಎಂಟ್ರಿ ಕೊಡಲು ಶಿವಣ್ಣ ಸಜ್ಜಾಗಿದ್ದಾರೆ. ಈಗಾಗಲೇ ಸಾಕಷ್ಟು ಸಿನಿಮಾ ಕಲಾವಿದರು ವೆಬ್ ಸೀರೀಸ್ ಗಳಲ್ಲಿ ನಟನೆ ಮಾಡಿ ಇನ್ನಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ, ಈಗ ಶಿವಣ್ಣ ಅವರ ಸರದಿ. ಶಿವಣ್ಣ ಅಭಿನಯಿಸುವ ವೆಬ್ ಸೀರೀಸ್ ಯಾವಾಗ ಬರುತ್ತದೆ ಎನ್ನುವ ಕುತೂಹಲ ಈಗ ಅಭಿಮಾನಿಗಳಲ್ಲಿ ಶುರುವಾಗಿದೆ. ಶಿವಣ್ಣ ಅವರ ಈ ಹೊಸ ಪ್ರಯತ್ನಕ್ಕೆ ಒಳ್ಳೆಯ ಫಲ ಸಿಗಲಿ ಎಂದು ನಾವು ಹಾರೈಸೋಣ.