ನನಗೆ ಈಗ ಮಕ್ಕಳು ಆಗೋದಿಲ್ಲ.. ನೇರವಾಗಿ ಹೇಳಿಕೆ ಕೊಟ್ಟ ನಿವೇದಿತಾ ಗೌಡ..

ಕಿರುತೆರೆಯಾಗಲಿ ಬೆಳ್ಳಿತೆರೆಯಾಗಲಿ‌ ಕಲಾವಿದರುಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಸಾಮಾನ್ಯವಾಗಿ ಅವರುಗಳ ಅಭಿಮಾನಿಗಳಿಗೆ ಅವರಿಗೆ ಮಕ್ಕಳು ಆಗೋದು ಯಾವಾಗ ಮಕ್ಕಳ ಬಗ್ಗೆ ಸಿಹಿ ಸುದ್ದಿ ಯಾವಾಗ ನೀಡ್ತಾರೆ ಎಂಬ ಸಣ್ಣ ಕುತೂಹಲ ಇದ್ದೇ ಇರುತ್ತದೆ.. ಅದೇ ರೀತಿ ಚಂದನ್ ನಿವೇದಿತಾ ಕೂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟು ವರ್ಷಗಳೇ ಕಳೆದಿದ್ದು ಇಲ್ಲಿಯವರೆಗೆ ತಮಗೆ ಮಕ್ಕಳು ಆಗೋ ವಿಚಾರವನ್ನು ಎಲ್ಲಿಯೂ ತಿಳಿಸಿರಲಿಲ್ಲ.. ಆದರೆ ಇದೀಗ ನೇರವಾಗಿ ಮಕ್ಕಳ ಬಗ್ಗೆ ನಿವೇದಿತಾ ಗೌಡ ಹೇಳಿಕೆ ನೀಡಿದ್ದಾರೆ..

ಹೌದು ಚಂದನ್ ಹಾಗೂ ನಿವೇದಿತಾ ಜೋಡಿ ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ‌ ಇಬ್ಬರೂ ಪರಸ್ಪರ ಪ್ರೀತಿಸಿ 2020 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಮದುವೆಯ ನಂತರ ಜೀವನವನ್ನು ಎಂಜಾಯ್ ಮಾಡುತ್ತಿರುವ ಜೋಡಿ ವಿದೇಶ ಪ್ರವಾಸ ಶೋಗಳು ಪಾರ್ಟಿಗಳು ಹೀಗೆ ಸಂತೋಷವಾಗಿ ಜೀವನ ಕಳೆಯುತ್ತಿದ್ದಾರೆ.. ಆದರೆ ಎರಡೂವರೆ ವರ್ಷ ಕಳೆದರೂ ಸಹ ಮಕ್ಕಳ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ.. ಆದರೀಗ ಆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ..

ಹೌದು ಸಾಮಾಜಿಕ ಜಾಲತಾಣದಲ್ಲಿ ಬಹಳ ಆಕ್ಟೀವ್ ಆಗಿರುವ ನಿವೇದಿತಾ ಗೌಡ ಅವರು ತಮ್ಮ ಅಭಿಮಾನಿಗಳ ಕಮೆಂಟ್ ಗಳಿಗೆ ಆಗಾಗ ರಿಪ್ಲೈ ಮಾಡೊದುಂಟು.. ಅಷ್ಟೇ ಅಲ್ಲದೇ ರೀಲ್ಸ್ ಅದು ಇದು ಅಂತ ಸಿಕ್ಕಪಟ್ಟೆ ವೀಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ಮನರಂಜನೆಯನ್ನೂ ಸಹ ನೀಡುತ್ತಿರುತ್ತಾರೆ.. ಅಷ್ಟೇ ಅಲ್ಲದೇ ಸಧ್ಯ ರಾಜಾ ರಾಣಿ ಶೋ ನಂತರ ಗಿಚ್ಚಿ ಗಿಲಿ ಗಿಲಿ ಶೋನಲ್ಲಿ ಭಾಗವಹಿಸುತ್ತಿದ್ದು ಕೈತುಂಬಾ ಸಂಪಾದನೆ ಸಹ ಮಾಡುತ್ತಿದ್ದಾರೆನ್ನಬಹುದು.. ಇನ್ನು ಇತ್ತ ಇಷ್ಟು ದಿನ ಸಂಗೀತ ನಿರ್ದೇಶಕನಾಗಿದ್ದ ಚಂದನ್ ಶೆಟ್ಟಿ ಇದೀಗ ನಾಯಕನಾಗಿಯೂ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿಯಾಗಿದ್ದು ಸಧ್ಯದಲ್ಲಿಯೇ ಸಿನಿಮಾ ದೊಡ್ಡ ಪರದೆಯಲ್ಲಿ ಬಿಡುಗಡೆಯಾಗಲಿದೆ..

ಇನ್ನು ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಗಳಿಗೆ ಪ್ರತಿಕ್ರಿಯೆ ನೀಡುವ ನಿವೇದಿತಾ ಗೌಡ ಇದೀಗ ಮಕ್ಕಳಾಗುವ ಬಗ್ಗೆ ಮಾತನಾಡಿದ್ದಾರೆ.. ಹೌದು ಸಾಮಾನ್ಯವಾಗಿ ಮದುವೆಯಾದ ಕಲಾವಿದರುಗಳಿಗೆ ಅವರು ಹಾಕುವ ಪೋಸ್ಟ್ ಗಳಿಗೆ ಅಭಿಮಾನಿಗಳು ಮಕ್ಕಳು ಯಾವಾಗ ಎನ್ನುವ ಪ್ರಶ್ನೆಯನ್ನು ಕೇಳುವುದು ಸಹಜ.. ಅದೇ ರೀತಿ ನಿವೇದಿತಾ ಗೌಡ ಅವರಿಗೂ ಸಹ ಅಭಿಮಾನಿಯೊಬ್ಬರು ಮಕ್ಕಳು ಯಾವಾಗ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ.‌ ಆಗ ಉತ್ತರ ನೀಡಿದ ನಿವೇದಿತಾ ಗೌಡ ತಮಗೆ ಈಗ ಮಕ್ಕಳಾಗೋದಿಲ್ಲ.. ಎಂದು ನೇರವಾಗಿ ಹೇಳಿಕೊಂಡಿದ್ದಾರೆ..

ಹೌದು ಅಭಿಮಾನಿಯೊಬ್ಬರು ನೀವು ಮಕ್ಕಳನ್ನು ಮಾಡಿಕೊಳ್ಳೋದು ಯಾವಾಗ ಎಂದು ಕೇಳಿದ ಪ್ರಶ್ನೆಗೆ ಅಷ್ಟೇ ಕೂಲ್ ಆಗಿಯೇ ಉತ್ತರಿಸಿರುವ ನಿವೇದಿತಾ ಗೌಡ.. ಸದ್ಯಕ್ಕೆ ಮಕ್ಕಳನ್ನು ಮಾಡಿಕೊಳ್ಳುವ ಯಾವುದೇ ಪ್ಲ್ಯಾನ್ ಇಲ್ಲ.. ಇನ್ನೂ ನಾನು ಜೀವನವನ್ನು ಎಂಜಾಯ್ ಮಾಡಬೇಕು. ಟೂರ್ ಮಾಡಬೇಕು. ಎಲ್ಲವೂ ಆದ ನಂತರವೇ ನೋಡೋಣ.. ಎಂದು ಉತ್ತರಿಸಿದ್ದಾರೆ. ಪದೇ ಪದೇ ಇದೇ ಪ್ರಶ್ನೆಯನ್ನೂ ಹಲವರು ಕೇಳಿದ್ದಾರೆ. ಇಷ್ಟು ಬೇಗ ನಾನು ಯಾಕೆ ಮಗು ಮಾಡಿಕೊಳ್ಳಬೇಕು ಎಂದು ಅವರೂ ಪ್ರಶ್ನೆ ಮಾಡಿದ್ದಾರೆ.. ಸಧ್ಯಕ್ಕಂತೂ ಮಕ್ಕಳು ಆಗೋದಿಲ್ಲ ಎಂದು ನೇರವಾಗಿ ಹೇಳಿಕೊಂಡಿದ್ದಾರೆ..

ಒಟ್ಟಿನಲ್ಲಿ ಹತ್ತು ವರ್ಷ ವಯಸ್ಸಿನ ಅಂತರ ಇರುವ ಚಂದನ್ ಶೆಟ್ಟಿ ಅವರನ್ನು ಚಿಕ್ಕ ವಯಸ್ಸಿಗೆ ಮದುವೆಯಾದ ನಿವೇದಿತಾ ಗೌಡ ಸಧ್ಯಕ್ಕಂತೂ ಮಕ್ಕಳಾಗೋದಿಲ್ಲ.. ಮುಂದೆ ನೋಡೋಣ ಎನ್ನುವ ಮಾತುಗಳನ್ನಾಡಿದ್ದು ಸದಾ ಒಂದಿಲೊಂದು ವಿಚಾರಕ್ಕೆ ಆಗಾಗ ಸುದ್ದಿಯಾಗುವ ನಿವೇದಿತಾ ಚಂದನ್ ಜೋಡಿ ಇದೀಗ ಮಕ್ಕಳ ವಿಚಾರಕ್ಕೆ ಸುದ್ದಿಯಾಗಿದ್ದು ಟ್ರೋಲ್ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ ಎಂಬುದು ಅಷ್ಟೇ ಸತ್ಯ..