28 ವರ್ಷದ ಇಂಜಿನಿಯರ್ ದುಬೈ ನಲ್ಲಿ ಸಾವು‌‌‌.. ಮರುದಿನವೇ ಮಗುವಿಗೆ ಜನ್ಮ ನೀಡಿದ ಪತ್ನಿ.. ವಿಮಾನದಲ್ಲಿ ಪತ್ನಿಯ ಜೊತೆ ಬೇರೆಯವರನ್ನು ಕಳುಹಿಸಿದ್ದ ಪತಿ..

ವಿಧಿಯಾಟವ ಬಲ್ಲವರಾರು ಎಂಬ ಮಾತು ನೂರಕ್ಕೆ ನೂರರಷ್ಟು ಸತ್ಯ.. ವಯಸ್ಸಾಗಿರುವುದಿಲ್ಲ.. ಯಾವುದೇ ಕಾಯಿಲೆ ಇರೋದಿಲ್ಲ.. ಚಿಕ್ಕ ಚಿಕ್ಕ ವಯಸ್ಸಿಗೆ ಜೊತೆಯಲ್ಲಿಯೇ ಇದ್ದ ಆಪ್ತರು ಜೀವ ಕಳೆದುಕೊಳ್ಳುವುದಕ್ಕಿಂತ ದುಃಖದ ವಿಚಾರ ಮತ್ತೊಂದಿಲ್ಲ..

ಮೊನ್ನೆ ಮೊನ್ನೆಯಷ್ಟೇ ಕೇವಲ 35 ವರ್ಷಕ್ಕೆ ಚಿರಂಜೀವಿ ಅವರು ಹೃದಯಾಘಾತದಿಂದ ಮೃತಪಟ್ಟ ಘಟನೆ ಅರಗಿಸಿಕೊಳ್ಳಲಾಗದ ಸಮಯದಲ್ಲಿಯೇ ಇದೀಗ ಮತ್ತೊಂದು ಮನಕಲಕುವ ಘಟನೆ ನಡೆದಿದೆ..

ಹೌದು ಕೇರಳ ಮೂಲದ 28 ವರ್ಷದ ನಿತಿನ್ ಹಾಗೂ 27 ವರ್ಷದ ಗೀತಾ ದುಬೈ ನಲ್ಲಿ ನೆಲೆಸಿದ್ದರು.. ಗೀತಾ ತುಂಬು ಗರ್ಭಿಣಿ‌ ಆಗಿದ್ದರು.. ಲಾಕ್ ಡೌನ್ ಇದ್ದ ಕಾರಣ ಭಾರತಕ್ಕೆ ಬರಲಾಗದೆ ಅಲ್ಲಿಯೇ ಉಳಿದಿದ್ದರು.. ನಂತರ ಒಂದೇ ಭಾರತ್ ಮಿಷನ್ ಅಡಿಯಲ್ಲಿ ಭಾರತಕ್ಕೆ ಮರಳಲು ಮೊದಲ ವಿಮಾನದಲ್ಲಿಯೇ ಇವರಿಗೆ ಅವಕಾಶ ಸಿಕ್ಕಿತು.. ಆದರೆ ದುಬೈ ನಲ್ಲಿ ಸಮಾಜಸೇವೆಯಲ್ಲಿ ತೊಡಗಿಕೊಂಡಿದ್ದ ನಿತಿನ್ ಕೊರೊನಾ ಸಮಯದಲ್ಲಿ ಅಲ್ಲಿನ ಭಾರತೀಯರ ನೆರವಿಗೆ ನಿಂತಿದ್ದರು.. ಅದೇ ಕಾರಣಕ್ಕೆ ನಿತಿನ್ ತನ್ನ ಪತ್ನಿಯ ಜೊತೆಗೆ ಬೇರೊಬ್ಬ ಬಡ ವ್ಯಕ್ತಿಯನ್ನು ಭಾರತಕ್ಕೆ ಮರಳಲು ತನ್ನ ಅವಕಾಶ ಅವನಿಗೆ ಕೊಟ್ಟರು.. ಆತನ ವೆಚ್ಛವನ್ನೂ ನಿತಿನ್ ಅವರೇ ಭರಿಸಿದರು..

ಮುಂದೆ ಭಾರತಕ್ಕೆ ಮರಳಲು ಅವಕಾಶ ಸಿಗಬಹುದು ಎಂದು ಅಲ್ಲಿಯೇ ಉಳಿದು ಅಲ್ಲಿನ ಭಾರತೀಯರಿಗೆ ಸಹಾಯ ಮಾಡುತ್ತಿದ್ದರು.. ಆದರೆ ದುರ್ವಿಧಿ ದುಬೈನಲ್ಲಿಯೇ ಉಳಿದ ನಿತಿನ್ ಸೋಮವಾರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.. ಹೌದು ನಿತಿನ್ ಅವರು ಅಧಿಕ ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.. ನಿತಿನ್ ಚಿಕಿತ್ಸೆಯನ್ನೂ ಪಡೆದಿದ್ದರು. ಆದರೆ ಸೋಮವಾರ ಮಲಗಿದ್ದವರು ಏಳಲೇ ಇಲ್ಲ.. ಇನ್ನೇನು ಎರಡು ದಿನದಲ್ಲಿ ಹುಟ್ಟಬೇಕಿದ್ದ ತನ್ನ ಕಂದನ ಮುಖವನ್ನು ನೋಡಲೇ ಇಲ್ಲ.. ನಿದ್ರೆಯಲ್ಲಿಯೇ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ..

ಇತ್ತ ಮಂಗಳವಾರ ನಿತಿನ್ ಪತ್ನಿ ಗೀತಾ ಮಗುವಿಗೆ ಜನ್ಮ ನೀಡಿದ್ದಾರೆ.. ಅಂದು ತನ್ನ ಜೊತೆಯೇ ಗಂಡ ಮರಳಿ ಭಾರತಕ್ಕೆ ಬಂದಿದ್ದರೆ ಉಳಿದುಕೊಳ್ಳುತ್ತಿದ್ದರೋ ಏನೋ.. ಅಥವಾ ಆ ಕಂದನಿಗೆ ಅಪ್ಪನ ಮುಖವ ಕಾಣುವ ಅದೃಷ್ಟವೇ ಇರಲಿಲ್ಲವೇನೋ.. ಆ ಭಗವಂತನ ಮನಸ್ಸು ಒಮ್ಮೊಮ್ಮೆ ಕಲ್ಲಾಗುವುದೇಕೆ..