ಗಂಡನಿಗೆ ಬೆನ್ನೆಲುಬಾಗಿ ನಿಲ್ಲಲು ಹೊಸ ಉದ್ಯಮ ಆರಂಭಿಸಿದ ನಟ ವಿನೋದ್ ಪ್ರಭಾಕರ್ ಪತ್ನಿ ನಿಶಾ..

ಸಿನಿಮಾ ಇಂಡಸ್ಟ್ರಿ ಮಂದಿ ತಮ್ಮ ನಟನೆಯ ಜೊತೆಗೆ ಬೇರೆ ಬೇರೆ ಉದ್ಯಮಗಳನ್ನು ಮಾಡೋದು ಹೊಸ ವಿಚಾರವೇನೂ ಅಲ್ಲ.. ಸಾಕಷ್ಟು ಮಂದಿ ಅದರಲ್ಲೂ ಸ್ಟಾರ್ ನಟರುಗಳು ಸಹ ನಟನೆಯ ವೃತ್ತಿಯ ಜೊತೆಗೆ ಹೊಟೆಲ್ ಉದ್ಯಮ.. ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಹೀಗೆ ಸಾಕಷ್ಟು ಕಡೆ ಬಂಡವಾಳ ಹೂಡಿದ್ದಾರೆ.. ಮತ್ತೆ ಕೆಲವರು ತೋಟ ಜಮೀನು ಅಂತ ಕೃಷಿ ಕಾಯಕವನ್ನು ಸಹ ಮಾಡುತ್ತಿರೋದುಂಟು.. ಇನ್ನು ಸಿನಿಮಾ ಇಂಡಸ್ಟ್ರಿಯಲ್ಲೇ ಬದುಕು ಕಟ್ಟಿಕೊಂಡರೂ ಸಹ ಅವರ ಕ್ರೇಜ್ ಮುಗಿದ ಬಳಿಕ ಅಥವಾ ಅವಕಾಶಗಳು ಕಡಿಮೆಯಾಗುವುದೂ ಸಹಜ..

ಆರೀತಿ ಅವಕಾಶಗಳು ಕಡಿಮೆಯಾಗಿ ಬಳಿಕ ಆರ್ಥಿಕವಾಗಿ ತೊಂದರೆ ಅನುಭವಿಸಿದ ಸಾಕಷ್ಟು ಕಲಾವಿದರುಗಳು ನಮ್ಮ ಕಣ್ಣ ಮುಂದೆಯೇ ಉದಾಹರಣೆಯಾಗಿ ಇದ್ದಾರೆ.. ಸಾಕಷ್ಟು ಹಿರಿಯ ಕಲಾವಿದರು ತಮ್ಮ ಜೀವನ ನಿರ್ವಹಣೆಗಾಗಿ ಕಿರುತೆರೆಗೆ ಬಂದು ಜೀವನ ಕಟ್ಟಿಕೊಂಡಿರೋದು ಇದೆ.. ಇನ್ನು ಇದೆಲ್ಲದರ ನಡುವೆ ಇತ್ತೀಚಿನ ಕಲಾವಿದರು ಬುದ್ದಿವಂತರೆನ್ನಬಹುದು ತಮ್ಮ ಆದಾಯವನ್ನು ಉತ್ತಮ್ಮ ರೀತಿಯಲ್ಲಿ ಬೇರೆ ಬೇರೆ ಉದ್ಯಮಗಳಿಗೆ ಹಾಕಿ ಮುಂದಿನ ಭವಿಷ್ಯವನ್ನು ಆರ್ಥಿಕವಾಗಿ ಸುರಕ್ಷಿತವಾಗಿ ಇಟ್ಟುಕೊಳ್ಳುತ್ತಿದ್ದಾರೆನ್ನಬಹುದು…

ಜೊತೆಗೆ ಸಿನಿಮಾ ಇಂಡಸ್ಟ್ರಿಯವರು ತಮ್ಮದೇ ಇಂಡಸ್ಟ್ರಿಯಲ್ಲಿ ಬಂಡವಾಳ ಹಾಕಿ ಸಿನಿಮಾ ಮಾಡಿ ಅದರಿಂದಲೇ ಹಣ ಮಾಡಿದವರೂ ಇದ್ದಾರೆ.. ಹಣ ಕಳೆದುಕೊಂಡವರೂ ಇದ್ದಾರೆ.. ಇದೆಲ್ಲವನ್ನು ಹೊರತು ಪಡಿಸಿ ಸಧ್ಯ ಇದೀಗ ನಟ ವಿನೋದ್ ಪ್ರಭಾಕರ್ ಅವರ ಪತ್ನಿ ನಿಶಾ ಅವರು ಗಂಡನಿಗೆ ಕೈ ಜೋಡಿಸುವ ಸಲುವಾಗಿ ಹೊಸ ಉದ್ಯಮವನ್ನು ಆರಂಭಿಸಿದ್ದು ಇಷ್ಟು ದಿನ ವಿನೋದ್ ಅವರ ಬೆಂಬಲವಾಗಿ ನಿಂತಿದ್ದ ನಿಶಾ ಅವರು ಇನ್ನು ಮುಂದೆ ಅವರ ವೃತ್ತಿ ಬದುಕಿನಲ್ಲಿಯೂ ಜೊತೆಯಾಗಿ ನಿಲ್ಲಲಿದ್ದಾರೆ..

ಹೌದು ಸಿನಿಮಾರಂಗದಲ್ಲಿರುವವರು ಸಿನಿಮಾ ನಿರ್ಮಾಣ ಕಂಪನಿ ತೆರೆಯುವುದು ಮೊದಲಿನಿಂದಲೂ ವಾಡಿಕೆಯಲ್ಲಿದೆ.. ಈ ಹಿಂದೆ ಪಾರ್ವತಮ್ಮ ರಾಜ್ ಕುಮಾರ್ ಅವರು ತಮ್ಮ ಪ್ರೊಡಕ್ಷನ್ ನಿಂದ ಸಾವಿರಾರು ಕುಟುಂಬಗಳಿಗೆ ಜೀವನಾಧಾರವಾಗಿದ್ದರು.. ಅಣ್ಣಾವ್ರ ಸಾಕಷ್ಟು ಸಿನಿಮಾಗಳು ಅವರದ್ದೇ ಪ್ರೊಡಕ್ಷನ್ ನಲ್ಲಿ ತಯಾರಾಗುತ್ತಿದ್ದವು.. ಇನ್ನು ಕೆಲ ವರ್ಷಗಳ ಹಿಂದೆ ಪುನೀತ್ ಅವರು ಪಿ ಆರ್ ಕೆ ಸಂಸ್ಥೆ ತೆರೆದು ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವುದಷ್ಟೇ ಅಲ್ಲದೇ ಆ ಸಂಸ್ಥೆಗೆ ಅಶ್ವಿನಿ ಪುನೀತ್ ಅವರನ್ನು ಮುಖ್ಯಸ್ಥರನ್ನಾಗಿಸಿದ್ದರು.. ಇನ್ನು ರಕ್ಷಿತ್ ಶೆಟ್ಟಿ ರಿಷಭ್ ಶೆಟ್ಟಿ ಅವರೂ ಸಹ ನಟನೆಯ ಜೊತೆಗೆ ನಿರ್ಮಾಪಕನಾಗಿಯೂ ಗುರುತಿಸಿಕೊಂಡಿದ್ದಾರೆ..

ಇತ್ತೀಚಿನ ದಿನಗಳಲ್ಲಿ ಡಾಲಿ ಧನಂಜಯ್.. ಗೀತಕ್ಕ.. ಹೀಗೆ ಸಾಕಷ್ಟು ಸಿನಿಮಾ ಮಂದಿಯೇ ತಮ್ಮ ತಮ್ಮದೇ ಆದ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ತೆರೆದಿದ್ದರು.. ಈಗ ಈ ಸಾಲಿಗೆ ವಿನೋದ್ ಪ್ರಭಾಕರ್ ಅವರ ಮಡದಿ ನಿಶಾ ಅವರೂ ಸಹ ಸೇರಿಕೊಂಡಿದ್ದು ತಮ್ಮದೇ ಆದ ಸಿನಿಮಾ ನಿರ್ಮಾಣ ಸಂಸ್ಥೆ ತೆರೆದು ನಿರ್ಮಾಪಕಿಯಾಗಿ ಹೊಸ ಉದ್ಯಮ ಆರಂಭಿಸಿದ್ದಾರೆ.. ಹೌದು ಟೈಗರ್ ಟಾಕೀಸ್ ಎಂಬ ನಿರ್ಮಾಣ ಸಂಸ್ಥೆ ತೆರೆದಿದ್ದು ಸಧ್ಯ ಈ ಸಂಸ್ಥೆಯ ಲೋಗೋವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಿಡುಗಡೆ ಮಾಡಿದ್ದರು..

ಇನ್ನು ಇತ್ತ ಈ ಸಂಸ್ಥೆಯ ಮೊದಲ ಸಿನಿಮಾವಾಗಿ ವಿನೋದ್ ಪ್ರಭಾಕರ್ ಅವರ ಲಂಕಾಸುರ ಸಿನಿಮಾ ನಿರ್ಮಾಣವಾಗಿದ್ದು ನಿನ್ನೆ ಈ ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದ್ದು ರವಿಚಂದ್ರನ್ ಅವರು ಟೀಸರ್ ಬಿಡುಗಡೆ ಮಾಡಿ ವಿನೋದ್ ಪ್ರಭಾಕರ್ ಹಾಗೂ ನಿಶಾ ಮತ್ತು ಸಂಪೂರ್ಣ ಚಿತ್ರತಂಡಕ್ಕೆ ಶುಭ ಹಾರೈಸಿದರು.. ಇನ್ನು ಇದೇ ಸಿನಿಮಾದಲ್ಲಿ ನಟ ಲೂಸ್ ಮಾದ ಯೋಗಿ ಅವರೂ ಸಹ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದು ವಿನೋದ್ ಪ್ರಭಾಕರ್ ಅವರು ಈ ಸಿನಿಮಾ ಮೂಲಕ ದೊಡ್ಡ ಕಂಬ್ಯಾಕ್ ನ ನಿರೀಕ್ಷೆಯಲ್ಲಿದ್ದಾರೆನ್ನಬಹುದು.. ಕನ್ನಡ ಚಿತ್ರರಂಗ ಬೆಳೆಯಲಿ.. ಕನ್ನಡದಲ್ಲಿ ಒಳ್ಳೊಳ್ಳೆ ಸಿನಿಮಾಗಳು ಮೂಡಿ ಬರಲಿ‌ ಅನ್ನುವುದೇ ಸಿನಿಮಾ ಪ್ರಿಯರ ಶುಭ ಹಾರೈಕೆ.. ನಿಶಾ ಅವರ ಹೊಸ ಜರ್ನಿಗೆ ಶುಭವಾಗಲಿ.ಮ್