ನಾಗಿಣಿ ಧಾರಾವಾಹಿ ಚಿತ್ರೀಕರಣದ ವೇಳೆ ಬಿದ್ದು ಕಾಲು ಮುರಿದುಕೊಂಡ ನಟಿ ನಮ್ರತಾ.. ತಬ್ಬಿಬ್ಬಾದ ನಟ ನಿನಾದ್ ಮಾಡಿದ್ದೇನು ಗೊತ್ತಾ..

ಸಿನಿಮಾ ಅಥವಾ ಧಾರಾವಾಹಿಗಳ ಚಿತ್ರೀಕರಣದ ವೇಳೆ ಸಾಹಸ ದೃಶ್ಯಗಳನ್ನು ಚಿತ್ರೀಕರಣ ಮಾಡುವ ಸಂದರ್ಭಗಳಲ್ಲಿ ಪೆಟ್ಟಾಗುವುದು ಸಹಜ.. ಆದರೆ ಇಲ್ಲಿ ನಾಗಿಣಿ 2 ಧಾರಾವಾಹಿಯ ಚಿತ್ರೀಕರಣದ ವೇಳೆ ಬೇರೆಯದ್ದೇ ಕತೆ ನಡೆದಿದ್ದು ನಟಿ ನಮ್ರತಾ ಕಾಲು ಮುರಿದುಕೊಂಡ್ರಾ ಎನ್ನುವಂತಾಗಿದೆ.. ಹೌದು ನಾಗಿಣಿ 2 ಧಾರಾವಾಹಿ ಮುಗಿಯುವ ಹಂತ ತಲುಪಿದೆ. ಹೀಗಿರುವಾಗಲೇ ಧಾರಾವಾಹಿಯ ನಾಯಕ ಪಾತ್ರದ ನಿನಾದ್ ಹರಿತ್ಸಾ ಕೂಡ ಹೊರ ನಡೆದಿದ್ದಾರೆ ಎಂಬ ಸುದ್ದಿ ಅಭಿಮಾನಿಗಳನ್ನು ಬೇಸರಗೊಳಿಸಿದೆ.

ನಾಗಮಣಿಗಾಗಿ ನಾಗಲೋಕದ ಹಾವುಗಳು ಮನುಷ್ಯ ರೂಪ ತಾಳಿ ಭೂಮಿಗೆ ಬಂದಿವೆ. ಇಲ್ಲಿಂದ ಶುರುವಾಗುವ ಕಥೆ ಹಿಂದಿನ ಜನ್ಮದ ಸರ್ಪ ಜೋಡಿಗಳು ಈ ಜನ್ಮದಲ್ಲಿ ಒಂದಾಗಿವೆ. ಇನ್ನೇನು ಇನ್ನೊಂದು ತಿಂಗಳಲ್ಲಿ ಧಾರಾವಾಹಿ ಮುಕ್ತಾಯಗೊಳ್ಳುತ್ತಿದೆ. ಇದೇ ಸನಯದಲ್ಲಿ ನಮ್ರತಾ ಚಿತ್ರೀಕದಣದ ವೇಳೆ ಕಾಲು ಮುರಿದುಕೊಂಡಿದ್ದು ನಟ ನಿನಾದ್ ತಬ್ಬಿಬ್ಬಾಗಿ ಹೋಗಿದ್ದಾರೆ.. ಹೌದು ನಿನಾದ್ ಆತಂಕಕೊಳಗಾದರೆ ಮಿಕ್ಕವರೆಲ್ಲಾ ನಗಲು ಈ ಘಟನೆ ಕಾರಣವಾಗಿದೆ.. ಹೌದು ನಮ್ರತಾ ಅವರು ನಿನಾದ್ ಹರಿತ್ಸಾ ಅವರನ್ನು ಮಂಗ ಮಾಡಿದ್ದಾರೆ. ಆದರೆ ನಿನಾದ್ ಮಾತ್ರ ಬಹಳ ಆತಂಕಕೊಳಗಾಗಿದ್ದು ತಕ್ಷಣ ನಮ್ರತಾರ ಕಾಲಿಗೆ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ..

ಹೌದು ಕಾಲು ಮುರಿದುಕೊಂಡಂತೆ ನಮ್ರಾತಾ ನಟನೆ.. ನಮ್ರತಾ ಗೌಡ ಅವರು ನಿನಾದ್ ಹರಿತ್ಸಾ ಅವರನ್ನು ಪ್ರ್ಯಾಂಕ್ ಮಾಡಲು ಮುಂದಾಗಿದ್ದಾರೆ. ಇದಕ್ಕಾಗಿ ತಮಗೆ ಈ ಹಿಂದೆಯೇ ಗಾಯವಾಗಿದ್ದ ಜಾಗದಲ್ಲೇ ಮೇಕಪ್‌ ಮಾಡಿಸಿಕೊಂಡಿದ್ದಾರೆ. ಡುಪ್ಲಿಕೇಟ್‌ ರಕ್ತವನ್ನು ಬಳಸಿ ಗಾಯದ ಮೇಕಪ್‌ ಮಾಡಿಸಿಕೊಂಡು ಎಲ್ಲರಿಗೂ ಚಿತ್ರೀಕರಣದ ವೇಳೆ ಬಾಗಿಲು ತೆಗೆದ ಕೂಡಲೇ ಬೀಳುತ್ತೀನಿ. ಆಗ ನಿನಾದ್ ರಿಯಾಕ್ಷನ್ ಹೇಗಿರುತ್ತೋ ನೋಡೋಣ ಎಂದಿದ್ದಾರೆ. ಅದರಂತೆ ನಡೆದುಕೊಂಡಿದ್ದು, ಎಲ್ಲರೂ ಗಾಬರಿಯಾಗಿದ್ದರೆ. ನಿನಾದ್ ಬಂದು ಟಿಶ್ಯೂ ಪೇಪರ್‌ನಿಂದ ಗಾಯ ಕ್ಲೀನ್ ಮಾಡಲು ಮುಂದಾಗಿದ್ದಾರೆ. ಅಮ್ಮ ಬೇಕು ಎಂದು ಕಿರುಚಾಡುತ್ತಿದ್ದ ನಮ್ರತಾ ಅವರನ್ನು ಸಮಾಧಾನ ಮಾಡಿದ್ದಾರೆ. ಕೂಲ್‌ ಆಗಿ ಸಂದರ್ಭವನ್ನು ಹ್ಯಾಂಡಲ್‌ ಮಾಡಿದ್ದು, ಬಳಿಕ ನಮ್ರತಾ ಪ್ರ್ಯಾಂಕ್ ಮಾಡಿದ್ದನ್ನು ಹೇಳಿದ್ದಾರೆ.

ಇನ್ನು ಧಾರಾವಾಹಿಯ ವಿಚಾರಕ್ಕೆ ಬಂದರೆ ಜೀ ಕನ್ನಡ ವಾಹಿನಿಯಲ್ಲಿ ನಾಗಿಣಿ ಧಾರಾವಾಹಿ ಆರಂಭವಾಗಿದ್ದು 2016ರಲ್ಲಿ. ಆಗ ಈ ಧಾರಾವಾಹಿ ಸಂಚಲನವನ್ನು ಮೂಡಿಸಿತ್ತು. ಸತತ 4 ವರ್ಷಗಳ ಕಾಲ ‘ನಾಗಿಣಿ’ ಸೀರಿಯಲ್ ಅದ್ಭುತವಾಗಿ ಮೂಡಿ ಬಂದಿತ್ತು 2020ರಲ್ಲಿ ‘ನಾಗಿಣಿ 2’ ಧಾರಾವಾಹಿಯನ್ನು ಪ್ರಾರಂಭಿಸಲಾಯ್ತು. ಈಗ ಧಾರಾವಾಹಿ ಮುಗಿಯುವ ಹಂತ ತಲುಪಿದೆ. ಕಳೆದೆರಡು ತಿಂಗಳೇ ‘ನಾಗಿಣಿ 2’ ಧಾರಾವಾಹಿಯನ್ನು ಮುಕ್ತಾಯಗೊಳಿಸಲು ಸೀರಿಯಲ್ ತಂಡ ಮುಂದಾಗಿತ್ತು. ಆದರೆ, ಪ್ರೇಕ್ಷಕರ ಒತ್ತಾಯದ ಮೇರೆಗೆ ಕಥೆ ಹೆಣೆದು ಮುನ್ನಡೆಸುತ್ತಿದೆ.

ಶಿವಾನಿ ಪಾತ್ರಧಾರಿ ನಮ್ರತಾ ಗೌಡ.. ನಮ್ರತಾ ಗೌಡ ಬಾಲನಟಿಯಾಗಿ ಕಿರುತೆರೆಗೆ ಬಂದವರು. ಈಗ ನಾಯಕಿಯಾಗಿ ಮಿಂಚುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ನಮ್ರತಾ ಗೌಡ ‘ನಾಗಿಣಿ’ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸದ್ಯ ತಮ್ಮ ಅಭಿಮಾನಿಗಳ ಜೊತೆಗೆ ನೇರವಾಗಿ ಸಂಪರ್ಕದಲ್ಲಿರಲು ನಮ್ರತಾ ಯೂಟ್ಯೂಬ್ ಚಾನೆಲ್ ತೆರೆದಿದ್ದಾರೆ. ಇದರ ಮೂಲಕ ನಮ್ರತಾ ಗೌಡ ಅವರು ಅಭಿಮಾನಿಗಳ ಪ್ರಶ್ನೆಗಳಿಗೆ, ಕುತೂಹಲಗಳಿಗೆ ಉತ್ತರ ನೀಡುತ್ತಿದ್ದಾರೆ. ನಮ್ರತಾ ಅವರು, ತಮಗೆ ಎನಿ ಟೈಂ ವೆಜ್ ಊಟ ಇಷ್ಟ ಎಂದು ಹೇಳಿದ್ದಾರೆ. ಅಲ್ಲದೇ, ಮುದ್ದೆ, ಬಜ್ಜಿ ಹಾಗೂ ಗುಲಾಬ್ ಜಾಮೂನ್ ತುಂಬಾ ಇಷ್ಟ. ಕಾಫೀ, ಟೀ ಕುಡಿಯದ ನಮ್ರತಾ ಅವರ ಫೇವರಿಟ್ ಮೂವಿ ‘ಪರಮಾತ್ಮ’ ಎಂದು ಹೇಳಿದ್ದಾರೆ.

ನಾಗಿಣಿ ನಾಯಕ ಬದಲು.. ಮೂಲತಃ ರಂಗಭೂಮಿ ಕಲಾವಿದರಾಗಿರುವ ನಟ ನಿನಾದ್ ಹರಿತ್ಸಾ ಅವರ ಮೊದಲ ಧಾರಾವಾಹಿ ‘ಟೈಮ್ ಪಾಸ್ ತೆನಾಲಿ’. ಇದಾದ ಬಳಿಕ ಮೂರು, ನಾಲ್ಕು ಧಾರಾವಾಹಿಗಳಲ್ಲಿ ನಟಿಸಿದ್ದು, ನಿನಾದ್ ಹರಿತ್ಸಾ ಅವರಿಗೆ ‘ನಾಗಿಣಿ 2’ ಸೀರಿಯಲ್ ಹೆಸರು ತಂದುಕೊಟ್ಟಿದೆ. ನಟ ನಿನಾದ್ ಹರಿತ್ಸಾ ಅವರು ಗೆಳತಿ ರಮ್ಯಾ ಜೊತೆಗೆ ಕಳೆದ ಫೆಬ್ರವರಿ ತಿಂಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸದ್ಯ ಜೀ ಕನ್ನಡದ ‘ಜೋಡಿ ನಂ.1’ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದಾರೆ.

ಪ್ರಖ್ಯಾತ ಜ್ಯೋತಿಷಿ.. ದೈವಜ್ಞಾ ಪ್ರಧಾನ ತಾಂತ್ರಿಕ್ ಸಂತೋಷ್ ಕುಮಾರ್.. 98808 68514 ನೂರಕ್ಕೆ ನೂರು ಪರಿಹಾರ‌.. ವಿದ್ಯೆ ಉದ್ಯೋಗ ಕುಟುಂಬ ಸಮಸ್ಯೆ ಸಂತಾನ ದಾಂಪತ್ಯದಲ್ಲಿ ತೊಂದರೆ ಸಾಲದ ಬಾಧೆ ಕೋರ್ಟ್ ಕೇಸ್ ಜಾಗದ ವಿಚಾರ.. ಅರೋಗ್ಯ ಬಿಸಿನೆಸ್.. ಹಾಗೂ ಇನ್ನಿತರ ಎಲ್ಲಾ ಸಮಸ್ಯೆಗಳಿಗೆ ಫೋನ್ ಅಥವಾ ವಾಟ್ಸಪ್ ಮೂಲಕ ಶಾಶ್ವತ ಪರಿಹಾರ.. ನಿಮ್ಮ ಒಂದು ಕರೆ ನಿಮ್ಮ ಭವಿಷ್ಯ ಬದಲಿಸಬಹುದು.. ಕರೆ ಮಾಡಿ.. 98808 68514