ನಾಗಿಣಿ‌ ಧಾರಾವಾಹಿಯಿಂದ ಹೊರ ಬಂದ ನಟ ತ್ರಿಶೂಲ್.. ನಿಜವಾದ ಕಾರಣ ಬೇರೆಯೇ ಇದೆ..

ಕನ್ನಡ ಕಿರುತೆರೆಯ ಧಾರಾವಾಹಿಗಳು ಜನರಿಗೆ ಮನರಂಜನೆ ಮಾತ್ರವಲ್ಲದೇ ಕಲಾವಿದರುಗಳಿಗೆ ದೊಡ್ಡ ಮಟ್ಟದ ಖ್ಯಾತಿಯನ್ನು ತಂದುಕೊಡುತ್ತದೆ.. ಅದೇ ರೀತಿ ಕನ್ನಡ ಕಿರುತೆರೆಯಲ್ಲಿ ಟಾಪ್ ಐದು ಧಾರಾವಾಹಿಗಳಲ್ಲಿ ಒಂದಾಗಿದ್ದ ಧಾರಾವಾಹಿ ನಾಗಿಣಿ ಸಾಕಷ್ಟು ವಿಚಾರಗಳಿಗೆ ಸದ್ದು ಮಾಡಿತ್ತು.. ಆ ಧಾರಾವಾಹಿಯ ಕಲಾವಿದರುಗಳು ಸಹ ಸಾಕಷ್ಟು ಹೆಸರು ಮಾಡಿದ್ದರು.. ನಾಯಕ ತ್ರಿಶೂಲ್ ಪಾತ್ರ ಮಾಡಿದ್ದ ನಟ ನಿನಾದ್ ಇದೀಗ ಧಾರವಾಹಿಯಿಂದ ಹೊರ ನಡೆದಿದ್ದು ಪ್ರೇಕ್ಷಕರಲ್ಲಿ ಸಾಕಷ್ಟು ಆಶ್ವರ್ಯವನ್ನುಂಟು ಮಾಡಿದೆ..

ಹೌದು ನಿನಾದ್ ಹರಿತ್ಸ ತ್ರಿಶೂಲ್ ಪಾತ್ರದ ಮೂಲಕ ಫೇಮಸ್ ಆದರೆ ಅತ್ತ ಶಿವಾನಿಯಾಗಿ ನಟಿ ನಮ್ರತಾ ಗೌಡ ಹೆಸರು ಮಾಡಿದ್ದರು.‌ ಈ ಜೋಡಿಯನ್ನು ಜನರು ಬಹಳ ಇಷ್ಟ ಪಟ್ಟಿದ್ದರು.. ಆದರೆ ಇದೀಗ ಇದ್ದಕಿದ್ದ ಹಾಗೆ ನಿನಾದ್ ಧಾರಾವಾಹಿಯಿಂದ ಹೊರ ನಡೆದಿದ್ದು ಅದೇ ಪಾತ್ರಕ್ಕೆ ಮತ್ತೊಬ್ಬ ನಟನ ಎಂಟ್ರಿಯಾಗಿದೆ.. ಹೌದು ತ್ರಿಶೂಲ್ ಪಾತ್ರ ಬಿಟ್ಟು ಹೋದ ನಿನಾದ್ ಜಾಗಕ್ಕೆ ಇದೀಗ ನಟ ದೀಪಕ್ ಮಹದೇವ್ ಆಗಮಿಸಿದ್ದು ಜನರು ಯಾವ ರೀತಿ ಸ್ವೀಕರಿಸಲಿದ್ದಾರೆ ಕಾದು ನೋಡಬೇಕಿದೆ..

ಆದರೆ ನಿನಾದ್ ಧಾರಾವಾಹಿ ಬಿಡಲು ಅಸಲಿ ಕಾರಂಅ ಬೇರೆಯೇ ಇದೆ.. ಹೌದು ನಿನಾದ್ ಕೆಲ ದಿನಗಳ ಹಿಂದಷ್ಟೇ ತಾವು ಪ್ರೀತಿಸುತ್ತಿದ್ದ ರಮ್ಯ ಎಂಬ ಹುಡುಗಿಯ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಹೌದು ರಮ್ಯಾ ಹಾಗೂ ನಿನಾದ್ ಪ್ರೀತಿಗೆ ಎರಡೂ ಕುಟುಂಬಸ್ಥರು ಒಪ್ಪಿಗೆ ನೀಡಿ ಅದ್ಧೂರಿಯಾಗಿ ಮದುವೆಗೆ ನೆರವೇರಿಸಿದ್ದರು.. ಇದೀಗ ಈ ಜೋಡಿ ಜೀ ಕನ್ನಡ ವಾಹಿನಿಯಲ್ಲಿ ಹೊಸದಾಗಿ ಶುರುವಾಗುತ್ತಿರುವ ಜೋಡಿ ನಂಬರ್ ಒನ್ ಶೋಗೆ ಆಗಮಿಸುತ್ತಿದ್ದಾರೆ.. ಅದೇ ಕಾರಣಕ್ಕಾಗಿ ಧಾರಾವಾಹಿಯಿಂದ ಹೊರ ಬಂದಿದ್ದಾರೆ..

ಹೌದು ಧಾರಾವಾಹಿ ಹಾಗೂ ಶೋ ಎರಡನ್ನೂ ಸಹ ಒಟ್ಟಿಗೆ ನಿಭಾಯಿಸಲು ಕಷ್ಟವಾದ ಕಾರಣ ನಿನಾದ್ ಧಾರವಾಹಿಯಿಂದ ಹೊರ ಬರುವ ನಿರ್ಧಾರ ಮಾಡಿದ್ದು ಇದಕ್ಕೆ ವಾಹಿನಿ ಕೂಡ ಸಮ್ಮತಿಸಿದ್ದು ಆ ಜಾಗಕ್ಕೆ ನಟ ದೀಪಕ್ ಮಹದೇವ್ ಅವರನ್ನು ಕರೆತರಲಾಗಿದೆ.. ಹೌದು ದೀಪಕ್ ಈ ಹಿಂದೆ ಸುವರ್ಣ ವಾಹಿನಿಯ ಮರಳಿ‌ ಮನಸಾಗಿದೆ.. ನಾ ನಿನ್ನ ಬಿಡಲಾರೆ.. ನಾಯಕಿ.. ನಿನ್ನಿಂದಲೇ ಹೀಗೆ ಸಾಕಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು..

ಇದೀಗ ನಾಗಿಣಿ ಧಾರಾವಾಹಿಯಲ್ಲಿ ತ್ರಿಶೂಲ್ ಪಾತ್ರದ ಮೂಲಕ ಮತ್ತೆ ತಮ್ಮ ಕಿರುತೆರೆ ಜರ್ನಿಯನ್ನು ಆರಂಭಿಸಿದ್ದಾರೆ.. ಇನ್ನೂ ಇತ್ತ ನಿನಾದ್ ಹರಿತ್ಸ ಅವರು ‘ಅರಮನೆ’ ಧಾರಾವಾಹಿಯಲ್ಲಿ ನಟಿಸಿದ್ದರು. ‘ನಾಗಿಣಿ 2’ ಸೀರಿಯಲ್‌ನಲ್ಲಿ ನಿನಾದ್ ಅವರ ಪಾತ್ರಕ್ಕೆ ದೊಡ್ಡ ಮಟ್ಟದ ಅಭಿಮಾನಿ ಬಳಗ ಹುಟ್ಟಿಕೊಂಡಿತ್ತು. ಕಳೆದ ಫೆಬ್ರವರಿ 7 ರಂದು ನಿನಾದ್ ಹರಿತ್ಸ ಮತ್ತು ರಮ್ಯಾ ಅವರ ನಿಶ್ಚಿತಾರ್ಥ ಸಮಾರಂಭ ಶಾಸ್ತ್ರೋಕ್ತವಾಗಿ ನಡೆದಿತ್ತು.

ಸಿಎ ಓದಿರುವ ರಮ್ಯಾ ಮತ್ತು ನಟ ನಿನಾದ್ ಹರಿತ್ಸಗೆ ಕೆಲ ವರ್ಷಗಳಿಂದ ಪರಿಚಯವಿತ್ತು. ಸ್ನೇಹಿತರ ಮೂಲಕ ಇವರಿಬ್ಬರಿಗೆ ಪರಿಚಯವಾಗಿತ್ತು. ಆಮೇಲೆ ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿತ್ತು. ಆಮೇಲೆ ನಿನಾದ್ ಹರಿತ್ಸ ಮತ್ತು ರಮ್ಯಾ ಕುಟುಂಬಸ್ಥರ ಒಪ್ಪಿಗೆ ಪಡೆದು ಮದುವೆಯಾಗಿದ್ದಾರೆ.. ಇದೀಗ ಈ ಜೋಡಿ ಹೊಸ ಶೋ ಜೋಡಿ ನಂಬರ್ ಒನ್ ನಲ್ಲಿ ಪಾಲ್ಗೊಳ್ಳುತ್ತಿದ್ದು ಜೋಡಿಯಾಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ..