ಇನ್ನು 7 ದಿನದಲ್ಲೇ ನಿಖಿಲ್ ರೇವತಿ ನಿಶ್ಚಿತಾರ್ಥ.. ಆದರೆ ನಿಶ್ಚಿತಾರ್ಥ ನಡೆಯೋ ಸ್ಥಳ ಯಾವುದು ಗೊತ್ತಾ?

ಸ್ಯಾಂಡಲ್ವುಡ್ ನ ಯುವರಾಜ ನಿಖಿಲ್ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು ಕೆಲ ದಿನಗಳ ಹಿಂದಷ್ಟೇ ಲೇಔಟ್ ಕೃಷ್ಣಪ್ಪ ಅವರ ಅಣ್ಣನ ಮೊಮ್ಮಗಳ ಜೊತೆ ಮದುವೆ ನಿಶ್ಚಯವಾಗಿತ್ತು..

ಇದೀಗ ನಿಖಿಲ್ ಹಾಗೂ ರೇವತಿ ಅವರ ನಿಶ್ಚಿತಾರ್ಥಕ್ಕೆ ದಿನಾಂಕ ನಿಗದಿಯಾಗಿದೆ.. ಹೌದು ಕಳೆದ ಎರಡು ದಿನಗಳಿಂದ ನಿಖಿಲ್ ಅವರ ನಿಶ್ಚಿತಾರ್ಥ ರಾಮನಗರದಲ್ಲಿ ನಡೆಯಲಿದೆ ಎಂಬ ಸುದ್ದಿ ಹರಿದಾಡುತಿತ್ತು..

 

ಆದರೆ ಈ ಎಲ್ಲಾ ಊಹಾಪೋಹಗಳಿಗೂ ತೆರೆ ಬಿದ್ದಿದೆ.. ಹೌದು ಇನ್ನು ಕೆಲವೇ ತಿಂಗಳಲ್ಲಿ ಮದುವೆ ಇರುವ ಕಾರಣ ನಿಶ್ಚಿತಾರ್ಥವನ್ನು ಅದ್ಧೂರಿಯಾಗಿ ಮಾಡುವುದು ಬೇಡ.. ಒಟ್ಟಿಗೆ ಮದುವೆ ನಡೆಯಲಿ ಎಂದು ಮಾತುಕತೆ ಆಡಲಾಗಿತ್ತು..

ಆದರೆ ರೇವತಿ ಅವರ ಮನೆಯಲ್ಲಿ‌ ಇದು ಮೊದಲ ಸಮಾರಂಭವಾದ ಕಾರಣ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಬೇಕೆಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.. ಅದೇ ಕಾರಣಕ್ಕೆ ಅವರ ಮನಸ್ಸು ನೋಯಿಸುವುದು ಬೇಡವೆಂದು ಅದ್ಧೂರಿ ನಿಶ್ಚಿತಾರ್ಥಕ್ಕೆ ದೇವೇ ಗೌಡರ ಕುಟುಂಬ ಒಪ್ಪಿದೆ..

ಅದರಂತೆ ಇದೇ ಫೆಬ್ರವರಿ 10 ರಂದು ಬೆಂಗಳೂರಿನ ತಾಜ್ ವೆಸ್ಟೆಂಡ್ ಹೊಟೆಲ್ ನಲ್ಲಿ ನಿಶ್ಚಿತಾರ್ಥ ನಡೆಯಲಿದೆ.. ಸುಮಾರು 5 ಸಾವಿರ ಜನ ನಿಖಿಲ್ ಅವರ ನಿಶ್ಚಿತಾರ್ಥಕ್ಕೆ ಆಗಮಿಸುವ ನಿರೀಕ್ಷೆ ಇದೆ..

ಇನ್ನು ನಿಖಿಲ್ ಹಾಗೂ ರೇವತಿ ಅವರ ಕಲ್ಯಾಣ‌ ಮಾತ್ರ ರಾಮನಗರದ ಚನ್ನಪಟ್ಟಣದಲ್ಲಿ ನಡೆಯಲಿದೆ ಎಂದು ಅಧಿಕೃತವಾಗಿ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.. ರಾಮನಗರ ಹಾಗೂ ಮಂಡ್ಯ ಮದ್ದೂರು ಜನರ ಋಣ ನನ್ನ ಮೇಲಿದೆ.. ಅಲ್ಲಿನ ಪ್ರತಿ ಮನೆಗೂ ಕೂಡ ಆಹ್ವಾನ ನೀಡಿ ಮದುವೆಗೆ ಕರೆಯುತ್ತೇನೆ.. ಆ ಜನರ ನಡುವೆ ನನ್ನ ಮಗನ ಮದುವೆ ನಡೆಯಲಿ ಎಂದರು..